ನಾನು ಕಾಸರವಳ್ಳಿ ಅಭಿಮಾನಿ, ನನಗೆ KGF 2 ಬಿಜಿಎಂ ಇಷ್ಟ: ರಿಕ್ಕಿಕೇಜ್
ಖ್ಯಾತ ಸಂಗೀತ ನಿರ್ದೇಶಕ ಹಾಗೂ 3 ಬಾರಿಯ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಈ ಬಾರಿ ಸ್ವಾತಂತ್ರ್ಯೋತ್ಸವಕ್ಕೆ ರಾಷ್ಟ್ರಗೀತೆಯನ್ನು ವಿಶೇಷವಾಗಿ ರೂಪಿಸಿದ್ದಾರೆ. ಆ.14ರಂದು ಈ ಗೀತೆ ಬಿಡುಗಡೆ ಆಗುತ್ತಿದೆ.
ಆರ್ ಕೇಶವಮೂರ್ತಿ
ನಿಮ್ಮ ಸಂಗೀತದ ರಾಷ್ಟ್ರಗೀತೆಯ ವಿಶೇಷತೆ ಏನು?
100 ಮಂದಿ ಬ್ರಿಟಿಷ್ ತಂತ್ರಜ್ಞರಿಂದ ಕೆಲಸ, ಮೂರು ತಿಂಗಳ ತಯಾರಿ ಸೇರಿದಂತೆ ಹಲವು ವಿಶೇಷಗಳಿವೆ. ಸ್ವಾತಂತ್ರ್ಯೋತ್ಸವದಂದು ಗೊತ್ತಾಗಲಿದೆ.
ಇದರ ಉದ್ದೇಶ ಏನು?
ಈ ಬಾರಿ ದೇಶಾದ್ಯಂತ 76ನೇ ಸ್ವಾತಂತ್ರ್ಯೋ ತ್ಸವವನ್ನು ಆಚರಿಸಿಕೊಳ್ಳುತ್ತಿದ್ದೇವೆ. ಭಾರತೀಯ ಸ್ವಾತಂತ್ರ್ಯ ಸಂಭ್ರಮಕ್ಕೆ ಸಂಗೀತ ನಿರ್ದೇಶಕನಾಗಿ ನನ್ನದೊಂದು ಸೇವೆ ಇದು.
ಯಾವಾಗ, ಹೇಗೆ ಬಿಡುಗಡೆ ಆಗಲಿದೆ?
ಆಗಸ್ಟ್ 14ರಂದು ನನ್ನ ಯೂಟ್ಯೂಬ್ ಚಾನಲ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆ.
ಪ್ರಕೃತಿಯ ಒಳಿತಿಗೆ ಒಂದು ದಿರಿಸು ಮತ್ತೆ ಧರಿಸಿ: ರಿಕ್ಕಿ ಕೇಜ್
Bನೀವು ಸಂಗೀತ ಮಾಡಲು ಹೀಗೆ ಸಂದರ್ಭಗಳಿಗಾಗಿ ಕಾಯುತ್ತಿರಾ?
ಖಂಡಿತ ಇಲ್ಲ. ಸಂಗೀತದ ಮೂಲಕ ಪ್ರತಿಯೊಂದನ್ನು ಎಕ್ಸ್‌ಫ್ಲೋರ್ ಮಾಡುವ ಆಸೆ. ಅದಕ್ಕೆ ಪ್ರಕೃತಿಗೆ ಕಿವಿ ಕೊಡುತ್ತೇನೆ. ನೇಚರ್ ಹೇಳುವುದನ್ನು ನಾನು ಸಂಗೀತದ ಮೂಲಕ ಹೇಳುವ ಪ್ರಯತ್ನ ಮಾಡುತ್ತೇನೆ. ಪ್ರಾಣಿ- ಪಕ್ಷಿ, ಆಚಾರ-ಊಟ ಇತ್ಯಾದಿಗಳು ನನ್ನ ಸಂಗೀತದ ಆಯ್ಕೆಗಳು. ಹೀಗಾಗಿ ನಾನು ನಿರ್ದೇಶಕ, ನಾಯಕ, ನಾಯಕಿ ಬಂದು ಕೇಳಬೇಕು, ಆ ಮೇಲೆ ಸಂಗೀತ ನೀಡಬೇಕು ಎಂದು ಕಾಯಲ್ಲ.
B ನೀವು ಕನ್ನಡ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿಲ್ಲ ಯಾಕೆ?
ನನಗೆ ಸಿನಿಮಾಗಳಿಗೆ ಸಂಗೀತ ನೀಡುವುದಕ್ಕೆ ಆಸೆ ಇದೆ. ಆದರೆ, ಕೆಲವು ಷರತ್ತುಗಳೂ ಇವೆ. ಬರೀ ಕನ್ನಡ ಅಂತಲ್ಲ, ನಾನು ಸಂಗೀತ ನೀಡುವ ಸಿನಿಮಾ, ಹಾಡು ಹೀಗೇ ಇರಬೇಕು ಅಂದುಕೊಂಡಿದ್ದೇನೆ. ಅಂಥ ಹಾಡುಗಳಿಗೆ ಅವಕಾಶ ಸಿಕ್ಕರೆ ಸಂಗೀತ ಸಂಯೋಜನೆ ಮಾಡುವೆ.
ಷರತ್ತುಗಳು?
ಸಾಮಾಜಿಕ ಸಂದೇಶವನ್ನು ಸಾರುವಂತಿರಬೇಕು.
ಕನ್ನಡದಲ್ಲಿ ನಿಮಗೆ ಯಾವ ನಿರ್ದೇಶಕರ ಜತೆಗೆ ಕೆಲಸ ಮಾಡುವ ಆಸೆ ಇದೆ?
ನಾನು ಗಿರೀಶ್ ಕಾಸರವಳ್ಳಿ ಅವರ ದೊಡ್ಡ ಅಭಿಮಾನಿ. ಅವರು ಮಾಡುವ ಸಿನಿಮಾಗಳಿಗೆ ಸಂಗೀತ ಮಾಡುವ ಆಸೆ ಇದೆ.
ನಿಮ್ಮ ಮೆಚ್ಚಿನ ಕನ್ನಡ ಸಂಗೀತ ನಿರ್ದೇಶಕರು ಯಾರು?
ಅರ್ಜುನ್ ಜನ್ಯ, ಚರಣ್ ರಾಜ್ ಹಾಗೂ ರವಿ ಬಸ್ರೂರು.
ನೀವು ಇಷ್ಟಪಟ್ಟ ಸಂಗೀತ ನಿರ್ದೇಶನದ ಚಿತ್ರಗಳು ಯಾವುವು?
ರಮೇಶ್ ಅರವಿಂದ್ ಅವರ ಪುಷ್ಪಕ ವಿಮಾನ, ಶಿವರಾಜ್ ಕುಮಾರ್ ಅವರ ಟಗರು.
ಮೋದಿ ಶ್ವೇತಭವನ ಔತಣಕ್ಕೆ ಕರ್ನಾಟಕದ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌ಗೆ ಆಹ್ವಾನ
ಬಿಜಿಎಂನಲ್ಲಿ ನಿಮ್ಮ ಗಮನ ಸೆಳೆದ ಕನ್ನಡ ಸಿನಿಮಾ ಯಾವುದು?
ಕೆಜಿಎಫ್ 2 ಹಾಗೂ ಕಾಂತಾರ. ಸೌಂಡ್ ಸ್ವಲ್ಪ ಜಾಸ್ತಿ ಆಯಿತು ಅನ್ನೋದು ಬಿಟ್ಟರೆ ಬಿಜಿಎಂ ವಿಚಾರದಲ್ಲಿ ಕೆಜಿಎಫ್ 2 ಸೂಪರ್.