ಹೊಸ ಟಿಗೋರ್ ಇವಿ ಅನಾವರಣ, 21000 ರೂ. ಕೊಟ್ಟು ಬುಕ್ ಮಾಡ್ಕೊಳ್ಳಿ
ದೇಶಿ ಕಾರ್ ಉತ್ಪಾದನಾ ಕಂಪನಿಯಾಗಿರುವ ಟಾಟಾ ಇದೀಗ ಹೊಸ ಟಿಗೋರ್ ಇವಿಯನ್ನು ಅನಾವರಣ ಮಾಡಿದೆ. ಈ ಕಾರ್ ಆಗಸ್ಟ್ 31ರಿಂದ ಮಾರಾಟಕ್ಕೆ ಸಿಗಲಿದೆ. ಗ್ರಾಹಕರು 21,000 ಕೂಟ್ಟು ಬುಕ್ಕಿಂಗ್ ಕೂಡ ಮಾಡಿಕೊಳ್ಳಬಹುದಾಗಿದೆ. ಕಾಂಪಾಕ್ಟ್ ಎಲೆಕ್ಟ್ರಿಕ್ ಸೆಡಾನ್ ಕಾರು ಆಕರ್ಷಕವಾಗಿದೆ.
ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದ 2021 ಟಿಗೋರ್ ಇವಿ ವಾಹನವನ್ನು ದೇಶಿ ಕಾರ್ ಉತ್ಪಾದಕ ಕಂಪನಿ ಟಾಟಾ ಮೋಟಾರ್ಸ್ ಅನಾವರಣ ಮಾಡಿದೆ. ಕಂಪನಿಯು ಈ ಕಾರ್‌ಗೆ ಝಿಪ್ಟ್ರಾನ್ ತಂತ್ರಜ್ಞಾನವನ್ನು ಬಳಸಿದೆ. ಕಂಪನಿಯು ಬುಕ್ಕಿಂಗ್ ಆರಂಭಿಸಿದ್ದು, ಆಗಸ್ಟ್ 31ರಿಂದ ಮಾರಾಟಕ್ಕೆ ಸಿಗಲಿದೆ.
ಈ ಹೊಸ ಕಾರ್ ನವೀಕರಿಸಿದ ಸ್ಟೈಲಿಂಗ್, ಹೊಸ ವೈಶಿಷ್ಟ್ಯಗಳು ಮತ್ತು ಕಂಪನಿಯ ಹೊಸ ಝಿಪ್ಟ್ರಾನ್ ಇವಿ ಪವರ್‌ಟ್ರೇನ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಟಾಟಾ ಕಂಪನಿಯು ಈಗಾಗಲೇ ಫ್ಲೀಟ್ ವಿಭಾಗಕ್ಕಾಗಿ ಟಿಗೋರ್ ಇವಿ ನವೀಕರಿಸಿದ ಆವೃತ್ತಿಯನ್ನು ಪರಿಚಯಿಸಿದೆ. ಕಂಪನಿಯು ಇದಕ್ಕೆ ಎಕ್ಸ್-ಪ್ರೆಸ್-ಟಿ ಇವಿ ಎಂದು ಮರುನಾಮಕರಣ ಮಾಡಿದೆ.
2025ರ ಹೊತ್ತಿಗೆ ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳಷ್ಟೇ ಮಾರಾಟವಾಗಬೇಕು!
ಇದೇ ವೇಳೆ, ಕಂಪನಿಯು ವೈಯಕ್ತಿಕ ಸಾರಿಗೆಯನ್ನ ಗಮನದಲ್ಲಿಟ್ಟುಕೊಂಡು ಈ ಹೊಸ ಟಿಗೋರ್ ಇವಿ ವಾಹನವನ್ನು ಪರಿಚಯಿಸುತ್ತಿದೆ. ಈ ಎಲೆಕ್ಟ್ರಿಕ್ ಕಾರ್ ಈ ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ ಎನ್ನಲಾಗಿದೆ.
ಎಲೆಕ್ಟ್ರಿಕ್ ವಾಹನಗಳಿಗೆ ಭಾರತವು ಅತಿದೊಡ್ಡ ಮಾರುಕಟ್ಟೆಯಾಗಿ ಬಲಾಗಲಿದೆ. ಅದಕ್ಕೆ ತಕ್ಕಂತೆ ಸರ್ಕಾರದ ನೀತಿಗಳು ಕೂಡ ಅನುಷ್ಠಾನವಾಗುತ್ತಿವೆ. ಜತೆಗೆ, ಹೆಚ್ಚುತ್ತಿರುವ ಪರಿಸರ ಮಾಲಿನ್ಯ ತಡೆಗಟ್ಟಲು ಈ ಬ್ಯಾಟರಿಚಾಲಿತ ವಾಹನಗಳ ಬಳಕೆಯು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲೇ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಭರಾಟೆ ಶುರುವಾಗಿದೆ.
ಈ ಅವಕಾಶವನ್ನು ಬಳಸಿಕೊಳ್ಳುತ್ತಿರುವ ದೇಶೀ ವಾಹನ ಉತ್ಪಾದನಾ ಕಂಪನಿ ಟಾಟಾ ಮೋಟಾರ್ಸ್ ಈಗಾಗಲೇ ಟಿಗೋರ್ ಇವಿ ಮತ್ತು ನೆಕ್ಸಾನ್ ಇವಿಗಳ ಮೂಲಕ ಮಾರುಕಟ್ಟೆಯಲ್ಲಿ ಅಗ್ರಗಣ್ಯವಾಗುವತ್ತ ಹೆಜ್ಜೆ ಹಾಕುತ್ತಿದೆ.
ಲುಕ್‌ಗೆ ಸಂಬಂಧಿಸಿದಂತೆ ಹೇಳುವುದಾದರೆ ಎಕ್ಸ್‌ಪ್ರೆಸ್ ಟಿ ಇವಿ ಮತ್ತು ಈಗ ಅನಾವರಣಗೊಂಡಿರುವ ಟಿಗೋರ್ ಇವಿ ನಡುವೆ ಅಂಥ ವ್ಯತ್ಯಾಸಗಳೇನೂ ಇಲ್ಲ. ಗ್ರಿಲ್ ಬದಲಿಗೆ ಹೊಸ ಗ್ಲಾಸೀ ಪ್ಯಾನೆಲ್ ಕಾಣಬಹುದು. ಪರಿಷ್ಕೃತ ಹೆಡ್‌ಲೈಟ್ಸ್ ಅಂದವನ್ನು ಹೆಚ್ಚಿಸಿವೆ.
ಹಬ್ಬದ ಸೀಸನ್‌ಗೆ ಎರಡು ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ ಒಮೆಗಾ ಸೀಕಿ
ಕ್ಯಾಬಿನ್‌ನಲ್ಲಿ ನೀವು ಕೆಲವು ಬದಲಾವಣೆಗಳನ್ನು ಕಾಣಬಹುದಾಗಿದೆ. ನೀಲಿ ಬಣ್ಣ ಪ್ರಭಾವವನ್ನು ಕಾಣಬಹುದು. 7.0 ಇಂಚ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಹರ್ಮನ್ ಟ್ಯೂನ್ಡ್ ಆಡಿಯೋ ಸಿಸ್ಟಮ್, ಮಲ್ಟಿ ಫಂಕ್ಷನಲ್ ಸ್ಟೀರಿಂಗ್ ವ್ಹೀಲ್ ಗಮನ ಸೆಳೆಯುತ್ತವೆ.
ಪವರ್‌ಫುಲ್ ಟಿಗೋರ್ ಇವಿ
ಟಾಟಾ ಮೋಟಾರ್ಸ್ ಈವರೆಗೆ ಬಿಡುಗಡೆ ಮಾಡಿರುವ ಇವಿಗಳಲ್ಲಿ ಈ ಝಿಪ್ರ್ಟಾನ್ ಟಿಗೋರ್ ಇವಿ ಹೆಚ್ಚು ಪವರ್‌ಫುಲ್ ಆಗಿರಲಿದೆ. ಈ ಹೊಸ ಟಿಗೋರ್ ಇವಿ ಅಧಿಕ ವೋಲ್ಟೇಜ್ 300+ ವೋಲ್ಟ್ ಶಾಶ್ವತ ಮ್ಯಾಗ್ನೆಟ್ ಸಿಂಕ್ರೊನಸ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಬರಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಟಿಗೋರ್ ಇವಿಯಲ್ಲಿ 72ವೋಲ್ಟ್ ಎಸಿ ಇಂಡಕ್ಷನ್ ಟೈಪ್ ಮೋಟಾರ್ ಬಳಸಲಾಗಿದೆ. ಇದಕ್ಕಿಂತಲೂ ಜಿಪ್ರ್ಟಾನ್ ಇವಿ ಹೆಚ್ಚು ಪವರ್ ಫುಲ್ ಆಗಿರಲಿದೆ. ಹೊಸ ಟಿಗೋರ್ ಸಿಂಗಲ್ ಚಾರ್ಜ್‌ಗೆ 250 ಕಿ.ಮೀ. ವ್ಯಾಪ್ತಿವರೆಗೂ ಚಲಿಸಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿರುವ ಟೀಸರ್ ವಿಡಿಯೋದಲ್ಲಿ ಜಿಪ್ಟ್ರಾನ್ ತಂತ್ರಜ್ಞಾನ ಆಧರಿತವಾಗಿರುವ ಟಿಗೋರ್ ಇವಿ ಅತ್ಯುತ್ತಮ ಪ್ರದರ್ಶನ ನೀಡುವುದನ್ನು ಸೂಚ್ಯವಾಗಿ ಹೇಳಲಾಗಿದೆ. ವಿಶೇಷ ಎಂದರೆ, ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ವಾಹನಗಳಲ್ಲಿ ಈ ಝಿಪ್ಟ್ರಾನ್ ತಂತ್ರಜ್ಞಾನ ಮೊದಲಿಗೆ ಬಳಕೆಯಾಗಿದ್ದು ನೆಕ್ಸಾನ್ ಎಲೆಕ್ಟ್ರಿಕ್ ವಾಹನದಲ್ಲಿ. ಝಿಪ್ಟ್ರಾನ್ ತಂತ್ರಜ್ಞಾನ ನೆಕ್ಸಾನ್ ಇವಿ ಭಾರತೀಯ ಮಾರುಕಟ್ಟೆಯಲ್ಲಿ ಈವರೆಗೆ ಅತಿ ಸಕ್ಸೆಸ್ ಆದ ಎಲೆಕ್ಟ್ರಿಕ್ ವಾಹನವಾಗಿದೆ. ಬೆಲೆಯ ಬಗ್ಗ ಹೇಳುವುದಾದರೆ ಟಾಟಾ ನೆಕ್ಸಾನ್ ಇವಿಗಿಂತಲೂ ಇದು ಕೈಗೆಟುಕುವ ದರದಲ್ಲಿ ಇರಲಿದೆ ಎಂದು ಹೇಳಾಗುತ್ತಿದೆ.
#IndependenceDayಯಿಂದ ಹಿಡಿದು ಬರೋ ಹಬ್ಬಕ್ಕೆ ಯಾವ ಕಾರು ಲಾಂಚ್ ಆಗುತ್ತೋ ನೋಡಿ!
ಟಾಟಾ ಮೋಟಾರ್ಸ್ ಕಂಪನಿಯು 2019ರಲ್ಲಿ ಮೊದಲ ಬಾರಿಗೆ ಟಿಗೋರ್ ಇವಿಯನ್ನು ಪರಿಚಯಿಸಿತು. ಈ ಇವಿಯನ್ನು ಸರ್ಕಾರಿ ಅಧಿಕಾರಿಗಳು ಹೆಚ್ಚಾಗಿ ಬಳಸುತ್ತಿದ್ದಾರೆ. ಆದರೆ, ಇದರಲ್ಲಿರುವ ಸೀಮಿತ ವ್ಯಾಪ್ತಿ ಮತ್ತು ಪ್ರದರ್ಶನದಿಂದಾಗಿ ಇವಿ ಬಳಕೆದಾರರಲ್ಲಿ ವಿಶ್ವಾಸ ಮೂಡಲು ಸಾಧ್ಯವಾಗಲಿಲ್ಲ. ಹಾಗಾಗಿ ನೆಕ್ಸಾನ್‌ನಷ್ಟು ಟಿಗೋರ್ ಇವಿ ಜನಪ್ರಿಯವಾಗಲಿಲ್ಲ. ಇದೀಗ ಝಿಪ್ಟ್ರಾನ್ ತಂತ್ರಜ್ಞಾನದೊಂದಿಗೆ ಬರಲಿರುವ ಈ ಟಿಗೋರ್ ಜನರನ್ನು ಸೆಳೆಯುವ ವಿಶ್ವಾಸವನ್ನು ಕಂಪನಿ ಹೊಂದಿದೆ.