India safest cars ಕೈಗೆಟುಕುವ ದರದಲ್ಲಿ ಬಿಡುಗಡೆಯಾದ ವರ್ಷದ ಬೆಸ್ಟ್ ಸೇಫ್ಟಿ ಕಾರು ಲಿಸ್ಟ್!
- 2021ರಲ್ಲಿ ಬಿಡುಗಡೆಯಾದ ಕಡಿಮೆ ಬೆಲೆಯ ಅತ್ಯುತ್ತಮ ಸೇಫ್ ಕಾರು ಯಾವುದು?
- ಗರಿಷ್ಠ ಸುರಕ್ಷತೆ ಕಾರಿನಲ್ಲಿ ಭಾರತದ ಆಟೋಮೊಬೈಲ್ ಕಂಪನಿಗಳೇ ಟಾಪ್
- ಗರಿಷ್ಠ ಸೇಫ್ಟಿ ಲಿಸ್ಟ್‌ನಲ್ಲಿ ಟಾಟಾ ಹಾಗೂ ಮಹೀಂದ್ರ ಕಾರು
ಬೆಂಗಳೂರು(ಡಿ.12): ಭಾರತದಲ್ಲಿ ಹಲವು ಆಟೋಮೊಬೈಲ್ ಕಂಪನಿಗಳು(Automobile) ಕಾರುಗಳು ಲಭ್ಯವಿದೆ. ಅತೀ ಕಡಿಮೆ ಬೆಲೆಯಿಂದ ದುಬಾರಿ ಬೆಲೆಯ ಕಾರುಗಳಿಗೆ(Cars) ಭಾರತ ಅತ್ಯುತ್ತಮ ಮಾರುಕಟ್ಟೆಯಾಗಿದೆ. ಆದರೆ ಸದ್ಯ ಗ್ರಾಹಕರ ಕೇವಲ ಬೆಲೆ, ಮೈಲೇಜ್ ಮಾತ್ರ ನೋಡುತ್ತಿಲ್ಲ, ಸುರಕ್ಷತೆಗೂ ಆದ್ಯತೆ ನೀಡುತ್ತಾರೆ. 2021ರಲ್ಲಿ ಭಾರತದಲ್ಲಿ ಹಲವು ಕಾರುಗಳು ಬಿಡುಗಡೆಯಾಗಿದೆ. ಇದರಲ್ಲಿ ಕೈಗೆಟುಕುವ ದರದಲ್ಲಿ ಬಿಡುಗಡೆಯಾದ ಕಾರುಗಳ ಪೈಕಿ ಅತ್ಯಂತ ಸುರಕ್ಷತೆ ಕಾರುಗಳ(safety cars) ಲಿಸ್ಟ್ ಇಲ್ಲಿದೆ.
ಭಾರತದಲ್ಲಿ ಕಾರಿನ ಸುರಕ್ಷತಾ ಪ್ರಮಾಣವನ್ನು ಗ್ಲೋಬಲ್ NCAP ಅಳೆಯುತ್ತದೆ. ಹಲವು ಪರೀಕ್ಷೆಗಳ ಮೂಲಕ ಭಾರತದಲ್ಲಿ ಕಾರಿನ ಸುರಕ್ಷತೆ ಎಷ್ಟಿದೆ ಅನ್ನೋ ಪ್ರಮಾಣ ಪತ್ರ ನೀಡುತ್ತದೆ. ಹೀಗೆ ಗ್ಲೋಬಲ್ NCAP ಪರೀಕ್ಷೆಯಲ್ಲಿ ಗರಿಷ್ಠ ಸ್ಟಾರ್ ಪಡೆಯುವ ಮೂಲಕ ಕೆಲ ಕಾರುಗಳು ಭಾರತದ ಅತ್ಯಂತ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
Top 5 SUV cars ಟಾಟಾ ಪಂಚ್ to ಮಹೀಂದ್ರ XUV700,ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಕಾರು!
ಟಾಟಾ ಪಂಚ್:
ಟಾಟಾ ಮೋಟಾರ್ಸ್(Tata Motors) ಸುರಕ್ಷತೆಯಲ್ಲಿ ರಾಜಿ ಮಾಡಿಕೊಂಡಿಲ್ಲ. ಟಾಟಾದ ಎಲ್ಲಾ ಕಾರುಗಳು ಗರಿಷ್ಠ ಸುರಕ್ಷತೆ ರೇಟಿಂಗ್ ಪಡೆದಿದೆ. 2021ರಲ್ಲಿ ಬಿಡುಗಡೆಯಾದ ಟಾಟಾ ಕಾರಿನಲ್ಲಿ ಟಾಟಾ ಪಂಚ್(tata punch) ಮೈಕ್ರೋ SUV ಕಾರು 5 ಸ್ಟಾರ್ ರೇಟಿಂಗ್ ಪಡೆದಿದೆ. ಗ್ಲೋಬಲ್ NCAP ಸುರಕ್ಷತಾ ಪರೀಕ್ಷೆಯಲ್ಲಿ ಟಾಟಾ ಪಂಚ್ ವಯಸ್ಕರ ಪ್ರಯಾಣ ಸೇಫ್ಟಿಯಲ್ಲಿ 17 ಅಂಕಗಳ ಪೈಕಿ 16.45 ಅಂಕಗಳನ್ನು ಪಡೆದಿಕೊಂಡಿದೆ. ಇನ್ನು ಮಕ್ಕಳ ಪ್ರಯಾಣ ಸುರಕ್ಷತೆಯಲ್ಲಿ 49 ಅಂಕಗಳ ಪೈಕಿ 40.89 ಅಂಕಗಳನ್ನು ಪಡೆದುಕೊಂಡಿದೆ. ಒಟ್ಟಾರೆ ಗರಿಷ್ಠ ರೇಟಿಂಗ್ 5 ಸ್ಟಾರ್ ಪಡೆದುಕೊಂಡಿದೆ. ಗ್ಲೋಬಲ್ NCAP ಟಾಟಾ ಪಂಚ್ ಬೇಸ್ ಮಾಡೆಲ್ ಕಾರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಟಾಟಾ ಪಂಚ್ ಕಾರಿನ ಬೆಲೆ 5.49 ಲಕ್ಷ ರೂಪಾಯಿಂದ 9.39 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) .
ಮಹೀಂದ್ರ XUV700
ಗರಿಷ್ಠ ಸುರಕ್ಷತೆಯ ಕಾರುಗಳನ್ನು ಬಿಡುಗಡೆ ಮಾಡುತ್ತಿರುವ ಮತ್ತೊಂದು ಆಟೋಮೊಬೈಲ್ ಕಂಪನಿ ಮಹೀಂದ್ರ(Mahindra). ಟಾಟಾ ಹಾಗೂ ಮಹೀಂದ್ರ ಎರಡೂ ಕಂಪನಿಗಳು ಭಾರತದ ಹೆಮ್ಮೆಯ ಆಟೋಮೊಬೈಲ್ ಕಂಪನಿಗಳು ಅನ್ನೋದು ಮತ್ತೊಂದು ವಿಶೇಷ. ಇತ್ತೀಗೆ ಬಿಡುಗಡೆಯಾದ ಮಹೀಂದ್ರ XUV700 ಕಾರು 5 ಸ್ಟಾರ್ ರೇಟಿಂಗ್ ಪಡೆದಿದೆ. 7 ಸೀಟರ್ ಕಾರು ಇದಾಗಿದ್ದು, ಗ್ಲೋಬಲ್ NCAP ಸುರಕ್ಷತಾ ಪರೀಕ್ಷೆಯಲ್ಲಿ ಓಟ್ಟು 49 ಅಂಕಗಳ ಪೈಕಿ 41.66 ಸ್ಕೋರ್ ಪಡೆದುಕೊಂಡಿದೆ. ವಯಸ್ಕರ ಸುರಕ್ಷತೆಯಲ್ಲಿ ಮಹೀಂದ್ರ XUV700 ಕಾರು ಒಟ್ಟು 17 ಅಂಕಗಳ ಪೈಕಿ 16.03 ರೇಟಿಂಗ್ ಪಡೆದಿದೆ. 2021ರಲ್ಲಿ ಬಿಡುಗಡೆಯಾದ ಕಾರುಗಳ ಪೈಕಿ ಭಾರಿ ಸಂಚಲನ ಸೃಷ್ಟಿಸಿದ ಈ ಕಾರು ಸುರಕ್ಷತೆಯಲ್ಲೂ ಮುಂಚೂಣಿಯಲ್ಲಿದೆ. ಮಹೀಂದ್ರ XUV700 ಕಾರಿನ ಬೆಲೆ 12.49 ಲಕ್ಷ ರೂಪಾಯಿಂದ 20.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
Tata discount offers: ಡಿಸೆಂಬರ್ ತಿಂಗಳ ಆಫರ್ ಘೋಷಿಸಿದ ಟಾಟಾ, ಆಯ್ದ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್!
ಟಾಟಾ ಟಿಗೋರ್ ಎಲೆಕ್ಟ್ರಿಕ್:
2021ರಲ್ಲಿ ಬಿಡುಗಡೆಯಾದ ಕಾರುಗಳ ಪೈಕಿ ಗರಿಷ್ಠ ಸುರಕ್ಷತೆ ನೀಡುವ ಕಾರು ಟಾಟಾ ಟಿಗೋರ್ ಎಲೆಕ್ಟ್ರಿಕ್(Tata Tigor EV) ಕಾರು. ಮತ್ತೊಂದು ವಿಶೇಷ ಅಂದರೆ ಭಾರತದಲ್ಲಿ ಕೈಗೆಟುಕುವ ದರದಲ್ಲಿ ಲಭ್ಯವಿರುವ ಅತ್ಯುತ್ತಮ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಟಾಟಾ ಟಿಗೋರ್‌ಗಿದೆ. ಗ್ಲೋಬಲ್ NCAP ಪರೀಕ್ಷೆ ಒಳಪಟ್ಟ ಹಾಗೂ ಗರಿಷ್ಠ ಸುರಕ್ಷತೆ ರೇಟಿಂಗ್ ಪಡೆದ ಭಾರತದ ಮೊದಲ ಎಲೆಕ್ಟ್ರಿಕ್ ಕಾರು ಟಾಟಾ ಟಿಗೋರ್ EV. ಟಿಗೋರ್ ಎಲೆಕ್ಟ್ರಿಕ್ ಕಾರು ವಯಸ್ಕರ ಸುರಕ್ಷತೆಯಲ್ಲಿ ಒಟ್ಟು 17 ಅಂಕಗಳ ಪೈಕಿ 12 ಅಂಕ ಸಂಪಾದಿಸಿದೆ. ಇನ್ನು ಮಕ್ಕಳ ಸುರಕ್ಷತೆಯಲ್ಲಿ ಒಟ್ಟು 49 ಅಂಕಗಳ ಪೈಕಿ 37.24 ಅಂಕಗಳಿಸಿದೆ. ಒಟ್ಟಾರೆ 5 ಸ್ಟಾರ್ ರೇಟಿಂಗ್ ಪಡೆದಿದೆ. ಟಿಗೋರ್ ಎಲೆಕ್ಟ್ರಿಕ್ ಕಾರಿನ ಬೆಲೆ 11.99 ಲಕ್ಷ ರೂಪಾಯಿಯಿಂದ 13.14 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).