2025ರ ಹೊತ್ತಿಗೆ ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳಷ್ಟೇ ಮಾರಾಟವಾಗಬೇಕು!
ಆಗಸ್ಟ್ 15ಕ್ಕೆ ಎರಡು ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಲಾಂಚ್ ಮಾಡಿ ಬೀಗುತ್ತಿರುವ ಒಲಾ ಗ್ರೂಪ್ ಚೇರ್ಮನ್ ಮತ್ತು ಸಿಇಒ ಭಾವಿಶ್ ಅಗ್ರವಾಲ್ ಅವರು, 2025ರ ಹೊತ್ತಿಗೆ ಭಾರತೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ದ್ವಿಚಕ್ರವಾಹನಗಳ ಬದಲಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳೇ ಮಾರಾಟವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಆಗಸ್ಟ್ 15ರಂದು ಬಿಡುಗಡೆಯಾದ ಬೆನ್ನಲ್ಲೇ, 2025ರ ಹೊತ್ತಿಗೆ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು ಎಂದು ಒಲಾ ಚೇರ್ಮನ್ ಮತ್ತು ಗ್ರೂಪ್ ಕಾರ್ಯನಿರ್ವಾಹಕ ಅಧಿಕಾರಿ ಭಾವಿಶ್ ಅಗ್ರವಾಲ್ ಅಭಿಪ್ರಾಯಪಟ್ಟಿದ್ದಾರೆ. ಈ ನಾಲ್ಕು ವರ್ಷಗಳಲ್ಲಿ ಸುಸ್ಥಿರತೆಯನ್ನು ಸಾಧಿಸಲು ಸಾಧ್ಯವಿದೆ ಎಂದು ಹೇಳಿದ್ದಾರೆ.
ಬ್ಯಾಟರಿ ಚಾಲಿತ ವಾಹನಗಳ ಮಾರುಕಟ್ಟೆಯಲ್ಲಿ ಭಾರತವ್ನು ಜಾಗತಿಕ ನಾಯಕನಾಗಿ ರೂಪುಗೊಳ್ಳಬಹುದು. ಹಾಗಾಗಿ, ಇದೆಲ್ಲ ಆಗಲು 10ರಿಂದ 20 ವರ್ಷ ಬೇಕಾಗಬಹುದು ಎಂಬ ಅಭಿಪ್ರಾಯವನ್ನು ಬದಿಗಿಟ್ಟು, ಎಲ್ಲ ಭಾರತೀಯ ಉದ್ಯಮವು ಒಂದಾಗಿ ಈ ಗುರಿಯನ್ನು ಈಡೇರಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸದ್ಯದಲ್ಲೇ ಟಾಟಾದಿಂದ ಹೊಸ ಝಿಪ್ಟ್ರಾನ್ ಟಿಗೋರ್ ಎಲೆಕ್ಟ್ರಿಕ್ ಕಾರ್
ಸದ್ಯದ ಪರಿಸ್ಥಿತಿಯಲ್ಲಿ ವಿದ್ಯುದ್ದೀಕರಣ ವಾಹನಗಳ ಅಗತ್ಯವು ಸಂಪೂರ್ಣವಾಗಿ ಈ ಕ್ಷಣದ ಅಗತ್ಯವಾಗಿದೆ. ಆದರೆ, ಈ ಉದ್ಯಮವು ಇದಕ್ಕಾಗಿ 10ರಿಂದ 20 ವರ್ಷಗಳು ಬೇಕಾಗುತ್ತವೆ ಎಂದು ಹೇಳುತ್ತದೆ. ಅಷ್ಟು ದೀರ್ಘವೇಕೆ? ನಾವೇಕೆ ಅದನ್ನು 2025ರ ಹೊತ್ತಿಗೆ ಪೂರ್ತಿಗೊಳಿಸಬಾರದು ಎಂದು ಅವರು ಪ್ರಶ್ನಿಸಿದ್ದಾರೆ.
2025ರ ಹೊತ್ತಿಗೆ ಎಲ್ಲ ದ್ವಿಚಕ್ರವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿ ರೂಪಿಸಲು ಸಾಧ್ಯವಿದೆ. ಇದಕ್ಕೆ ಇಚ್ಛಾ ಶಕ್ತಿ ಬೇಕು. ಇದಕ್ಕೆ ಅಗಾಧ ಹೂಡಿಕೆ ಬೇಕು. ಇದಕ್ಕೆ ತಂತ್ರಜ್ಞಾನ ಬೇಕು, ನಾಯಕತ್ವ ಬೇಕು ಮತ್ತು ಎಲ್ಲರೂ ಇದನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಾರೆಂದು ನಂಬಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಅಗ್ರವಾಲ್ ಅಭಿಪ್ರಾಯಪಟ್ಟಿದ್ದಾರೆ.
ಈ ಗುರಿಯನ್ನು ಒಲಾ ಒಂದರಿಂದಲೇ ತಲುಪಲು ಸಾಧ್ಯವಿಲ್ಲ. ಎಲ್ಲರೂ ಒಟ್ಟಾಗಿ ಮಾಡಬೇಕು ಎಂಬುದನ್ನು ಒತ್ತಿ ಹೇಳಿರುವ ಅಗ್ರವಾಲ್, 2025 ರ ನಂತರ ದೇಶದಲ್ಲಿ ಯಾವುದೇ ಪೆಟ್ರೋಲ್ ದ್ವಿಚಕ್ರ ವಾಹನ ಮಾರಾಟ ಮಾಡಬಾರದು. ಮತ್ತು ಇದು ಸಾಧ್ಯವಾಗಿಸಬಹುದು. ನಾವು ನಾಲ್ಕು ವರ್ಷಗಳಲ್ಲಿ ಈ ಪರಿವರ್ತನೆ ಮಾಡಬಹುದು. ನಾವು ಪೆಟ್ರೋಲ್ ಅನ್ನು ತಿರಸ್ಕರಿಸಬೇಕು ಮತ್ತು ಸುಸ್ಥಿರತೆಗೆ ಪರಿವರ್ತನೆ ಮಾಡಲು ಮುಂದಾಗಬೇಕು ಎಂದಿದ್ದಾರೆ.
ಹಬ್ಬದ ಸೀಸನ್‌ಗೆ ಎರಡು ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ ಒಮೆಗಾ ಸೀಕಿ
ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ನಾವು ಭಾರತವನ್ನು ಶಕ್ತಗೊಳಿಸಬೇಕು ಮತ್ತು ದೇಶವನ್ನು ಜಾಗತಿಕ ನಾಯಕನಾಗಿ ಹೊರಹೊಮ್ಮುವಂತೆ ನೋಡಿಕೊಳ್ಳಬೇಕು. ಈ ಮಹತ್ವಾಕಾಂಕ್ಷೆಗಾಗಿ ಇಡೀ ಭಾರತೀಯ ಉದ್ಯಮವು ಒಂದಾಗಿ ಬರಬೇಕು ಎಂದು ನಾನು ನಂಬುತ್ತೇನೆ. ಆದರೆ, ಬಹಳಷ್ಟು ಜನರು ಇದನ್ನು ಒಪ್ಪಲಿಕ್ಕಿಲ್ಲ. ಆದರೂ, ನಾವು ಇದನ್ನು ಸಾಧಿಸಿ ತೋರಿಸಬೇಕಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಶೀಘ್ರ ಗತಿಯ ಈ ಪರಿವರ್ತನೆಯಿಂದಾಗುವ ಲಾಭಗಳನ್ನು ಗುರುತಿಸಿರುವ ಭಾವಿಶ್ ಅವರು, ಭಾರತವು ಇವಿಯಲ್ಲಿ ಜಾಗತಿಕ ನಾಯಕನಾಗಿ ಬೆಳೆಯಲಾರಂಭಿಸಿದರೆ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಈ ದಿಸೆಯನ್ನು ಶಕ್ತಿಯನ್ನು ವ್ಯಯಿಸಬೇಕಾಗಿದೆಂದು ಹೇಳಿದ್ದಾರೆ.
ಒಲಾ ಸ್ಕೂಟರ್‌ಗಳು ಹೇಗಿವೆ?
ತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದಲ್ಲಿ ಒಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳು ಈ ಸ್ಕೂಟರ್‌ನಲ್ಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ ಮೈಲೇಜ್ ನೀಡಬಲ್ಲ ಸ್ಕೂಟರ್ ಇದಾಗಿದೆ. ಒಲಾ ಎಲೆಕ್ಟ್ರಿಕ್ ಸ್ಕೂಟರ್ ಎರಡು ವೇರಿಯೆಂಟ್ ಬಿಡುಗಡೆಯಾಗಿದೆ. ಒಲಾ ಎಲೆಕ್ಟ್ರಿಕ್ S1 ಹಾಗೂ ಒಲಾ ಎಲೆಕ್ಟ್ರಿಕ್ S1 Pro ಎಂಬ ಎರಡು ವೇರಿಯೆಂಟ್ ಸ್ಕೂಟರ್ ಲಭ್ಯವಿದೆ. ಸ್ಕೂಟರ್ ಬೆಲೆ 99,999 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಒಲಾ ಎಲೆಕ್ಟ್ರಿಕ್ S1 ಬೆಲೆ 99,999 ರೂಪಾಯಿ ಇದ್ದರೆ, ಒಲಾ ಎಲೆಕ್ಟ್ರಿಕ್ S1 Pro ಬೆಲೆ 1,29,999 ರೂಪಾಯಿ ಆಗಿದೆ.
#IndependenceDayಯಿಂದ ಹಿಡಿದು ಬರೋ ಹಬ್ಬಕ್ಕೆ ಯಾವ ಕಾರು ಲಾಂಚ್ ಆಗುತ್ತೋ ನೋಡಿ!
ಒಲಾ ಎಲೆಕ್ಟ್ರಿಕ್ S1 ಸ್ಕೂಟರ್ 3.9 kWh ಬ್ಯಾಟರಿ ಹೊಂದಿದೆ. 750W ಪೋರ್ಟೇಬಲ್ ಚಾರ್ಜರ್ ಮೂಲಕ ಸ್ಕೂಟರ್ ಚಾರ್ಜ್ ಮಾಡಲು 6 ಗಂಟೆ ಸಮಯ ಬೇಕು. ಇನ್ನು ಓಲಾ ಸೂಪರ್ ಚಾರ್ಜರ್ ಮೂಲಕ ಚಾರ್ಜ್ ಸುಲಭವಾಗಿದೆ. ಶೇಕಡಾ 50 ರಷ್ಟು ಚಾರ್ಜ್ 18 ನಿಮಿಷದಲ್ಲಿ ಆಗಲಿದೆ. ಒಂದು ಸಂಪೂರ್ಣ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಎರಡನೇ ವೇರಿಯೆಂಟ್ ಸ್ಕೂಟರ್‌ನಲ್ಲಿ ಕೇವಲ ಒಂದು ಬದಲಾವಣೆ ಇದೆ. ಅದು ಬ್ಯಾಟರಿ. S1 Pro ಸ್ಕೂಟರ್‌ನಲ್ಲಿ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದೆ. ಇದರ ಮೈಲೇಜ್ 181 ಕಿ.ಮೀ. ಹೀಗಾಗಿ ಇದರ ಬೆಲೆ ಕೂಡ ಹೆಚ್ಚಾಗಿದೆ.