Asianet Suvarna News Asianet Suvarna News

ಗಡಿನಾಡಿನಿಂದ ಬಂದ ಯುವ ನಟ, ನಿರ್ಮಾಪಕ ರಘು ಭಟ್

ಗಡಿನಾಡು ಕಾಸರಗೋಡು ಜಿಲ್ಲೆ ಕರ್ನಾಟಕಕ್ಕೆ ಹಲವಾರು ಪ್ರತಿಭಾವಂತರನ್ನು ನೀಡಿದೆ. ಹಾಗೆ ಇತಿಹಾಸ ಸೇರಿರುವ ಮಹಾತ್ಮರ ನೆನಪನ್ನು ಆಧುನಿಕ ಯುವ ಸಮೂಹ ಕೂಡ ನೆನಪಿಸಿಕೊಳ್ಳುತ್ತಿದೆ. ಅಂಥ ಪ್ರಯತ್ನದಲ್ಲಿರುವ ನಟ, ನಿರ್ಮಾಪಕ ರಘು ಭಟ್ ಅವರೊಂದಿಗಿನ ಮಾತು ಕತೆ ಇದು.
 

Actor Producer Raghu Bhat talks about his journey
Author
Bengaluru, First Published Mar 23, 2021, 4:31 PM IST

-ಶಶಿಕರ ಪಾತೂರು

ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರ ಹೆಸರು ಕೇಳದ ಕನ್ನಡಿಗರು ಇರಲಾರರು. ಆದರೆ ಅವರು ಹುಟ್ಟಿದ್ದು ಮಾತ್ರ ಗಡಿನಾಡು ಕಾಸರಗೋಡಿನ ಮಂಜೇಶ್ವರದಲ್ಲಿ. ಕೇರಳಕ್ಕೆ ಸೇರಿದ ಕಾಸರಗೋಡನ್ನು ಕರ್ನಾಟಕದ ವ್ಯಾಪ್ತಿಗೆ ತರಲು ಇನ್ನಿಲ್ಲದ ಪ್ರಯತ್ನ ಮಾಡಿದವರಲ್ಲಿ ಕವಿ ಗೋವಿಂದ ಪೈಗಳು ಪ್ರಮುಖರು.

ಇಂದು ಅವರ ಜನ್ಮದಿನ. ಇದೇ ಸಂದರ್ಭದಲ್ಲಿ ಅವರ ವ್ಯಕ್ತಿ ಜೀವನವನ್ನಾಧರಿಸಿದ ಚಿತ್ರವೊಂದನ್ನು ಮಾಡಲು ತಂಡವೊಂದು ಸಿದ್ಧವಾಗಿದೆ. ಚಿತ್ರದ ನಿರ್ಮಾಣದಲ್ಲಿ ಮಂಜೇಶ್ವರದವರೇ ಆದ ಕನ್ನಡದ ಯುವ ನಟ ರಘು ಭಟ್ ಅವರು ಸೇರಿಕೊಂಡಿದ್ದಾರೆ. ಅವರು ತಮ್ಮ ಹವ್ಯಾಸ ಮತ್ತು ಕನಸುಗಳನ್ನು ಸುವರ್ಣ ನ್ಯೂಸ್.ಕಾಮ್ ಜೊತೆಗೆ ವಿವರಿಸಿದ್ದಾರೆ.

ಮಂಜೇಶ್ವರದಿಂದ ಗಾಂಧಿನಗರದ ವರೆಗಿನ ನಿಮ್ಮ ಪ್ರಯಾಣಕ್ಕೆ ಕಲಾಸಕ್ತಿಯೇ ಕಾರಣವೇ?

ಖಂಡಿತವಾಗಿ. ಪಿಯುಸಿ ವಿದ್ಯಾರ್ಜನೆ ಬೆಂಗಳೂರಿನಿಂದಲೇ ಶುರುವಾಯಿತು. ವರ್ಕ್ ಫ್ರಮ್ ಹೌಸ್ ಎನ್ನುವ ರೀತಿಯಲ್ಲಿ ಡಾಕ್ಯುಮೆಂಟರಿ ರೈಟರ್ ಕೆಲಸ ಬೇರೆ ಮಾಡುತ್ತಿದ್ದೆ. ಶಾಲಾದಿನಗಳಿಂದಲೇ ನಾಟಕಗಳಲ್ಲಿ ನಟಿಸುವ ಮೂಲಕ ಅಭಿನಯದಲ್ಲಿ ಆಸೆ ಇತ್ತು. ಶಿವರಾಜ್ ಕುಮಾರ್ ಅವರ `ಕೃಷ್ಣ ಲೀಲೆ' ಚಿತ್ರದಲ್ಲಿ ಬಾಲನಟನಾಗಿ ನಾನು ಚಿತ್ರರಂಗ ಪ್ರವೇಶಿಸಿದೆ. ಅದರ ಬಳಿಕ `ರಾಮಕೃಷ್ಣ ಗೋವಿಂದ' ಎನ್ನುವ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದೆ.

`ಹೂ ಮಳೆ' ಶ್ರೀರಾಮನ ಹೊಸ ಲುಕ್

ವೃತ್ತಿಯೊಂದಿಗೆ ನಟನೆಯನ್ನು ಕೂಡ ಹವ್ಯಾಸವಾಗಿಸಿರುವವನು ನಾನು. ಹಾಗಿದ್ದುಕೊಂಡೇ ಪಾರು ವೈಫ್ ಆಫ್ ದೇವದಾಸ್, ತಾರೆ , ಅನ್ವೇಷಿ, ಎಮ್.ಎಮ್ ಸಿ ಎಚ್, ಡ್ರೀಮ್ ಗರ್ಲ್, ದಾದ ಈಸ್ ಬ್ಯಾಕ್, ಬಕಾಸುರ.. ಹೀಗೆ ಇನ್ನೊಂದಷ್ಟು ಸಿನಿಮಾಗಳಲ್ಲಿ ಕಲಾವಿದನಾಗಿ ಕಾಣಿಕೊಂಡಿದ್ದೇನೆ. ಇವುಗಳಲ್ಲಿ `ಎಮ್ ಎಮ್ ಸಿ ಎಚ್' ಮತ್ತು `ಅನ್ವೇಷಿ' ನನಗೆ ತೃಪ್ತಿ ಕೊಟ್ಟಂಥ ಸಿನಿಮಾಗಳು ಎನ್ನಬಹುದು. ಅದರಲ್ಲಿಯೂ `ದಾದ ಈಸ್ ಬ್ಯಾಕ್' ಸಿನಿಮಾದಲ್ಲಿ ತಮಿಳು ನಟ ಪಾರ್ಥಿಬನ್ ಸರ್ ಎದುರು ನಟಿಸುವುದು ನಿಜಕ್ಕೂ ಚಾಲೆಂಜಿಂಗ್ ಆಗಿತ್ತು.

ಒಬ್ಬ ಕಲಾವಿದರಾಗಿ ನಿಮ್ಮ ಗುರಿ ಏನು? 

ಕಲಾವಿದ ಎನ್ನುವುದಕ್ಕಿಂತ ಕಲಾಸಕ್ತ ಎಂದರೆ ಸರಿಯಾದೀತು. ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರಬೇಕೆನ್ನುವುದು ನನ್ನ ಕನಸು. ಕೋವಿಡ್ ಲಾಕ್ಡೌನ್‌ಗೂ ಮೊದಲು ತುಳು ಸಿನಿಮಾವೊಂದರಲ್ಲಿ ನಟಿಸಿದ್ದೆ. ಆ ಚಿತ್ರದ ಹೆಸರು `ಲಕ್ಕಿ ಬಾಬು'. ಅದರ ಬಳಿಕ ಕನ್ನಡದಲ್ಲಿ ತೆರೆಕಾಣಲಿರುವ `ಅಲ್ಲಮ ಪ್ರಭು' ಸಿನಿಮಾದಲ್ಲಿಯೂ ಒಂದು ಪಾತ್ರ ಮಾಡಿದ್ದೇನೆ.  ಅದರಲ್ಲಿ ನನ್ನದು ಬಿಜ್ಜಳ ರಾಜನ ಪಾತ್ರ. ಇವಲ್ಲದೆ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದೇನೆ.

`ಕನ್ನಡತಿ'ಯ ತಾಪಸಿ ಈ ದೀಪ ಶ್ರೀ

ಆದರೆ ನನಗೆ ಬೇರೆ ವೃತ್ತಿ ಕೂಡ ಇರುವುದರಿಂದಾಗಿ ಧಾರಾವಾಹಿಗಳಲ್ಲಿ ನಾನು ದೊಡ್ಡ ಪಾತ್ರಗಳನ್ನು ಮಾಡುತ್ತಿಲ್ಲ. ಅವಕಾಶ ಸಿಕ್ಕಾಗ ಸಣ್ಣಪುಟ್ಟ ಪಾತ್ರಗಳನ್ನಷ್ಟೇ ಒಪ್ಪಿಕೊಂಡು ನಟಿಸುತ್ತಿದ್ದೇನೆ. ಇತ್ತೀಚೆಗಷ್ಟೇ ಉದಯ ವಾಹಿನಿಯಲ್ಲಿ `ಶ್ರೀಮತಿ ಭಾಗ್ಯಲಕ್ಷ್ಮಿ' ಮತ್ತು ಸುವರ್ಣದಲ್ಲಿ `ಚಂದನದ ಗೊಂಬೆ' ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಆದರೆ ಆಗಲೇ ಹೇಳಿದಂತೆ ಕಲಾಸಕ್ತನಾಗಿ ಉತ್ತಮ ಚಿತ್ರಗಳ ಭಾಗವಾಗಲು ಬಯಸುತ್ತೇನೆ.

ಕವಿ ಗೋವಿಂದ ಪೈಯವರ ಚಿತ್ರ ನಿರ್ಮಾಣದ ಯೋಜನೆಗೆ ಕೂಡ ಆಸಕ್ತಿಯೇ ಕಾರಣವೇ?

ನಾನು ಮೂಲತಃ ಮಂಜೇಶ್ವರದವನೇ ಆಗಿರುವ ಕಾರಣ ಗೋವಿಂದ ಪೈಯವರ ಕುರಿತಾದ ಚಿತ್ರ ಎನ್ನುವಾಗ ಆಸಕ್ತಿ ಹೆಚ್ಚೇ ಇದೆ. ಈ ಹಿಂದೆ ಬೇರೆ ಸಿನಿಮಾಗಳಿಗೆ ನಾನು ಫೈನಾನ್ಸ್ ಮಾಡಿದ್ದರೂ ನೇರ ನಿರ್ಮಾಣದಲ್ಲಿ ಭಾಗಿಯಾಗುತ್ತಿರುವುದು ಇದೇ ಮೊದಲು. `ಮಹಾಕವಿ' ಎನ್ನುವ ಈ ಚಿತ್ರಕ್ಕೆ ನನ್ನ ಪತ್ನಿ ಸುಗುಣಾ ಭಟ್ ನಿರ್ಮಾಪಕಿ.

ವಿಷ್ಣು ಸರ್ ನೆನಪು ಮಾಡಿದರು ಅನಿರುದ್ಧ್- ಸುಧಾರಾಣಿ

ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಲೇಖನಿಯಲ್ಲಿ ಚಿತ್ರಕತೆ, ಸಂಭಾಷಣೆ ಮೂಡಿ ಬರುತ್ತಿದೆ. ಸ್ಕ್ರಿಪ್ಟ್ ಪೂರ್ತಿಯಾಗಿರುವ ಹಿನ್ನೆಲೆಯಲ್ಲಿ ಮಂಜೇಶ್ವರದ ಪೈಗಳ ನಿವಾಸದಲ್ಲೇ ಇಂದು ಸ್ಕ್ರಿಪ್ಟ್ ಪೂಜೆಯೊಂದಿಗೆ ಹೆಜ್ಜೆ ಮುಂದಿಡುತ್ತಿದ್ದೇವೆ. ಮುಹೂರ್ತವನ್ನು ಬೆಂಗಳೂರಿನಲ್ಲಿ ಸ್ಟಾರ್ ನಟರನ್ನು ಕರೆಸಿ ದೊಡ್ಡ ಮಟ್ಟದಲ್ಲಿ ಮಾಡುವ ಯೋಜನೆ ಇದೆ. ಅದೇ ಸಂದರ್ಭದಲ್ಲಿ ಗೋವಿಂದ ಪೈಯವರ ಪಾತ್ರವನ್ನು ಒಬ್ಬ ಶ್ರೇಷ್ಠ ನಟರಿಂದ ಮಾಡಬೇಕು ಎನ್ನುವ ಆಕಾಂಕ್ಷೆಯೂ ಇದೆ. 

Follow Us:
Download App:
  • android
  • ios