Asianet Suvarna News Asianet Suvarna News

ಹಬ್ಬಕ್ಕೆ ‘ಪಂಚ್’ ನೀಡಲು ಟಾಟಾ ರೆಡಿ, ಹೊಸ ಮೈಕ್ರೋ ಎಸ್‌ಯುವಿ ಅನಾವರಣ

ಎಚ್‌ಬಿಎಕ್ಸ್ ಕೋಡ್‌ನೇಮ್‌ನೊಂದಿಗೆ ಕೆಲವು ದಿನಗಳಿಂದ ಭಾರಿ ಕುತೂಹಲ ಮೂಡಿಸಿದ್ದ ಟಾಟಾ ಕಂಪನಿಯ ಮೈಕ್ರೋ ಎಸ್‌ಯುವಿ ಕೊನೆಗೂ ಅನಾವರಣಗೊಂಡಿದೆ. ಕಂಪನಿಯು ಗಾಡಿಗೆ ಪಂಚ್‌ ಎಂದು ಹೆಸರಿಟ್ಟಿದೆ. ಎಂಟ್ರಿ ಲೆವಲ್ ಪಂಚ್ ಎಸ್‌ಯುವಿ ಶಕ್ತಿಶಾಲಿ ಮತ್ತು ಆಕರ್ಷಕವಾಗಿದೆ.

Tata Motors unveiled micro SUV Punch and check details
Author
Bengaluru, First Published Aug 25, 2021, 3:54 PM IST

ದೇಸೀ ವಾಹನ ತಯಾರಿಕಾ ಕಂಪನಿಗಳಲ್ಲಿ ಅಗ್ರಗಣ್ಯ ಎನಿಸಿರುವ ಟಾಟಾ ಮೋಟಾರ್ಸ್ ಈ ಹಬ್ಬಕ್ಕೆ  ಭರ್ಜರಿ ಎಸ್‌ಯುವಿನೊಂದಿಗೆ ಎಂಟ್ರಿ ಕೊಡುತ್ತಿದೆ. ವಾಹನ ಉದ್ಯಮದಲ್ಲಿ ಈಗ ಮೈಕ್ರೋ ಎಸ್‌ಯುವಿ ಸೆಗ್ಮೆಂಟ್‌ನೆಡೆಗೆ ಹೆಚ್ಚು ಜನರು ವಾಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ಕಂಪನಿಗಳು ಈ ಸೆಗ್ಮೆಂಟ್‌ನ ಅವಕಾಶಗಳನ್ನು ಬಳಸಿಕೊಳ್ಳಲು ಮುಂದಾಗಿವೆ. ಟಾಟಾ ಕೂಡ ಸೆಗ್ಮೆಂಟ್‌ನ ಗ್ರಾಹಕರನ್ನು ಸೆಳೆಯಲು ಹೊಸ ಎಂಟ್ರಿ ಲೆವಲ್ ಎಸ್‌ಯುವಿಯನ್ನು ಅನಾವರಣ ಮಾಡಿದೆ.

ಹೊಸ ಟಿಗೋರ್ ಇವಿ ಅನಾವರಣ, 21000 ರೂ. ಕೊಟ್ಟು ಬುಕ್ ಮಾಡ್ಕೊಳ್ಳಿ

ಎಚ್‌ಬಿಎಕ್ಸ್ ಕೋಡ್‌ನೇಮ್‌ನೊಂದಿಗೆ ಕರೆಯಲಾಗುತ್ತಿದ್ದ ಮೈಕ್ರೋ ಎಸ್‌ಯುವಿಗೆ ಟಾಟಾ ಮೋಟಾರ್ಸ್ ಇದೀಗ ‘ಪಂಚ್’ ಎಂದು ನಾಮಕರಣ ಮಾಡಿದೆ. ಕಂಪನಿಯು ಈ ಪಂಚ್‌ನ ಬಾಹ್ಯ ವಿನ್ಯಾಸವನ್ನು ಮಾತ್ರವೇ ಇದೀಗ ಅನಾವರಣ ಮಾಡಿದೆ.  ಟಾಟಾದ ಈ ಪಂಚ್, ರೆನೋ ಕ್ವಿಡ್, ಮಾರುತಿಯ ಸುಜುಕಿಯ ಇಗ್ನಿಸ್, ನಿಸ್ಸಾನ್‌ನ ಮ್ಯಾಗ್ನೆಟ್‌ನಂಥ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ.

ಟಾಟಾ ಮೋಟಾರ್ಸ್ ಈ ಮೊದಲು ಮೈಕ್ರೋ ಎಸ್‌ಯುವಿಯನ್ನು ಎಚ್‌ಟುಎಕ್ಸ್ ಹೆಸರಿನಡಿ ಜಿನೆವಾ ಮೋಟಾರ್ ಮೇಳದಲ್ಲಿ ಪ್ರದರ್ಶನ ಮಾಡಿತ್ತು. 2020ರ ಭಾರತದ ಆಟೋ ಎಕ್ಸ್‌ಪೋದಲ್ಲಿ ಈ ಮೈಕ್ರೋ ಎಸ್‌ಯುವಿಯನ್ನು ಟಾಟಾ ಮೋಟಾರ್ಸ್ ಪ್ರದರ್ಶನಕ್ಕಿಟ್ಟಿತ್ತು.

 

 

ಈ ಹೊಸ ಮೈಕ್ರೋ ಎಸ್‌ಯುವಿ ಟಾಟಾ ಅಲ್ಫಾ ಆರ್ಕ್(Agile Light Flexible Advanced Architecture) ಫ್ಲಾಟ್‌ಪಾರ್ಮ್‌ನಲ್ಲಿ ತಯಾರಿಸುತ್ತಿದೆ. ಇದು ಕಂಪನಿಯ ಹೊರ ತರಲಿರುವ ಹೊಸ ವಾಹನಗಳ ಸಾಲಿನ ಇದು ಹೊಸ ಎಂಟ್ರಿ ಲೆವೆಲ್ ಎಸ್‌ಯುವಿಯಾಗಿದೆ. ಭಾರತದಲ್ಲಿ ನೆಕ್ಸನ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಿಂತ ಕೆಳಗಿನ ಹಂತ ಎಸ್‌ಯುವಿಯಾಗಿದೆ. ಆದರೆ ಇದು ಟಿಯಾಗೋಗೆ ಬದಲಿಯಾಗಿಲ್ಲ. ಹೊಸ ಟಾಟಾ ಪಂಚ್ ಮೈಕ್ರೋ ಎಸ್‌ಯುವಿಯನ್ನು ಈ ಹಬ್ಬದ ಸಮಯದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ಕಂಪನಿ ಮುಂದಾಗಿದೆ.

ಹೆಸರೇ ಹೇಳುವಂತೆ ಟಾಟಾ ಮೋಟಾರ್ಸ್‌ನ ಈ ಮೈಕ್ರೋ ಎಸ್‌ಯುವಿ ಪಂಚ್, ಹೆಚ್ಚು ಶಕ್ತಿಶಾಲಿಯಾಗಿದೆ. ಈ ಗಾಡಿಯನ್ನು ನೀವು ನಗರ ಮತ್ತು ಹೈವೇ ಉಪಯೋಗಕ್ಕಾಗಿ ಬಳಸಬಹುದು. ಆಕರ್ಷಕ ವಿನ್ಯಾಸ, ಆಧುನಿಕ ತಂತ್ರಜ್ಞಾನ ಮತ್ತು ಡ್ರೈವಿಂಗ್ ಡೈನಾಮಿಕ್ಸ್ ಮೂಲಕ ಪರಿಪೂರ್ಣ ಗಾಡಿ ಎನಿಸಿಕೊಂಡಿದೆ.

ಈ ಹೊಸ ಮೈಕ್ರೋ ಎಸ್‌ಯುವಿ ಪಂಚ್ ಹಲವು ವಿಶಿಷ್ಟ ಫೀಚರ್‌ಗಳೊಂದಿಗೆ ಬರುತ್ತಿದೆ. ಪಂಚ್ ಅತ್ಯದ್ಭುತ ಫೀಚರ್‌ಗಳು ಮತ್ತು ವಿನ್ಯಾಸವನ್ನು ಹೊಂದಿದ್ದು ಅದು ಎಲ್ಲಾ ರೀತಿಯಲ್ಲೂ ತನ್ನ ಬಹುಮುಖತೆಯನ್ನು ಸಾಬೀತುಪಡಿಸಿದೆ

ಹೊಸ ಹೋಂಡಾ ಅಮೇಜ್ ಫೇಸ್‌ಲಿಫ್ಟ್ ಕಾರ್ ಲಾಂಚ್

ಪಂಚ್ ಹೊರಮೈ ವಿನ್ಯಾಸವಂತೂ ಅದ್ಭುತವಾಗಿದೆ. ಇದು ನೋಡೋದಕ್ಕೆ ಬೇಬಿ ಸಫಾರಿ ರೀತಿಯೂ ಕಾಣುತ್ತದೆ. ಜೊತೆಗೆ, ನೀವು ಇದರ ಲುಕ್ ಅನ್ನು ನೆಕ್ಸಾನ್‌ಗೂ ಹೋಲಿಸಬಹುದು. ಪಂಚ್‌ ಮುಂಭಾಗದ ಅಗ್ರೆಸ್ಸಿವ್ ಲುಕ್ ಅತ್ಯಾಕರ್ಷಕವಾಗಿದೆ. ಟಾಟಾ ಕಂಪನಿಯೇ ಹೆಗ್ಗುರುತಾಗಿರುವ ಸ್ಪ್ಲಿಟ್ ಲೈಟನಿಂಗ್ ವಿನ್ಯಾಸವು ನಿಮ್ಮನ್ನು ಮೋಡಿ ಮಾಡುತ್ತದೆ.

ಕಪ್ಪು ಫಲಕದಲ್ಲಿರುವ ಮನೆಗಳಲ್ಲಿ ಟಾಟಾ ಲಾಂಛನವು ಮೂರು ತ್ರಿ-ಬಾಣದ ಮಾದರಿಯನ್ನು ಹೊಂದಿದೆ, ಇದು ಎಲ್ಇಡಿ ಹಗಲಿನ ಸಮಯ ಚಾಲನೆಯಲ್ಲಿರುವ ದೀಪಗಳಿಂದ ಆವೃತವಾಗಿದೆ, ಮುಖ್ಯ ಹೆಡ್‌ಲ್ಯಾಂಪ್ ಘಟಕಗಳನ್ನು ಕೆಳಗೆ ಇರಿಸಲಾಗಿದೆ, ಇದು ಪ್ರೊಜೆಕ್ಟರ್ ಲೈಟ್‌ಗಳೊಂದಿಗೆ ಬರುತ್ತದೆ. ಹೆಚ್ಚಿನ ಮುಂಭಾಗದ ಭಾಗವು ಭಾರೀ ಹೊದಿಕೆಯನ್ನು ಹೊಂದಿದೆ ಮತ್ತು ದೊಡ್ಡ ಟ್ರೈ-ಬಾಣದ ವಿನ್ಯಾಸ ಗ್ರಿಲ್ ಮತ್ತು ದೊಡ್ಡ ಸುತ್ತಿನ ಫೋಗ್ಲಾಂಪ್‌ಗಳನ್ನು ಹೊಂದಿದೆ.

ಈ ಮೈಕ್ರೋ ಎಸ್‌ಯುವಿ ವಿಶೇಷತೆಗಳನ್ನು ಏನಿರಬಹುದು ಎಂದು ಪೂರ್ಣ ಪ್ರಮಾಣದಲ್ಲಿ ಕಂಪನಿ ಬಹಿರಂಗಪಡಿಸಿಲ್ಲ. ಹೀಗಿದ್ದರೂ, ಪಂಚ್‌ನಲ್ಲಿ ಗ್ರಾಹಕರು 1.2 ಲೀಟರ್ ರೆವೋಟ್ರಾನ್ ಪೆಟ್ರೋಲ್ ಎಂಜಿನ್ ನಿರೀಕ್ಷಿಸಬಹುದು. ಇದೇ ಎಂಜಿನ್ ಅನ್ನು ಕಂಪನಿಯು ಅಲ್ಟ್ರೋಜ್ ಕಾರಿನಲ್ಲಿ ಬಳಸಿದೆ. ಈ ಎಂಜಿನ್ 85 ಬಿಎಚ್‌ಪಿ ಮತ್ತು 113 ಎನ್ಎಂ ಟಾರ್ಕ್ ಪವರ್ ಉತ್ಪಾದಿಸಬಲ್ಲದು. ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇರಲಿದೆ. ಜೊತೆಗೆ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯಲ್ಲೂ ಎಸ್‌ಯುವಿ ದೊರೆಯಲಿದೆ ಎನ್ನಲಾಗಿದೆ.

2025ರ ಹೊತ್ತಿಗೆ ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳಷ್ಟೇ ಮಾರಾಟವಾಗಬೇಕು!

Follow Us:
Download App:
  • android
  • ios