ವೋಲ್ವೋ ಕಾರ್ ಇಂಡಿಯಾದಿಂದ ಎಲೆಕ್ಟ್ರಿಕ್ XC40 Recharge ಬಿಡುಗಡೆ!
ಜುಲೈ 27 ರಿಂದ ವೋಲ್ವೋ ಎಲೆಕ್ಟ್ರಿಕ್ ಕಾರು ಬುಕಿಂಗ್ ಆರಂಭಗೊಳ್ಳುತ್ತಿದೆ. ಅಕ್ಟೋಬರ್ 2022ರಿಂದ ಗ್ರಾಹಕರಿಗೆ ಕಾರು ವಿತರಣೆಯಾಗಲಿದೆ. ಈ ಕಾರಿನ ಬೆಲೆ, ಫೀಚರ್ಸ್ ಹಾಗೂ ಇತರ ಮಾಹಿತಿ ಇಲ್ಲಿದೆ
ಬೆಂಗಳೂರು(ಜು.26) :ವೋಲ್ವೋ ಕಾರ್ ಇಂಡಿಯಾ ಬಹುನಿರೀಕ್ಷಿತ ತನ್ನ ವಿದ್ಯುತ್ ಚಾಲಿತ Volvo XC40 Recharge ಬಿಡುಗಡೆ ಮಾಡಿದೆ. ಇದಕ್ಕೆ ‘VolvoVerse’ ಎಂದು ನಾಮಕರಣ ಮಾಡಲಾಗಿದ್ದು, ಈ Volvo XC40 Recharge ಭಾರತದಲ್ಲಿ ಸ್ಥಳೀಯವಾಗಿ ಅಸೆಂಬಲ್ ಮಾಡಿದ ಮೊಟ್ಟ ಮೊದಲ ಲಕ್ಷುರಿ ಎಲೆಕ್ಟ್ರಿಕ್ ವಾಹನ ಎಂಬ ಹೆಗ್ಗಳಿಕೆಗೆ ಪಾತ್ರವಾಗದೆ. ದಕ್ಷ ಎಲೆಕ್ಟ್ರಿಕ್ ಮೋಟಾರು ಹೊಂದಿರುವ ನೂತನ ಕಾರು 0-100 ಕಿಮೀ ವೇಗವನ್ನು ಕೇವಲ 4.9 ಸೆಕೆಂಡ್‌ನಲ್ಲಿ ಪಡೆದುಕೊಳ್ಳಲಿದೆ. ಈ ಕಾರಿನ ಗರಿಷ್ಠ ವೇಗ 180 ಕಿ.ಮೀ ಪ್ರತಿ ಗಂಟೆಗೆ. ಇದರ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕಾರು ಇದಾಗಿದೆ. ನೂತನ ಕಾರಿನ ಬೆಲೆ 55,90,000 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). 3 ವರ್ಷದ ವಾರೆಂಟಿ, 3 ವರ್ಷದ ಸರ್ವೀಸ್ ಪ್ಯಾಕೇಜ್, ರೋಡ್ ಸೈಡ್ ಅಸಿಸ್ಟೆನ್ಸ್ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಿದೆ. ಜುಲೈ 27ರ ಬೆಳಗ್ಗೆ 11 ಗಂಟೆಯಿಂದ ಬುಕಿಂಗ್ ಆರಂಭಗೊಳ್ಳಲಿದೆ.
XC40 Recharge ಬಿಡುಗಡೆ ಮತ್ತು ಬೆಂಗಳೂರಿನಲ್ಲಿರುವ ನಮ್ಮ ಕಾರು ಉತ್ಪಾದನಾ ಘಟಕದಲ್ಲಿ ಅದರ ಜೋಡಣೆಯು ವೋಲ್ವೋ ಕಾರಿನ ದೀರ್ಘಾವಧಿಯ ದೃಷ್ಟಿ ಮತ್ತು ಭಾರತ ಮತ್ತು ಭಾರತೀಯ ಗ್ರಾಹಕರಿಗೆ ಇರುವ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ವೋಲ್ವೋ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಹೆಸರು ಗಳಿಸಿದ್ದು, ಇದರ ಹಾಲ್ ಮಾರ್ಕ್ ಗುಣಮಟ್ಟ ಮತ್ತು ಸುರಕ್ಷತೆಯೊಂದಿಗೆ ಇವಿ ಯನ್ನು ದೀರ್ಘಕಾಲ ಬಯಸುತ್ತಿದ್ದ ನಮ್ಮ ನಿಷ್ಠಾವಂತ ಗ್ರಾಹಕರಿಗೆ ಪೂರೈಸುತ್ತಿದ್ದೇವೆ ಎಂಬುದನ್ನು ತಿಳಿಸಲು ಸಂತೋಷವಾಗುತ್ತಿದೆ. ಈ ಕಾರು ಒಂದು ಚಾರ್ಜ್ ನಲ್ಲಿ 400 ಕಿಲೋಮೀಟರ್ ಗೂ ಅಧಿಕ ದೂರ ಸಂಚರಿಸಬಲ್ಲದು. ಅಲ್ಲದೇ, ಕಂಪನಿಯ ನೇರ ಆನ್ ಲೈನ್ ಮಾರಾಟವು ನಮ್ಮ ಗ್ರಾಹಕರೊಂದಿಗೆ ನೇರ ಸಂಬಂಧವನ್ನು ನಿರ್ಮಾಣ ಮಾಡುವ ಕಡೆಗೆ ನಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತದೆ ಮತ್ತು ಯಾವುದೇ ಅಡೆತಡೆ ಇಲ್ಲದ ರೀತಿಯ ಅನುಭವವನ್ನು ನೀಡುತ್ತದೆ ಎಂದು ವೋಲ್ವೋ ಕಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಜ್ಯೋತಿ ಮಲ್ಹೋತ್ರಾ ಹೇಳಿದ್ದಾರೆ.
Volvo Car: ಹೊಚ್ಚ ಹೊಸ ವೋಲ್ವೋ XC90 ಮೈಲ್ಡ್-ಹೈಬ್ರಿಡ್ ಕಾರು ಬಿಡುಗಡೆ!
ಕಂಪನಿಯು ಭಾರತದಲ್ಲಿ XC40 Recharge ಗೆ ಕಿರಿಕಿರಿ ರಹಿತವಾದ ಮಾಲೀಕತ್ವದ ಪ್ಯಾಕೇಜ್ ಅನ್ನು ನೀಡುತ್ತದೆ. ಈ ಪ್ಯಾಕೇಜ್ ನ ವಿವರಗಳು ಇಂತಿವೆ:
ತೊಂದರೆರಹಿತ ಮಾಲೀಕತ್ವದ ಪ್ಯಾಕೇಜ್
3 ವರ್ಷಗಳವರೆಗೆ ಸಮಗ್ರ ಕಾರು ವಾರಂಟಿ
3 ವರ್ಷಗಳವರೆಗೆ ವೋಲ್ವೋ ಸರ್ವೀಸ್ ಪ್ಯಾಕೇಜ್
3 ವರ್ಷಗಳವರೆಗೆ ರೋಡ್ ಸೈಡ್ ಅಸಿಸ್ಟೆನ್ಸ್
8 ವರ್ಷಗಳವರೆಗೆ ಬ್ಯಾಟರಿ ವಾರಂಟಿ
4 ವರ್ಷಗಳ ಕಾಲ ಡಿಜಿಟಲ್ ಸರ್ವೀಸ್ ಗಳಿಗೆ ಸಬ್ ಸ್ಕ್ರಿಪ್ಷನ್
ಮೂರನೇ ಪಾರ್ಟಿಯಿಂದ 1 ವಾಲ್ ಬಾಕ್ಸ್ ಚಾರ್ಜರ್ (11 kW)
Volvo Car India ವೆಬ್ ಸೈಟ್ ನಲ್ಲಿ ನೇರವಾಗಿ ಆರ್ಡರ್ ಮಾಡಬಹುದು: ವೋಲ್ವೋ ಕಾರ್ ಇಂಡಿಯಾ ಬಿಡುಗಡೆ ಮಾಡಿರುವ XC40 Recharge ಅನ್ನು ಸ್ವತಃ ಕಂಪನಿಯೇ ನೇರವಾಗಿ ಆನ್ ಲೈನ್ ಮೂಲಕ ಮಾರಾಟ ಮಾಡಲಿದೆ. ಗ್ರಾಹಕರು ವೋಲ್ವೋ ಕಾರ್ ಇಂಡಿಯಾದಲ್ಲಿ ಆನ್ ಲೈನ್ ನಲ್ಲಿ ತಮ್ಮ ನೆಚ್ಚಿನ ವಾಹನಕ್ಕೆ ಆರ್ಡರ್ ಮಾಡಬಹುದು ಮತ್ತು ನೇರವಾಗಿ ಹಣ ಪಾವತಿ ಮಾಡಬಹುದಾಗಿದೆ. ಈ ಸೌಲಭ್ಯ ಜುಲೈ 27, 2022 ರ ಬೆಳಗ್ಗೆ 11 ಗಂಟೆಯಿಂದ ಆರಂಭವಾಗಲಿದೆ. ಗ್ರಾಹಕರು ವಾಹನ ಬುಕ್ ಮಾಡಲು 50,000 ರೂಪಾಯಿಗಳ ಮುಂಗಡ ಪಾವತಿ ಮಾಡಬೇಕು. ಈ ಹಣವನ್ನು ವಾಪಸ್ ಮಾಡಲಾಗುತ್ತದೆ.
ಕರ್ನಾಟಕದಲ್ಲಿ ವೋಲ್ವೋ ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಕಾರು ಬಿಡುಗಡೆ!
ದೇಶಾದ್ಯಂತ ಇರುವ ವೋಲ್ವೋ ಕಾರ್ ಇಂಡಿಯಾದ ವ್ಯಾಪಾರ ಪಾಲುದಾರರು ಗ್ರೌಂಡ್ ಸಪೋರ್ಟ್ ಒದಗಿಸುವ ಮೂಲಕ ಮಾರಾಟದ ವಿತರಣೆಗೆ ಗ್ರಾಹಕರಿಗೆ ನೆರವಾಗುವುದನ್ನು ಮುಂದುವರಿಸಲಿದ್ದಾರೆ. ಇದರೊಂದಿಗೆ ಕಂಪನಿಯು ಸರಳೀಕೃತವಾದ ಮತ್ತು ಪಾರದರ್ಶಕ ರೀತಿಯಲ್ಲಿ ನೇರವಾಗಿ ನೀಡುವ ಏಕರೂಪದ ಎಕ್ಸ್ ಶೋರೂಂ ಬೆಲೆಯೊಂದಿಗೆ ತನ್ನ ಗ್ರಾಹಕರಿಗೆ ಸಂಪೂರ್ಣ ಖರೀದಿ ಅನುಭವವನ್ನು ನೀಡಲಿದೆ. ಗ್ರಾಹಕ ಸೇವೆ ಮತ್ತು ಮಾರಾಟದ ನಂತರದ ಸೇವಾ ಕಾರ್ಯಾಚರಣೆ ವ್ಯವಹಾರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಕಂಪನಿಯು XC40 Recharge ಗ್ರಾಹಕರಿಗೆ `ಟ್ರೇ ಕ್ರೋನರ್ ಅನುಭವ’ ಎಂಬ ವಿಶೇಷ ಕಾರ್ಯಕ್ರಮವನ್ನು ಪರಿಚಯಿಸಿದೆ. ಈ ಟ್ರೇ-ಕ್ರೋನರ್ ಸ್ವೀಡಿಷ್ ಲಕ್ಷುರಿಯಾಗಿದ್ದು, ವಿಶಿಷ್ಟವಾದ ಐಷಾರಾಮಿ ಮತ್ತು ವೈಯಕ್ತೀಕರಿಸಿದ ಅನುಭವಗಳನ್ನು ಗ್ರಾಹಕರಿಗೆ ನೀಡುತ್ತದೆ.