Asianet Suvarna News

ಪತ್ನಿಯ ಅಡುಗೆಗೆ ಸಹಾಯ ಮಾಡಿದ ಶರತ್ ಲೋಹಿತಾಶ್ವ!

ಎತ್ತರ, ಮೈಕಟ್ಟು, ಧ್ವನಿ, ನೋಟ ಮತ್ತು ನಟನೆ ಈ ಎಲ್ಲ ವಿಚಾರದಲ್ಲಿಯೂ ಗಮನಾರ್ಹವೆನಿಸುವ ಖಳನಟ ಕನ್ನಡದಲ್ಲಿದ್ದರೆ ಅವರು ಶರತ್ ಲೋಹಿತಾಶ್ವ ಮಾತ್ರ. ಅಂಥ ಪ್ರತಿಭಾವಂತ ನಮ್ಮಲ್ಲಿದ್ದಾರೆ ಎಂದೊಡನೆ, ಸಹಜವಾಗಿ ಅವರತ್ತ ಮೊದಲು ಕಣ್ಣು ಹಾಕುವುದೇ ತಮಿಳು ಚಿತ್ರರಂಗ!  ಹಾಗಾಗಿಯೇ ಶರತ್ ಲೋಹಿತಾಶ್ವ ಅವರು ಕನ್ನಡದಲ್ಲಿ ಮಾತ್ರವಲ್ಲ ತಮಿಳು ಚಿತ್ರರಂಗದಿಂದಲೂ ಗುರುತಿಸಿಕೊಳ್ಳುವಂತಾಗಿದ್ದಾರೆ. ಆದರೆ ಭಾಷೆ ಯಾವುದೇ ಇರಲಿ, ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಅಭಿನಯದ ಉತ್ತಮ ಅವಕಾಶಗಳಿದ್ದಾಗ ಮಾತ್ರ ಒಪ್ಪುವ ಜಾಯಮಾನ ಶರತ್ ಲೋಹಿತಾಶ್ವ ಅವರದ್ದು. ಇಂಥ ಅಪರೂಪದ ವ್ಯಕ್ತಿತ್ವ ಇರುವ ನಟ ಲಾಕ್ಡೌನ್ ಸಂದರ್ಭವನ್ನು ಹೇಗೆ ನಿಭಾಯಿಸಿದ್ದಾರೆ ಎನ್ನುವ ಬಗ್ಗೆ ಮತ್ತು ಅವರ ಹೊಸ ಚಿತ್ರಗಳ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಅವರಲ್ಲಿ ವಿಚಾರಿಸಿದಾಗ ತಿಳಿದಂಥ ವಿಚಾರಗಳು ಹೀಗಿವೆ.
 

Kannada Actor Sharath Lohithashwas Lockdown dairy
Author
Bengaluru, First Published May 22, 2020, 6:16 PM IST
  • Facebook
  • Twitter
  • Whatsapp

ಎತ್ತರ, ಮೈಕಟ್ಟು, ಧ್ವನಿ, ನೋಟ ಮತ್ತು ನಟನೆ ಈ ಎಲ್ಲ ವಿಚಾರದಲ್ಲಿಯೂ ಗಮನಾರ್ಹವೆನಿಸುವ ಖಳನಟ ಕನ್ನಡದಲ್ಲಿದ್ದರೆ ಅವರು ಶರತ್ ಲೋಹಿತಾಶ್ವ ಮಾತ್ರ. ಅಂಥ ಪ್ರತಿಭಾವಂತ ನಮ್ಮಲ್ಲಿದ್ದಾರೆ ಎಂದೊಡನೆ, ಸಹಜವಾಗಿ ಅವರತ್ತ ಮೊದಲು ಕಣ್ಣು ಹಾಕುವುದೇ ತಮಿಳು ಚಿತ್ರರಂಗ!  ಹಾಗಾಗಿಯೇ ಶರತ್ ಲೋಹಿತಾಶ್ವ ಅವರು ಕನ್ನಡದಲ್ಲಿ ಮಾತ್ರವಲ್ಲ ತಮಿಳು ಚಿತ್ರರಂಗದಿಂದಲೂ ಗುರುತಿಸಿಕೊಳ್ಳುವಂತಾಗಿದ್ದಾರೆ. ಆದರೆ ಭಾಷೆ ಯಾವುದೇ ಇರಲಿ, ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಅಭಿನಯದ ಉತ್ತಮ ಅವಕಾಶಗಳಿದ್ದಾಗ ಮಾತ್ರ  ಒಪ್ಪುವ ಜಾಯಮಾನ ಶರತ್ ಲೋಹಿತಾಶ್ವ ಅವರದ್ದು. ಇಂಥ ಅಪರೂಪದ ವ್ಯಕ್ತಿತ್ವ ಇರುವ ನಟ ಲಾಕ್ಡೌನ್ ಸಂದರ್ಭವನ್ನು ಹೇಗೆ ನಿಭಾಯಿಸಿದ್ದಾರೆ ಎನ್ನುವ ಬಗ್ಗೆ ಮತ್ತು ಅವರ ಹೊಸ ಚಿತ್ರಗಳ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಅವರಲ್ಲಿ ವಿಚಾರಿಸಿದಾಗ ತಿಳಿದಂಥ ವಿಚಾರಗಳು ಹೀಗಿವೆ.

- ಶಶಿಕರ ಪಾತೂರು

ಸರ್ ಸದ್ಯಕ್ಕೆ ಎಲ್ಲಿ ವಾಸವಾಗಿದ್ದೀರಿ? ಹೇಗಿದ್ದೀರಿ?
ಬೆಂಗಳೂರಲ್ಲೇ. ನನ್ನ ಫ್ಲಾಟ್ ನಲ್ಲಿದ್ದೀನಿ. ಜತೆಗೆ ನನ್ನ ಪತ್ನಿ, ಇಬ್ಬರು ಮಕ್ಕಳು ಕೂಡ ಇದ್ದಾರೆ. ಚಿತ್ರೀಕರಣ ಶುರುವಾಗದೇ ಎಲ್ಲಿಯೂ ಹೋಗುವ ಅಗತ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಇನ್ನು ನಿಮ್ಮ  ಎರಡನೇ ಪ್ರಶ್ನೆ, ಹೇಗಿದ್ದೀನಿ ಎನ್ನುವುದಕ್ಕೆ ತಕ್ಕ ಮಟ್ಟಿಗೆ ಚೆನ್ನಾಗಿಯೇ ಇದ್ದೇನೆ. ಆದರೆ ನಮ್ಮ ದೇಶದ ದಿನಗೂಲಿಗಳ ವಿಚಾರ, ಅರಿತಾಗ ಮನಸಿಗೆ ಕಷ್ಟವಾಗುತ್ತದೆ. ಇದರ ನಡುವೆ ಇದು ಜಗತ್ತನ್ನೇ ಗೆದ್ದಂತೆ ಸಂಭ್ರಮಿಸುವ ಮಂದಿಗೆ ತಮ್ಮ ಮಿತಿ ಏನು, ನಾವು ಪ್ರಕೃತಿಯನ್ನು ಎಷ್ಟು ಹಾಳು ಮಾಡಿದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಸಿಕ್ಕಂಥ ಅವಕಾಶ ಎಂದುಕೊಂಡಿದ್ದೇನೆ.

ನಿರ್ಮಾಪಕರಿಗೆ ವರದಾನವಾಗುತ್ತಾ ಒಟಿಟಿ

ದೇಶವೇ ಲಾಕ್ಡೌನ್ ಆದ ಎರಡು ತಿಂಗಳನ್ನು ಮನೆಯೊಳಗೆ ಯಾವ ರೀತಿಯಲ್ಲಿ ಕಳೆದಿರಿ?
ಆಗಲೇ ಹೇಳಿದಂತೆ ನನಗೆ ಇಬ್ಬರು ಮಕ್ಕಳಿದ್ದಾರೆ. ಮಗ `ಅಂಕುರ'ನಿಗೆ 15 ವರ್ಷ. ಮಗಳು 'ತಲ್ಲೀನ'ಳಿಗೆ ಎರಡು ವರ್ಷ ಮೂರು ತಿಂಗಳಷ್ಟೇ ಆಗಿದೆ. ಮುಖ್ಯವಾಗಿ ಸಿನಿಮಾ ಕ್ಷೇತ್ರದ ಒತ್ತಡದ ಬದುಕಿನಿಂದ ದೂರವಾಗಿ, ಮೊದಲ ಬಾರಿಗೆ ಕುಟುಂಬಕ್ಕಾಗಿ  ಇಷ್ಟೊಂದು ಸಮಯ ನೀಡಲು ಸಾಧ್ಯವಾಗಿದೆ. ಮನೆಯಿಂದ ಪ್ರಾವಿಶನ್ ತರಲೆಂದು ಪತ್ನಿ ಅಥವಾ ನಾನು ಹೊರ ಹೋಗಿದ್ದು ಬಿಟ್ಟರೆ ಪೂರ್ತಿ ಮನೆಯಲ್ಲೇ ಇದ್ದೆ. ಮಗಳಿಗೆ ಊಟ ತಿನ್ನಿಸುವುದು ಮತ್ತು ನನ್ನ ಹೆಂಡತಿಗೆ ತರಕಾರಿ ಹಚ್ಚಿಕೊಡುವ ಮೂಲಕ ಅಡುಗೆಗೆ ಸಹಾಯ ಮಾಡಿದೆ. ಅಡುಗೆಯಲ್ಲಿ ಹೊಸ ರುಚಿ ಕಲಿಯುವ ಪ್ರಯತ್ನವನ್ನು ಮಾಡಿದೆ. 

ಒಬ್ಬ ಒಳ್ಳೆಯ ಓದುಗರೂ ಆದ ನಿಮಗೆ ಓದಿಗೆ ಪುಸ್ತಕಗಳು ದೊರಕಿದ್ದವೇ?
ಹೌದು. ಬಹಳ ಸಮಯದಿಂದ ಖರೀದಿಸಿದ್ದ ಪುಸ್ತಕ ಓಂ ಪುರಿಯವರ ಜೀವನ ಚರಿತ್ರೆ ಓದಿದೆ. ಅದನ್ನುಅವರ ಪತ್ನಿ ನಂದಿತಾ ಪುರಿ ಬರೆದಿದ್ದಾರೆ. ಒಂದಷ್ಟು ಕಾಂಟ್ರವರ್ಸಿ ವಿಚಾರಗಳನ್ನು ಒಳಗೊಂಡಿತ್ತು. ಅದು ಅವರ ವಿಚ್ಚೇದನಕ್ಕೂ ಕಾರಣವಾಗಿತ್ತು ಎಂದು ಹೇಳಲಾಗಿತ್ತು. ಅದರ ಬಳಿಕ ದೇವನೂರ ಮಹಾದೇವ ಅವರ ಅಂಕಣಗಳ ಸಂಗ್ರಹವಾದ `ಎದೆಗೆ ಬಿದ್ದ ಅಕ್ಷರ' ಓದಿದೆ. ಇವೆರಡು ಪುಸ್ತಕಗಳ ಹೊರತಾಗಿ ಬೆಸಗರ ಹಳ್ಳಿ ರಾಮಣ್ಣ ಅವರ ಪುಟ್ಟ ಕತೆಗಳನ್ನು ಓದಿದೆ. ಹಾಗಂತ ಓದುವುದನ್ನೇ ಗುರಿಯಾಗಿಸಿಕೊಂಡಿಲ್ಲ. ಊಟ, ನಿದ್ದೆ, ಕೇರಂ, ಚೆಸ್ ಆಟ ಹೀಗೆ ಬಿಡುವಿನ ವೇಳೆಯನ್ನು ಸರಿಯಾಗಿ ಆಸ್ವಾದ ಮಾಡುತ್ತಿದ್ದೇನೆ. ಬಾಲ್ಯದಿಂದ ನನಗೆ ಸ್ವಲ್ಪ ಉಸಿರಾಟದ ತೊಂದರೆ ಇರುವ ಕಾರಣ ನಾನು ಹೆಚ್ಚು ಜಿಮ್ ಗಿಮ್ ಮಾಡುತ್ತಿರಲಿಲ್ಲ. ನನಗೆ ವೈದ್ಯರು ಕೂಡ ಮಧ್ಯಮ ವೇಗದಲ್ಲೇ ವಾಕ್ ಹೋಗುವಂತೆ ಸಲಹೆ ನೀಡಿದ್ದಾರೆ. ಸಂಜೆ ಅಥವಾ ಬೆಳಿಗ್ಗೆ ಅರ್ಧದಿಂದ ಒಂದು ಗಂಟೆ ನಡೆದಾಡುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿರುವ ಕವನಗಳನ್ನು ಓದುವುದು, ಸಮಯ ಸಿಕ್ಕರೆ ವಚನಗಳ ಸಂಗ್ರಹವನ್ನು ತಿರುವಿ ಹಾಕುವುದು ಮಾಡುತ್ತೇನೆ.

ಕೃಷ್ಣ-ಮಿಲನ ಕಥೆ ಮುಂದುವರಿದಿದೆ

ಬಿಡುಗಡೆಯಾಗಲಿರುವ ನಿಮ್ಮ ಸಿನಿಮಾಗಳು ಮತ್ತು  ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಹೇಳಿ
ಮೊದಲೇ ನಾನು ನಟಿಸಿರುವ ಹೊಸ ಹುಡುಗರ ಚಿತ್ರಗಳು ಒಂದಷ್ಟು ನಿಧಾನವಾಗಿದೆ. ಲಾಕ್ಡೌನ್ ಆಗಲು ಒಂದು ತಿಂಗಳು ತಡವಾಗಿದ್ದರೂ `ದಿಲ್ ಮಾರ್', ಅನೀಶ್ ಅವರ `ರಾಮಾರ್ಜುನ' ಸೇರಿದಂತೆ `ಹಳ್ಳಿ ಹುಡುಗರ ಕತೆ' ಮೊದಲಾದ ಚಿತ್ರಗಳು ಬಿಡುಗಡೆಯಾಗಿರುತ್ತಿತ್ತು. ಇನ್ನು ಜನ ಥಿಯೇಟರ್‌ ಗೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಸಹಜ. ಇದರ ನಡುವೆ ಕನ್ನಡದಲ್ಲಿ ವೆಬ್ ಸೀರೀಸ್ ಕಾನ್ಸೆಪ್ಟ್ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿಲ್ಲ. ಅದು ಹೆಚ್ಚುವಂತಾಗಬೇಕು. ನಾನು ಖಳನಾಗಿ ನಟಿಸುವುದಾದರೂ, ಪಾತ್ರದಿಂದ ಪಾತ್ರಕ್ಕೆ ವೈವಿಧ್ಯೆತೆ ಬಯಸುತ್ತೇನೆ. ಹಾಗಾಗಿ ಸಿನಿಮಾದಷ್ಟೇ ಪೇ ಮಾಡುವುದಾಗಿ ಹೇಳಿದರೂ ಧಾರಾವಾಹಿಗಳನ್ನು ಒಪ್ಪದಿರಲು ಅದೇ ಕಾರಣ. ಹೊಟ್ಟೆ ಪಾಡಿಗಾಗಿ ನಟಿಸಬೇಕು ಎನ್ನುವ ಪರಿಸ್ಥಿತಿ ಬಂದಾಗ ನಾನೇನು ಮಾಡುತ್ತೇನೆ ಎಂದು ನನಗೆ ಇನ್ನೂ ಗೊತ್ತಿಲ್ಲ. ಅಂಥ ಪರಿಸ್ಥಿತಿ ಬರಲ್ಲ ಎಂದುಕೊಂಡಿದ್ದೇನೆ. ಆದರೆ ಸದ್ಯಕ್ಕೆ ನನಗೆ ಆಯ್ಕೆಗೆ ಅವಕಾಶಗಳಿವೆ. ಹಾಗಾಗಿ ಬಂದಿದ್ದನ್ನೆಲ್ಲ ಒಪ್ಪಿಕೊಳ್ಳುತ್ತಿಲ್ಲ. ತಮಿಳಲ್ಲಿಯೂ ಅಷ್ಟೇ;  ನನ್ನನ್ನು ವೆಟ್ರಿಮಾರನ್ ಅವರಂಥ ಶ್ರೇಷ್ಠ ನಿರ್ದೇಶಕರು ಒಳ್ಳೆಯ ಚಿತ್ರದ ಮೂಲಕ ಪರಿಚಯಿಸಿದ ಕಾರಣ, ಅದರ ಬಳಿಕವೂ ಒಳ್ಳೊಳ್ಳೆಯ ಪಾತ್ರಗಳೇ ಬಂದವು. ಎಲ್ಲ ಕಲಾವಿದರಿಗೂ ಅಂಥ ತೃಪ್ತಿ ನೀಡಬಲ್ಲ ಪಾತ್ರಗಳು ದೊರಕುವಂತಾಗಲಿ ಎಂದು ಬಯಸುತ್ತೇನೆ.

Follow Us:
Download App:
  • android
  • ios