ದೇಶಾದ್ರಿ ಹೊಸ್ಮನೆ

1. ನೀವೀಗ ಬಹುಬೇಡಿಕೆಯ ನಟಿ...

ಅದೆಲ್ಲ ನಂಗೆ ಗೊತ್ತಿಲ್ಲ. ನಾನು ಈಗಷ್ಟೇ ಇಲ್ಲಿಗೆ ಬಂದವಳು. ಒಂದಷ್ಟುಅವಕಾಶ ಬಂದಿವೆ. ಸಿಕ್ಕಿರುವ ಸಿನಿಮಾಗಳಲ್ಲಿ ಒಳ್ಳೆಯ ಪಾತ್ರಗಳು ಸಿಕ್ಕಿವೆ. ಆ ಪಾತ್ರಗಳಿಗೆ ನ್ಯಾಯ ಒದಗಿಸುವ ಜವಾಬ್ದಾರಿ ನನ್ನ ಮೇಲಿದೆ.

2. ಸಲಗ ಚಿತ್ರದ ಅವಕಾಶ ಸಿಕ್ಕಿದ್ದು ಹೇಗೆ? ನಿಮ್ಮ ಪಾತ್ರವೇನು?

ಆಡಿಷನ್‌ ಇತ್ತು. ಅಲ್ಲಿಗೆ ಹೋದೆ. ನಿರ್ದೇಶಕರೂ ಆದ ಚಿತ್ರದ ನಾಯಕ ನಟ ದುನಿಯಾ ವಿಜಯ್‌ ಸರ್‌, ಪಾತ್ರಕ್ಕೆ ನೀವು ಸೂಕ್ತ ಎನಿಸುತ್ತೀರಾ, ಆ್ಯಕ್ಟ್ ಮಾಡ್ತೀರಾ ಅಂದ್ರು. ಒಳ್ಳೆಯ ಅವಕಾಶ ಅಂತ ಒಪ್ಪಿಕೊಂಡೆ. ಚಿತ್ರದಲ್ಲಿ ವಿಶಿಷ್ಟಪಾತ್ರವಿದೆ. ಸ್ವಲ್ಪ ಬಜಾರಿ, ಆದ್ರೆ ಗಂಡುಬೀರಿ ಥರ ಅಲ್ಲ. ಸಾಮಾನ್ಯವಾಗಿ ಪಟ್ಟಣ ಪ್ರದೇಶದ ಒಬ್ಬ ಸಾಮಾನ್ಯ ಹುಡುಗಿ ಥರ. ಸ್ವಲ್ಪ ಖಡಕ್‌ ಮಾತು, ನಿಷ್ಟುರ ನಡೆ. ಆಕೆ ಚಿತ್ರದ ನಾಯಕನ ಬದುಕಲ್ಲಿ ಹೇಗೆ ಬಂದಳು, ಆಮೇಲೆ ಏನೆಲ್ಲ ಕಥೆಯಾಯಿತು ಎನ್ನುವುದು ನನ್ನ ಪಾತ್ರ. ದೊಡ್ಡ ಮಟ್ಟದ ಫೋಕಸ್‌ ಇಲ್ಲದಿದ್ದರೂ, ನಟಿಯಾಗಿ ನನ್ನನ್ನು ನಾನು ಗುರುತಿಸಿಕೊಳ್ಳುವಷ್ಟುಪ್ರಾಮುಖ್ಯತೆ ಈ ಪಾತ್ರದಲ್ಲಿದೆ.

ಪರಭಾಷೆ ಗಾಯಕ ದುನಿಯಾ ವಿಜಿ ಚಿತ್ರದಲ್ಲಿ ಹಾಡೋಕೆ ಪಡೆದ ಸಂಭಾವನೆ ಇಷ್ಟೊಂದಾ?

3. ದುನಿಯಾ ವಿಜಯ್‌ ಅವರಂತಹ ಸ್ಟಾರ್‌ ಜತೆಗೆ ಅಭಿನಯಿಸಿದ ಅನುಭವ ಹೇಗಿತ್ತು?

ನಟನೆಯಲ್ಲಿ ಅವರು ಅನುಭವ ಇರುವವರು. ಅವರಂತಹ ನಟರ ಜತೆಗೆ ಅಭಿನಯಿಸುವಾಗ ನಾವು ಕೂಡ ಹೊಸದನ್ನುಕಲಿಯುತ್ತಾ ಹೋಗುತ್ತೇವೆ. ಇಲ್ಲಿ ನನಗೆ ಸಾಕಷ್ಟುಕಲಿಯಲು ಅವಕಾಶ ಸಿಕ್ಕಿದೆ. ‘ಟಗರು’ ಚಿತ್ರದಲ್ಲಿ ಕೆಲಸ ಮಾಡಿದ ತಂತ್ರಜ್ಞರ ತಂಡವೇ ಇಲ್ಲೂ ಕೆಲಸ ಮಾಡಿದೆ. ಹಾಗಾಗಿ ನಾನಿಲ್ಲಿ ಜಾಸ್ತಿ ಕಲಿತೆ.

4. ಸಿನಿಮಾ ಬರುವ ಮುನ್ನ ಸಂಜನಾ ಆನಂದ್‌ ಎಲ್ಲಿದ್ದರು?

ನಾನು ಓದಿದ್ದು ಎಂಜಿನಿಯರಿಂಗ್‌. ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದೆ. ಒಮ್ಮೆ ನನ್ನ ಫ್ರೆಂಂಡ್ಸ್‌ ಸೇರ್ಕೊಂಡು ಕಿರುಚಿತ್ರ ನಿರ್ಮಿಸಿದ್ದರು. ಅದರಲ್ಲಿನೀವೇ ನಟಿಸಬೇಕೆಂದು ಹಠ ಹಿಡಿದರು. ಅನಿವಾರ್ಯವಾಗಿ ನಟಿಸಿದ್ದೆ. ಅದು ಯೂಟ್ಯೂಬ್‌ನಲ್ಲಿ ಬಂದಿತ್ತು. ಅದನ್ನು ನೋಡಿಯೇ ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಚಿತ್ರತಂಡ ಆಡಿಷನ್‌ಗೆ ಕರೆದಿದ್ದರು.

ರಮಿಸೋ ಹುಡುಗ, ಮುನಿಸೋ ಹುಡುಗಿ ನೋಡ್ಲೇಬೇಕಾದ ಸಾಂಗ್ ಇದು!

5. ನೀವೀಗ ನಾಯಕಿಯಾಗಿ ಒಪ್ಪಿಕೊಂಡಿರುವ ಸಿನಿಮಾಗಳ ಬಗ್ಗೆ ಹೇಳಿ...

ಅಜಯ್‌ ರಾವ್‌ ಜತೆಗೆ ‘ಶೋಕಿವಾಲ’, ಚಿರಂಜೀವಿ ಸರ್ಜಾ ಅಭಿನಯದ ‘ಕ್ಷತ್ರಿಯ’ ಮತ್ತು ಶಿವರಾಜ್‌ಕುಮಾರ್‌ ನಿರ್ಮಾಣದ ‘ಹನಿಮೂನ್‌’ ವೆಬ್‌ ಸರಣಿಯಲ್ಲೂ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ.