ಕರ್ನಾಟಕದಲ್ಲಿ ವೋಲ್ವೋ ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಕಾರು ಬಿಡುಗಡೆ!

  • ಮೈಲ್ಡ್ ಹೈಬ್ರಿಡ್ ಕಾರು ಬಿಡುಗಡೆ ಮಾಡಿದ ವೋಲ್ವೋ ಇಂಡಿಯಾ
  • ಕರ್ನಾಟಕದಲ್ಲಿ S90 ಹಾಗೂ ಲಕ್ಷುರಿ SUV Xc60 ಕಾರು ಬಿಡುಗಡೆ
  •  ರಾಡಾರ್‌, ಕ್ಯಾಮರಾಗಳು ಮತ್ತುಅಲ್ಟ್ರಾಸಾನಿಕ್ ಸೆನ್ಸಾರ್ ತಂತ್ರಜ್ಞಾನ
Volvo Car India launches Petrol Mild Hybrids in Karnataka ckm

ಬೆಂಗಳೂರು(ಅ.25): ಐಷಾರಾಮಿ, ಆರಾಮದಾಯಕ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನದ ಕಾರುಗಳಿಗೆ ವೋಲ್ವೋ ಇಂಡಿಯಾ ಹೆಸರುವಾಸಿ. ಇದೀಗ ವೋಲ್ವೋ ಇಂಡಿಯಾ ಕರ್ನಾಟಕದಲ್ಲಿ ಎರಡು ಪೆಟ್ರೋಲ್ ಹೈಬ್ರಿಡ್ ಕಾರು ಬಿಡುಗಡೆ ಮಾಡಿದೆ. ಲಕ್ಷುರಿ ಸೆಡಾನ್ S90 ಹಾಗೂ ಲಕ್ಷುರಿ SUV Xc60 ಬಿಡುಗಡೆ ಮಾಡಿದೆ.  

ಎಲೆಕ್ಟ್ರಿಕ್ ಕಾರು ತಯಾರಿಯಲ್ಲಿ ವೋಲ್ವೋ: 2021ರಿಂದ ಕೇವಲ ಹೈಬ್ರಿಡ್, ಎಲೆಕ್ಟ್ರಿಕ್ ಕಾರು ಮಾರಾಟ!

ನೂತನ ವೋಲ್ಪೋ  ಲಕ್ಷುರಿ ಸೆಡಾನ್ S90 ಕಾರಿನ ಬೆಲೆ 61,90,000 ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಪೆಟ್ರೋಲ್ ಮೈಲ್ಡ್ ಹೈಬ್ರಿಡ್  SUV Xc60 ಕಾರಿನ ಬೆಲೆ  61,90,000 ರೂಪಾಯಿ(ಎಕ್ಸ್ ಶೋ ರೂಂ).  ಈ ಎರಡೂ ಮಾಡೆಲ್‌ಗಳು ವೋಲ್ವೋ ಚಾಲನೆಯ ಅನುಭವ ಹೆಚ್ಚಿಸಲು ಸುಧಾರಿತ ವಿಶೇಷತೆಗಳೊಂದಿಗೆ ಬಂದಿವೆ. ಗೂಗಲ್ ಆ್ಯಪ್ ಮತ್ತು ಇತರೆ ಆ್ಯಪ್‌ಗೆ ಸಪೂರ್ಟ್ ಮಾಡುವ ಡಿಜಿಟಲ್ ಸರ್ವೀಸ್ ನೀಡಲಿದೆ.  ಮುಂದಿನ  ತಲೆಮಾರಿನ ಇನ್ಫೊಟೈನ್‌ಮೆಂಟ್ ಸಿಸ್ಟಂ ಹೊಂದಿದ್ದು, ಕನೆಕ್ಟಿವಿಟಿ ಫೀಚರ್ಸ್ ಹೊಂದಿದೆ.

ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಕಾರುಗಳು ಹೊಸ ತಂತ್ರಜ್ಞಾನ ಹೊಂಂದಿದೆ. 3 ವರ್ಷಗಳ ವೋಲ್ವೋ ಸರ್ವೀಸ್ ಪ್ಯಾಕೇಜ್ ಅನ್ನು ಕೇವಲ ರೂ25,000  ರೂಪಾಯಿಗೆ ನೀಡುತ್ತಿದೆ(ತೆರಿಗೆ ಹೊರತುಪಡಿಸಿ) ಈ ಸೌಲಭ್ಯವನ್ನು ಹೊಸದಾಗಿ ಬಿಡುಗಡೆಯಾಗಿರುವ ಕಾರುಗಳ ಜೊತೆ ಪಡೆಯಲು ಸಾಧ್ಯವಿದೆ.  ಇದು ಪ್ರಾರಂಭಿಕ ಕೊಡುಗೆಯಾಗಿದ್ದು, ಸದ್ಯ ಹಬ್ಬದ ಸಂದರ್ಭಕ್ಕೆ ಅನ್ವಯವಾಗಲಿದೆ.  

ಮಾಜಿ ಪ್ರಧಾನಿ ದೇವೇಗೌಡರಿಗೆ ಸರ್ಕಾರ ನೀಡಿದ ವೋಲ್ವೋ ಕಾರಿನ ವಿಶೇಷತೆ ಏನು?

“ಕರ್ನಾಟಕ ನಮಗೆ ಬಹಳ ಮುಖ್ಯವಾದ ಮಾರುಕಟ್ಟೆಯಾಗಿದೆ. ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಟ್ರೋ ನಗರಗಳಲ್ಲಿ ಒಂದಾಗಿದೆ.  ಸಿಲಿಕಾನ್ ನಗರ ಅನುಕೂಲಸ್ಥ ಕುಟುಂಬಗಳ ನೆಲೆಯಾಗಿದೆ. ವೋಲ್ವೋ ಕಾರುಗಳು ತನ್ನ ಗ್ರಾಹಕರಿಗೆ ಈ ವರ್ಗದ ಅತ್ಯುತ್ತಮ ಅನುಭವ ನೀಡುತ್ತವೆ ಮತ್ತು ಇಡೀ ಗ್ರಾಹಕರ ಪ್ರಯಾಣದಾದ್ಯಂತ ಅತ್ಯುನ್ನತ ಗ್ರಾಹಕ ಅನುಭವ ನೀಡುತ್ತದೆ. ಕರ್ನಾಟಕದ ಲಕ್ಷುರಿ ಮೊಬಿಲಿಟಿ ಗ್ರಾಹಕರು ಸದಾ ಸುರಕ್ಷತೆ ಫೀಚರ್ಸ್ ಕುರಿತು ಆಸಕ್ತರಾಗಿರುತ್ತಾರೆ. ಮತ್ತು ಹೊಸ ಕೊಡುಗೆಗಳೊಂದಿಗೆ ಸನ್ನದ್ಧವಾದ ತಂತ್ರಜ್ಞಾನವು ಉತ್ಸಾಹಕರವಾಗಿದೆ ಎಂಬ ವಿಶ್ವಾಸ ನಮ್ಮದು ಎಂದು ವೋಲ್ವೋ ಕಾರ್ ಇಂಡಿಯಾದ ಗ್ರಾಹಕ ಸೇವೆಯ ನಿರ್ದೇಶಕ ಕಲ್ಪಿತ್ ಸಿಸೋಡಿಯಾ ಹೇಳಿದರು.

ವೋಲ್ವೋ ಕಾರು ಗೂಗಲ್‌ನೊಂದಿಗೆ ಸಹಯೋಗ ಹೊಂದಿದೆ, ಆ್ಯಂಡ್ರಾಯ್ಡ್‌ನಿಂದ ಗೂಗಲ್ ಆ್ಯಪ್ ಮತ್ತು ಇನ್ಫೋಟೈನ್ಮೆಂಟ್ ಸಿಸ್ಟಂ ಕನೆಕ್ಟಿಟಿವಿ ಹೊಂದಿದೆ.  ವೋಲ್ವೋ ಸುಧಾರಿತ ಫೀಚರ್‌ಗಳಿಂದ ಕಾರು ಬಳಕೆದಾರರ ಸುರಕ್ಷತೆ ಮತ್ತು ಸುಸ್ಥಿರತೆಗೆ ಬದ್ಧವಾಗಿದೆ. S90 ಪ್ರೀಮಿಯಂ,4 ಡೋರ್, 5 ಸೀಟ್ ಫ್ಲಾಗ್‌ಶಿಪ್ ಸೆಡಾನ್ ಆಗಿದೆ.  ಸ್ಕೇಲಬಲ್ ಪ್ರಾಡಕ್ಟ್ ಆರ್ಕಿಟೆಕ್ಚರ್(ಎಸ್‌ಪಿಎ), ವೋಲ್ವೋದ ಸುಧಾರಿತ ಮಾಡ್ಯುಲರ್ ವೆಹಿಕಲ್ ಪ್ಲಾಟ್‌ಫಾರಂ ಮೂಲಕ ನಿರ್ಮಿಸಲಾಗಿದೆ.

2018ರಲ್ಲಿ ವರ್ಲ್ಡ್ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಗಳಿಸಿದ ಅತ್ಯಂತ ಜನಪ್ರಿಯ Xc60  ಈಗ ವೋಲ್ವೋ ಕಾರುಗಳ ಅತ್ಯಾಧುನಿಕ ಅಡ್ವಾನ್ಸ್ಡ್ ಡೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ ಸೆನ್ಸರ್ ಪ್ಲಾಟ್‌ಫಾರಂ ಹೊಂದಿದೆ.  ಆಧುನಿಕ ಹಾಗೂ ವಿಸ್ತರಿಸಬಲ್ಲ ಸುರಕ್ಷತೆಯ ವ್ಯವಸ್ಥೆಯಾಗಿದ್ದು ರಾಡಾರ್‌ಗಳು, ಕ್ಯಾಮರಾಗಳು ಮತ್ತುಅಲ್ಟ್ರಾಸಾನಿಕ್ ಸೆನ್ಸಾರ್ ಹೊಂದಿದೆ.

Latest Videos
Follow Us:
Download App:
  • android
  • ios