ಸೂಕ್ಷ್ಮ ವಿಚಾರದ ಮೇಲೆ ಬೆಳಕು ಚೆಲ್ಲುವ ಹೊಯ್ಸಳ: ಎನ್. ವಿಜಯ್
ಡಾಲಿ ಧನಂಜಯ ನಟನೆಯ ‘ಗುರುದೇವ್ ಹೊಯ್ಸಳ’ ಚಿತ್ರ ಇಂದು ವಿಶ್ವಾದ್ಯಂತ ಬಿಡುಗಡೆ ಆಗುತ್ತಿದೆ. ಕರ್ನಾಟಕದಲ್ಲಿ 255 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತಿದೆ. ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಾಣದ ಈ ಸಿನಿಮಾದ ಬಗ್ಗೆ ನಿರ್ದೇಶಕ ವಿಜಯ್ ಎನ್ ಮಾತಾಡಿದ್ದಾರೆ.
ಪ್ರಿಯಾ ಕೆರ್ವಾಶೆ
ಹೊಯ್ಸಳ ಬಿಗ್‌ಬಜೆಟ್‌ನಲ್ಲಿ ಬಿಡುಗಡೆ ಆಗ್ತಿದೆ. ಫೀಲ್ ಹೇಗಿದೆ?
ಈ ಕ್ಷಣ ನರ್ವಸ್ ಆಗ್ತಿದೆ. ಒಳ್ಳೆಯ ಸೂಕ್ಷ್ಮ ವಿಚಾರದ ಬಗ್ಗೆ ಸಿನಿಮಾದಲ್ಲಿ ಬೆಳಕು ಚೆಲ್ಲಿದ್ದೇವೆ. ಜನ ಹೇಗೆ ಸ್ವೀಕರಿಸುತ್ತಾರೆ ಅನ್ನೋ ಬಗ್ಗೆ ಕುತೂಹಲ, ಆತಂಕ ಎಲ್ಲ ಇದೆ.
ಸಿನಿಮಾ ಪ್ರಚಾರ ಕಾರ್ಯಕ್ರಮಗಳಲ್ಲೂ ನೀವು ಮೌನಿ. ಯಾಕ್ಹೀಗೆ?
ನಮ್ಮ ಸಿನಿಮಾ ಬಗ್ಗೆ ನಾವೇ ಹೇಳ್ಕೊಂಡ್ರೆ ಜನ ಅದನ್ನು ಹೇಗೆ ಅರ್ಥೈಸಿಕೊಳ್ತಾರೋ ಅನ್ನೋ ಭಾವ. ಅದಕ್ಕೂ ಹೆಚ್ಚಾಗಿ ನಮಗಿಂತ ನಮ್ಮ ಕೆಲಸ ಹೆಚ್ಚು ಮಾತಾಡ್ಬೇಕು, ಸಿನಿಮಾ ಹೆಚ್ಚು ಮಾತಾಡಬೇಕು ಅನ್ನೋ ಕಾರಣಕ್ಕೆ ಮೌನವಾಗಿರುತ್ತೀನಿ
'ಗುರುದೇವ್ ಹೊಯ್ಸಳ'ನಾಗಿ ಘರ್ಜಿಸಿದ ಧನಂಜಯ್, ಡಾಲಿ ಖಡಕ್ ಅಧಿಕಾರಿನಾ? ಇಲ್ಲ ಎನ್ಕೌಂಟರ್ ಸ್ಪೆಷಲಿಸ್ಟ್?
ಈ ಸಿನಿಮಾದ ಮುಖ್ಯ ಅಂಶವನ್ನು ಎಲ್ಲೂ ರಿವೀಲ್ ಮಾಡಿಲ್ಲ. ಏನು ಕಾರಣ?
ಅದನ್ನು ಜನ ಥಿಯೇಟರ್‌ಗೆ ಬಂದೇ ನೋಡಬೇಕು ಅನ್ನೋದಷ್ಟೇ ಕಾರಣ. ಹಾಗೆ ನೋಡಿದಾಗಲಷ್ಟೇ ಅದು ಹೆಚ್ಚು ಪರಿಣಾಮಕಾರಿಯಾಗಿರಲು ಸಾಧ್ಯ. ನಾವು ನಿತ್ಯ ನೋಡುವ ಅಂಶವೇ ಇದೆ. ಆದರೆ ಅಂಥ ಸಂಗತಿಗಳನ್ನ ನಾವು ನೋಡುವ ದೃಷ್ಟಿಕೋನ ಹೇಗಿದೆ ಮತ್ತದು ಹೇಗಿದ್ದರೆ ಉತ್ತಮ ಅಂತ ಜನ ತಮಗೆ ತಾವೇ ಚಿಂತನೆ ಮಾಡಿಕೊಳ್ಳಬೇಕು.
ಕನ್ನಡ ಹೋರಾಟ ನಿಮ್ಮ ಸಿನಿಮಾಗಳ ಟ್ರೇಡ್ ಮಾರ್ಕಾ?
ಇಲ್ಲಿ ಗಡಿ ವಿವಾದ, ಭಾಷಾ ವಿಚಾರಗಳು ಸಣ್ಣ ಭಾಗವಾಗಿ ಬಂದಿವೆಯಷ್ಟೇ. ಆದರೆ ನಮ್ಮ ಭಾಷೆಯ ಬಗ್ಗೆ, ಅದಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ನಾವು ಮಾತನಾಡಲೇಬೇಕಿದೆ. ಕೆಲವೊಮ್ಮೆ ನಮ್ಮ ಭಾಷೆಯ ಸ್ಥಿತಿ ಕಂಡು ನನಗೆ ಭಯ, ಬೇಸರ ಆಗುತ್ತೆ. ಹೀಗಾಗಿ ಅದು ಸಿನಿಮಾದೊಳಗೂ ಬರುತ್ತಿರುತ್ತದೆ.
ಜನರನ್ನು ಥಿಯೇಟರ್‌ಗೆ ಕರೆತರುವ ಅಂಶಗಳು ಸಿನಿಮಾದಲ್ಲಿ ಏನಿವೆ?
ಆ್ಯಕ್ಷನ್, ಹ್ಯೂಮನ್ ಆ್ಯಂಗಲ್‌ಗಳೆರಡನ್ನೂ ಸೊಗಸಾಗಿ ಕಟ್ಟಿಕೊಟ್ಟಿದ್ದೇವೆ. ಸಿನಿಮಾದ ಅದ್ಭುತ ಅನುಭವ ಸಿಗಬೇಕಾದರೆ ಥಿಯೇಟರ್‌ಗೇ ಬರಬೇಕು.
ನಟ ರಾಕ್ಷಸನಿಗೆ ವಿದೇಶದಲ್ಲಿ ಭಾರೀ ಡಿಮ್ಯಾಂಡ್.. ವಿದೇಶದಲ್ಲೂ 'ಗುರುದೇವ್ ಹೊಯ್ಸಳ' ಘರ್ಜನೆ..!
ಹೊಯ್ಸಳ ಹಿಟ್ ಅಂದ್ರು ಸುದೀಪ್
ಹೊಯ್ಸಳ ಚಿತ್ರವನ್ನು ಮೊದಲ ಪ್ರೇಕ್ಷಕರಾಗಿ ಸುದೀಪ್ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಸಿನಿಮಾಕ್ಕೆ ಹಿಟ್ ಅನ್ನೋ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಈ ವಿಚಾರವನ್ನು ಚಿತ್ರತಂಡ ಖುಷಿಯಿಂದ ಹಂಚಿಕೊಂಡಿದೆ.