ಅರ್ ಕೇಶವಮೂರ್ತಿ

ಮೊದಲ ಚಿತ್ರದ ಅನುಭವ ಹೇಗಿತ್ತು?

ಮೊದಲ ದಿನವೇ ಸಿನಿಮಾ ಅನ್ನೋದು ಕೊನೆಯವರೆಗೂ ಕಲಿಯುವ ಮಾಧ್ಯಮ ಅನಿಸಿತು. ಸ್ಟಾರ್ ನಟನ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದೇ ದೊಡ್ಡ ಅನುಭವ.

ಒಡೆಯ ಸಿನಿಮಾ ನಿಮ್ಮಲ್ಲಿ ಮೂಡಿಸಿದ ಅಭಿಪ್ರಾಯ ಏನು?

ನಾನು ಲಕ್ಕಿ ಹುಡುಗಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀರೋ, ದೊಡ್ಡ ನಿರ್ಮಾಣ ಸಂಸ್ಥೆಯಾದ ಸಂದೇಶ್ ಪ್ರೊಡಕ್ಷನ್, ಯಶಸ್ವಿ ನಿರ್ದೇಶಕ ಎಂ ಡಿ ಶ್ರೀಧರ್, ದೊಡ್ಡ ತಾರಾಗಣ, ಅದ್ದೂರಿ
ನಿರ್ಮಾಣ... ಇದೆಲ್ಲವೂ ನನಗೇ ಮೊದಲ ಚಿತ್ರದಲ್ಲೇ ಸಿಕ್ಕಿದೆ. ನಾನು ಅದೃಷ್ಟವಂತೆ.

ಅಧಿಕಾರನೂ ನನ್ನದೇ, ಆಜ್ಞೆಯೂ ನಂದೇ: ಶುರುವಾಯ್ತು 'ಒಡೆಯ'ನ ಅಬ್ಬರ!

ಚಿತ್ರರಂಗಕ್ಕೆ ಬರಕ್ಕಿಂತ ಮುಂದೆ ನೀವು ಏನಾಗಿದ್ರಿ?

ನಾನು ಮೂಲತಃ ಕೊಡಗು. ಈಗ ಇರೋದು ಬೆಂಗಳೂರಿನಲ್ಲಿ. ಮಾಡೆಲಿಂಗ್ ಕ್ಷೇತ್ರದಲ್ಲಿದ್ದೆ. ಮೈಸೂರಿನಲ್ಲಿ ೨೦೦೪ರಲ್ಲಿ ನಡೆದ ಮೆಗಾ ಮಾಡೆಲ್ ಶೋನಲ್ಲಿ ವಿನ್ನರ್ ಆದೆ. ಆದಾದ ನಂತರ ಬೆಂಗಳೂರಿನಲ್ಲಿ ಬ್ಯೂಟಿ ಕೋರ್ಸ್ ಮಾಡಕ್ಕೆ ಬಂದಾಗ ಟೈಮ್ ಪಾಸ್‌ಗೆ ರಂಗಭೂಮಿ ಸೇರಿಕೊಂಡೆ. ಆ ನಂತರ ನನಗೆ ಸಿನಿಮಾಗಳಲ್ಲಿ ನಟಿಸುವ ಆಲೋಚನೆ ಬಂತು.

ಒಡೆಯ ಚಿತ್ರಕ್ಕೆ ನಾಯಕಿ ಆಗಿದ್ದು ಹೇಗೆ?

ನಮ್ಮ ತಾಯಿ ಹಾಗೂ ದರ್ಶನ್ ತಾಯಿ ಮೀನಾಮ್ಮ ಇಬ್ಬರು ಸ್ನೇಹಿತರು. ಆಗ ನನ್ನ ತಾಯಿ ನಾನು ಚಿತ್ರರಂಗಕ್ಕೆ ಹೋಗುವ ನಿರ್ಧಾರವನ್ನು ಹೇಳಿದಾಗ ‘ಒಡೆಯ’ ಚಿತ್ರಕ್ಕಾಗಿ ನಟಿಯರ ಆಡಿಷನ್ ನಡೆಯುತ್ತಿದೆ ಹೋಗಿ ಎಂದು ಮೀನಾಮ್ಮ ಹೇಳಿದರು. ಅವರ ಮೂಲಕ ಆಡಿಷನ್‌ಗೆ ಹೋಗಿದ್ದರಿಂದ ನಾಯಕಿ ಆಗುವ ಅವಕಾಶ ಸಿಕ್ಕಿತು.

ದರ್ಶನ್ ಅವರಿಗೆ ನೀವು ನಾಯಕಿ ಆಗಿದ್ದೀರಿ ಎಂದಾಗ ನಿಮ್ಮ ಮೊದಲ ರಿಯಾಕ್ಷನ್ ಏನಿತ್ತು?

ನಂಬಕ್ಕೇ ಆಗಲಿಲ್ಲ. ಶೂಟಿಂಗ್ ಸೆಟ್‌ನಲ್ಲಿ ಪ್ರತಿ ದಿನ ನಾನು ದರ್ಶನ್ ಅವರಿಗೆ ನಾಯಕಿ ಎಂದು ನನಗೆ ನಾನೇ ಹೇಳಿಕೊಳ್ಳುವಷ್ಟು ಎಕ್ಸೈಟ್ ಆಗಿದ್ದೆ.

ಸ್ವಿಸ್‌ನಲ್ಲಿ ಮಂಜುಗಡ್ಡೆ ನಡುವೆ ಡಿ ಬಾಸ್; ಇಲ್ಲಿವೆ ಫೋಟೋಸ್!

ದರ್ಶನ್ ಅವರ ಮುಂದೆ ನಿಂತಾಗ ಏನನಿಸಿತು?

ಸಾಕಷ್ಟು ತಯಾರಿ ಮಾಡಿಕೊಂಡೇ ಹೋಗಿದ್ದೆ. ಆದರೆ, ಅವರು ಕ್ಯಾಮೆರಾ ಮುಂದೆ ಬಂದು ನನ್ನ ಕಣ್ಣು ನೋಡುವಷ್ಟರಲ್ಲಿ ಭಯ ಆಯ್ತು. ಎಲ್ಲವೂ ಮರೆತು ಹೋಯಿತು. ಆಗ ದರ್ಶನ್  ಅವರೇ ಒಮ್ಮೆ ಮಾನಿಟರ್ ನೋಡಿಕೊಂಡು ಆಮೇಲೆ ಬಂದು ನಟಿಸುವಂತೆ ಹೇಳಿದರು. ದೃಶ್ಯಕ್ಕೆ ರೆಡಿಯಾಗಲು ಸಮಯ ಕೊಡುತ್ತಿದ್ದರು. ಮೊದಲ ದಿನ ಸಾಕಷ್ಟು ಹೆದರಿದ್ದಂತೂ ನಿಜ.

ಒಡೆಯಾ ಚಿತ್ರದ ಮರೆಯಲಾಹದ ಘಟನೆಗಳೇನು? 

ಒಮ್ಮೆ ಶೂಟಿಂಗ್ ನೋಡಲು ದರ್ಶನ್ ಅಭಿಮಾನಿಗಳು ಬಂದಿದ್ದರು. ಅವರು ನನ್ನ ನೋಡಿ ‘ಡಿ ಬಾಸ್ ನಾಯಕಿಗೆ ಜೈ’ ಎಂದಾಗ ಪಕ್ಕದಲ್ಲೇ ಇದ್ದ ನನ್ನ ತಾಯಿ ತುಂಬಾ ಎಮೋಷನಲ್ ಆದರು. ದೊಡ್ಡ ಮಟ್ಟದ ಅಭಿಮಾನಿ ಸಮೂಹವನ್ನು ಒಳಗೊಂಡ ಹೀರೋಗೆ ತಮ್ಮ ಮಗಳು ನಾಯಕಿ ಆಗಿದ್ದಾಳೆಂಬ ಖುಷಿ ನನ್ನ ತಾಯಿ ಮುಖದಲ್ಲಿ ಕಂಡಿದ್ದನ್ನು ನಾನು ಮರೆಯಲಾರೆ.