Asianet Suvarna News Asianet Suvarna News

ದುಬೈನಲ್ಲಿ ಪ್ರಾರಂಭವಾಗ್ತಿದೆ Flying taxi: ನಾವು ಪ್ರಯಾಣಿಸುವ ರೀತಿಯನ್ನೇ ಬದಲಿಸುತ್ತೆ ಏರ್‌ ಕ್ಯಾಬ್‌..!

ಏರ್ ಟ್ಯಾಕ್ಸಿಗಳು ಆಕರ್ಷಕ ಆಯ್ಕೆಯಾಗಿ ಮಾರ್ಪಟ್ಟಿದ್ದು, ಟೊಯೋಟಾ, ಉಬರ್, ಹುಂಡೈ, ಏರ್‌ಬಸ್ ಮತ್ತು ಬೋಯಿಂಗ್‌ನಂತಹ ಅನೇಕ ಕಂಪನಿಗಳು ತಮ್ಮ ಮಾಡೆಲ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ.

flying tax debuts in dubai what is an air cab and how it will changes our way of travel ash
Author
First Published Oct 12, 2022, 4:19 PM IST

ನಿಮ್ಮ ನಗರದಲ್ಲಿ ಟ್ರಾಫಿಕ್‌ ಜಾಮ್‌ (Traffic Jam) ಕಿರಿಕಿರಿ ಹೆಚ್ಚಾಗಿದ್ದರೆ ನಿಮಗೆ ಇಲ್ಲಿದೆ ಸಿಹಿ ಸುದ್ದಿ. ಚೀನಾದ (China) ಸಂಸ್ಥೆಯು ದುಬೈನಲ್ಲಿ (Dubai) ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಯನ್ನು (Electric Flying Taxi)  ಪರೀಕ್ಷಿಸಿದೆ. ಈ ಹಿನ್ನೆಲೆ ಟ್ರಾಫಿಕ್‌ ದಟ್ಟಣೆಯಿಲ್ಲದೆ ಹೆಚ್ಚಿನ ನಗರಗಳ ಮೂಲಕ ಜನರು ಸುತ್ತುವ ಕನಸು ಸದ್ಯದಲ್ಲೇ ನನಸಾಗಲಿದೆ.  ಇನ್ನು, ಏನಿದು ಫ್ಲೈಯಿಂಗ್ ಟ್ಯಾಕ್ಸಿ, ಇದು ಹೇಗೆ ಹೇಗೆ ಕೆಲಸ ಮಾಡುತ್ತದೆ, ಅವುಗಳ ಪ್ರಯೋಜನಗಳು ಮತ್ತು ಅದರಲ್ಲಿ ಪ್ರಯಾಣಿಸುವುದು ಹೇಗಿರುತ್ತದೆ ಎಂಬ ಬಗ್ಗೆ ಕುತೂಹಲವೇ.. ಇಲ್ಲಿ ತಿಳಿದುಕೊಳ್ಳಿ.. 

ಹಾರುವ ಟ್ಯಾಕ್ಸಿ ಬಗ್ಗೆ ಇಲ್ಲಿದೆ ವಿವರ..
ಫ್ಲೈಯಿಂಗ್ ಟ್ಯಾಕ್ಸಿ, ಇದನ್ನು ಏರ್ ಟ್ಯಾಕ್ಸಿ (Air Taxi) ಎಂದೂ ಕರೆಯುತ್ತಾರೆ. ಫ್ಲೈಯಿಂಗ್ ಟ್ಯಾಕ್ಸಿ ಅಂದರೆ ಅಕ್ಷರಶಃ ಹಾರುವ ಕಾರು. ಡಿಮ್ಯಾಂಡ್‌ ಮೇರೆಗೆ ಸಣ್ಣ ಹಾರಾಟಗಳಿಗಾಗಿ ಬಳಕೆಯಾಗುವ ವಾಣಿಜ್ಯ ವಿಮಾನ ಅಥವಾ ಹೆಲಿಕಾಪ್ಟರ್‌. ದಟ್ಟಣೆಯ ರಸ್ತೆಗಳೊಂದಿಗೆ ನಗರ ಕೇಂದ್ರಗಳಲ್ಲಿನ ಪ್ರಯಾಣಕ್ಕೆ ಪರ್ಯಾಯವಾಗಿ ಇದನ್ನು ಪರಿಗಣಿಸಲಾಗಿದೆ ಮತ್ತು ಇದನ್ನು ನಗರ ವಾಯು ಚಲನಶೀಲತೆ (Urban Air Mobility) (UAM) ವಾಹನ ಎಂದೂ ಕರೆಯುತ್ತಾರೆ.

ಇದನ್ನು ಓದಿ: ಉಬರ್‌ನಿಂದ ‘ಹಾರುವ ಟ್ಯಾಕ್ಸಿ’ ಸಂಚಾರ!

ಕೆಲವು ಸಮಯದಿಂದ ಏರ್ ಟ್ಯಾಕ್ಸಿಗಳು ಆಕರ್ಷಕ ಆಯ್ಕೆಯಾಗಿ ಮಾರ್ಪಟ್ಟಿವೆ. ಇದಕ್ಕೆ ಕಾರಣ, ಟೊಯೋಟಾ, ಉಬರ್, ಹುಂಡೈ, ಏರ್‌ಬಸ್ ಮತ್ತು ಬೋಯಿಂಗ್‌ನಂತಹ ಅನೇಕ ಕಂಪನಿಗಳು ತಮ್ಮ ಮಾಡೆಲ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಮೋರ್ಗಾನ್ ಸ್ಟಾನ್ಲಿ ಸಂಶೋಧನಾ ಅಧ್ಯಯನದ ಪ್ರಕಾರ, ಸ್ವಾಯತ್ತ ನಗರ ವಿಮಾನ ಮಾರುಕಟ್ಟೆಯು 2040 ರ ವೇಳೆಗೆ 1.5 ಟ್ರಿಲಿಯನ್ ಡಾಲರ್‌ ಮೌಲ್ಯದ್ದಾಗಿರಬಹುದು ಎಂದು ಹೇಳಲಾಗುತ್ತಿದೆ. 

ಇನ್ನು, ಫ್ರಾಸ್ಟ್ ಮತ್ತು ಸುಲ್ಲಿವಾನ್‌ನ ಮತ್ತೊಂದು ಅಧ್ಯಯನವು 2022 ರಲ್ಲಿ ದುಬೈನಲ್ಲಿ ಏರ್ ಟ್ಯಾಕ್ಸಿಗಳು ಪ್ರಾರಂಭವಾಗುವುದನ್ನು ಮತ್ತು ಸಂಯುಕ್ತ ವಾರ್ಷಿಕ ಬೆಳವಣಿಗೆಯೊಂದಿಗೆ ವಿಸ್ತರಿಸುವುದನ್ನು ನೋಡುತ್ತದೆ. 2040 ರ ವೇಳೆಗೆ ಸುಮಾರು ಶೇ. 46 ದರದಲ್ಲಿ 430,000 ಕ್ಕಿಂತ ಹೆಚ್ಚು ಘಟಕಗಳಿಗೆ ದುಬೈನಲ್ಲಿ ಹಾರುವ ಟ್ಯಾಕ್ಸಿ ಕಾರ್ಯಾಚರಣೆಯಾಗಲಿದೆ ಎಂದೂ ಅಂದಾಜಿಸಿದೆ. 

ಇದನ್ನೂ ಓದಿ: ಹೊಸ ಕ್ರಾಂತಿ..! ಅತೀ ಶೀಘ್ರದಲ್ಲೇ ಊಬರ್'ನಿಂದ ಹಾರುವ ಟ್ಯಾಕ್ಸಿಗಳು

ದುಬೈನಲ್ಲಿ ಫ್ಲೈಯಿಂಗ್‌ ಟ್ಯಾಕ್ಸಿ 
ಸೋಮವಾರ, ಗುವಾಂಗ್ಝೌ ಮೂಲದ XPeng Inc ನ ವಾಯುಯಾನ ಅಂಗಸಂಸ್ಥೆಯು ದುಬೈನ ಮರೀನಾ ಜಿಲ್ಲೆಯಲ್ಲಿ XPeng X2 ಫ್ಲೈಯಿಂಗ್ ಟ್ಯಾಕ್ಸಿಯನ್ನು ಪರೀಕ್ಷಿಸಿದೆ. ನಯವಾಗಿ ವಿನ್ಯಾಸಗೊಳಿಸಿದ ವಾಹನವು ಇಬ್ಬರು ಪ್ರಯಾಣಿಕರನ್ನು ಸಾಗಿಸಬಲ್ಲದು ಮತ್ತು 8 ಪ್ರೊಪೆಲ್ಲರ್‌ಗಳ ಸೆಟ್‌ನಿಂದ ಚಾಲಿತವಾಗಿದೆ. ಇದು ಗಂಟೆಗೆ 130 ಕಿಲೋಮೀಟರ್ (80 ಮೈಲುಗಳು) ಗರಿಷ್ಠ ವೇಗವನ್ನು ಹೊಂದಿದೆ ಎಂದು ಕಂಪನಿ ಹೇಳುತ್ತದೆ.

ಟೆಸ್ಟಿಂಗ್ ವೇಳೆ ಖಾಲಿ ಕಾಕ್‌ಪಿಟ್ ಅನ್ನು ಬಳಸಿದ್ದರೂ, ಮಾನವಸಹಿತ ಹಾರುವ ಪರೀಕ್ಷೆಯನ್ನು ಜುಲೈ 2021 ರಲ್ಲಿ ನಡೆಸಲಾಗಿತ್ತು ಎಂದೂ ಕಂಪನಿ ಹೇಳಿಕೊಂಡಿದೆ. ಇನ್ನು, ಟೇಕ್ ಆಫ್ ಆದ ನಂತರ, X2 ತನ್ನ ಐತಿಹಾಸಿಕ 90 ನಿಮಿಷಗಳ ಪರೀಕ್ಷಾ ಹಾರಾಟವನ್ನು ಪೂರ್ಣಗೊಳಿಸಿತು ಎಂದು ತಿಳಿದುಬಂದಿದೆ. 

ಕಂಪನಿಯ ಪ್ರಕಾರ, X2 ಬುದ್ಧಿವಂತ ವಿಮಾನ ನಿಯಂತ್ರಣ ವ್ಯವಸ್ಥೆ ಮತ್ತು ಸ್ವಾಯತ್ತ ಹಾರಾಟದ ಸಾಮರ್ಥ್ಯಗಳನ್ನು ಹೊಂದಿದೆ. ಇದು ತನ್ನ ಹಾರಾಟದ ಸಮಯದಲ್ಲಿ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಉತ್ಪಾದಿಸುವುದರಿಂದ, ಪರಿಸರ ಸ್ನೇಹಿಯೂ ಆಗಿದೆ.

ಹಾರುವ ಕಾರು ಗರಿಷ್ಠ 1,000 ಮೀಟರ್ ಎತ್ತರವನ್ನು ಹೊಂದಿದೆ ಮತ್ತು  ಫಿಕ್ಸೆಡ್‌-ಸ್ಕಿಡ್ ಮಾದರಿಯ ಲ್ಯಾಂಡಿಂಗ್ ಗೇರ್‌ಗಳನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.
ಇನ್ನು, ಚೀನಾದ XPeng ಮಾತ್ರವಲ್ಲ, ವಿಸ್ಕ್‌ ಏರೋ, ಟೊಯೋಟಾ, ಹ್ಯುಂಡೈ, ಏರ್‌ಬಸ್‌ ಮುಂತಾಧ ಕಂಪನಿಗಳು ಸಹ ಫ್ಲೈಯಿಂಗ್ ಟ್ಯಾಕ್ಸಿ ಮಾದರಿ ವಾಹನಗಳನ್ನು ತಯಾರು ಮಾಡುತ್ತಿದೆ ಎಂದು ತಿಳಿದುಬಂದಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ನೀವು ಈ ಹಾರುವ ಟ್ಯಾಕ್ಸಿಯನ್ನು ನಿಮ್ಮ ನಗರಗಳಲ್ಲಿ ಸಹ ಪ್ರಯಾಣಿಸುವ ಸಮಯ ಬರುತ್ತದೆ.. ಸ್ವಲ್ಪ ಕಾಯಿರಿ..!
 

Follow Us:
Download App:
  • android
  • ios