Asianet Suvarna News Asianet Suvarna News

ಕಿರುತೆರೆ ಜನಪ್ರಿಯತೆ ಹಿರಿತೆರೆಗೆ ಕರೆತಂದಿತು: ಶರಣ್ಯ ಶೆಟ್ಟಿ

ಕಿರುತೆರೆಯಿಂದ ಮತ್ತೊಬ್ಬ ಪ್ರತಿಭಾವಂತ ನಟಿ ಶರಣ್ಯ ಶೆಟ್ಟಿ ಬೆಳ್ಳಿ ತೆರೆಗೆ ಬಂದಿದ್ದಾರೆ. 'ಗಟ್ಟಿಮೇಳ' ಇವರ ಜನಪ್ರಿಯ ಧಾರಾವಾಹಿ. ಬಿಡುಗಡೆಗೆ ಸಿದ್ಧವಾಗಿರುವ ಹಲವು ಚಿತ್ರಗಳಲ್ಲಿ ನಟಿಸಿರುವ ಹಾಗೂ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಶರಣ್ಯ ಶೆಟ್ಟಿ ಮಾತುಗಳು ಇಲ್ಲಿವೆ.

Kannada Actress Sharanya Shetty Exclusive Interview gvd
Author
Bangalore, First Published May 11, 2022, 8:35 AM IST

ಆರ್‌. ಕೇಶವಮೂರ್ತಿ

ಕಿರುತೆರೆಯಿಂದ ಮತ್ತೊಬ್ಬ ಪ್ರತಿಭಾವಂತ ನಟಿ ಶರಣ್ಯ ಶೆಟ್ಟಿ (Sharanya Shetty) ಬೆಳ್ಳಿ ತೆರೆಗೆ ಬಂದಿದ್ದಾರೆ. 'ಗಟ್ಟಿಮೇಳ' (Gattimela) ಇವರ ಜನಪ್ರಿಯ ಧಾರಾವಾಹಿ. ಬಿಡುಗಡೆಗೆ ಸಿದ್ಧವಾಗಿರುವ ಹಲವು ಚಿತ್ರಗಳಲ್ಲಿ ನಟಿಸಿರುವ ಹಾಗೂ ಇಂದು ಹುಟ್ಟುಹಬ್ಬ (Birthday) ಆಚರಿಸಿಕೊಳ್ಳುತ್ತಿರುವ ಶರಣ್ಯ ಶೆಟ್ಟಿ ಮಾತುಗಳು ಇಲ್ಲಿವೆ.

* ಈ ಬಾರಿಯ ಹುಟ್ಟುಹಬ್ಬದ ವಿಶೇಷತೆಗಳೇನು?
ಕುಟುಂಬದ ಜತೆಗೆ ಸಂಭ್ರಮ ಆಚರಿಸುತ್ತೇನೆ. ಈ ಬಾರಿಗೆ ನನ್ನ ನಟನೆಯ ನಾಲ್ಕು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಇದೇ ದೊಡ್ಡ ಖುಷಿ ಮತ್ತು ವಿಶೇಷತೆ.

* ನಿಮ್ಮ ಹಿನ್ನೆಲೆ ಹೇಳಬಹುದಾ?
ನಮ್ಮ ಕುಟುಂಬದವರ ಮೂಲ ಶಿವಮೊಗ್ಗ. ಆದರೆ, ನಾನು ಹುಟ್ಟಿದ್ದು, ಬೆಳೆದಿದ್ದು ಮತ್ತು ಓದಿದ್ದು ಬೆಂಗಳೂರಿನಲ್ಲೇ. ತುಂಬಾ ಹಿಂದೆಯೇ ನಮ್ಮ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿತ್ತು. ಈಗಷ್ಟೆಇಂಜಿನಿಯರಿಂಗ್‌ ಮುಗಿಸಿದ್ದೇನೆ. ಶೇ.98 ತೆಗೆದುಕೊಂಡಿದ್ದೇನೆ. ಡಾಕ್ಟರ್‌ ಅಥವಾ ಇಂಜಿನಿಯರ್‌ ಆಗಬೇಕು ಎಂದು ಹೆತ್ತವರು ಆಸೆ ಪಟ್ಟಿದ್ದರು. ನಾನು ಆ್ಯಕ್ಟರ್‌ ಆದೆ.

ನನ್ನ ಸಿನಿಮಾ ಎಲ್ಲಾ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ: ಜಿಮ್‌ ರವಿ

* ಕಿರುತೆರೆಯಲ್ಲಿನ ಅನುಭವ ಹೇಗಿತ್ತು?
ಕಿರುತೆರೆಯಲ್ಲಿ ನನಗೆ ಹೆಸರು ತಂದುಕೊಟ್ಟಿದ್ದು ‘ಗಟ್ಟಿಮೇಳ’. ಪಕ್ಕಾ ವಿಲನ್‌ ಪಾತ್ರ ಮಾಡಿದ್ದೆ. ಈಗಲೂ ‘ಗಟ್ಟಿ ಮೇಳ ಸಾಹಿತ್ಯ’ ಅಂತಲೇ ಕರೆಯುತ್ತಾರೆ. ಆ ನಂತರ ‘ಮುದ್ದು ಲಕ್ಷ್ಮೀ’, ‘ಆಕಾಶ ದೀಪ’ ಮುಂತಾದ ಧಾರಾವಾಹಿಗಳಲ್ಲಿ ಅತಿಥಿ ಪಾತ್ರ ಮಾಡಿದೆ. ನನಗೆ ಜನಪ್ರಿಯತೆ ತಂದುಕೊಟ್ಟಕ್ಷೇತ್ರ ಕಿರುತೆರೆ.

* ಕಿರುತೆರೆಯಲ್ಲಿ ಯಶಸ್ಸು ಕಂಡಿದ್ದಕ್ಕೆ ಹಿರಿತೆರೆಗೆ ಬಂದಿದ್ದಾ?
ಚಿತ್ರರಂಗಕ್ಕೆ ಬರಬೇಕು ಎಂಬುದು ನನ್ನ ಕನಸು. ಹೀಗಾಗಿ ಡ್ಯಾನ್ಸ್‌ ಶೋ, ಮಾಡೆಲಿಂಗ್‌ ಮಾಡುತ್ತಿದ್ದೆ. ಜತೆಗೆ ಓದು ಬಿಡಬಾರದು ಎಂದು ಮನೆಯಲ್ಲಿ ಷರತ್ತು ಹಾಕಿದ್ದರು. ಸಿನಿಮಾ ಕನಸು ಕಾಣುತ್ತಿದ್ದವಳಿಗೆ ಮೊದಲು ಅವಕಾಶ ಸಿಕ್ಕಿದ್ದು ಕಿರುತೆರೆಯಲ್ಲಿ. ಅಲ್ಲಿನ ಜನಪ್ರಿಯತೆ ಬೆಳ್ಳಿತೆರೆಗೆ ಬರುವುದಕ್ಕೆ ನೆರವಾಯಿತು.

ನಾನು ಕನ್ನಡತಿ, ನನ್ನ ಭಾಷೆನೇ ನನ್ನ ಶಕ್ತಿ: ನಿರೂಪಕಿ ರೀನಾ ಡಿಸೋಜಾ

* ನಿಮ್ಮ ನಟನೆಯ ಯಾವ ಚಿತ್ರಗಳು ಬಿಡುಗಡೆ ಆಗಬೇಕಿದೆ?
ಎರಡು ಚಿತ್ರಗಳು ಬಿಡುಗಡೆ ಆಗಿವೆ. ‘ಸ್ಫೂಕಿ ಕಾಲೇಜ್‌’, ‘ರವಿ ಬೋಪಣ್ಣ’, ‘ಪೆಂಟಗಾನ್‌’ ಹಾಗೂ ‘ನಗುವುನಿ ಹೂವುಗಳ ಮೇಲೆ’ ಚಿತ್ರಗಳು ತೆರೆಗೆ ಬರಬೇಕಿದೆ. ಈ ಪೈಕಿ ‘ರವಿ ಬೋಪಣ್ಣ’ ಚಿತ್ರದಲ್ಲಿ ಕ್ರೇಜಿಸ್ಟಾರ್‌ ಮಗಳ ಪಾತ್ರ ಮಾಡಿದ್ದೇನೆ.

Follow Us:
Download App:
  • android
  • ios