Asianet Suvarna News

ಮಲ್ಟಿಪ್ಲೆಕ್ಸ್‌ನಲ್ಲಿ ಸ್ಟಾರ್‌ಗಳ ಹವಾ, ನಿರ್ಮಾಪಕರಿಗೆ ವರದಾನವಾಗುತ್ತಾ OTT ಪ್ಲಾಟ್‌ಫಾರಂ?

ಮಲ್ಟಿಪ್ಲೆಕ್ಸ್‌ಗಳಲ್ಲಿ ಸ್ಟಾರ್‌ ಸಿನಿಮಾಗಳಿಗಷ್ಟೇ ಮಣೆ| ಸ್ಟಾರ್‌ಗಳಿದ್ದ ಸಿನಿಮಾಗಳಿಂದ ಉತ್ತಮ ಸಿನಿಮಾಗಳಿಗೆ ಸಿಗುತ್ತಿಲ್ಲ ಬೆಲೆ| ಸಿನಿಮಾಗೆ ಹಣ ಸುರಿದು ಸ್ಟಾರ್‌ ನಟರಿಲ್ಲ ಎಂಬ ಕಾರಣಕ್ಕೆ ಸೋಲುತ್ತಿರುವ ಸಿನಿಮಾಗಳು| ಲಾಕ್‌ಡೌನ್‌ ನಡುವೆ ಜನರನ್ನು ರಂಜಿಸುವಲ್ಲಿ OTT ಪ್ಲಾಟ್‌ಫಾರಂಗಳು ಯಶಸ್ವಿ| ಲಾಕ್‌ಡೌನ್ ನಡುವೆ ನಿರ್ದೇಶಕ ನಿರ್ಮಾಪಕರ ಪಾಲಿಗೆ ಆಶಾಕಿರಣವಾದ OTT ಪ್ಲಾಟ್‌ಫಾರಂ

Will Films Releasing on OTT Help Small Time Producers Directors Dudding Artists
Author
Bangalore, First Published May 22, 2020, 1:02 PM IST
  • Facebook
  • Twitter
  • Whatsapp

-ಶ್ರೀನಿ, ನಿರ್ದೇಶಕ 

ಬೆಂಗಳೂರು(ಮೇ.22): ಸದ್ಯ ಇಡೀ ವಿಶ್ವವೇ ಕೊರೋನಾ ಅಟ್ಟಹಾಸಕ್ಕೆ ನಲುಗಿದೆ. ಅಂಗಡಿ ಮುಂಗಟ್ಟು, ಮಾಲ್‌, ಸಿನಿಮಾ ಥಿಯೇಟರ್‌ ಹೀಗೆ ಎಲ್ಲವೂ ಲಾಕ್‌ಡೌನ್‌ನಿಂದ ಮುಚ್ಚಿವೆ. ಹೀಗಿರುವಾಗ ಜನರೆಲ್ಲಾ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಮನರಂಜನೆಗಾಗಿ ಪುಟ್ಟ ಮೊಬೈಲ್‌ ಸ್ಕ್ರೀನ್‌ಗಳಲ್ಲಿ ಆನ್‌ಲೈನ್‌ ಪ್ಲಾಟ್‌ಫಾರಂ ಮೂಲಕ ಸಿನಿಮಾಗಳನ್ನು ವೀಕ್ಷಿಸಲಾರಂಭಿಸಿದ್ದಾರೆ. ಇಲ್ಲಿ ಥಿಯೆಟರ್‌ನಲ್ಲಿರುವಂತೆ ಸ್ಟಾರ್‌ಗಳ ಹವಾ ಇಲ್ಲ, ಜನರು ತಮಗಿಷ್ಟವಾದ ಸಿನಿಮಾಗಳನ್ನು ಕ್ಲಿಕ್ ಮಾಡಿ ನೋಡಲಾರಂಭಿಸಿದ್ದಾರೆ.

ಸದ್ಯ ಈ ಬೆಳವಣಿಗೆ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ನಿರ್ದೆಶಕ ಹಾಗೂ ನಿರ್ಮಾಪಕರ ಚರ್ಚೆಯೊಂದು ಸದ್ದು ಮಾಡಲಾರಂಭಿಸಿದೆ. ಹೌದು ಕತೆ, ಸಿನಿಮಾ ಚೆನ್ನಾಗಿದ್ದರೂ ಸ್ಟಾರ್‌ಗಳಿಲ್ಲ ಎಂಬ ಒಂದೇ ಕಾರಣಕ್ಕೆ ಥಿಯೇಟರ್‌ಗಳಲ್ಲಿ ಸಿನಿಮಾ ಸೋಲುತ್ತಿದೆ. ಅದರಲ್ಲೂ ವಿಶೇಷವಾಗಿ ಬಾಲಿವುಡ್‌ ಹಾಗೂ ಇತರ ಭಾಷೆಯ ಸಿನಿಮಾಗಳೆದುರು ಕನ್ನಡ ಸಿನಿಮಾಗಳು ಸೋಲುತ್ತಿವೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಚೆನ್ನಾಗಿರುವ ಸಿನಿಮಾಗಳಿಗೂ ಶೋಗಳು ಸಿಗುತ್ತಿಲ್ಲ. ಇದರಿಂದ ನಿರ್ಮಾಪಕ ಹಾಗೂ ನಿರ್ದೇಶಕರು ದುಡ್ಡು ಸುರಿದು ಸಿನಿಮಾ ಮಾಡಿದ್ದರೂ ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ OTT ಪ್ಲಾಟ್‌ಫಾರಂಗಳು ನಿರ್ದೇಶಕ ಹಾಗೂ ನಿರ್ಮಾಪಕರ ಪಾಲಿಗೆ ವರದಾನವಾಗುತ್ತಿವೆ. ಸೋಶಿಯಲ್ ಮೀಡಿಯಾದಲ್ಲೂ ಲಾಕ್‌ಡೌನ್ ಬಳಿಕ ಥಿಯೇಟರ್ ಮೊರೆ ಹೋಗದೆ ಈ ಪ್ಲಾಟ್‌ಫಾರಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಮಾತುಗಳು ಜೋರಾಗಿವೆ. ಈ ಕುರಿತಾಗಿ 'ಕೆಲವು ದಿನಗಳ ನಂತರ' ಸಿನೆಮಾದ ನಿರ್ದೇಶಕ ಶ್ರೀನಿ ಬರೆದ ಒಂದು ಲೇಖನ ಇಲ್ಲಿದೆ.

ಕೋರೋನಾದಿಂದ ಚಿತ್ರರಂಗದಲ್ಲೂ ಒಂದಷ್ಟು ಬದಲಾವಣೆಯಾಗಿ, ನಿರ್ಮಾಪಕ-ನಿರ್ದೇಶಕರು ಅನುಭವಿಸುವ ನೋವು ಮರೆಯಾಗಲಿ ಎಂಬ ಆಶಯದೊಂದಿಗೆ ಒಬ್ಬ ನಿರ್ಮಾಪಕನಾಗಿ ನನ್ನ ಅಭಿಪ್ರಾಯ ತಿಳಿಸುತ್ತಿದ್ದೇನೆ. ಸಾಧ್ಯವಾದೇ ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಒಂದು ಸಿನಿಮಾ ಮಾಡುವುದರ ಮೂಲ ಉದ್ದೇಶವೇನೆಂದರೆ, ಆ ಸಿನಿಮಾವನ್ನು ಎಷ್ಟು ಸಾಧ್ಯವೋ ಅಷ್ಟು ಜನರಿಗೆ ತಲುಪಿಸುವುದು. ಅದರ ಜೊತೆಗೆ ತಾವು ಹಾಕಿದ ಬಂಡವಾಳದ ಮೇಲೆ ಒಂದಷ್ಟು ಲಾಭ ಮಾಡುವುದು. ಮತ್ತೆ ಅದೇ ಲಾಭದಿಂದ ಇನ್ನೊಂದಷ್ಟು ಸಿನಿಮಾಗಳು ತಯಾರು ಮಾಡುವುದು. ಆದರೆ ಅಸಲಿಗೆ ಆಗುತ್ತಿರುವುದೇ ಬೇರೆ.

ಲಾಕ್‌ಡೌನ್‌ ಎಫೆಕ್ಟ್; ಅಮೆಜಾನ್‌ ಪ್ರೈಮ್‌ಗೆ ಸಿನಿಮಾ ಕೊಟ್ಟ ಪುನೀತ್‌ ರಾಜ್‌ಕುಮಾರ್!

ಥಿಯೇಟರ್ ನಲ್ಲಿ ಸ್ಟಾರ್ ಸಿನಿಮಾಗಳನ್ನ ಬಿಟ್ಟರೆ ಮಿಕ್ಕವರ ಸಿನಿಮಾ ಗೆಲ್ಲುವುದು ಒಂದು ವಾರ್ ಗೆದ್ದಂತೆ. ಗೆಲ್ಲುವ ಸಿನಿಮಾಗಳನ್ನು ಸೋಲಿಸುವ ಮಲ್ಟಿಪ್ಲೆಕ್ಸ್ ಗಳ ಶೋ ಟೈಮಿಂಗ್. ಕೇಳಿದರೇ ಕನ್ನಡ ಸಿನಿಮಾ ಯಾರ್ರೀ ನೋಡ್ತಾರೆ...? ಇರೋದು ಈ ಟೈಮಿಂಗ್ ಬೇಕಾದ್ರೇ ಹಾಕ್ಕೊಳ್ಳಿ, ಅದು ಒಂದು ವಾರ ಮಾತ್ರ ಮುಂದಿನ್ ವಾರ ಹಿಂದಿ ಸೂಪರ್ ಸ್ಟಾರ್ ಸಿನಿಮಾ ಬರ್ತಿದೆ. ಸೋ ಅವರಿಗೆ 40shows ಬುಕ್ ಆಗಿದೆ ಎಂದು ಏರುಧನಿಯಲ್ಲಿ ಮಾತನಾಡುವ 'ನಾರ್ಥಿ'ಗಳು ಅವರ ತಾಳಕ್ಕೆ ತಕ್ಕಂತೆ ಕುಣಿಯುವ 'ನಮ್ಮ' ಡಿಸ್ಟ್ರಿಬ್ಯೂಟರ್ ಗಳು. (ನಾವೇನಾದರೂ ಹೆಚ್ಚು ಮಾತನಾಡಿದರೇ ಶೋ ಕೊಡೋದೆ ಇಲ್ಲ.)

ಇಷ್ಟಪಟ್ಟು ತುಂಬಾ ಕಷ್ಟಪಟ್ಟು ಒಂದು ಸಿನಿಮಾ ಮಾಡುವ "ನಿರ್ದೇಶಕ, ನಿರ್ಮಾಪಕ ನಿಜವಾಗಿಯೂ ಅತೀ ಹೆಚ್ಚು ಕಷ್ಟ, ನೋವು ಅನುಭವಿಸುವುದು ಸಿನಿಮಾ ರಿಲೀಸ್ ಮಾಡುವಾಗ".

Assistant Directors, Directors ಗಳಿಗೆ ದುಡ್ಡು ಕೊಡದೇ, Artist ಗಳಿಗೆ ಕಮ್ಮಿ ದುಡ್ಡಿಗೆ ಒಪ್ಪಿಸಿ, ಲೋಕೆಷನ್ಸ್ ನಲ್ಲಿ ದುಡ್ಡು ಉಳಿಸಿ, Writers ಹತ್ರ, ಎಲ್ಲಾ Technician's ಹತ್ರ ಕಾಡಿ-ಬೇಡಿ ಅವರ Remuneration ಕಡಿಮೆ ಮಾಡಿ ಆ ದುಡ್ಡನ್ಮ ಪ್ರಮೋಷನ್ಸ್ ಗೆ ಬಳಸಿಕೊಂಡು Grand Promotion ಮಾಡಿ ಸಿನಿಮಾನ ಎಲ್ಲಾ ಕಡೆ ತಲುಪಿಸಬಹುದು, ಎಂದುಕೊಂಡು ಪ್ರಮೋಷನ್ಸ್ ಹಂತಕ್ಕೆ ಬಂದಾಗ ಅಲ್ಲಿ ವಿವಿಧ ರೀತಿಯ ಪ್ರಮೋಷನ್ ಗಳು
ಡಿಜಿಟಲ್ ಪ್ರಮೋಷನ್ಸ್, (Online Promotions)

Bus Promotions
Auto Promotions
Train promotions
Radio promotion
Paper publicity
Theatre Promotion

ಹೀಗೇ ಹತ್ತು ಹಲವು. ಎಲ್ಲವೂ ದುಡ್ಡು ತೆಗೆದುಕೊಳ್ಳುವವರೆಗೆ ಹಾಗ್ ಮಾಡ್ತೀವಿ, ಹೀಗ್ ಮಾಡ್ತೀವಿ ಅಂತಾರೆ. ದುಡ್ಡು ತಗೊಂಡ್ ಆದ್ಮೇಲೆ ಹೇಗ್ ಮಾಡಿದ್ರೂ ಅಂತಾ ಮಾಡಿಸಿದೋರ್ಗೇ ಗೊತ್ತಿರುತ್ತೆ. ಇನ್ನು ಟಿವಿ ಚಾನಲ್ ಗಳು ಪ್ರಮೋಷನ್ ಲಕ್ಷಕ್ಕಿಂತ ಕಡಿಮೆ ದುಡ್ಡಿಗೆ ಕಾಲ್ ಘಂಟೆ ಪ್ರೋಗ್ರಾಮ್ ಕೂಡ ಮಾಡೋದಿಲ್ಲ.

ಇದೆಲ್ಲಕ್ಕಿಂತ ಬೇಸರ ಅಂದರೆ ಈ ಪೋಸ್ಟರ್ ಪ್ರಮೋಷನ್. 1000 ಪೋಸ್ಟರ್ ಪ್ರಿಂಟಿಂಗ್ ಗೆ (6sheeter)35000rs ಮತ್ತೆ ಅಂಟ್ಸೋಕೆ 35000rs ಅಂತ 70000 ಖರ್ಚು ಮಾಡಿದ್ರೇ ಅದ್ರಲ್ಲಿ 500ಪೋಸ್ಟರ್ಸ್ ಕಾಣ್ಸೋದು ಡೌಟು. ಕೇಳಿದ್ರೇ ಅಲ್ಲಿ ಅಂಟಾಕಿದ್ದೀವಿ, ಇಲ್ಲಿ ಅಂಟಾಕಿದ್ದೀವಿ, ಯಾರೋ ಕಿತ್ತಿರ್ಬೇಕು, ಇಲ್ಲಾ ಆ ಸಿನಿಮಾದೋರು ನಿಮ್ಮ ಸಿನಿಮಾ ಪೋಸ್ಟರ್ ಮೇಲೆ ಅಂಟಿಸಿದ್ದಾರೆ ಎಂಬ ನೂರಾರು ಸಮಜಾಯಿಷಿ ಕೊಡುತ್ತಾರೆ.

ನೆಟ್‌ಫ್ಲಿಕ್ಸ್‌ಗೆ ಸಡ್ಡು ಹೊಡೆಯಲು ಬಂದಿದೆ 'ನಮ್ಮ Flix'; ಕನ್ನಡ ಚಿತ್ರ ಬೆರಳ ತುದಿಯಲ್ಲಿ!

ಈ ಎಲ್ಲಾ ತೊಂದರೆಗಳನ್ನು ನಗು-ಮೊಗದಿಂದಲೇ ಸ್ವೀಕರಿಸಿ ಹರಸಾಹಸ ಪಟ್ಟು ಡಿಸ್ಟ್ರಿಬ್ಯೂಟರ್ಸ್ ಮೂಲಕ ರಿಲೀಸ್ ಮಾಡೋಕೆ ಬಂದ್ರೇ, ರಿಲೀಸ್ ಮಾಡೋಕು ಮುಂಚೆ ಹಾಗೇ ಮಾಡ್ತೀವಿ ಹೀಗೆ ಮಾಡ್ತೀವಿ ಅಷ್ಟ್ ಥಿಯೇಟರ್ಸ್ ಮಾಡ್ತೀವಿ, ಇಷ್ಟ್ ಥಿಯೇಟರ್ಸ್ ಮಾಡ್ತೀವಿ ಅಂದೋರು ರಿಲೀಸ್ ಡೇಟ್ ಹತ್ರ ಬಂದಷ್ಟು ಕೆಲವ್ರು ಡಿಸ್ಟ್ರಿಬ್ಯೂಟರ್ಸ್,ರೀ ಆ ಥಿಯೇಟರ್ ನವರಿಗೆ ರೆಂಟ್ ಕೊಡ್ಲೇಬೇಕಂತೆ ಇಲ್ಲಾಂದ್ರೇ ಅವ್ರು ಆ ಥಿಯೇಟರ್ಗಳನ್ನ ಕೊಡಲ್ವಂತೆ, ನಾನು ಮಾತಾಡೋ ಅಷ್ಟು ಮಾತಾಡಿದ್ದೀನಿ ಆದ್ರೇ ಒಪ್ತಾ ಇಲ್ಲ ಅಂತಾರೆ. ಅಲ್ಲಾ ಸರ್ ಅವಾಗ ಒಪ್ಪಿದ್ದಾರೆ ಅಂದ್ರಲ್ಲ ಅಂದ್ರೇ, ಅಯ್ಯೋ ಅವಾಗ ಒಪ್ಪಿದ್ರು ಇವಾಗ ಒಪ್ತಾ ಇಲ್ಲ, ಹಂಗೂ ಬೇಕೇಬೇಕು ಅಂದ್ರೇ ಒಂದತ್ತು ಲಕ್ಷ ಅರೇಂಜ್ ಮಾಡಿ ಹೇಗಾದ್ರೂ ಒಪ್ಪಿಸ್ತೀನಿ ಅಂತ ಪ್ಲೇಟ್ ಚೇಂಜ್ ಮಾಡ್ತಾರೆ.

ಇನ್ನೇನ್ ಮಾಡೋದು ಡೇಟ್ ಬೇರೆ ಅನೌನ್ಸ್ ಆಗಿದೆ ಪ್ರಮೋಷನ್ಸ್ ಮಾಡ್ತಿದ್ದೀವಿ ಅಂತ ಹೇಗೋ ಸಾಲ-ಗೀಲ ಮಾಡಿ ದುಡ್ಡು ತಂದು ಕೊಟ್ರೇ ನಾವು ರಿಲೀಸ್ ಮಾಡಿರೋ ಥಿಯೇಟರ್ ನಲ್ಲಿ ಮುಂದಿನ ವಾರದಿಂದ ಇನ್ನೊಂದು ಸಿನಿಮಾ ರಿಲೀಸ್ ಆಗ್ತಿದೆ ಅಂಥ ಪೇಪರ್ ನಲ್ಲಿ Ad ತೋರ್ಸಿ ಆಲ್ಮೋಸ್ಟ್ ಆತ್ಮಹತ್ಯೆ ಮಾಡ್ಸೋಕೆ ಪ್ರಯತ್ನ ಪಡ್ತಾರೆ. ಕೇಳಿದ್ರೇ ಏನ್ ಮಾಡೋದು ಸಾರ್ ಕಂಟೆಂಟ್ ಚನ್ನಾಗಿದ್ರೇ ಓಡುತ್ತೆ ಇಲ್ಲಾಂದ್ರೇ ಏನೂ ಮಾಡೋಕಾಗಲ್ಲ. ಅವ್ರದ್ದು ದೊಡ್ಡ ಸಿನಿಮಾ ಅಂತಾರೆ.

ಇದೆಲ್ಲಕ್ಕಿಂತ ದೊಡ್ಡ ದುರಂತ ಅಂದ್ರೇ ಟಿಕೆಟ್ ಬುಕ್ ಮಾಡೋ ಯಕಃಶ್ಚಿತ್ ಒಂದು ಆ್ಯಪ್ ರೇಟಿಂಗ್ಸ್ ಅನ್ನೋ ಗ್ಯಾಂಬ್ಲಿಂಗ್ ನಲ್ಲಿ ಆ ಸಿನಿಮಾವನ್ನು ಕೊಲ್ಲುವ ಯತ್ನ ಮಾಡುವುದು. ಬಹುತೇಕ ಕನ್ನಡ ಸಿನಿಮಾಗಳ ರೇಟಿಂಗ್ ಕಡಿಮೆ‌ ಮಾಡಿ ಅವುಗಳನ್ನ ಕೊಲ್ಲಲು ಪ್ರಯತ್ನಿಸಿವುದು. ಬಲ ಇದ್ದವರು, ಗೆಲ್ಲುತ್ತಾರೆ ಇಲ್ಲದಿದ್ದರೇ ಬಿಲ ಸೇರುತ್ತಾರೆ.‌ ಇವರ ವಿರುದ್ದ ಎಷ್ಟೇ ಹೋರಾಟ, ಹಾರಾಟ ಮಾಡಿದ್ರೂ ಕ್ಯಾರೇ ಅನ್ನದ ಕಠಿಣ ಹೃದಯದವರು.

ಕೊನೆಗೆ ಒಂದುವಾರನೋ ಎರಡು ವಾರಾನೋ ಸಿನಿಮಾ ಓಡಿ ಅಥವಾ ಓಡಿಸಿದ್ರೇ ಜನಾನೆ ಬಂದಿಲ್ಲ ರೀ ಅಂತಾರೆ. EP ಗಳನ್ನ ಕಳ್ಸಿದ್ರೇ ಅವ್ರು 100ಜನ ಬಂದಿದ್ರೆ,
ಥಿಯೇಟರ್ ನವ್ರು ಹೇಳೋದು 70-80 ಅಲ್ಲೂ 20-30ಜನ ಇರ್ಲಿಲ್ವಂತೆ. ಡಿಸ್ಟ್ರಿಬ್ಯೂಟರ್ ಕೊನೆಗೆ ಎಲ್ಲಾ ಲೆಕ್ಕ ಹಾಕಿ ಬ್ಯಾಲೆನ್ಸ್ ಡಬ್ ಶೀಟ್ಸ್ ಮುಂದೆ ಇಡ್ತಾರೆ. ಇನ್ನೂ ಥಿಯೇಟರ್ ರೆಂಟ್ ಇಷ್ಟು ಬ್ಯಾಲೆನ್ಸ್ ಇದೆ ಅಂತಾ. ಅಲ್ಲಿಗೆ ಥಿಯೇಟರ್ ಇಂದ ಬರೋ ದುಡ್ಡು ಡಮಾರ್.

ಮನರಂಜನೆ ಹೋಗಿ ಮನೆರಂಜನೆ ಬಂತು;ಓಟಿಟಿಗೆ ದಾರಿಮಾಡಿಕೊಟ್ಟಲಾಕ್‌ಡೌನ್‌!

ಹೋಗ್ಲಿ ಸಿನಿಮಾ ಏನೋ ರಿಲೀಸ್ ಆಗೋಯ್ತು ಟಿವಿ ರೈಟ್ಸ್, ಡಬ್ಬಿಂಗ್ ರೈಟ್ಸ್, ಡಿಜಿಟಲ್ ರೈಟ್ಸ್ ಬರುತ್ತೆ ಅಂತ ಚಾನೆಲ್ ಹತ್ರ ಹೋದ್ರೇ All Rights. ಸೇರಿ 1ಲಕ್ಷಾನೋ, 2ಲಕ್ಷಾನೋ ಕೊಡ್ತೀವಿ ಅಂತಾರೆ. ಕೊನೆಗೆ ನಿರ್ಮಾಪಕ ನೇರವಾಗಿ ನಿರ್ದೇಶಕನನ್ನ ದೂರ್ತಾ ಮನೆ ಮಠ ಮಾರ್ಕೊಂಡು ಮುಖದ್‌ ಮೇಲೆ ಟವಲ್ ಹಾಕ್ಕೊಂಡು ಹೋಗ್ತಾರೆ.

ನೂರಾರು ಜನರಿಗೆ ಕೈ ತುಂಬಾ ಸಂಬಳ ಕೊಟ್ಟು, ಹೊಟ್ಟೆತುಂಬಾ ಊಟ‌ ಹಾಕಿದ್ದೀವಿ ಅನ್ನೋ ಒಂದು ಸಮಾಧಾನ ಬಿಟ್ರೇ ಮಿಕ್ಕಿದ್ದೇನು ಇರಲ್ಲ.‌ ಕೊನೆಯದಾಗಿ ನಿರ್ದೇಶಕನ ಕನಸು ಮತ್ತೇ ನಿರ್ಮಾಪಕನ ದುಡ್ಡು ನೀರಿನಲ್ಲಿ ಮಾಡಿದ ಹೋಮದಂತಾಗುತ್ತದೆ. ಈ ರೀತಿ ಪ್ರತೀ ವಿಭಾಗದಲ್ಲೂ ಬೆಂಕಿಯಂತೆ ಬೆಯ್ಯುತ್ತಿರುವ ಹೊಸ ನಿರ್ಮಾಪಕರ ಪಾಲಿಗೆ ವರದಾನಗುತ್ತದೆಯೇ ಈ OTT Digital Platforms....?

ಈಗ ಈ OTT Platform ಬಗ್ಗೆ ಬರೋಣ.‌

ಜಗತ್ತಿನ ಯಾವುದೇ ಮೂಲೆಯಲ್ಲಿ ಕೂತು ಯಾವ ಭಾಷೆಯ ಸಿನಿಮಾವನ್ನ ಯಾರು ಬೇಕಾದರೂ 5 ಇಂಚಿನ ಚಿಕ್ಕ ಪರದೆಯ ಮೋಬೈಲ್ ನಲ್ಲಿ ಯಾವಾಗ ಬೇಕಾದರೂ, ಎಲ್ಲಿಬೇಕಾದರೂ,ಎಷ್ಟುಬೇಕಾದರೂ ನೋಡಬಹುದು.

ಒಟ್ಟಾರೆ ಪ್ರಪಂಚದಲ್ಲಿ 300ಕ್ಕೂ ಹೆಚ್ಚಿನ OTT Digital Platformಗಳಿದ್ದಾವೆ. ಭಾರತ ಒಂದರಲ್ಲೇ‌ ಸುಮಾರು 53ಕ್ಕೂ ಅಧಿಕ OTT Platform ಗಳಿವೆ. ಅಲ್ಲದೇ ಒಟ್ಟಾರೆ ವಿಶ್ವದಾದ್ಯಂತ ಸುಮಾರು 50ಕೋಟಿಗೂ ಅಧಿಕ ಜನ ಈ OTT Platforms ಗಳ ಮೂಲಕ Movies, Documentary, Web series,
Short films ಗಳನ್ನ ನೋಡುತ್ತಿದ್ದಾರೆ. ಬಹಳ ಮುಖ್ಯವಾದ ವಿಚಾರವೆಂದರೇ ಇಲ್ಲಿ ಯಾವುದೇ ಸ್ಟಾರ್ ವಾರ್ ಗಳು ಇರುವುದಿಲ್ಲ. ಸ್ಟಾರ್ ಸಿನಿಮಾ ಬಂದರೇ ನಮ್ಮ ಸಿನಿಮಾ ನೋಡುವುದಿಲ್ಲ ಎಂಬ ಪ್ರಶ್ನೆಯೇ ಬರುವುದಿಲ್ಲ.

ಏಕೆಂದರೆ ಇಲ್ಲಿನ ಎಷ್ಟೋ ಸ್ಟಾರ್ ಗಳು ಹೊರಗಿನವರಿಗೆ ಗೊತ್ತೇ ಇರುವುದಿಲ್ಲ. ಹಾಗೂ ಕೋಟ್ಯಾಂತರ ರೂಪಾಯಿಗಳ Remuneration ಕೊಡುವ ಅಗತ್ಯವಿರುವುದಿಲ್ಲ. ಅದರಲ್ಲಿ ಅರ್ಧ ದುಡ್ಡನ್ನು ನಮ್ಮ Assistant Directors, Writers, Technicians ಗೆ ಕೊಟ್ಟು ಉತ್ತಮ ಕಥೆಗಳನ್ನ ಬರೆಸಿ ಅವರಿಗೂ ಒಂದು ಉತ್ತಮ ನೆಲೆ ಕಲ್ಪಿಸಿ Content ನ ಹೀರೋ ಮಾಡಲು ಪ್ರಯತ್ನಿಸಬಹುದು. "ಒಂದು ಸಿನಿಮಾಗೆ Hero ಗಿಂತ ಕಂಟೆಂಟ್ ಮುಖ್ಯ" ಎನ್ನುವುದನ್ನ ಈ OTT Platform ಗಳು ಈಗಾಗಲೇ ತೋರಿಸಿವೆ.‌

ಇವಾಗ ಇಲ್ಲಿ, ಒಂದು ಸ್ಟಾರ್ ಸಿನಿಮಾ ಗೆದ್ದರೇ ಅದರಲ್ಲಿ ಹೀರೋಯಿಂದ ಗೆಲ್ತು ಅನ್ನೋದರ ಜೊತೆಗೆ Double Remuneration. ಅದೇ OTT ನಲ್ಲಿ ಒಂದು ಕಂಟೆಂಟ್ ಇರೋ ಸಿನಿಮಾ ಗೆದ್ರೆ, ಪ್ರತೀ ಟೆಕ್ನಿಷಿಯನ್ ಗೂ ಒಳ್ಳೆ Name-Fame ಬರಬಹುದು.

ಇನ್ನು OTT Business ಗೆ ಬಂದ್ರೇ? 

ಸಿನಿಮಾಗೆ ಇತ್ತೀಚೆಗೆ ಎಲ್ಲರೂ ಶೇರಿಂಗ್ ಬೇಸಿಸ್ ಮೇಲೆ ಬ್ಯುಸಿನೆಸ್ ಮಾಡೋಣ ಒಳ್ಳೆಯ ಲಾಭ ಬರುತ್ತದೆ ಎನ್ನುತ್ತಾರೆ. ಆದರೇ ಎಷ್ಟು ಜನ ಸಿನಿಮಾವನ್ನು ಎಷ್ಟು ನಿಮಿಷಗಳವರೆಗೆ ನೋಡುತ್ತಾರೆ ಎಂಬುದರ ಮೇಲೆ ನಿಮ್ಮ ಆದಾಯ ನಿರ್ಧರಿಸಲ್ಪಡುತ್ತದೆ.

ಕೆಲವೊಂದು ಕಂಪನಿಗಳು, ಕೆಲವೊಂದು ಸಿನಿಮಾಗಳನ್ನ‌‌ ಇಂತಿಷ್ಟು ಲಕ್ಷಕ್ಕೆ ಎಂದು ಕೊಳ್ಳುತ್ತವೆ. ಉತ್ತಮ ಬೆಲೆಯಲ್ಲದಿದ್ದರೂ ಒಂದಿಷ್ಟು ದುಡ್ಡು ನಿರ್ಮಾಪಕನ ಜೇಬು ಸೇರುವುದು ಖಚಿತ. Perpetual ಆಗಿ (99 ವರ್ಷಗಳ ವರೆಗೆ) ರೈಟ್ಸ್ ನ್ನು ಒಂದು ಕಂಪನಿಗೆ ಬರೆದು ಕೊಡುವ ನಾವು ನಮ್ಮ ಸಿನಿಮಾ ಇರುವವರೆಗೆ ಅವರು ದುಡ್ಡು ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತೇವೆ. ಅದೇ‌ ಶೇರಿಂಗ್ ನಲ್ಲಿ ಕೊಟ್ಟರೇ ಸಿನಿಮಾ ಇರುವವರೆಗೆ, ಜನ ನೋಡಿದಂತೆಲ್ಲಾ ನಿರ್ಮಾಪಕನಿಗೂ ಒಂದಷ್ಟು ದುಡ್ಡು ತಿಂಗಳ ಸಂಬಳದಂತೆ ಬರುತ್ತಿರುತ್ತದೆ.

ಶೀಘ್ರದಲ್ಲೇ ಈ OTT Platform ಗಳು Satellite Rightsನ್ನು ಕೊಳ್ಳುವ ಯೋಚನೆಯಲ್ಲಿದ್ದಾರೆ. ಅದರ ಜೊತೆಗೆ ಉತ್ತಮ ಸಿನಿಮಾಗಳ ಡಬ್ಬಿಂಗ್ ರೈಟ್ಸ್ ನ್ನು ಕೊಂಡು ಡಬ್ ಮಾಡಿ ದೇಶ-ವಿದೇಶಗಳ ಬೇರೆ ಭಾಷೆಗಳಿಗೆ ಡಬ್ ಮಾಡಲು ಯೋಚಿಸುತ್ತಿದ್ದಾರೆ.

ಒಟ್ಟಾರೆ ಒಂದು ಉತ್ತಮ ಸಿನಿಮಾದ ಎಲ್ಲಾ ರೈಟ್ಸ್ ಗಳನ್ನು "ಉತ್ತಮಬೆಲೆಗೆ" ಕೊಂಡು ಹೆಚ್ಚಿನ ಜನರಿಗೆ ತಲುಪಿಸುವಂತಾಗಲಿ. ನಿರ್ಮಾಪಕನ ಜೇಬಿನ ಜೊತೆಗೆ
ನಿರ್ದೇಶಕನ ಕನಸುಗಳು ರಾರಾಜಿಸಲಿ. ಇದೆಲ್ಲ ಉತ್ತಮವಾದ ಬೆಳವಣಿಗೆಯಾದರೂ ಇದರ ಫಲ ಸಕಲರಿಗೂ ಸಿಗಬೇಕೆಂಬುದು ನಮ್ಮಂಥ‌ ಎಷ್ಟೋ ನಿರ್ದೇಶಕರ-ನಿರ್ಮಾಪಕರ ಆಶಯ.

ಸದ್ಯಕ್ಕೇ ಇರುವ ಒಂದಷ್ಟು OTT Platforms

Amazon Prime Video
Netflix
Hulu
Eros
Sony Liv
Direct TV
Discovery Channel
Smart multiflex
Yupptv
Vuclip
Viu TV
Mavshack
Hooq TV
Ullu Digital
The Viral Fever
Spuul
Gemplex
Hyflix
Hoichoi TV
Flizmovies
Arre
Bigflix
Zee
Voot
Sun next
Boxtv
Hotstar /Disney
ಇನ್ನೊಂದಷ್ಟು.....

Follow Us:
Download App:
  • android
  • ios