ನಿಮ್ಮ ಹಿನ್ನೆಲೆ ಏನು?

ನಮ್ಮ ತಂದೆ ಮೂಲತಃ ಕೇರಳದವರು. ಆದರೆ ನಾನು ಹುಟ್ಟಿಬೆಳೆದಿದ್ದು ಮೈಸೂರಿನಲ್ಲಿ. ಅಪ್ಪ ಡೇವಿಡ್‌ ಮೈಸೂರಿನಲ್ಲಿ ಗಾರ್ಮೆಂಟ್ಸ್‌ ಉದ್ಯಮ ನಡೆಸುತ್ತಿದ್ದಾರೆ. ಹೀಗಾಗಿ ನಾವು ಬೆಂಗಳೂರಿನಲ್ಲೇ ನೆಲೆಸಿದ್ದೇವೆ. ನನ್ನ ತಾಯಿ ಹಾಗೂ ತಂಗಿ ಕೂಡ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ.

ಅಂದು ಬಾಲ ಕಲಾವಿದೆ, ಇಂದು UPSC ಸಾಧಕಿ, ಕೀರ್ತನ ಪ್ರಯಾಣ

ನಿಮ್ಮ ಓದು ಮತ್ತು ಸಿನಿಮಾ ಜಗತ್ತಿಗೆ ಬಂದಿದ್ದು ಹೇಗೆ?

ಬೆಂಗಳೂರಿನ ಬಿಷಪ್‌ ಕಾಟನ್‌ ಶಾಲೆ ಹಾಗೂ ಕ್ರೈಸ್ಟ್‌ ಜೂನಿಯರ್‌ ಕಾಲೇಜಿನಲ್ಲಿ ಓದಿದ್ದೇನೆ. ಬಿಬಿಎಂ ಪದವಿ ಮುಗಿಸಿದ್ದೇನೆ. ಕಾಲೇಜಿಗೆ ಬರುವ ಹೊತ್ತೀಗೆ ಮಾಡೆಲಿಂಗ್‌ ನಲ್ಲಿ ಗುರುತಿಸಿಕೊಂಡಿದ್ದೆ. ಈ ಮಾಡೆಲಿಂಗ್‌ ಕ್ಷೇತ್ರವೇ ನನ್ನ ಚಿತ್ರರಂಗಕ್ಕೆ ಕರೆದುಕೊಂಡು ಬಂತು.

ಕನ್ನಡದವರಾಗಿ ಮಲಯಾಳಂನಲ್ಲಿ ಮೊದಲು ಅವಕಾಶ ಸಿಕ್ಕಿದ್ದು ಹೇಗೆ?

ಓದುವಾಗ ಮಾಡೆಲಿಂಗ್‌ ಮಾಡಿಕೊಂಡಿದ್ದೆ. ಜಾಹೀರಾತು ಒಂದರಲ್ಲಿ ನನ್ನ ನೋಡಿ ಮೋಹನ್‌ಲಾಲ್‌ ಅವರ ಪುತ್ರನ ಚಿತ್ರಕ್ಕೆ ಕರೆದರು. ಅಲ್ಲಿಗೆ ಹೋಗಿ ಆಡಿಷನ್‌ ಕೊಟ್ಟು ಸೆಲೆಕ್ಟ್ ಆದೆ. ಹೀಗೆ ಆಕಸ್ಮಿಕವಾಗಿ ಬಂದ ಅವಕಾಶ. ಹೀಗಾಗಿ ಇಂಥದ್ದೇ ಭಾಷೆಯಲ್ಲಿ ನಟಿಸಬೇಕು ಎನ್ನುವ ಪ್ಲಾನು ಇರಲಿಲ್ಲ. ನಾಲ್ಕು ಚಿತ್ರಗಳ ನಂತರ ಈಗ ಕನ್ನಡದಲ್ಲಿ ನಾನೇ ಪ್ರಯತ್ನ ಮಾಡುತ್ತಿದ್ದೇನೆ. ಒಳ್ಳೆಯ ಅವಕಾಶಗಳು ಇಲ್ಲೂ ಸಿಗುತ್ತವೆ ಎನ್ನುವ ಭರವಸೆ ಇದೆ.

ಮಲಯಾಳಂನಲ್ಲಿ ನಟಿಸಿರುವ ಚಿತ್ರಗಳು ಯಾವುವು?

ಮೋಹನ್‌ಲಾಲ್‌ ಅವರ ಪುತ್ರ ಪ್ರಣವ್‌ ಮೋಹನ್‌ಲಾಲ್‌ ಜೊತೆಗೆ ಇರುಪತಿಯೊನ್ನಮ್‌ ನೂಟ್ರಾಂಡು ಚಿತ್ರದಲ್ಲಿ ನಟಿಸಿದೆ. ಆ ನಂತರ ಒರೊನ್ನನರ ಪ್ರಣಯಕದಾ ಹಾಗೂ ಕಬೀರಿಂದೆ ದಿವಸಂಗಳ್‌ ಚಿತ್ರಗಳಲ್ಲಿ ನಟಿಸಿದೆ. ಈ ಮೂರು ಚಿತ್ರಗಳು ತೆರೆಗೆ ಬಂದಿವೆ. ಕಾವಲ್‌ ಚಿತ್ರ ಬಿಡುಗಡೆ ಆಗಬೇಕಿದೆ. ಸುರೇಶ್‌ ಗೋಪಿ ಜತೆ ಕಾಣಿಸಿಕೊಂಡಿರುವ ಕಾವಲ್‌ ಚಿತ್ರದಲ್ಲಿ ಒಳ್ಳೆಯ ಪಾತ್ರವಿದ್ದು, ಇದು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತದೆಂಬ ನಂಬಿಕೆ ಇದೆ.

ಫ್ರೆಂಚ್ ಬಿರಿಯಾನಿ ನಂತರ ಕಾಮಿಡಿ ಪಾತ್ರದ ನಿರೀಕ್ಷೆಯಲ್ಲಿ ದಿಶಾ ಮದನ್! 

ಮಾಡೆಲಿಂಗ್‌ ಲೋಕವನ್ನೇ ನಂಬಿಕೊಂಡೇ ನಟಿ ಆದ್ರಾ?

ಇಲ್ಲ. ಮಾಡೆಲಿಂಗ್‌ ಹಾಗೂ ಜಾಹೀರಾತುಗಳಲ್ಲಿ ನಟಿಸುವಾಗಲೇ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶಗಳು ಬರುತ್ತಿದ್ದವು. ಹೀಗಾಗಿ ಮುಂಬಯಿಯ ಅನುಪಮ್‌ ಖೇರ್‌ ಇನ್ಸ್‌ ಟಿಟ್ಯೂಟಿಗೆ ಸೇರಿಕೊಂಡೆ. ಇಲ್ಲಿ ನಟನಾ ತರಬೇತಿ ಪಡೆದುಕೊಂಡ ಮೇಲೆಯೇ ಚಿತ್ರರಂಗಕ್ಕೆ ಬಂದೆ.

ಈಗ ಕನ್ನಡದಲ್ಲಿ ಯಾವುದಾದರೂ ಚಿತ್ರ ಒಪ್ಪಿಕೊಂಡಿದ್ದೀರಾ?

ಇನ್ನೂ ಇಲ್ಲ. ಒಂದೆರಡು ಕತೆ ಕೇಳಿದ್ದೇನೆ.

'ರಾಧೆ ಶ್ಯಾಮ' ಚಿತ್ರಕ್ಕೆ ರೆಹೆಮಾನ್ ಸಂಗೀತ; ವಿದೇಶದಲ್ಲಿ ಮೌನಿ ರಾಯ್!

"