ನೆನಪರಲಿ ಪ್ರೇಮ್ ಏಕ್ಸೈಟ್‌ಮೆಂಟ್‌ನಲ್ಲಿದ್ದಾರೆ. ತನ್ನ ಹೆಸರಿನದೇ ಸಿನಿಮಾ, ವಿಭಿನ್ನ ಪಾತ್ರ, ಏಳು ಶೇಡ್‌ಗಳಿಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಬಹುದು ಅನ್ನೋದನ್ನು ಊಹಿಸಿಯೇ ಅವರು ಥ್ರಿಲ್‌ ಆಗಿದ್ದಾರೆ. ಅವರ ಸಂಭ್ರಮದ ಮಾತುಗಳು ಇಲ್ಲಿವೆ.

ಪ್ರಿಯಾ ಕೆರ್ವಾಶೆ

ಪ್ರೇಮಂ ಪೂಜ್ಯಂ ರಿಲೀಸ್‌ ಆಗ್ತಿದೆ, ಹೇಗಿದೆ ಪ್ರೇಮ್‌ ಮನಸ್ಸು?

ಎಕ್ಸಾಂ ಬರೆದಾಗಿದೆ. ರಿಸಲ್ಟ್‌ ಬಗ್ಗೆ ಗೊಂದಲ ಇಲ್ಲ. ಎಕ್ಸೈಟ್‌ಮೆಂಟ್‌ ಖಂಡಿತಾ ಇದೆ. ಸಂಭ್ರಮ, ಖುಷಿ ಕ್ಷಣ ಕ್ಷಣಕ್ಕೂ ಹೆಚ್ಚಾಗ್ತಾನೇ ಇದೆ. ಆದರೆ ಆತಂಕ,ಭಯ ಇದೆಲ್ಲ ಇಲ್ಲ. ಪರೀಕ್ಷೆ ಚೆನ್ನಾಗಿ ಬರೆದಿರೋ ಕಾರಣ ಫಲಿತಾಂಶ ನಿರಾಸೆ ತರಲ್ಲ ಅನ್ನೋದು ಗೊತ್ತಿದೆ.

ಮನುಷ್ಯ ಇದ್ದಾಗಿಂದ ಪ್ರೇಮ ಇದೆ. ನೂರಾರು ಸಲ ಹೇಳಿದರೂ ಅದರ ತಾಜಾತನಕ್ಕೆ ಚ್ಯುತಿ ಬರೋದಿಲ್ಲ ಅಲ್ವಾ?

ಹೌದು. ಈ ಸಿನಿಮಾದ ಪ್ರೇಮ ನಿಮ್ಮ ಪ್ರೇಮವನ್ನು ನೆನಪಿಸುತ್ತೆ. ಇಲ್ಲಾಂದ್ರೆ ನೀವು ಹತ್ತಿರದಿಂದ ನೋಡಿರುವ ಸ್ನೇಹಿತರು, ಆತ್ಮೀಯರ ಪ್ರೀತಿ ನೆನಪಾಗಬಹುದು. ಆ ಹಿನ್ನೆಲೆಯಲ್ಲಿ ನೀವಿದನ್ನು ಶುರುವಿಂದ ಕೊನೆತನಕ ಎನ್‌ಜಾಯ್‌ ಮಾಡ್ತಾ ಹೋಗ್ತೀರಿ. ಎಲ್ಲರಿಗೂ ಕನೆಕ್ಟ್ ಆಗುವ ಸಬ್ಜೆಕ್ಟ್, ಎಲ್ಲರಿಗೂ ಇಷ್ಟವಾಗುವ ಕತೆ ನಮ್ಮ ಚಿತ್ರದ್ದು.

ಪ್ರೇಮಂ ಪೂಜ್ಯಂ ಟೈಟಲ್‌ ನೋಡಿ ಕತೆ ಊಹಿಸಬಹುದಾ?

ಪ್ರೇಮ ಪೂಜ್ಯನೀಯವೂ ಹೌದು ಅನ್ನೋದನ್ನು ನಾವು ಈ ಚಿತ್ರದಲ್ಲಿ ಹೇಳ್ತೀವಿ. ನಾವೀಗ ಆಧುನಿಕ ಕಾಲದಲ್ಲಿದ್ದರೂ ಪ್ರೇಮ ಅದೇ ಪಾವಿತ್ರ್ಯತೆಯನ್ನು ಉಳಿಸಿಕೊಂಡಿದೆ. ಅದನ್ನು ಬಹಳ ಚೆನ್ನಾಗಿ ಸಿನಿಮಾ ರಿವೀಲ್‌ ಮಾಡುತ್ತೆ. ಆದರೆ ಈ ಟೈಟಲ್‌ ನನ್ನದಲ್ಲ. ಕಥೆ ಮಾಡಿಕೊಂಡು ಬಂದಾಗಲೇ ಈ ಟೈಟಲ್‌ ಫೈನಲ್‌ ಮಾಡಿದ್ರು. ನನಗೆ ಟೈಟಲ್‌ ಬಹಳ ಇಷ್ಟಆಯ್ತು. ಟೈಟಲ್ಲಲ್ಲೇ ನನ್ನ ಹೆಸರಿದೆ ಅನ್ನೋದು ಮೊದಲ ಕಾರಣ, ಕ್ಯಾರೆಕ್ಟರ್‌ ಎಷ್ಟುಅದ್ಭುತವಾಗಿದೆಯಲ್ಲಾ ಅನ್ನೋದು ಎರಡನೇ ಕಾರಣ. ನವಿರಾದ ಪ್ರೇಮ ಕತೆ ನನ್ನ ಮನಸ್ಸನ್ನೂ ಬೆಚ್ಚಗಾಗಿಸಿದೆ.

Lovely Star Prem: ಪುನೀತ್ ಸ್ನೇಹಕ್ಕೆ 'ಪ್ರೇಮಂ ಪೂಜ್ಯಂ' ಅರ್ಪಣೆ

ನಿಮ್ಮದೂ ಚೈಲ್ಡ್‌ಹುಡ್‌ ಲವ್‌ ಅಲ್ವಾ. ಅದಕ್ಕೆ ಹೆಚ್ಚು ಕನೆಕ್ಟ್ ಆಯ್ತಾ?

(ನಗು) ಇರಬಹುದು. ಆದರೆ ಪ್ರತಿಯೊಬ್ಬರಿಗೂ ಒಂದು ಚೈಲ್ಡ್‌ಹುಡ್‌ ಲವ್ವೋ, ಕ್ರಶ್ಶೋ ಇದ್ದೇ ಇರತ್ತಲ್ವಾ.

ಪ್ರೇಮಂ ಪೂಜ್ಯಂ ಜನ ಯಾಕೆ ನೋಡ್ಲೇಬೇಕು, 5 ಕಾರಣ ಹೇಳಬಹುದಾ?

1. ಇದರಲ್ಲಿ ಒಂದು ಅಪರೂಪದ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರಕ್ಕೆ ಏಳು ಶೇಡ್‌ಗಳಿವೆ. ಹರೆಯದ ಹುಡುಗನಿಂದ ಮೆಚ್ಯೂರ್‌್ಡ ಆಗಿರುವ ಜಂಟಲ್‌ಮ್ಯಾನ್‌ವರೆಗೆ ಪಾತ್ರದ ಜರ್ನಿ ಇದೆ. ಆ ಜರ್ನಿ ಖಂಡಿತಾ ಜನರಿಗೆ ಇಷ್ಟಆಗುತ್ತೆ.

2. ಕತೆ ನೀವು ಈವರೆಗೆ ಕೇಳಿರುವ ಕತೆಗಳಿಗಿಂತ ಬಹಳ ಭಿನ್ನವಾದದ್ದು. ಕತೆಯ ಫೆä್ಲೕ ಸಹ ಸಿನಿಮಾದಲ್ಲಿ ಪರಿಣಾಮಕಾರಿಯಾಗಿ ಬಂದಿದೆ.

3. ಹೊಸಬರ ತಂಡದ ಅತ್ಯುತ್ತಮ ಕೆಲಸವನ್ನಿಲ್ಲಿ ನೋಡಬಹುದು. ನಿರ್ದೇಶಕರಿಂದ ಹಿಡಿದು ನಟ, ನಟಿಯರು, ತಂತ್ರಜ್ಞರವರೆಗೆ ಹೊಸಬರೇ ಇಲ್ಲಿರುವ ಕಾರಣ ಇಡೀ ಸಿನಿಮಾಕ್ಕೆ ಹೊಸತನದ ಘಮವಿದೆ.

4. ಫೋಟೋಗ್ರಫಿಯಂತೂ ಹಾಲಿವುಡ್‌ ರೇಂಜ್‌ನಲ್ಲಿದೆ. ಮೂಡಿಗೆರೆ, ಮೈಸೂರುಗಳಲ್ಲಿ ಶೂಟ್‌ ಮಾಡಿರೋ ವಿಶ್ಯುವಲ್‌ಗಳು. ಈ ವಿಶ್ಯುವಲೈಸೇಶನ್‌ ಚಿತ್ರವನ್ನು ದೃಶ್ಯಕಾವ್ಯವಾಗಿಸಿದೆ.

5. ಇಲ್ಲಿ ಅಪರೂಪದ ಸ್ನೇಹದ ಕತೆ ಇದೆ. ಸ್ನೇಹ, ಪ್ರೀತಿಯ ಮೌಲ್ಯವನ್ನು ಮನಮುಟ್ಟುವಂತೆ ಚಿತ್ರ ಹೇಳುತ್ತದೆ.

ಪ್ರೇಮಂ ಪೂಜ್ಯಂ ಒಪ್ಪಿಕೊಳ್ಳೋ ಮುನ್ನ 84 ಸ್ಕ್ರಿಪ್ಟ್ ರಿಜೆಕ್ಟ್ ಮಾಡಿದ್ರು ಪ್ರೇಮ್

ಏಳು ಶೇಡ್‌ ಅಂದಿರಿ. ನಿಮಗೆ ಬಹಳ ಇಷ್ಟಆದ ಶೇಡ್‌ ಯಾವುದು?

ಮೊದಲನೆಯದು. ಅದರಲ್ಲೊಂಥರಾ ರಾರ‍ಯಂಬೋ ಲುಕ್‌ ನನ್ನದು. ಇದಕ್ಕಾಗಿ ಮಾಡಿರುವ ಶಾರ್ಟ್‌ ಹೇರ್‌ ಕಟ್‌ ನನಗೆ ನನ್ನ ಬಾಲ್ಯವನ್ನು ನೆನಪಿಸಿತು. ಆ ಸೀನ್‌ ಮಾಡ್ತಿದ್ರೆ ನಾಸ್ತಾಲ್ಜಿಯಾ ಫೀಲ್‌. ಇದು ಎಲ್ಲರಿಗೂ ಇಷ್ಟಆಗುತ್ತೆ.

ಶೂಟಿಂಗ್‌ನಲ್ಲಿ ಅಚ್ಚರಿ ತಂದ ಸಂಗತಿ?

ನೇಚರ್‌ ನಮಗೆ ಕೋಆಪರೇಟ್‌ ಮಾಡಿದ ರೀತಿ. ಅದೊಂದು ಪ್ಲೆಸೆಂಟ್‌ ಸರ್ಪೈಸ್‌ ಆಗಿತ್ತು. ನಾವು ಮುಂಜಾನೆ ಶೂಟ್‌ ಮಾಡಬೇಕು ಅಂತ ಬಂದರೆ ಫುಲ್‌ ಮಂಜು, ಏನೂ ಕಾಣ್ತಾ ಇರಲಿಲ್ಲ. ನಾವು ಬಂದು ಎಲ್ಲ ಸೆಟ್‌ ಮಾಡುವ ಹೊತ್ತಿಗೆ ಮಿಸ್ಟ್‌ ಕಣ್ಮರೆ. ಮಳೆಯ ವಿಷಯದಲ್ಲೂ ಹಾಗೆ. ಮಳೆ ಬರುತ್ತಿದೆ, ಶೂಟ್‌ ಮಾಡೋದು ಕಷ್ಟಅಂದುಕೊಳ್ಳುತ್ತಿರುವಾಗಲೇ ಮಳೆ ನಿಂತು ಬಿಡೋದು. ನಾವು ಶೂಟಿಂಗ್‌ ಮುಗಿಸಿದ ಮೇಲೆ ಮತ್ತೆ ಹುಯ್ಯೋದು. ನಮ್ಮನ್ನೆಲ್ಲ ವಿಸ್ಮಯಕ್ಕೆ ದೂಡಿದ ಸನ್ನಿವೇಶ ಇದು.

ಪ್ರೇಮ್‌ ಅವರ ಅಭಿಮಾನಿಗಳಿಗೆ ಸರ್ಪೈಸಿಂಗ್‌ ಎಲಿಮೆಂಟ್‌ ಚಿತ್ರದಲ್ಲಿ ಏನಿದೆ?

ನನ್ನ ಏಳು ಶೇಡ್‌ಗಳಲ್ಲಿ ನೋಡೋದೆ ದೊಡ್ಡ ಸರ್ಪೈಸ್‌. ಇದರಲ್ಲಿ ಲವ್‌ ಆಗೋ ರೀತಿ, ಅದ್ಭುತವಾದ ಹಾಡುಗಳು, ಎಲ್ಲದರಲ್ಲೂ ಹೊಸತನ.. ಹೀಗೆ ಸಾಕಷ್ಟುಸರ್ಪೈಸ್‌ಗಳಿವೆ.

ನಿಮಗೆ ತೃಪ್ತಿ ಇದೆಯಾ?

ಖಂಡಿತಾ ಇದೆ. ನಟನೆ, ಕತೆ, ಸಿನಿಮಾಟೋಗ್ರಫಿ ಎಲ್ಲದರಲ್ಲೂ ತೃಪ್ತಿ ತಂದ ಚಿತ್ರವಿದು.