ಕತೆಯೇ ಇಲ್ಲಿನ ವಿಶೇಷತೆ. ಕಾಡುವಂತಹ ಕತೆ ಇದೆ. ಥ್ರಿಲ್ಲರ್ ಎಂದಾಗ ತನಿಖಾ ಕತೆ ಅಂದುಕೊಳ್ಳಬಹುದು. ಆದರೆ ಇಲ್ಲಿ ಥ್ರಿಲ್ಲರ್ ಜೊತೆ ಡ್ರಾಮಾ ಇದೆ. ನನ್ನ ಪಾತ್ರಕ್ಕೊಂದು ಭಾವುಕ ಹಿನ್ನೆಲೆ ಇದೆ. ಕರಾವಳಿಯ ಆಟಿ ಕಳೆಂಜ ಆಚರಣೆಯ ಸೊಗಸಿದೆ ಎಂದರು ರೂಪೇಶ್ ಶೆಟ್ಟಿ.
ರಾಜ್
* ಅಧಿಪತ್ರ ನಿಮಗೆ ಇಷ್ಟವಾಗಲು ಏನು ಕಾರಣ?
ಬಿಗ್ ಬಾಸ್ ಬಳಿಕ ನನಗೆ ಹಲವಾರು ಸಿನಿಮಾಗಳು ಬಂದವು. ಅವುಗಳಲ್ಲಿ ಅತ್ಯುತ್ತಮ ಕತೆ ಅನ್ನಿಸಿದ್ದು ಅಧಿಪತ್ರ. ಕನ್ನಡದಲ್ಲಿ ಗಟ್ಟಿಯಾಗಿ ನೆಲೆಯೂರಬೇಕು ಎಂಬ ಆಸೆ ನನಗಿದೆ. ಆದರೆ ಅದಕ್ಕೆ ತಕ್ಕ ಸಿನಿಮಾಗಳು ಬರಬೇಕು. ಈ ಪ್ರಯಾಣದಲ್ಲಿ ಆರಂಭದಲ್ಲಿ ಉತ್ತಮ ಕತೆ ಸಿನಿಮಾ ಮಾಡೋಣ ಎಂಬ ಆಲೋಚನೆಯಲ್ಲಿ ಇದ್ದಾಗ ಅಧಿಪತ್ರ ಬಂತು. ಕತೆ ಕೇಳಿ ಇಷ್ಟವಾಯಿತು. ಇದೊಂದು ಥ್ರಿಲ್ಲರ್ ಡ್ರಾಮಾ. ಪ್ರೇಕ್ಷಕರು ನೋಡಿ ಮೆಚ್ಚಬಹುದಾದ ಸಿನಿಮಾ.
* ಏನು ವಿಶೇಷತೆ ಇದೆ ಸಿನಿಮಾದಲ್ಲಿ?
ಕತೆಯೇ ಇಲ್ಲಿನ ವಿಶೇಷತೆ. ಕಾಡುವಂತಹ ಕತೆ ಇದೆ. ಥ್ರಿಲ್ಲರ್ ಎಂದಾಗ ತನಿಖಾ ಕತೆ ಅಂದುಕೊಳ್ಳಬಹುದು. ಆದರೆ ಇಲ್ಲಿ ಥ್ರಿಲ್ಲರ್ ಜೊತೆ ಡ್ರಾಮಾ ಇದೆ. ನನ್ನ ಪಾತ್ರಕ್ಕೊಂದು ಭಾವುಕ ಹಿನ್ನೆಲೆ ಇದೆ. ಕರಾವಳಿಯ ಆಟಿ ಕಳೆಂಜ ಆಚರಣೆಯ ಸೊಗಸಿದೆ. ಹಲವಾರು ಕುತೂಹಲಕರ ಅಂಶಗಳಿವೆ. ಅದಕ್ಕಿಂತ ಹೆಚ್ಚಾಗಿ ನನ್ನ ಪಾತ್ರಕ್ಕೆ ನಟನಾ ಸಾಮರ್ಥ್ಯ ಪ್ರದರ್ಶಿಸುವ ಅವಕಾಶ ಇತ್ತು. ಈ ಸಿನಿಮಾ ನೋಡಿದವರು ನನ್ನನ್ನು ಒಬ್ಬ ಕಲಾವಿದನಾಗಿ ಮೆಚ್ಚಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ.
* ತುಳುವಲ್ಲಿ ನಿರ್ದೇಶನ, ನಟನೆ ಎರಡೂ ಮಾಡುತ್ತೀರಿ. ಕನ್ನಡದಲ್ಲಿ ಆ ಪ್ರಯತ್ನ ಮಾಡುವುದಿಲ್ಲವೇ?
ತುಳುವಿನಲ್ಲಿ ನನಗೆ ಬೇಕಾದ ಕತೆಗಳು ಬರುತ್ತಿಲ್ಲ ಎಂಬ ಕಾರಣಕ್ಕೆ ನಿರ್ದೇಶನ ಶುರು ಮಾಡಿದೆ. ಕನ್ನಡದಲ್ಲಿ ಅಧಿಪತ್ರ ನನ್ನ ಆರನೇ ಸಿನಿಮಾ. ನಿಧಾನಕ್ಕೆ ಹೋಗೋಣ ಅಂದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಸಿನಿಮಾ ನಿರ್ದೇಶನ ಮಾಡುವ ಆಸೆ ಇದೆ. ತುಳುವಿನಲ್ಲಿ ಸಿನಿಮಾ ತಲುಪಿಸುವುದು ಕನ್ನಡಕ್ಕಿಂತ ಸುಲಭ. ಇಲ್ಲಿ ರೀಚ್ ಮಾಡಿಸುವುದಕ್ಕೆ ಬಹಳ ಶ್ರಮ ಪಡಬೇಕು.
ಅಧಿಪತ್ರ ಕಂಟೆಂಟ್ ಪ್ರಧಾನ ಸಿನಿಮಾ, ಬಿಲ್ಡಪ್‌ಗಿಂತ ಕಥೆಗೆ ಪ್ರಾಧಾನ್ಯತೆ ಇದೆ: ಬಿಗ್‌ಬಾಸ್ ರೂಪೇಶ್ ಶೆಟ್ಟಿ
* ಮುಂದಿನ ಹಾದಿ?
ಕನ್ನಡದಲ್ಲಿ ಹೊಸ ಸಿನಿಮಾ ಶೀಘ್ರದಲ್ಲಿಯೇ ಘೋಷಣೆಯಾಗಲಿದೆ. ತುಳುವಿನಲ್ಲಿ ‘ಜೈ’ ಸಿನಿಮಾ ಮಾಡುತ್ತಿದ್ದೇನೆ. ಅದರಲ್ಲಿ ಸುನೀಲ್ ಶೆಟ್ಟಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಯೋಗಿ ಬಾಬು ಜೊತೆ ‘ಸನ್ನಿಧಾನಂ’ ಸಿನಿಮಾ ಇದೆ. ತೆಲುಗಿನಲ್ಲಿ ‘ಜಾತ್ರಾ’ ಸಿನಿಮಾ ಮಾಡುತ್ತಿದ್ದೇನೆ. ಮುಂದಿನ ಹಾದಿ ಎಕ್ಸೈಟಿಂಗ್ ಆಗಿದೆ.
