ಡೆಲಿವರಿ ಬಾಯ್ಸ್‌ಗೆ ಫಸ್ಟ್ ಡೇ ಫಸ್ಟ್ ಶೋ ಫ್ರೀ 'Dear Sathya' ನಟ ಆರ್ಯನ್ ಸಂತೋಷ್ ಜೊತೆ ಚಿಟ್ ಟಾಟ್
ನೂರು ಜನ್ಮಕೂ ಸಿನಿಮಾ ನಂತರ ಡಿಯರ್ ಸತ್ಯ ಆಗಿ ವೀಕ್ಷಕರ ಮುಂದೆ ಬರ್ತಿದ್ದಾರೆ ಆರ್ಯನ್ ಸಂತೋಷ್. ಶಿವಣ್ಣ ಮತ್ತು ಪುನೀತ್ ರಾಜ್‌ಕುಮಾರ್ ಸಾಥ್ ಬಗ್ಗೆ ಮಾತನಾಡಿದ್ದಾರೆ ಈ ನಟ....
ವೈಷ್ಣವಿ ಚಂದ್ರಶೇಖರ್
ಸ್ಯಾಂಡಲ್‌ವುಡ್ ಹಂಬಲ್ ಆಂಡ್ ಸ್ಮಾರ್ಟ್ ನಟ ಆರ್ಯನ್ ಸಂತೋಷ್ ನಟನೆಯ 'ಡಿಯಲ್ ಸತ್ಯ' ಸಿನಿಮಾ ಮಾರ್ಚ್ 10 ರಂದು ಬಿಡುಗಡೆಯಾಲು ಸಜ್ಜಾಗಿದೆ. ಇದು ನನ್ನ ಡೆಬ್ಯೂ ಸಿನಿಮಾವೇ ಎಂದು ಹೇಳಿಕೊಳ್ಳುವ ಆರ್ಯನ್ ಡಿಯರ್ ಮತ್ತು ಸತ್ಯನ ಪಾತ್ರದ ಬಗ್ಗೆ ರಿವೀಲ್ ಮಾಡಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ ಜೊತೆ ಮಾತನಾಡಿದ್ದಾರೆ.
ಲಾಂಕ್ ಬ್ರೇಕ್ ನಂತರ ಸಿನಿಮಾ ಬರ್ತಿದೆ, ಎಷ್ಟು ಎಕ್ಸೈಟ್ ಆಗಿದ್ದೀರಿ?
ಸೂಪರ್ ಎಕ್ಸೈಟ್ ಆಗಿದ್ದೀನಿ. ನನ್ನ ಡೆಬ್ಯೂ ಸಿನಿಮಾದಷ್ಟೇ ಎಕ್ಸೈಟ್ ಆಗಿದ್ದೀನಿ. ಸುಮಾರು ಎರಡು ವರ್ಷಗಳಿಂದ ಈ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಆದರೆ ಕೋವಿಡ್ ಅಫೆಕ್ಟ್ ಆಗಿತ್ತು. ನನಗೆ ಮಿಕ್ಸಡ್ ಎಮೋಷನ್‌ಗಳಿವೆ. ಏಕೆಂದರೆ ಈ ಸಿನಿಮಾ ಕಥೆ ಬರೆಯುವ ಸಮಯದಿಂದ ಲೆಕ್ಕ ಹಾಕಿದ್ದರೆ ನನಗೆ ಇದು ನಾಲ್ಕು ವರ್ಷಗಳ ಜರ್ನಿ. ಈ ಎಮೋಷನಲ್ ಜರ್ನಿಯಲ್ಲಿ ನಾನು ತಂದೆ ತಾಯಿಯನ್ನು ಕಳೆದುಕೊಂಡೆ. ನೂರು ಜನ್ಮಕೂ ಸಿನಿಮಾ ನಂತರ ನನ್ನ ಟ್ಯಾಲೆಂಟ್ ಪ್ರದರ್ಶಿಸಲು ಅವಕಾಶ ಬೇಕಿತ್ತು. ಅದೇ ಕಾಲೇಜ್ ಹುಡುಗ, ಲವರ್ ಹುಡುಗ ಪಾತ್ರ ಬೇಡ. ಒಂದು ಬದಲಾವಣೆ ಬೇಕು ಅಂತ ಈ ಸ್ಕ್ರಿಪ್ಟ್ ಆಯ್ಕೆ ಮಾಡಿಕೊಂಡೆ. ನೂರು ಜನ್ಮಕೂ, ಬಿಗ್ ಬಾಸ್ ಮತ್ತು ಪ್ಯಾಟೆ ಹುಡುಗೀರ ಹಳ್ಳಿ ಲೈಫ್‌ನಲ್ಲಿದ್ದ ಸಂತು ಇಮೇಜ್‌ನ ಬದಲಾಯಿಸುತ್ತದೆ ಡಿಯರ್ ಸತ್ಯ ಸಿನಿಮಾ.
ಡಿಯರ್ ಸತ್ಯ ಬಿಡುಗಡೆಗೂ ಮುನ್ನ ಜನರ ರೆಸ್ಪಾನ್ಸ್ ಹೇಗಿದೆ?
ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದಾಗ ನನಗೆ Goosebump ಬಂದಿತ್ತು, ಜನರು ನನ್ನ ಒಪ್ಪಿಕೊಳ್ಳುತ್ತಾರಾ ಇದು ಮಾಸ್ ಕ್ಯಾರೆಕ್ಟರ್ ಎನ್ನುವ ಗೊಂದಲ ಇತ್ತು. ಶಿವಣ್ಣ ಲಾಂಚ್ ಮಾಡಿಕೊಟ್ಟಿದ್ದು, ಅಲ್ಲಿಂದ ಎನರ್ಜಿ ಹೆಚ್ಚಿತ್ತು. ಸತ್ಯ ಅಂತ ಟೈಟಲ್ ಇಟ್ಟಾಗಲೇ ಶಿವಣ್ಣ ಅವರೇ ಲಾಂಚ್ ಮಾಡಬೇಕು ಅಂತಿತ್ತು. ಏಕೆಂದರೆ ನಾವೆಲ್ಲಾ ಓಂ ನೋಡ್ಕೊಂಡು, ಸಿನಿಮಾದಲ್ಲಿ ನಟಿಸುವ ಕನಸು ಕಂಡಿರುವವರು. ನಾವು ರಿಲೀಸ್ ಮಾಡಿರುವ ಚಿತ್ರದ ಸಣ್ಣ ತುಣುಕಿಗೆ ಜನರ ರೆಸ್ಪಾನ್ಸ್ ಅದ್ಭುತವಾಗಿದೆ.
'ನಮಗೆ ದೊಡ್ಡ ಆಶೀರ್ವಾದ ಅಪ್ಪು ಅಣ್ಣ. ಕೊರೋನಾ ಸಮಯದಲ್ಲಿ ಮೊದಲು ಸಿನಿಮಾ ಲಾಂಚ್ ಮಾಡಿದ್ದು ಡಿಯರ್ ಸತ್ಯ. ನಮ್ಮ ಸಿನಿಮಾ ಆದ್ಮೇಲೆ ಜೇಮ್ಸ್ ರಿಲೀಸ್ ಇದೆ'
ಕೋವಿಡ್ ಆದ್ಮೇಲೆ ಜನರನ್ನು ಭೇಟಿ ಮಾಡಿ, ಪ್ರಮೋಷನ್ ಮಾಡ್ತಿರೋದು ಹೇಗಿದೆ?
ಇಂಡಸ್ಟ್ರಿಯಲ್ಲಿ ತುಂಬಾನೇ ಬದಲಾವಣೆಗಳು ಆಗಿವೆ. ಸೂಪರ್ ಎಕ್ಸೈಟ್ ಆಗಿದ್ದೀನಿ, ಏಕೆಂದರೆ ಕೊರೋನಾ ಸಮಯದಲ್ಲಿ ನಾನು 40 ಸಾವಿರ ಜನರಿಗೆ ಊಟ ಹಾಕಿದಾಗ ಪ್ರೆಸ್ ಮುಂದೆ ಬಂದಿದ್ದೆ. ನೂರು ಜನ್ಮಕೂ ಸಿನಿಮಾ ನಂತರ ಇದೇ ಮೊದಲು ಸಿನಿಮಾ ಪ್ರಚಾರ ಮಾಡುತ್ತಿರುವುದು. ಮೀಡಿಯಾಗಳು ನಮಗೆ ತುಂಬಾನೆ ಸಪೋರ್ಟ್ ಮಾಡ್ತಿವೆ.
ಡಿಯರ್ ಸತ್ಯ ಹವಾ ಶುರು ಆದ್ಮೇಲೆ ಬೇರೆ ಪ್ರಾಜೆಕ್ಟ್‌ಗೆ ಸೈನ್ ಮಾಡಿದ್ದೀರಾ?
ಈ ವರ್ಷ ನಾನು ಮೂರು ಸಿನಿಮಾಗಳನ್ನು ಮಾಡ್ತಿದ್ದೀನಿ. ನೆಕ್ಟ್ ಮಾಡ್ತಿರುವುದು ತಮಿಳು ಫೀಚರ್ ಸಿನಿಮಾ ಒಂದು ಶೆಡ್ಯೂಲ್ ಚಿತ್ರೀಕರಣ ಮಾಡಿದೆ. ಈ ವರ್ಷ ಮಾಡ್ತಿರುವ ಮೂರು ಸಿನಿಮಾಗಳಲ್ಲಿ ಮೂರು ವಿಭಿನ್ನ ಕ್ಯಾರೆಕ್ಟರ್‌ಗಳಿವೆ. ಒಂದು ದೊಡ್ಡ ಚೇಂಜ್ ಓವರ್ ಇರಲಿದೆ.
ಅರ್ಚನಾಗೆ ಇದು ಡೆಬ್ಯೂ ಸಿನಿಮಾ, ಒಟ್ಟಿಗೆ ಕೆಲಸ ಮಾಡಿದ್ದು ಹೇಗಿತ್ತು?
ನಾವು ಮೊದಲೇ ನಿರ್ಧಾರ ಮಾಡಿದ್ವಿ. ಈ ಸಿನಿಮಾದಲ್ಲಿ ಅಂಜಲಿ ಎನ್ನುವ ಪಾತ್ರವನ್ನು ಹೊಸಬರು ಮಾಡಬೇಕು ಅಂತ. ಒಂದು ತಿಂಗಳಿನಲ್ಲಿ 150 ಜನರು ಆಡಿಷನ್ ಮಾಡಿದ್ವಿ. ಅದರಲ್ಲಿ ಅರ್ಜನಾ ಆಯ್ಕೆ ಆದರು. ಅರ್ಚನಾ ತುಂಬಾನೇ ಕಂಟೆನ್ಟ್‌ಗೆ ಪ್ರಮುಖ್ಯತೆ ನೀಡುತ್ತಾರೆ, ಅಂಜಲಿ ಪಾತ್ರ ಸಿನಿಮಾದಲ್ಲಿ ಸೆಂಟರ್ ಪಾಯಿಂಟ್. ತುಂಬಾನೇ ಫೋಕಸ್ ಆಗಿರುವ ಹುಡುಗಿ. ಒಟ್ಟಿಗೇ ಕೆಲಸ ಮಾಡುವುದಕ್ಕೆ ತುಂಬಾನೇ ಸಂತೋಷವಿದೆ. ಅಂಜಲಿ ಪಾತ್ರಕ್ಕೆ ನ್ಯಾಯ ಕೊಟ್ಟಿದ್ದಾರೆ. ಸಿನಿಮಾ ನೋಡ್ತಾ ನೋಡ್ತಾ ನೀವು ಅಂಜಲಿಯನ್ನು ಇಷ್ಟ ಪಡೋದು ಗ್ಯಾರಂಟಿ.
ಸಿನಿಮಾ ಬಗ್ಗೆ ಒಂದು ಮಾತು....
ಈ ಸಿನಿಮಾ ಫುಡ್ ಡೆಲಿವರಿ ಹುಡುಗರ ಬಗ್ಗೆ ಇರುವುದು. ಅದಕ್ಕೆ ಅವರಿಗಾಗಿ ನಾನು ಪ್ರೀಮಿಯರ್ ಶೋ ಮಾಡ್ತಿದ್ದೀನಿ. ಯಾವುದೇ ಡೆಲಿವರಿ ಹುಡುಗರು ಬೇಕಿದ್ದರೂ ಬಂದು ನನ್ನ ಜೊತೆ ನವರಂಗ್ ಚಿತ್ರಮಂದಿರದಲ್ಲಿ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಬಹುದು. ಈ ಸಿನಿಮಾದಲ್ಲಿ ಮೂರು ಒಳ್ಳೆಯ ಸಂದೇಶಗಳಿವೆ. ಡೆಲ್ಲಿ (Delhi), ಹೈದರಾಬಾದ್ (Hyderabad) ಮತ್ತು ಬೆಂಗಳೂರಿನಲ್ಲಿ (Bengaluru) ನಡೆದ ಘಟನೆಗಳಿbz. ಇದು ರಿಯಲ್ ಸ್ಟೋರಿ (Real Story). ಒಬ್ಬ ಡೆಲಿವರಿ ಹುಡುಗನ (Delivery Boy) ಕಥೆ. ಡಿಯಲ್ ಅನ್ನೋದು ಒಂದು ಶೇಡ್, ಸತ್ಯಾ ಅನ್ನೋದು ಮತ್ತೊಂದು ಶೇಡ್. ಇದೊಂದು Enthusiasti cand Optimisitc ಸತ್ಯನ ಕಥೆ. ತಾಯಿ ಮತ್ತು ಮಗನ ಬಾಂಡ್ ಸೂಪರ್ ಆಗಿದೆ. ಲವ್ ಸ್ಟೋರಿ ಡಿಫರೆಂಟ್ ಆಗಿದೆ. ಮನೆಗೆ ಮಹಾಲಕ್ಷಿಯನ್ನು ಕರ್ಕೊಂಡು ಬರ್ಬೇಕು ಅಂದ್ರೆ ಚಿನ್ನದ ಚೈನ್ ಕೊಟ್ಟು ಕರ್ಕೊಂಡು ಬಾ, ಅಂತ ಅವನ ತಾಯಿ ಹೇಳುತ್ತಾರೆ. ಈ ಚಿತ್ರದಲ್ಲಿ ಫೆಬ್ರವರಿ 14 ಮುಖ್ಯವಾದ ದಿನ. ಅವನ ಪ್ರೀತಿ ಹೇಳಿಕೊಂಡ ಮೇಲೆ ನಡೆದ ಘಟನೆ ನಿಜವಾದ ಕತೆ. ಇದು ಎರಡು ಗಂಟೆ ಸಿನಿಮಾ, ಶಂಕರ್ ಗುರು ಸಿನಿಮಾ ಆದ್ಮೇಲೆ ಈ ಚಿತ್ರದಲ್ಲಿ ಎರಡು ಕ್ಲೈಮ್ಯಾಕ್ಸ್ ಇವೆ.