Asianet Suvarna News Asianet Suvarna News

ರವಿಚಂದ್ರನ್ ಚಿತ್ರ ನಿರ್ದೇಶಿಸುವ ಆಸಕ್ತಿ ಇದೆ- ಜೀತು ಜೋಸೆಫ್

ಕ್ರೇಜಿಸ್ಟಾರ್ ನಟನೆಯ `ದೃಶ್ಯ' ಚಿತ್ರದ ಮೂಲ ಸಿನಿಮಾ ಮಲಯಾಳಂನ `ದೃಶ್ಯಂ' ನಿರ್ದೇಶಿಸಿ ದಾಖಲೆ ಮೂಡಿಸಿದವರು ಜೀತು ಜೋಸೆಫ್. ಇದೀಗ ಅವರ ನಿರ್ದೇಶನದಲ್ಲಿ `ದೃಶ್ಯಂ'ನ ಎರಡನೇ ಭಾಗ ತೆರೆಗೆ ಬರುತ್ತಿದೆ. ಚಿತ್ರವನ್ನು ಕನ್ನಡದಲ್ಲಿ ಮಾಡಲು ಕೆಲವೊಂದು ನಿಬಂಧನೆಗಳಿವೆ ಎಂದಿದ್ದಾರೆ ಅವರು.
 

Drishyam Fame Director Jeethu Josephs interview
Author
Bengaluru, First Published Feb 16, 2021, 12:55 PM IST

ಏಳು ವರ್ಷಗಳ ಹಿಂದೆ `ದೃಶ್ಯಂ' ಸಿನಿಮಾ ತೆರೆ ಕಂಡಾಗ ಇದ್ದ ಪರಿಸ್ಥಿತಿ ಈಗ ಬದಲಾಗಿದೆ. ಸಿನಿಮಾಗಳು ಯಾವುದೇ ಭಾಷೆಯಲ್ಲಿ ತೆರೆಕಂಡರೂ ಅವುಗಳನ್ನು ಕನ್ನಡದಲ್ಲಿ ನೋಡುವ ಅವಕಾಶ ದೊರಕುತ್ತಿದೆ. ಪ್ರಸ್ತುತ ಕನ್ನಡದಲ್ಲಿ ಡಬ್ಬಿಂಗ್ ಚಿತ್ರಗಳಿಗೆ ಸಿಗುತ್ತಿರುವ ಪ್ರೋತ್ಸಾಹ ಮತ್ತು ಒಟಿಟಿ ಫ್ಲಾಟ್‌ಫಾರ್ಮ್‌ಗಳ ಉತ್ಸಾಹದಿಂದಾಗಿ ರಿಮೇಕ್‌ ಬಗ್ಗೆ ಪ್ರೇಕ್ಷಕರ ಆಸಕ್ತಿ ಕಡಿಮೆಯಾಗುತ್ತಿವೆ. ಆದರೆ `ದೃಶ್ಯ'ದಂಥ ಚಿತ್ರದ ಎರಡನೇ ಭಾಗ ಬರಲಿದೆ ಎಂದಾಗ ಸಹಜವಾಗಿ ಕನ್ನಡದಲ್ಲಿಯೂ ಅದರ ರಿಮೇಕ್  ನೋಡುವ ನಿರೀಕ್ಷೆಇರುತ್ತದೆ. ಅದನ್ನು ರವಿಚಂದ್ರನ್ ಅವರ ಮೂಲಕವೇ ನೋಡಬೇಕು ಎಂದುಕೊಂಡ ಅಭಿಮಾನಿಗಳ ಆಸೆಗೆ `ದೃಶ್ಯಂ' ನಿರ್ದೇಶಕ ಏನು ಹೇಳುತ್ತಾರೆ? ಇಲ್ಲಿದೆ ಡೈರೆಕ್ಟರ್ ಜೀತು ಜೋಸೆಫ್ ಸುವರ್ಣ ನ್ಯೂಸ್‌.ಕಾಮ್‌ಗೆ ನೀಡಿರುವ ಉತ್ತರ.

- ಶಶಿಕರ ಪಾತೂರು

ಪ್ರೇಮಿಸಿ ಮದುವೆಯಾದ ಸೆಲೆಬ್ರಿಟಿಗಳು ಈಗ ಹೇಗಿದ್ದಾರೆ?

`ದೃಶ್ಯಂ' ಚಿತ್ರದ ಎರಡನೇ ಭಾಗ ಮಾಡಬೇಕೆನ್ನುವ ಯೋಚನೆ ಬಂದಿದ್ದು ಹೇಗೆ?
ನನಗೆ `ದೃಶ್ಯಂ' ಮಾಡುವಾಗ ಎರಡನೇ ಭಾಗ ಮಾಡುವ ಬಗ್ಗೆ ಯಾವುದೇ ಯೋಚನೆ ಇರಲಿಲ್ಲ. ಚಿತ್ರ ತೆರೆಕಂಡ ಮೇಲೆ ಬಹಳ ಮಂದಿ ಪಾರ್ಟ್ ಸೆಕೆಂಡ್ ಮಾಡುವಂತೆ ಹೇಳಿದ್ದರೂ ನಾನು ಒಪ್ಪಿರಲಿಲ್ಲ. ಯಾಕೆಂದರೆ ನನಗೆ ಯೋಜನೆ ಹಾಕಿ, ಪ್ರಯತ್ನಪೂರ್ವಕವಾಗಿ ಮಾಡುವ ಕತೆಗಿಂತ ಅದಾಗಿಯೇ ಒಲಿದು ಬರುವ ಕತೆಗಳೇ ಇಷ್ಟ. ಲಾಕ್ಡೌನ್ ಸಮಯದಲ್ಲಿ ಅಚಾನಕ್ಕಾಗಿ ದೃಶ್ಯಂ ಕತೆಯನ್ನು ಮುಂದುವರಿಸಬಹುದಾದಂಥ ಒಂದು ಎಳೆ ದೊರಕಿತು. ಅದನ್ನು ಬರೆದು ಹೇಳಿದಾಗ ಕೇಳಿದವರೆಲ್ಲ ಮೆಚ್ಚಿದರು. ಚಿತ್ರಮಂದಿರಗಳು ಮತ್ತೆ ತೆರೆದಾಗ ವಾಪಾಸು ಪ್ರೇಕ್ಷಕರನ್ನು ಆಕರ್ಷಿಸಲು ಇಂಥದೊಂದು ಸ್ಟಾರ್ ಸಿನಿಮಾದ ಎರಡನೇ ಭಾಗವೇ ಬೇಕು ಅನಿಸಿತು. ಹಾಗಾಗಿ ಚಿತ್ರ ಮಾಡಲು ಮುಂದಾದೆ.

`ಕನ್ನಡತಿ' ವರುಧಿನಿ ಹಂಚಿಕೊಂಡ ವಿಶೇಷ ವಿಚಾರಗಳು

ಆದರೆ ಪ್ರಸ್ತುತ `ದೃಶ್ಯಂ 2' ಸಿನಿಮಾವು ಒಟಿಟಿ ಫ್ಲಾಟ್‌ಫಾರ್ಮ್‌ ಮೂಲಕ ತೆರೆ ಕಾಣುತ್ತಿದೆಯಲ್ಲವೇ?
ಹೌದು, ಅದಕ್ಕೆ ಕಾರಣ ಮತ್ತೆ ಥಿಯೇಟರ್‌ ತೆರೆಯದಿರುವುದೇ ಆಗಿದೆ. ಕೋವಿಡ್ ಬಳಿಕ ಚಿತ್ರೀಕರಣ ಶುರು ಮಾಡಿದ ಮೊದಮೊದಲ ಸಿನಿಮಾಗಳಲ್ಲಿ ನಮ್ಮದೂ ಒಂದಾಗಿತ್ತು.  ಆದರೆ ಚಿತ್ರೀಕರಣ ಸಂಪೂರ್ಣಗೊಂಡು ಸಿನಿಮಾ ಬಿಡುಗಡೆಗೆ ಸಿದ್ಧವಾದರೂ ಥಿಯೇಟರ್‌ಗಳು ತಯಾರಿರದ ಸಂದರ್ಭ ಬಂದಿತ್ತು. ಕೋವಿಡ್ ನಿಯಮದ ಪ್ರಕಾರ ಐವತ್ತು ಪರ್ಸೆಂಟ್ ಮಾತ್ರ ತುಂಬಿಸಿಕೊಳ್ಳಬೇಕಾದ ಅನಿವಾರ್ಯತೆ ಚಿತ್ರಮಂದಿರಗಳಿಗೆ ಇತ್ತು. ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬರಬೇಕಾಗಿದ್ದ ಪ್ರೇಕ್ಷಕರು ಕೂಡ ಆತಂಕದಿಂದಾಗ ಥಿಯೇಟರ್‌ಗೆ ಬರಲು ಸಿದ್ಧರಿರಲಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಚಿತ್ರವನ್ನು ಅಮೇಜಾನ್ ಮೂಲಕ ಬಿಡುಗಡೆಗೊಳಿಸುವ ನಿರ್ಧಾರ ಮಾಡಿದೆವು. ಆದರೆ ಚಿತ್ರಮಂದಿರಕ್ಕೆಂದೇ ತಯಾರಾಗಿರುವ ಈ ಚಿತ್ರದಲ್ಲಿ ಬೆಳ್ಳಿಪರದೆಗೆ ಬೇಕಾದ ಎಲ್ಲ ಕ್ವಾಲಿಟಿಗಳು ಇರಲಿವೆ. ಚಿತ್ರದ ನಾಯಕ ಮೋಹನ್‌ಲಾಲ್ ಅವರಂತೂ ಥಿಯೇಟರ್‌ ಪರಿಸ್ಥಿತಿ ನಾರ್ಮಲ್ ಆದಮೇಲೆ ಚಿತ್ರವನ್ನು ಬೆಳ್ಳಿಪರದೆಯಲ್ಲಿಯೂ ನೋಡಬಹುದು ಎಂದಿದ್ದಾರೆ. ಅಮೆಜಾನ್ ಅವರ ನಿಯಮಗಳು ಅದಕ್ಕೆ ಒಪ್ಪಿಗೆ ನೀಡಬಹುದಾದರೆ ಅಂಥದೊಂದು ಅವಕಾಶವೂ ಸಿಗಬಹುದು.

ನನ್ನನ್ನು ಟ್ರೋಲ್ ಮಾಡಿ; ಆದರೆ ರೂಲ್ ಮಾಡಬೇಡಿ- ಶೋಭರಾಜ್

ಸಿನಿಮಾವನ್ನು ಕನ್ನಡದಲ್ಲಿ ರಿಮೇಕ್ ಮಾಡುವ ಅವಕಾಶ ಸಿಕ್ಕರೆ ಮಾಡುತ್ತೀರಾ?
ಮೂಲತಃ ನನಗೆ ನನ್ನ ಅಥವಾ ಯಾರದೇ ಸಿನಿಮಾ ರಿಮೇಕ್ ಮಾಡುವುದು ಇಷ್ಟವಿರದ ಸಂಗತಿ. ಅದರಲ್ಲಿ ಮತ್ತೆ ಸೃಜನಶೀಲತೆಗೆ ಅವಕಾಶ ಕಡಿಮೆ. ಆದರೆ ನನ್ನದೇ ಕತೆ ಎಂದಾಗ ಬೇರೆ ಭಾಷೆಯ ನಾಯಕರೊಂದಿಗೆ ಚಿತ್ರ ಮಾಡುವುದು ಒಂದು ಹೊಸ ಅನುಭವ ನೀಡುತ್ತದೆ. ಉದಾಹರಣೆಗೆ ದೃಶ್ಯಂ ಚಿತ್ರವನ್ನು ತಮಿಳಲ್ಲಿ ``ಪಾಪನಾಶಂ' ಹೆಸರಿನಲ್ಲಿ ಕಮಲಹಾಸನ್ ಅವರನ್ನಿರಿಸಿಕೊಂಡು ಮಾಡಿದ್ದೆ. ಅದನ್ನು ಬಿಟ್ಟರೆ ಚಿತ್ರದ ಹಿಂದಿ ರಿಮೇಕ್‌ ಕೂಡ ನೋಡಿದ್ದೆ. ಅವುಗಳ ಹೊರತು ಕನ್ನಡ, ತೆಲುಗು ಭಾಷೆಗಳಲ್ಲಿ ರಿಮೇಕ್‌ ಆದಂಥ `ದೃಶ್ಯ'ವನ್ನು ನಾನು ನೋಡಿಲ್ಲ. ಯಾಕೆಂದರೆ ನನಗೆ ಆ ಭಾಷೆಗಳು ಅರ್ಥವಾಗುವುದಿಲ್ಲ. ಆದರೆ ಕನ್ನಡದಲ್ಲಿ ರವಿಚಂದ್ರನ್ ಅವರು ನಟಿಸಿದ್ದಾರೆ ಎಂದು ಗೊತ್ತು. ಅವರ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಇದೀಗ ಅದರ ಎರಡನೇ ಭಾಗದಲ್ಲಿ ಅವರನ್ನು ನಿರ್ದೇಶಿಸುವ ಅವಕಾಶ ಸಿಕ್ಕರೆ ನನಗೆ ಆಸಕ್ತಿ ಇದೆ. ಆದರೆ ಸದ್ಯಕ್ಕೆ ನನಗೆ ಸಾಕಷ್ಟು  ಕಮಿಟ್ಮೆಂಟ್‌ಗಳಿವೆ. ಅವೆಲ್ಲ ಮುಗಿದು, ಅವರು ಕೂಡ ತಯಾರಿದ್ದರೆ ಖಂಡಿತವಾಗಿ ಕನ್ನಡದಲ್ಲಿಯೂ ನಿರ್ದೇಶಿಸಲು ನಾನು ಸಿದ್ಧವಿದ್ದೇನೆ. 

Drishyam Fame Director Jeethu Josephs interview


 

Follow Us:
Download App:
  • android
  • ios