ಈ ಚಿತ್ರದ ಮೂಲಕ ತುಂಬಾ ಸೂಕ್ಷ್ಮವಾದ ವಿಚಾರವನ್ನು ಹೇಳಿದ್ದೇನೆ. ದೇಶದ ಆಂತರಿಕ ಭದ್ರತೆಗೆ ಅಪಾಯ ತರುವ ದೇಶ ದ್ರೋಹಿಗಳ ವಿಚಾರ ಇಲ್ಲಿ ಬರುತ್ತದೆ. ಆರು ತಿಂಗಳು ಅಧ್ಯಯನ ಮಾಡಿ ಈ ಕತೆ ಹೇಳಿದ್ದೇನೆ.

ಆರ್‌. ಕೇಶವಮೂರ್ತಿ

* ಹೈನ ಎಂದರೆ ಏನು?
ಇದು ಆಫ್ರಿಕಾದಲ್ಲಿ ಕಂಡು ಬರುವ ಒಂದು ಪ್ರಾಣಿಯ ಹೆಸರು. ತನಗೆ ಅಪಾಯ ಎದುರಾದಾಗ ತುಂಬಾ ಗಟ್ಟಿಯಾಗಿ ನಿಂತು ಫೈಟ್‌ ಮಾಡುವ ಪ್ರಾಣಿ ಇದು. ಅದರ ಹೆಸರನ್ನು ನಮ್ಮ ಚಿತ್ರಕ್ಕೆ ಇಟ್ಟಿದ್ದೇವೆ.

* ಆಫ್ರಿಕಾದ ಪ್ರಾಣಿಗೂ ನಿಮ್ಮ ಕತೆಗೂ ಏನು ನಂಟು?
ಇಲ್ಲೊಂದು ವ್ಯವಸ್ಥೆ ಇದೆ. ಈ ವ್ಯವಸ್ಥೆ ಒಳಗೆ ನು‍ಸುಳಿರುವ ಒಂದಿಷ್ಟು ಸಮಾಜಘಾತುಕರಿದ್ದಾರೆ. ಇವರನ್ನು ಬಗ್ಗು ಬಡೆದು ದೇಶವನ್ನು ರಕ್ಷಿಸುವವ ಶಕ್ತಿಗಳನ್ನು ಬಲಿಷ್ಠವಾಗಿರುವ ಪ್ರಾಣಿಗೆ ಕಂಪೇರ್‌ ಮಾಡಿದ್ದೇನೆ.

ಸಿನಿಮಾ ಸೋಲಬಹುದು, ಪ್ರಯತ್ನಗಳಿಗೆ ಯಾವತ್ತೂ ಸೋಲಿಲ್ಲ: ನಟ ನವೀನ್ ಶಂಕರ್

* ನೀವು ಹೇಳುವ ಆ ವ್ಯವಸ್ಥೆ ಯಾವುದು, ರಕ್ಷಿಸುವವರು ಯಾರು?
ಈ ಚಿತ್ರದ ಮೂಲಕ ತುಂಬಾ ಸೂಕ್ಷ್ಮವಾದ ವಿಚಾರವನ್ನು ಹೇಳಿದ್ದೇನೆ. ದೇಶದ ಆಂತರಿಕ ಭದ್ರತೆಗೆ ಅಪಾಯ ತರುವ ದೇಶ ದ್ರೋಹಿಗಳ ವಿಚಾರ ಇಲ್ಲಿ ಬರುತ್ತದೆ. ಆರು ತಿಂಗಳು ಅಧ್ಯಯನ ಮಾಡಿ ಈ ಕತೆ ಹೇಳಿದ್ದೇನೆ. ಹೀಗಾಗಿ ನೈಜ ಘಟನೆಗಳನ್ನು ಚಿತ್ರಕ್ಕೆ ಬಳಸಿಕೊಂಡಿದ್ದೇನೆ. ಒಂದೇ ಸಾಲಿನಲ್ಲಿ ಕತೆ ಬಗ್ಗೆ ಹೇಳುವುದಾದರೆ ದೇಶದ ಆಂತರಿಕ ಭದ್ರತೆಗೆ ಅಪಾಯ ತರುವವರಿಗೆ ಒಂದು ಪಾಠ ಈ ಚಿತ್ರ.

* ಹೈನ ಹೀರೋ ಯಾರು?
ಕತೆಯೇ ಹೀರೋ. ಇದು ಕಂಟೆಂಟ್‌ ಸಿನಿಮಾ. ಲಕ್ಷ್ಮಣ್‌ ಶಿವಶಂಕರ್‌, ನಂದ ಕಿಶೋರ್‌ ನಟಿಸಿದ್ದಾರೆ. ನಾನೂ ಕೂಡ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಟೌಟ್‌, ಕೋಟಿಗಳ ಕಲೆಕ್ಷನ್‌ಗಳಗಿಂತ ನಾನು ಕಂಟೆಂಟ್‌ ನಂಬಿಕೊಂಡು ಈ ಚಿತ್ರ ಮಾಡಿದ್ದೇನೆ.

* ಇಂಥ ಚಿತ್ರಗಳು ಹೆಚ್ಚು ತಲುಪಲು ಸಾಧ್ಯವೇ?
ಈ ಪ್ರಶ್ನೆಗೆ ಪ್ರೇಕ್ಷಕರು ಉತ್ತರಿಸಬೇಕು. ಒಬ್ಬ ನಿರ್ದೇಶಕನಾಗಿ ನನ್ನ ಪ್ರಯತ್ನವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಪ್ರಚಾರ ಚಿಕ್ಕದಾಗಿರಬಹುದು. ಆದರೆ, ಪರಿಣಾಮಕಾರಿಯಾಗಿ ಮಾಡುತ್ತಿದ್ದೇನೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ತಾಂತ್ರಿಕವಾಗಿ ತುಂಬಾ ನೀಟಾಗಿ ಮತ್ತು ಎಫೆಕ್ಟಿವ್ ಆಗಿ ಸಿನಿಮಾ ಬಂದಿದೆ.

ಅಣ್ಣಾವ್ರು ಹಾಕಿಕೊಟ್ಟ ಹಾದಿಯಲ್ಲೇ ನಡೆಯೋನು ನಾನು: ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದು

* ದೇಶ ಭಕ್ತಿ ವಿಚಾರ ಎನ್ನುತ್ತಿದ್ದೀರಿ. ಇಂಥ ಚಿತ್ರಕ್ಕೆ ಸೆನ್ಸಾರ್‌ ಸಮಸ್ಯೆ ಆಯಿತು ಹೇಳಿದ್ರಿ. ಯಾಕೆ?
ಚಿತ್ರದಲ್ಲಿ ಬಾಂಗ್ಲಾದೇಶ ಹಾಗೂ ರೋಹಿಂಗ್ಯಾ ಎನ್ನುವ ಪದಗಳು ಬಳಕೆ ಆಗಿವೆ. ಬಾಂಗ್ಲಾದೇಶ ಎನ್ನುವ ಪದ ಬಳಸಬೇಡಿ ಅಂದ್ರು. ಕೊನೆಗೆ ಶೇ.70ರಷ್ಟು ಬಳಸಿ. ಉಳಿದ್ದು ಮ್ಯೂಟ್ ಮಾಡಿ ಅಂದ್ರು. ನಂತರ ರೋಹಿಂಗ್ಯಾ ಹೆಸರು ತೆಗೆಯಿರಿ ಅಂದ್ರು. ಈ ವಿಚಾರದಲ್ಲಿ ಕೊಂಚ ವಾದ- ವಿವಾದ ಆಯಿತು.