Asianet Suvarna News Asianet Suvarna News

Volvo Car: ಹೊಚ್ಚ ಹೊಸ ವೋಲ್ವೋ XC90 ಮೈಲ್ಡ್-ಹೈಬ್ರಿಡ್ ಕಾರು ಬಿಡುಗಡೆ!

  • ವೋಲ್ವೋ ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಎಂಜಿನ್‌ ಕಾರು ಬಿಡುಗಡೆ
  • XC90 ಕಾರಿನ ಬೆಲೆ ಎಕ್ಸ್ ಶೋರೂಂ ಬೆಲೆ ರೂ 89,90,000 
  •  ನ್ಯಾವಿಗೇಷನ್, ಕಾರ್ ಕನೆಕ್ಟೆಡ್ ಸೇರಿದಂತೆ ಹಲವು ಫೀಚರ್ಸ್
Volvo Car India launches The New Petrol Mild Hybrid XC90 Completes transition topetrol portfolio in India ckm
Author
Bengaluru, First Published Nov 23, 2021, 9:58 PM IST

ಬೆಂಗಳೂರು(ನ.23): ವೋಲ್ವೋ ಕಾರ್ ಇಂಡಿಯಾ(Volvo car India) ಇದು ತನ್ನ ಫ್ಲಾಗ್‌ಶಿಪ್ ಐಷಾರಾಮಿ SUV- ದಿ ನ್ಯೂ ವೋಲ್ವೋ  XC90 ಯನ್ನು ಸಂಪೂರ್ಣ ಹೊಸ ಪೆಟ್ರೋಲ್ ಮೈಲ್ಡ್-ಹೈಬ್ರಿಡ್(Mild hybrid) ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದೆ. ಅಕ್ಟೋಬರ್ ತಿಂಗಳಲ್ಲಿ ಕಂಪನಿಯು ಪೆಟ್ರೋಲ್(Petrol) ಮೈಲ್ಡ್ ಹೈಬ್ರಿಡ್‌ಗಳಾದ ವೋಲ್ವೋ S90 ಮತ್ತು ವೋಲ್ವೋ  XC60  ಬಿಡುಗಡೆ ಮಾಡಿದ್ದು ಇದು ಜಾಗತಿಕವಾಗಿ ಬ್ರಾಂಡ್‌ನ ಇಂಗಾಲದ ಹೆಜ್ಜೆ ಗುರುತನ್ನು ಕಡಿಮೆ ಮಾಡುವಲ್ಲಿ ಡೀಸೆಲ್‌ನಿಂದ ಪೆಟ್ರೋಲ್ ಎಂಜಿನ್‌ಗಳಿಗೆ ಪರಿವರ್ತನೆ ಮಾಡುವ ಕಂಪನಿಯ ಬದ್ಧತೆಯನ್ನು ಪೂರ್ಣಗೊಳಿಸಿದೆ.

ಹೊಸ ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ವೋಲ್ವೋ  XC90  ಎಕ್ಸ್ ಶೋರೂಂ ಬೆಲೆ ರೂ 89,90,000  ಹೊಂದಿದೆ.  XC90  ಏಳು ಸೀಟುಗಳ ಎಸ್‌ಯುವಿಯಾಗಿದೆ(SUV Car). ಇದು ಸ್ಕೇಲಬಲ್ ಪ್ರಾಡಕ್ಟ್ ಆರ್ಕಿಟೆಕ್ಚರ್(ಎಸ್‌ಪಿಎ)ನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಕಾರು ಆಗಿದ್ದು ವೋಲ್ವೋದ ಅಡ್ವಾನ್ಸ್ಡ್ ಮಾಡ್ಯುಲರ್ ಮತ್ತು ಅತ್ಯಾಧುನಿಕ(Modern) ಉತ್ಪನ್ನದ ವಿಶೇಷತೆಗಳನ್ನು 90 ಮತ್ತು 60
ಸೀರೀಸ್‌ನ ಎಲ್ಲ ವೋಲ್ವೋ ಕಾರುಗಳಲ್ಲಿ ಹೊಂದಿದೆ. “ನ್ಯೂ  XC60  ಬಿಡುಗಡೆಯಿಂದ ನಾವು ಮೂರು ಹೊಸ ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಮಾಡೆಲ್‌ಗಳನ್ನು ಈ ತೈಮಾಸಿಕದಲ್ಲಿ ಬಿಡುಗಡೆ ಮಾಡಿದ್ದೇವೆ. ನಮ್ಮ ಬ್ರಾಂಡ್ ಮೇಲೆ ಗ್ರಾಹಕರು(Customer) ಇರಿಸಿರುವ ವಿಶ್ವಾಸವು ನಮಗೆ ತಂತ್ರಜ್ಞಾನ(Technology) ಸನ್ನದ್ಧ ಹೊಸ ಮಾದರಿಗಳನ್ನು ಬಿಡುಗಡೆ ಮಾಡಲು ಉತ್ತೇಜನ ನೀಡಿದೆ.ಈ ಬಿಡುಗಡೆಯು ಡೀಸೆಲ್‌ನಿಂದ ಪೆಟ್ರೋಲ್ ವೇರಿಯೆಂಟ್‌ಗೆ ಪರಿವರ್ತನೆಯ ನಮ್ಮ ಬದ್ಧತೆ ಪೂರ್ಣಗೊಳಿಸುತ್ತದೆ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ನಮ್ಮ ಕಾರ್ಯತಂತ್ರ ಎತ್ತಿ ತೋರುತ್ತದೆ” ಎಂದು ವೋಲ್ವೋ ಕಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಜ್ಯೋತಿ ಮಲ್ಹೋತ್ರಾ ಹೇಳಿದರು.

ಕರ್ನಾಟಕದಲ್ಲಿ ವೋಲ್ವೋ ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಕಾರು ಬಿಡುಗಡೆ!

 XC90 ಸುಧಾರಿತ ತಂತ್ರಜ್ಞಾನವು ಚಾಲಕರಿಗೆ ವೈಯಕ್ತಿಕಗೊಳಿಸಿದ ಅನುಕೂಲ ಮತ್ತು ಮೊಬಿಲಿಟಿ ಸೆಟ್ಟಿಂಗ್ ಸಾಧ್ಯವಾಗಿಸುತ್ತದೆ. ಹೆಡ್-ಅಪ್ ಡಿಸ್‌ಪ್ಲೇ ನಿಮಗೆ ನಿಮ್ಮ ವೇಗ ಗಮನಿಸಲು, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನುಸರಿಸಲು, ಫೋನ್ ಕರೆಗಳಿಗೆ ಉತ್ತರಿಸಲು ಅನುಕೂಲ ನೀಡುತ್ತದೆ. ಈ ಎಲ್ಲವೂ ರಸ್ತೆಯ ಮೇಲೆ ಗಮನ ಕಳೆದುಕೊಳ್ಳದೆ ನಿರ್ವಹಿಸಬಹುದು. XC90 ಇನ್‌ಟ್ಯೂಟಿವ್ ಟಚ್ ಸ್ಕ್ರೀನ್ ಇಂಟರ್‌ಫೇಸ್ ಹೊಂದಿದ್ದು ಅದು ಕಾರಿನ ಕಾರ್ಯಗಳು, ನ್ಯಾವಿಗೇಷನ್, ಕನೆಕ್ಟೆಡ್ ಸೇವೆಗಳು ಮತ್ತು ಇನ್-ಕಾರ್ ಎಂಟರ್‌ಟೈನ್‌ಮೆಂಟ್ ಅಪ್ಲಿಕೇಷನ್ಸ್ ಸಂಯೋಜಿಸುತ್ತದೆ.

ಆಟೊಮೋಟಿವ್ ಸೇಫ್ಟಿಯಲ್ಲಿ ವೋಲ್ವೋದ ನಾಯಕತ್ವವು  XC90 ಯಲ್ಲಿ ಸಂಯೋಜನೆಗೊಂಡಿದೆ. SPA ಪ್ಲಾಟ್‌ಫಾರಂ ಅದರ ಬೊರೊನ್ ಉಕ್ಕಿನ ಬಳಕೆ ಮತ್ತು ಕಾರಿನ ಒಳಗಡೆ ಮತ್ತು ಹೊರಗಡೆ ಜನರನ್ನು ರಕ್ಷಿಸಲು ವಿನ್ಯಾಸಗೊಳಿಸಿದ ಅಸಂಖ್ಯ ಸುರಕ್ಷತೆಯ ವ್ಯವಸ್ಥೆಗಳಿಂದ ಅತ್ಯಂತ ಸದೃಢ ವೋಲ್ವೋ ಕಾರುಗಳಲ್ಲಿ ಒಂದನ್ನಾಗಿಸಿದೆ. S90 ಮತ್ತು  XC60  ಮೈಲ್ಡ್ ಹೈಬ್ರಿಡ್‌ಗಳಲ್ಲಿ ನೀಡಲಾದ ಆಯ್ಕೆಗಳಂತೆ ಕಂಪನಿಯು 3ವರ್ಷಗಳ ವೋಲ್ವೋ ಸರ್ವೀಸ್ ಪ್ಯಾಕೇಜ್ ಅನ್ನು ವಿಶೇಷ ದರ ರೂ 25,000 ಪ್ಲಸ್ ಅನ್ವಯಿಸಬಲ್ಲ ತೆರಿಗೆಗಳೊಂದಿಗೆ ನೀಡುತ್ತಿದೆ. ಇದನ್ನು ಹೊಸದಾಗಿ ಬಿಡುಗಡೆ ಮಾಡಲಾದ ಮೈಲ್ಡ್-ಹೈಬ್ರಿಡ್ ಕಾರುಗಳಲ್ಲಿ ಕೊಳ್ಳಬಹುದು. ಇದು ಪ್ರಸ್ತುತ ಹಬ್ಬದ ಋತುವಿಗೆ ಮಾತ್ರ ಲಭ್ಯವಿರುವ ಪ್ರಾರಂಭಿಕ ಕೊಡುಗೆಯಾಗಿದ್ದು ಅದು ನಿಯಮಿತ ಮೇಂಟೆನೆನ್ಸ್ ಮತ್ತು ವೇರ್ ಅಂಡ್ ಟೇರ್ ವೆಚ್ಚವನ್ನು 3 ವರ್ಷಗಳು ಮೇಲ್ಪಟ್ಟು ನೀಡುತ್ತದೆ.

ಮಾಜಿ ಪ್ರಧಾನಿ ದೇವೇಗೌಡರಿಗೆ ಸರ್ಕಾರ ನೀಡಿದ ವೋಲ್ವೋ ಕಾರಿನ ವಿಶೇಷತೆ ಏನು?

ಭಾರತದಲ್ಲಿ ವೋಲ್ವೋ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಐಷಾರಾಮಿ ಕಾರುಗಳ ಪೈಕಿ ವೋಲ್ವೋ ಇತರ ಕಾರುಗಳಿಗೆ ಪೈಪೋಟಿ ನೀಡುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಗರಿಷ್ಠ ವೋಲ್ವೋ ಕಾರುಗಳು ಮಾರಾಟವಾಗುತ್ತಿದೆ. ಇತ್ತ ಭಾರತದಲ್ಲಿ ಐಷಾರಾಮಿ ಹಾಗೂ ಗರಿಷ್ಠ ಸುರಕ್ಷತೆಗೆ ಅದ್ಯತೆ ನೀಡುವ ವೋಲ್ವೋ ಕಾರು ತನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ. 
 

Follow Us:
Download App:
  • android
  • ios