'ಸಿನಿಮಾ ಬಂಡಿ' ಚಿತ್ರಕ್ಕೆ ಇಷ್ಟು ಪ್ರೀತಿ ಸಿಗುತ್ತದೆ ಎಂದುಕೊಂಡಿರಲಿಲ್ಲ: ವಿಕಾಸ್ ವಸಿಷ್ಠ
ಸಿನಿಮಾ ಬಂಡಿ ನಾಯಕ ವಿಕಾಸ್ ವಸಿಷ್ಠ ಜೊತೆ ಮಾತುಕತೆ ಸದ್ಯ ನೆಟ್‌ಫ್ಲಿಕ್‌ಸ್ ಟ್ರೆಂಡಿಂಗ್‌ನಲ್ಲಿ ನಂ.1ಸ್ಥಾನದಲ್ಲಿರುವ ಸಿನಿಮಾ ‘ಸಿನಿಮಾ ಬಂಡಿ’.ಕನ್ನಡ ನೆಲದಲ್ಲಿ ಹುಟ್ಟಿರುವ ಈ ತೆಲುಗು ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಕನ್ನಡದ ನಟವಿಕಾಸ್ ವಸಿಷ್ಠ ಸಂದರ್ಶನ.
ಆರ್. ಕೇಶವಮೂರ್ತಿ
1. ನಿಮ್ಮ ಹಿನ್ನೆಲೆ ಏನು?
ಕೋಲಾರ ಜಿಲ್ಲೆಯ ಬಂಗಾರುಪೇಟೆ ತಾಲೂಕಿನ ಹುದುಕುಲ ಹಳ್ಳಿಯವನು. ನಮ್ಮ ತಂದೆಬಿಇಎಂಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಾನು ಐಟಿ ಉದ್ಯೋಗಿ ಆಗಿದ್ದೆ. ನಮ್ಮದು ಮಧ್ಯಮವರ್ಗದ ಕುಟುಂಬ.
2. ಚಿತ್ರರಂಗಕ್ಕೆ ನೀವು ಬಂದಿದ್ದು ಹೇಗೆ?
ಸಿನಿಮಾ ಆಸಕ್ತಿ ಇತ್ತು. 2012ರಲ್ಲಿ ಉದ್ಯೋಗ ಬಿಟ್ಟು ನಟನೆಯತ್ತ ಮುಖ ಮಾಡಿದೆ. ಆದರೆ,ಆರಂಭದಲ್ಲಿ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಪಂಚರಂಗಿ ಪೋಂ ಪೋಂ, ಅಮ್ಮ,ಅವಳು, ಪ್ರೀತಿ ಎಂದರೇನು, ಮನಸಾರೆ ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಈಗಲೂ ಮನಸಾರೆಧಾರಾವಾಹಿಯಲ್ಲಿ ಪಾತ್ರ ಮಾಡುತ್ತಿದ್ದೇನೆ.
ಸ್ಟಾರ್ ಸಿನಿಮಾಗಳು ಓಟಿಟಿಯಲ್ಲಿ ತೆರೆಕಾಣಲಿವೆಯೇ; 'ರಾಧೆ' ಬೆನ್ನಿಗೇ ಶುರುವಾಗಿದೆ ಲೆಕ್ಕಾಚಾರ
3. ಸಿನಿಮಾಗಳಲ್ಲಿ ನಟಿಸಿಲ್ಲವೇ?
ಕರಾಲಿ, 6ನೇ ಮೈಲಿ, ರಾಂಧವ ಚಿತ್ರಗಳಲ್ಲಿ ನಟಿಸಿದ್ದೇನೆ. ನಾಯಕನಾಗಿ ನಟಿಸಿದ ಮೊದಲಸಿನಿಮಾ ‘ಸಿನಿಮಾ ಬಂಡಿ’, ಈಗ ನೆಟ್‌ಫ್ಲಿಕ್‌ಸ್ನಲ್ಲಿ ನಂ.1 ಟ್ರೆಂಡಿಂಗ್‌ನಲ್ಲಿದೆ.
4. ತೆಲುಗು ನಿರ್ದೇಶಕನ ಈ ಚಿತ್ರಕ್ಕೆ ನೀವು ಹೇಗೆ ಕನೆಕ್‌ಟ್ ಆಗಿದ್ದು?
ಪ್ರವೀಣ್ ಖಂಡರೇಗುಲ ನಿರ್ದೇಶನದ ಜಾಹೀರಾತಿನಲ್ಲಿ ನಟಿಸಿದ್ದೆ. ಮುಂದೆ ಅವರು ಸಿನಿಮಾಬಂಡಿ ಆರಂಭಿಸಿದಾಗ ಕರೆದು ಕೊಟ್ಟ ಅವಕಾಶ ಇದು.
ಲಾಸ್ ಏಂಜಲೀಸ್ ಚಿತ್ರೋತ್ಸವಕ್ಕೆ 'ಅಮೃತಮತಿ' ಸಿನಿಮಾ ಆಯ್ಕೆ!
5. ನೀವು ಈ ಚಿತ್ರವನ್ನು ಒಪ್ಪಿಕೊಳ್ಳಲು ಮುಖ್ಯವಾದ ಅಂಶಗಳೇನು?
ನಾನು ಹುಟ್ಟಿ ಬೆಳೆದ ಹಳ್ಳಿ, ಅಲ್ಲಿನ ಪರಿಸರದ ಹಿನ್ನೆಲೆಯಲ್ಲಿ ಸಾಗುವ ಕತೆ. ತೆಲುಗುಚಿತ್ರವಾದರೂ ಇದು ಕನ್ನಡದ ನೆಲದಲ್ಲಿ ಹುಟ್ಟಿದ ಕತೆ. ಇಡೀ ಚಿತ್ರವನ್ನು ಕೋಲಾರದಭಾಗದ ಉತ್ತನೂರು ಹಳ್ಳಿ ಸೇರಿದಂತೆ ಬೇರೆ ಬೇರೆ ಊರುಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.ತೆಲುಗು ಜತೆಗೆ ಕನ್ನಡ ಭಾಷೆಯ ಬಳಕೆ ಕೂಡ ಆಗಿದೆ. ಕತೆಯ ನೇಟಿವಿಟಿ ಹಾಗೂ ಭಾಷೆ... ಇದುನನ್ನ ಈ ಚಿತ್ರ ಆಕಷಿ‰ಸಲು ಕಾರಣವಾಯಿತು.
6. ಈ ಚಿತ್ರ ಮಾಡುವಾಗ ಇಷ್ಟು ದೊಡ್ಡ ಮಟ್ಟಕ್ಕೆ ಹಿಟ್ ಆಗುತ್ತದೆಂಬ ನಿರೀಕ್ಷೆ ಇತ್ತಾ?
ಈ ಮಟ್ಟಿಗೆ ಗೆಲ್ಲಿಸುತ್ತಾರೆ ಅಂದುಕೊಂಡಿರಲಿಲ್ಲ. ನೆಟ್‌ಫ್ಲಿಕ್‌ಸ್ನಲ್ಲಿ ತೆರೆ ಕಾಣುತ್ತದೆಎನ್ನುವ ನಂಬಿಕೆಯೂ ಇರಲಿಲ್ಲ.
7. ಯಾರೆಲ್ಲ ಸೆಲೆಬ್ರಿಟಿಗಳು ಈ ಚಿತ್ರ ಮೆಚ್ಚಿದ್ದಾರೆ?
ಸಮಂತಾ, ರಾಕುಲ್‌ಪ್ರೀತ್ ಸಿಂಗ್, ರಾಶಿ ಖನ್ನಾ, ಶಾಹಿದ್ ಕಪೂರ್, ಅದಿವಿ ಶೇಷು ಸಿನಿಮಾನೋಡಿ ಮೆಚ್ಚಿ ಮಾತನಾಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡಿಗರಿಗೂ ನಮ್ಮ ಈ ಸಿನಿಮಾತಲುಪುತ್ತದೆ ಎನ್ನುವ ಅಂದಾಜು ಇರಲಿಲ್ಲ. ಜನರೇ ಈ ಚಿತ್ರವನ್ನು ಅದ್ಭುತ ಮಾಡಿದರು.ನಾನೂ ಸೇರಿದಂತೆ ಈ ಚಿತ್ರದಲ್ಲಿ ನಟಿಸಿರುವ ಇತರೆ ಎರಡು ಮುಖ್ಯ ಪಾತ್ರಗಳಲ್ಲಿಕಾಣಿಸಿಕೊಂಡಿರುವ ಉಮಾ, ಸಿಂಧು ಕೂಡ ಕನ್ನಡದವರೇ.
8. ಇಷ್ಟು ವರ್ಷಗಳ ಪಯಣದಲ್ಲಿ ಖುಷಿ ಕೊಟ್ಟ ಸಂದರ್ಭ, ಕ್ಷಣಗಳು ಯಾವುವು?
ಸಿನಿಮಾ ಬಂಡಿ ಎನ್ನುವ ತೆಲುಗು ಚಿತ್ರದ ಮೂಲಕ ಬೇರೆ ಬೇರೆ ಭಾಷೆಯ ಪ್ರೇಕ್ಷಕರಿಗೆತಲುಪಿದ್ದು, ಈಗ ಚಿತ್ರ ಕನ್ನಡಕ್ಕೆ ಡಬ್ ಆದಾಗ ಸುದೀಪ್ ಅವರ ಪಾತ್ರಕ್ಕೆ ವಾಯ್‌ಸ್ ಡಬ್‌ಮಾಡಿದ್ದು.
9. ನೀವು ಡಬ್ಬಿಂಗ್ ಆರ್ಟಿಸ್‌ಟ್ ಕೂಡನಾ?
ಹೌದು. ಇತ್ತೀಚೆಗೆ ಸರೈನೋಡು ಕನ್ನಡ ವರ್ಷನ್‌ಲ್ಲಿ ಅಲ್ಲೂ ಅರ್ಜುನ್ ಹಾಗೂ ವರ್ಷಂ,ಪೌರ್ಣಮಿ ಚಿತ್ರಗಳಲ್ಲಿ ಪ್ರಭಾಸ್ ಅವರಿಗೆ ವಾಯ್‌ಸ್ ನೀಡಿದ್ದೇನೆ.