ಹಬ್ಬದ ಸೀಸನ್‌ಗೆ ಎರಡು ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ ಒಮೆಗಾ ಸೀಕಿ

ಹಬ್ಬದ ಸೀಸನ್  ಹತ್ತಿರ ವಾಗುತ್ತಿದ್ದಂತೆ ಹಲವು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗುತ್ತಿವೆ. ಒಮೆಗಾ ಸೀಕಿ ಕಂಪನಿಯು ಝೋರೋ ಮತ್ತು ಫಿಯಾರೆ ಎಂಬೆರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಕೂಟರ್‌ಗಳು ಏಳು ಬಣ್ಣಗಳಲ್ಲಿ ಮಾರಾಟಕ್ಕೆ ಸಿಗಲಿವೆ.

Two electric scooters launched by Omega Seiki on festive season

ದೇಶದಲ್ಲೀಗ ಎಲೆಕ್ಟ್ರಿಕ್ ವಾಹನಗಳ ಬಳಕೆಯ ಬೂಮ್ ಶುರುವಾಗಿದೆ. ಎಷ್ಟೊಂದು ಕಂಪನಿಗಳ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಳಕೆಯ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಬಹಳಷ್ಟು ಕಂಪನಿಗಳು ಈ ಅವಕಾಶವನ್ನು ಬಳಸುಕೊಳ್ಳುತ್ತಿವೆ.

ಈ ಸಾಲಿಗೆ ಓಮೆಗಾ ಸೀಕಿ ಕಂಪನಿಯು ಸೇರುತ್ತಿದೆ. ಈ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣ ಮಾಡಿದೆ. ಹಬ್ಬದ ಸೀಸನ್  ಹಿನ್ನಲೆಯಲ್ಲಿ ಕಂಪನಿಯು ಝೋರೋ ಮತ್ತು ಫಿಯಾರೆ ಎಂಬ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಲಾಂಚ್ ಮಾಡಿದೆ. 

ಕಂಪನಿಯು ತಿಂಗಳಾಂತ್ಯಕ್ಕೆ ಈ ಹೊಸ ಸ್ಕೂಟರ್‌ಗಳ ಬುಕ್ಕಿಂಗ್ ಆರಂಭಿಸುವ ಸಾಧ್ಯತೆ ಇದೆ. ಈ ಎರಡೂ ಸ್ಕೂಟರ್‌ಗಳು ಗರಿಷ್ಠ ಪ್ರತಿ ಗಂಟೆಗೆ 45 ಕಿ.ಮೀ ಓಡುವ ಸಾಮರ್ಥ್ಯ ಹೊಂದಿದ್ದು, ಗ್ರಾಹಕರಿಗೆ ಏಳು ಬಣ್ಣಗಳಲ್ಲಿ ಮಾರಾಟಕ್ಕ ಸಿಗಲಿದೆ.  ಸಿಂಗಲ್ ಚಾರ್ಜ್‌ಗೆ ಈ ಸ್ಕೂಟರ್‌ಗಳು 85 ಕಿ.ಮೀ.ವರೆಗೂ ಚಲಿಸಬಲ್ಲವು. 

ಹಿಟ್ & ರನ್ ಪ್ರಕರಣ ಸಂತ್ರಸ್ತರಿಗೆ 2 ಲಕ್ಷ ಪರಿಹಾರ ಮೊತ್ತ ಏರಿಕೆ ಪ್ರಸ್ತಾಪ

ಪುಣೆಯಲ್ಲಿರುವ ಕಂಪನಿಯ ಶೋರೂಮ್‌ನಲ್ಲಿ ಈ ಹೊಸ ಸ್ಕೂಟರ್‌ಗಳನ್ನು ಪ್ರದರ್ಶನ ಮಾಡಲಾಗಿದೆ. ಸೀಕಿ ಕಂಪನಿಯಲ್ಲಿ ದೇಶಾದ್ಯಂತ ಸದ್ಯ 15 ಸ್ಟೋರ್‌ಗಳನ್ನು ಹೊಂದಿದ್ದು, ಈ ಹಣಕಾಸು ವರ್ಷಾಂತ್ಯಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಟೋರ್‌ಗಳನ್ನು ತೆರೆಯುವ ಚಿಂತನೆಯು ಕಂಪನಿಗಿದೆ.

ಒಮೆಗಾ ಸೀಕಿ ಮೊಬಿಲಿಟಿಯ ಪ್ರಮುಖ ಶೋರೂಂ ಮೂಲಭೂತವಾಗಿ ಇಂಟರಾಕ್ಟಿವ್ ಸ್ಪೇಸ್ ಆಗಿದ್ದು ಅದು ಗ್ರಾಹಕರಿಗೆ ವಾಹನ ಮತ್ತು ಅದರ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶವನ್ನು ನೀಡುತ್ತದೆ. ಕಂಪನಿಯು ಸ್ಥಳೀಯವಾಗಿ ವಿನ್ಯಾಸಗೊಳಿಸಲಾಗಿದೆ, ಅಭಿವೃದ್ಧಿಪಡಿಸಿದೆ ಮತ್ತು ಈಗ ರೇಜ್ ಪ್ಲಸ್ ಬ್ರಾಂಡ್ ಅಡಿಯಲ್ಲಿ ತನ್ನದೇ ಆದ ತ್ರಿ ಚಕ್ರದ ಇವಿಗಳನ್ನು ತಯಾರಿಸುತ್ತದೆ. ಕಂಪನಿಯು ಭಾರತದ ಮೊದಲ ಶೈತ್ಯೀಕರಿಸಿದ ಎಲೆಕ್ಟ್ರಿಕ್ ತ್ರಿಚಕ್ರ ವಾಹನವನ್ನು ರೇಜ್ ಪ್ಲಸ್ ಫ್ರಾಸ್ಟ್ ಹೆಸರಿನಲ್ಲಿ ಪರಿಚಯಿಸಿದ ಹೆಗ್ಗಳಿಕೆ ಇದೆ.

ನೋಂದಣಿ ಸರ್ಟಿಫಿಕೇಟ್ ಶುಲ್ಕ ವಿನಾಯ್ತಿ
ದೇಶದಲ್ಲಿ ಇನ್ನು ಮುಂದೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರು ಯಾವುದೇ ರೀತಿಯ ನೋಂದಣಿ ಸರ್ಟಿಫಿಕೇಟ್ ಶುಲ್ಕವನ್ನು ಭರಿಸಬೇಕಿಲ್ಲ. ಇಂಥದೊಂದು ನಿಯಮವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯು ಜಾರಿಗೆ ತಂದಿದೆ. ಈ ಮೂಲಕ ಸಾಂಪ್ರದಾಯಿಕ ಇಂಧನ ವಾಹನಗಳನ್ನು ಬಿಟ್ಟು, ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾಗುವ ಗ್ರಾಹಕರಿಗೆ ಸರಕಾರವು ಭರ್ಜರಿ ಗಿಫ್ಟ್ ನೀಡಿದೆ ಎಂದು ಹೇಳಬಹುದು. 

2020ರಲ್ಲಿ 3,66,138 ಆಕ್ಸಿಡೆಂಟ್, 1,31,714 ದುರ್ಮರಣ!

ಎಲೆಕ್ಟ್ರಿಕ್ ವಾಹನಗಳ ನೋಂದಣಿ ಸರ್ಟಿಫಿಕೇಟ್ ಶುಲ್ಕ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಧಿಸೂಚನೆಯನ್ನು ಹೊರಡಿಸಿದೆ. ಈ ಹೊಸ ನಿಯಮದ ಪ್ರಕಾರ,  ಎಲ್ಲಾ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳಿಗೆ ನೋಂದಣಿ ಪ್ರಮಾಣಪತ್ರದ ವಿತರಣೆ ಅಥವಾ ನವೀಕರಣಕ್ಕಾಗಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡುತ್ತದೆ. ಹೊಸ ನೋಂದಣಿ ನಿಯೋಜಿಸಲು ಬ್ಯಾಟರಿ ಚಾಲಿತ ವಾಹನಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.

ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ನಾಗಾಲೋಟದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರೂ ಪರ್ಯಾಯ ಇಂಧನ ವಾಹನಗಳತ್ತ ಮುಖ ಮಾಡಿದ್ದಾರೆ. ವಿಶೇಷವಾಗಿ ಬ್ಯಾಟರಿ ಚಾಲಿತ ವಾಹನಗಳ ಬಗ್ಗೆ ಜನರಲ್ಲಿ ಆಸಕ್ತಿ ಇದೆಯಾದರೂ, ಅವು ತುಟ್ಟಿಯಾಗಿದ್ದರಿಂದ ಹಿನ್ನಡೆಯಾಗುತ್ತಿದೆ.

ಈ ಹಿನ್ನೆಲೆಯಲ್ಲೇ ಕೇಂದ್ರ ಸರ್ಕಾರವು ಬ್ಯಾಟರಿ ಚಾಲಿತ ವಾಹನಗಳ ಬಳಕೆಯನ್ನ ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದೆ. ಜಾರಿಗೆ ತಂದಿದೆ. ಆ ಪೈಕಿ ನೋಂದಣಿ ಸರ್ಟಿಫಿಕೇಟ್ ಶುಲ್ಕ ವಿನಾಯ್ತಿಯೂ ಒಂದು. ಕೇಂದ್ರ ಸರ್ಕಾರವು ಮಾತ್ರವಲ್ಲದೇ ಹಲವು ರಾಜ್ಯಗಳು ಎಲೆಕ್ಟ್ರಿಕ್ ವಾಹನ ನೀತಿಯನ್ನು ಪ್ರಕಟಿಸಿವೆ. ಆ ಮೂಲಕ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಅನೇಕ ವಿನಾಯ್ತಿಗಳನ್ನು ಘೋಷಿಸಿವೆ. 

#IndependenceDayಯಿಂದ ಹಿಡಿದು ಬರೋ ಹಬ್ಬಕ್ಕೆ ಯಾವ ಕಾರು ಲಾಂಚ್ ಆಗುತ್ತೋ ನೋಡಿ!

Latest Videos
Follow Us:
Download App:
  • android
  • ios