ಉತ್ತರಾಖಂಡದಲ್ಲಿ ಚಲಿಸುತ್ತಿದ್ದ ಟಾಟಾ ಸಿಯೆರಾ ಕಾರಿನ ಮೇಲೆ ಭಾರಿ ತೂಕದ ಕಂಟೇನರ್ ಉರುಳಿಬಿದ್ದರೂ, ಕಾರಿನ ಬಲವಾದ ವಿನ್ಯಾಸದಿಂದಾಗಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯು ಟಾಟಾ ಕಾರುಗಳ 5-ಸ್ಟಾರ್ ಸುರಕ್ಷತೆ ಮತ್ತು ಗಟ್ಟಿಮುಟ್ಟಾದ ಗುಣಮಟ್ಟವನ್ನು ಸಾಬೀತುಪಡಿಸಿದೆ.
ನವದೆಹಲಿ (ಅ.10): ಉತ್ತರಾಖಂಡದ ಪ್ರಮುಖ ಹೆದ್ದಾರಿಯಲ್ಲಿ ಶನಿವಾರ ಭೀಕರ ಅಪಘಾತವೊಂದು ಸಂಭವಿಸಿದ್ದು, ಚಲಿಸುತ್ತಿದ್ದ ಬಿಳಿ ಬಣ್ಣದ 'ಟಾಟಾ ಸಿಯೆರಾ' (Tata Sierra) ಎಸ್‌ಯುವಿ ಕಾರಿನ ಮೇಲೆ ಭಾರಿ ತೂಕದ ಸರಕು ಸಾಗಣೆ ಕಂಟೇನರ್ (Freight Container) ದಿಢೀರನೆ ಉರುಳಿಬಿದ್ದಿದೆ. ಆದರೆ, ಅತ್ಯಂತ ಅಚ್ಚರಿಯ ರೀತಿಯಲ್ಲಿ ಟಾಟಾ ಸಿಯೆರಾ ಕಾರಿನ ಪಿಲ್ಲರ್‌ಗಳು ಮತ್ತು ಬಾಡಿ ಸ್ಟ್ರಕ್ಚರ್ ಬಲವಾಗಿ ನಿಂತ ಕಾರಣ, ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಅಪಘಾತದ ದೃಶ್ಯಗಳು ಸೋಶಿಯಲ್‌ಮ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಟಾಟಾ ಸಂಸ್ಥೆಯ ಕಾರುಗಳ ಸುರಕ್ಷತೆ ಮತ್ತು 'ದೇಶ್ ಕಾ ಲೋಹಾ' (Desh Ka Loha) ಬಿಲ್ಡ್ ಕ್ವಾಲಿಟಿಗೆ ಸಾರ್ವಜನಿಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅಪಘಾತದ ಸಂಭವಿಸಿದ್ದು ಹೇಗೆ?
ಟ್ರೇಲರ್ ಲಾರಿಯೊಂದರಿಂದ ಲಗೇಜ್ ಹೊತ್ತ ಭಾರಿ ತೂಕದ ಮೆಟಲ್ ಕಂಟೇನರ್ ದಿಢೀರನೆ ಕಳಚಿಬಿದ್ದು, ಪಕ್ಕದಲ್ಲಿದ್ದ ಟಾಟಾ ಸಿಯೆರಾ ಕಾರಿನ ಮೇಲೆ ನೇರವಾಗಿ ಬಿದ್ದಿದೆ. ತೀವ್ರ ತೂಕದ ಲೋಹದ ಕಂಟೇನರ್ ಬಿದ್ದ ರಭಸಕ್ಕೆ ಕಾರಿನ ರೂಫ್ (ಮೇಲ್ಛಾವಣಿ) ಭಾಗ ಕೊಂಚ ಮುದುಡಿಕೊಂಡಿದ್ದು (Structural compression), ಸುತ್ತಲಿನ ಗ್ಲಾಸ್‌ಗಳು ಬಿರುಕು ಬಿಟ್ಟಿವೆ. ಆದಾಗ್ಯೂ, ಕಾರಿನ ಪ್ರಮುಖ ಸೈಡ್ ಪಿಲ್ಲರ್‌ಗಳು ಕಂಟೇನರ್‌ನ ಸಂಪೂರ್ಣ ತೂಕವನ್ನು ತಡೆದು ನಿಲ್ಲಿಸಿವೆ. ಭಾರಿ ತೂಕದ ಮೆಟಲ್ ಕಂಟೇನರ್ ಕೂಡ ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ತೀವ್ರವಾಗಿ ನುಜ್ಜುಗುಜ್ಜಾಗಿದೆ. ಅಪಘಾತ ಎಷ್ಟು ಭೀಕರವಾಗಿದ್ದರೂ, ಕಾರಿನ ಇಂಟರ್ನಲ್ ಕ್ಯಾಬಿನ್ ವಿನ್ಯಾಸವು ತನ್ನ ಆಕಾರವನ್ನು ಕಳೆದುಕೊಳ್ಳದೆ ಬಲವಾಗಿ ನಿಂತಿದ್ದರಿಂದ, ಒಳಗಿದ್ದ ಪ್ರಯಾಣಿಕರು ಸುರಕ್ಷಿತವಾಗಿ ಹೊರಬರಲು ಸಾಧ್ಯವಾಗಿದೆ.
ಟಾಟಾ ಸಿಯೆರಾ ಗಟ್ಟಿಮುಟ್ಟಾದ ವಿನ್ಯಾಸ ಮತ್ತು ಪಿಲ್ಲರ್‌ಗಳು
ಟಾಟಾ ಸಿಯೆರಾ ಎಸ್‌ಯುವಿಯನ್ನು ಹೈ-ಸ್ಟ್ರೆಂತ್ ಸ್ಟೀಲ್ (High-Strength Steel) ಹಾಗೂ ಆಧುನಿಕ ಪ್ಲಾಟ್‌ಫಾರ್ಮ್ ಆಕಿಟೆಕ್ಚರ್ ಬಳಸಿ ನಿರ್ಮಿಸಲಾಗಿದೆ. ಕಾರಿನ ಬಾಡಿಯನ್ನು ಶಕ್ತಿಶಾಲಿ ಉಕ್ಕಿನಿಂದ ತಯಾರಿಸಲಾಗಿದ್ದು, ಮುಂಭಾಗದ 'ಕ್ರಂಪಲ್ ಜೋನ್‌ಗಳು' ಅಪಘಾತದ ತೀವ್ರತೆಯ ಭಾರಿ ಶಕ್ತಿಯನ್ನು ಕ್ಯಾಬಿನ್‌ಗೆ ತಲುಪದಂತೆ ತಡೆದು ಹೀರಿಕೊಳ್ಳುತ್ತವೆ. ಕಾರಿನ ಎ, ಬಿ, ಮತ್ತು ಸಿ ಪಿಲ್ಲರ್‌ಗಳನ್ನು ದಪ್ಪನೆಯ ಹೈ-ಟೆನ್ಸೈಲ್ ಸ್ಟೀಲ್‌ನಿಂದ ಬಲಪಡಿಸಲಾಗಿದೆ. ಬಿಎನ್‌ಸಿಎಪಿ (BNCAP) 50 ಕಿ.ಮೀ ವೇಗದ ಸೈಡ್ ಇಂಪ್ಯಾಕ್ಟ್ ಪರೀಕ್ಷೆಯಲ್ಲೂ ಸಹ ಈ ಪಿಲ್ಲರ್‌ಗಳು ಕ್ಯಾಬಿನ್ ಒಳಗೆ ಹಾನಿಯಾಗದಂತೆ ತಡೆದು, ತುರ್ತು ಸಮಯದಲ್ಲಿ ಬಾಗಿಲುಗಳು ಸುಲಭವಾಗಿ ತೆರೆಯುವಂತೆ ವಿನ್ಯಾಸಗೊಳಿಸಲಾಗಿದೆ.
ಭಾರತ್ NCAP ನಲ್ಲೂ 5-ಸ್ಟಾರ್ ಸೇಫ್ಟಿ ರೇಟಿಂಗ್!
ಟಾಟಾ ಸಿಯೆರಾ ಕಾರು ಭಾರತೀಯ ವಾಹನ ಸುರಕ್ಷತಾ ಪರೀಕ್ಷೆಯಾದ 'ಭಾರತ್ NCAP' (BNCAP) ನಲ್ಲಿ ಪೂರ್ಣ 5-ಸ್ಟಾರ್ (5-Star Safety Rating) ಸುರಕ್ಷತಾ ರೇಟಿಂಗ್ ಗಳಿಸಿದೆ. ಈ ಕಾರಿನ ಎಲ್ಲಾ ವೇರಿಯೆಂಟ್‌ಗಳು ಹಾಗೂ ಇಂಧನ ಮಾದರಿಗಳಿಗೂ ಈ 5-ಸ್ಟಾರ್ ರೇಟಿಂಗ್ ಅನ್ವಯವಾಗುತ್ತದೆ. ಹಿರಿಯರ ಸುರಕ್ಷತೆ ಅಂಶದಲ್ಲಿ ಒಟ್ಟು 32 ಅಂಕಗಳಿಗೆ ಬರೋಬ್ಬರಿ 31.14 ಅಂಕಗಳನ್ನು ಪಡೆದುಕೊಂಡಿದೆ. ಮುಂಭಾಗದ ಕ್ರ್ಯಾಶ್ ಪರೀಕ್ಷೆಯಲ್ಲಿ 15.14/16 ಹಾಗೂ ಸೈಡ್ ಇಂಪ್ಯಾಕ್ಟ್ ಪರೀಕ್ಷೆಯಲ್ಲಿ ಪೂರ್ಣ 16/16 ಅಂಕ ಗಳಿಸಿದೆ. ಮಕ್ಕಳ ಸುರಕ್ಷತೆ ವಿಚಾರದಲ್ಲಿ ಒಟ್ಟು 49 ಅಂಕಗಳಿಗೆ 44.73 ಅಂಕಗಳನ್ನು ಗಳಿಸಿದೆ. ಪ್ರತೀಯೊಂದು ಕಾರಿನಲ್ಲೂ ಸರಣಿ ಸೌಲಭ್ಯವಾಗಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟ್ರ್ಯಾಕ್ಷನ್ ಕಂಟ್ರೋಲ್ ಹಾಗೂ ಪಾದಚಾರಿಗಳ ಸುರಕ್ಷತಾ ವ್ಯವಸ್ಥೆಯನ್ನು ಕಡ್ಡಾಯವಾಗಿ ನೀಡಲಾಗಿದೆ.
ಟಾಟಾ ಸಿಯೆರಾ ಪ್ರಮುಖ ಪ್ರೀಮಿಯಂ ಫೀಚರ್‌ಗಳು
1991ರ ಐಕಾನಿಕ್ ಮಾಡೆಲ್‌ನ ವಿನ್ಯಾಸವನ್ನೇ ಆಧುನಿಕವಾಗಿ ಮರುಸೃಷ್ಟಿಸಿರುವ ಸಿಯೆರಾ, ತಾಂತ್ರಿಕವಾಗಿಯೂ ಅತ್ಯಂತ ಮುಂಚೂಣಿಯಲ್ಲಿದೆ:
- ತ್ರಿಪಲ್ ಸ್ಕ್ರೀನ್ ಡ್ಯಾಶ್‌ಬೋರ್ಡ್: ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸೆಂಟ್ರಲ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಹಾಗೂ ಫ್ರಂಟ್ ಪ್ಯಾಸೆಂಜರ್‌ಗೆ ಪ್ರತ್ಯೇಕ ಡಿಸ್ಪ್ಲೇ ಒಳಗೊಂಡ ಪ್ರೀಮಿಯಂ ಡ್ಯಾಶ್‌ಬೋರ್ಡ್.
- ಐಷಾರಾಮಿ ಸೌಲಭ್ಯಗಳು: ಬೃಹತ್ ಪ್ಯಾನೊರಾಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಡ್ಯುಯಲ್-ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಹಾಗೂ 'ಡಾಲ್ಬಿ ಅಟ್ಮಾಸ್' ಹೊಂದಿರುವ ಜಿಬಿಎಲ್ (JBL) ಆಡಿಯೋ ಸಿಸ್ಟಮ್.
- ಅಡ್ವಾನ್ಸ್ಡ್ ಆಡಾಸ್ (ADAS Level 2+): ಟಾಪ್ ಆವೃತ್ತಿಗಳಲ್ಲಿ 22 ಸುರಕ್ಷತಾ ಸೌಲಭ್ಯಗಳಿರುವ 'ಲೆವೆಲ್ 2+ ಆಡಾಸ್' ತಂತ್ರಜ್ಞಾನ, 360-ಡಿಗ್ರಿ ಹೆಚ್‌ಡಿ ಕ್ಯಾಮೆರಾ ಮತ್ತು ಅಗ್‌ಮೆಂಟೆಡ್ ರಿಯಾಲಿಟಿ (AR) ಹೆಡ್-ಅಪ್ ಡಿಸ್ಪ್ಲೇ.
- ಬೂಟ್ ಸ್ಪೇಸ್: ಪ್ರಯಾಣಿಕರ ಲಗೇಜ್‌ಗಾಗಿ ಬರೋಬ್ಬರಿ 622 ಲೀಟರ್ ವಿಶಾಲವಾದ ಬೂಟ್ ಕೆಪಾಸಿಟಿ ಹೊಂದಿದೆ.
ಪ್ರಸ್ತುತ ರಸ್ತೆಯಲ್ಲಿ ಸಂಭವಿಸಿದ ಈ ಅನಿರೀಕ್ಷಿತ ಅಪಘಾತವು, ಟಾಟಾ ಸಿಯೆರಾ ಕಾರಿನ ನೈಜ ಸುರಕ್ಷತೆ ಮತ್ತು ಗಟ್ಟಿಮುಟ್ಟಾದ ವಿನ್ಯಾಸಕ್ಕೆ ಸಾಕ್ಷಿಯಾಗಿದೆ.


