Asianet Suvarna News Asianet Suvarna News

Tata Safety Cars ಭಾರತದಲ್ಲಿ 5 ಸ್ಟಾರ್ ಸುರಕ್ಷತೆ ಕಾರು, ಹೊಸ ಮಾನದಂಡ ಸ್ಥಾಪಿಸಿದ ಟಾಟಾ ಮೋಟಾರ್ಸ್!

  • ಟಾಟಾ ಎಲ್ಲಾ ಕಾರುಗಳು 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ
  • ಸುರಕ್ಷತಗೆ ಮೊದಲ ಆದ್ಯತೆ ನೀಡುತ್ತಿರುವ ಆಟೋ ಕಂಪನಿ ಟಾಟಾ
  • ಪ್ರಯಾಣಿಕರ ಸುರಕ್ಷತೆಗೆ ಕ್ರಾಶ್ ಸೇಫ್ಟಿ ಜೊತೆಗೆ ತಂತ್ರಜ್ಞಾನ ಬಳಕೆ
Tata Motors Sets New Benchmarks for Automobile Safety in India with 5 stat ratings car ckm
Author
Bengaluru, First Published Jan 11, 2022, 5:16 PM IST

ಬೆಂಗಳೂರು(ಜ.11):  ಭಾರತದಲ್ಲಿ ರಸ್ತೆ ಅಪಘಾತ ಪ್ರಮಾಣ ಕಡಿಮೆ ಮಾಡಲು ಕೇಂದ್ರ ಸರ್ಕಾರ ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಸರ್ಕಾರದ ನಿಯಮಕ್ಕೂ ಮೊದಲೇ ಭಾರತದಲ್ಲಿ ಸುರಕ್ಷತೆ ಕಾರುಗಳನ್ನು ನೀಡಿದ ಹೆಗ್ಗಳಿಕೆಗೆ ಟಾಟಾ ಮೋಟಾರ್ಸ್ ಪಾತ್ರವಾಗಿದೆ. ಇದೀಗ ಕೈಗೆಟುವ ದರದಲ್ಲಿ ಅತ್ಯಂತ ಗರಿಷ್ಠ 5 ಸ್ಟಾರ್ ಸುರಕ್ಷತೆ (safety Cars) ಕಾರನ್ನು ಟಾಟಾ ಮೋಟಾರ್ಸ್(Tata Motors) ನೀಡುತ್ತಿದೆ. ಈ ಮೂಲಕ ಭಾರತದಲ್ಲಿ ಟಾಟಾ ಸುರಕ್ಷತೆ ಕಾರುಗಳಿಗೆ ಹೊಸ ಮಾನದಂಡ ನಿರ್ಮಿಸಿದೆ. ಇತರ ಆಟೋ ಕಂಪನಿಗಳು ಈ ಮಾನದಂಡ ಅನುಸರಿಸಬೇಕಿದೆ.

ಜಾಗತಿಕವಾಗಿ ಮತ್ತು ಭಾರತದಲ್ಲಿಯೂ ಕೂಡ ಹೆಚ್ಚುತ್ತಿರುವ ಅಪಘಾತಗಳಿಂದ ಆಟೋಮೊಬೈಲ್ ಕಂಪನಿಗಳಿಗೆ ಹೆಚ್ಚು ಸುರಕ್ಷಿತ ವಾಹನ ನೀಡಬೇಕಾಗಿದೆ.  ಪ್ರತಿವರ್ಷ 1.5 ಲಕ್ಷ ಅಥವಾ ಒಂದು ದಿನದಲ್ಲಿ 400 ಜೀವಗಳನ್ನು ರಸ್ತೆ ಅಪಘಾತದಲ್ಲಿ (Road Accident) ಬಲಿಯಾಗುತ್ತಿದೆ. ಭಾರತದಲ್ಲಿ ರಸ್ತೆ ಅಪಘಾತ ಪ್ರಮಾಣ ಇಳಿಕೆ ಆಗಿಲ್ಲ. ಆದ್ದರಿಂದ, ಸೆಸ್(CESS -Connected, Electric, Safe, and Shared) ಮೂಲಕ ಸಂಚಾರ ಪರಿವರ್ತನೆಯ ಅತಿಮುಖ್ಯ ಆಧಾರಸ್ಥಂಭವಾದ ಸುರಕ್ಷತೆಯು ಭಾರತದಲ್ಲಿ ಇನ್ನಷ್ಟು ಬೆಳೆಯುವುದಕ್ಕೆ ಸಜ್ಜಾಗುತ್ತಿದೆ. ಭಾರತೀಯ ಆಟೋಮೋಟಿವ್ ಉದ್ಯಮದಲ್ಲಿ ಮುಂಚೂಣಿ ಸಂಸ್ಥೆಯಾಗಿ ಟಾಟಾ ಮೋಟರ್ಸ್, ಪ್ರತಿಯೊಂದು ವರ್ಗದಲ್ಲೂ ಅತ್ಯಂತ ಸುರಕ್ಷಿತವಾದ ವಾಹನಗಳನ್ನು ಒದಗಿಸುವ ತನ್ನ ಮೂಲ ಬದ್ಧತೆಯನ್ನು ಮುಂದುವರಿಸುತ್ತಿದೆ.

Safety Car 120ರ ವೇಗದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು 4 ಪಲ್ಟಿಯಾದ ಟಾಟಾ ಪಂಚ್, ಐವರು ಪ್ರಯಾಣಿಕರು ಸೇಫ್!

ಕಳೆದ ಒಂದು ವರ್ಷದಲ್ಲಿ, ಟಾಟಾ ಮೋಟರ್ಸ್, ಸುರಕ್ಷತೆಗಾಗಿ ಹೊಸ ಮಾನದಂಡಗಳನ್ನು ಸೃಷ್ಟಿಮಾಡುವಲ್ಲಿ ಮಹತ್ತರವಾದ ಹೆಜ್ಜೆಗಳನ್ನಿಟ್ಟಿದೆ: 

ಭಾರತದಲ್ಲಿ ಕ್ರಾಶ್ ಟೆಸ್ಟ್(Crash Test)  ಮಾನದಂಡಗಳು ಇಲ್ಲದಂತಹ ಸಮಯದಲ್ಲಿ 1997ರಲ್ಲಿ ಕ್ರಾಶ್ ಟೆಸ್ಟ್ ಘಟಕದಲ್ಲಿ ಹೂಡಿಕೆ ಮಾಡಿದ ಪ್ರಪ್ರಥಮ ಭಾರತೀಯ ಉತ್ಪಾದನಾ ಸಂಸ್ಥೆ ಟಾಟಾ ಮೋಟರ್ಸ್. ಕಾಂಪ್ಯಾಕ್ಟ್ SUV ನೆಕ್ಸಾನ್ ಗ್ಲೋಬಲ್ NCAP 5 ರೇಟಿಂಗ್ ಪಡೆದ ಪ್ರಪ್ರಥಮ ಉತ್ಪನ್ನವಾಗಿದ್ದು, ಗ್ರಾಹಕರಿಗೆ ಸುರಕ್ಷತೆಯನ್ನು ಮುನ್ನೆಲೆಗೆ ತಂದಿತ್ತು. ಇದರ ಹಿಂದೆಯೇ ಬಂದ ಪ್ರೀಮಿಯಮ್ ಹ್ಯಾಚ್ ಆಲ್ಟೋಜ್, ಪ್ರಾರಂಭಗೊಂಡಾಗಲೇ ಜಾಗತಿಕ NCAP 5 ಸ್ಟಾರ್ ರೇಟಿಂಗ್‌ನೊಂದಿಗೆ ಪರಿಚಯಗೊಂಡು ಹೊಸ ಮಾನದಂಡ ಸ್ಥಾಪಿಸಿತು.

India safest cars ಕೈಗೆಟುಕುವ ದರದಲ್ಲಿ ಬಿಡುಗಡೆಯಾದ ವರ್ಷದ ಬೆಸ್ಟ್ ಸೇಫ್ಟಿ ಕಾರು ಲಿಸ್ಟ್!

ವಯಸ್ಕ ಸವಾರ ಸಂರಕ್ಷಣೆಗಾಗಿ ಟಾಟಾ ಟೈಗರ್ ಮತ್ತು ಟಾಟಾ ಟಿಯಾಗೊ 2020 ರಲ್ಲಿ 4  ಸ್ಟಾರ್ ಗ್ಲೋಬಲ್ NCAP ರೇಟಿಂಗ್ಸ್ ಪಡೆದುಕೊಂಡು, ಉಪವರ್ಗದಲ್ಲಿ ಅತ್ಯಧಿಕ ಸುರಕ್ಷತೆ ರೇಟಿಂಗ್ ಪಡೆದ ಏಕೈಕ ಕೊಡುಗೆಗಳಾಗಿದ್ದವು. ಇದಕ್ಕೆ ಸಮಾನಾಂತರವಾಗಿ, ಇತ್ತೀಚೆಗೆ ಪರಿಚಯಗೊಂಡಿರುವ ಟೈಗರ್ ಇವಿ, ದೇಶದಲ್ಲಿ 4-ನಕ್ಷತ್ರಗಳ NCAP ರೇಟಿಂಗ್ ಪಡೆದುಕೊಂಡ ಏಕೈಕ ಇವಿ ಆಗಿದೆ.

ಅನೇಕ ವರ್ಷಗಳಿಂದ ಅವರ ಬಹುತೇಕ ಕೊಡುಗೆಗಳು ಏರ್‌ಬ್ಯಾಗ್‌ಗಳು, ಸೀಟ್-ಬೆಲ್ಟ್ ರಿಮೈಂಡರ್‌ಗಳು, ಘಂಟೆಗೆ 80 ಕಿ.ಮೀ.ಗಿಂತ ವೇಗದ ವೇಗಕ್ಕೆ ಅಲರ್ಟ್ ಸಿಸ್ಟಮ್ಸ್,  ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್, ಮತ್ತು ತುರ್ತುಸ್ಥಿತಿಗಳಲ್ಲಿ ಕೇಂದ್ರೀಯ ಲಾಕಿಂಗ್ ಸಿಸ್ಟಮ್‌ಗೆ ಬದಲು ಮ್ಯಾನ್ಯುವಲ್ ಓವರ್‌ರೈಡ್ ಸೌಲಭ್ಯಗಳೊಂದಿಗೆ ಬರುತ್ತಿವೆ. ಪ್ರಭಾವ ಶಕ್ತಿಯನ್ನು ಹೀರಿಕೊಂಡು ಪ್ರಯಾಣಿಕರನ್ನು ಸಂರಕ್ಷಿಸುವ ಫೋರ್ಟಿಫೈಡ್ ಕ್ಯಾಬಿನ್‌ಗಳು, ಟೈರ್ ಒತ್ತಡ ಮೇಲುಸ್ತುವಾರಿ ಸಿಸ್ಟಮ್, ಸೈಡ್ ಮತ್ತು ಕರ್ಟನ್ ಏರ್‌ಬ್ಯಾಗ್ಸ್, ಮಗುವಿನ ಸುರಕ್ಷತೆಗಾಗಿ ISOFIX ಮುಂತಾದ ವರ್ಗ-ಮುಂಚೂಣಿ ಸುರಕ್ಷತಾ ಅಂಶಗಳ ಮೂಲಕ ವರ್ಧಿತ ವಯಸ್ಕ ಹಾಗೂ ಮಗು ಪ್ರಯಾಣಿಕರ ಸುರಕ್ಷತೆಯನ್ನು ಒದಗಿಸುವಲ್ಲಿ ಸಂಸ್ಥೆಯು ಸಕ್ರಿಯವಾಗಿದೆ. 

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್: ಟಾಟಾ ಟಿಗೋರ್ ಇವಿ ಗರಿಷ್ಠ ಸುರಕ್ಷೆಯ ಕಾರ್

ಇದು, 2020ರ ನ್ಯೂ ಫಾರೆವರ್ ಶ್ರೇಣಿಯಲ್ಲಿ ಇನ್ನಷ್ಟು ವರ್ಧನೆಗೊಂಡು ವಿನ್ಯಾಸ, ಪವರ್‌ಟ್ರೇನ್ ಮತ್ತು ತಂತ್ರಜ್ಞಾನದಲ್ಲಿ ಪ್ರಮುಖ ನವೀಕರಣದ ಜೊತೆಗೆ ವರ್ಗದಲ್ಲೇ ಅತ್ಯುತ್ತಮವಾದ ಅಂಶವನ್ನು ಹೊಂದಿತ್ತು.

ಕಳೆದ  ಕೆಲವು ವರ್ಷಗಳಲ್ಲಿ ಸಂಸ್ಥೆಯು ಪ್ಯಾಸೆಂಜರ್ ವೆಹಿಕಲ್ಸ್(ಪಿವಿ), ಎಲೆಕ್ಟ್ರಿಕ್  ವೆಹಿಕಲ್ಸ್(ಇವಿ) ಮತ್ತು ಕಮರ್ಶಿಯಲ್ ವೆಹಿಕಲ್ಸ್(ಸಿವಿ)ಗಳಾದ್ಯಂತ, ಎಲೆಕ್ಟಾನಿಕ್ಸ್ ಸ್ಟೆಬಿಲಿಟಿ ಕಂಟ್ರೋಲ್. ಆಟೋಮ್ಯಾಟಿಕ್ ಟ್ರಾಕ್ಷನ್  ಕಂಟ್ರೋಲ್ ಮತ್ತು ಹಿಲ್ ಸ್ಟಾರ್ಟ್ ಏಯ್ಡ್ ಮುಂತಾದ ಸುರಕ್ಷತಾ-ಸಂಬಂಧಿತ ತಂತ್ರಜ್ಞಾನಗಳ ಶ್ರೇಣಿಯನ್ನೇ ಪರಿಚಯಿಸಿದೆ.

ಸಂಸ್ಥೆಯು  ಅಡ್ವಾನ್ಸ್ ಟೆಕ್ ಚಾಲಕ ನೆರವು ಸಿಸ್ಟಮ್, ಚಾಲಕ-ಆರೋಗ್ಯ ಮೇಲುಸ್ತುವಾರಿ ಸಿಸ್ಟಮ್, ಸಂಪರ್ಕಗೊಂಡ ವಾಹನ ವೇದಿಕೆ ಅಂಶಗಳು ಇತ್ಯಾದಿ ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳು ಹಾಗೂ ತಂತ್ರಜ್ಞಾನಗಳಲ್ಲಿ ಹೂಡಿಕೆಯನ್ನು ಮುಂದುವರಿಸಿದೆ. ಸಂಸ್ಥೆಯು ವಿದ್ಯುತ್ ಸಂಚಾರ ಉದ್ದಿಮೆಯ ಮೇಲೆ ದೊಡ್ಡ ಭರವಸೆ ಇರಿಸಿದೆ. ಅದರ ಇವಿಗಳು, ಆಂತರಿಕ ಕಂಬಶ್ಚನ್ ಇಂಜಿನ್ ಎದುರಾಳಿಗಳಿಗೆ ಸಮನಾಗಿರುವುದು ಮಾತ್ರವಲ್ಲದೆ ಇವಿಗಳಿಗೆ ಕಡ್ಡಾಯಗೊಳಿಸಿರುವ ಹೆಚ್ಚುವರಿ ಅಗತ್ಯಗಳನ್ನೂ ಪೂರೈಸುತ್ತವೆ.
 
ಇಂದಿನ ಖರೀದಿದಾರರು, ಅಗ್ಗದ ಬೆಲೆ ಮತ್ತು ಕಾರ್ಯಕ್ಷಮತೆ ಮುಂತಾದ ಸಾಂಪ್ರದಾಯಿಕ ಗುಣಲಕ್ಷಣಗಳಾಚೆ ನೋಡುತ್ತಿದ್ದಾರೆ ಮತ್ತು ಖರೀದಿ ನಿರ್ಧಾರ ಕೈಗೊಳ್ಳುವ ಮುನ್ನ ಸುರಕ್ಷತೆ ಅವರ ಆದ್ಯತೆಯಾಗಿರುತ್ತದೆ. ಪಿವಿ ಆದಾಯದಲ್ಲಿ ನಮ್ಮ ಬೆಳವಣಿಗೆಯು ಈ ನಿಟ್ಟಿನಲ್ಲಿ ಭಾರತೀಯ ಕಾರು ಖರೀದಿದಾರರಲ್ಲಿ ಬೆಳೆಯುತ್ತಿರುವ ಟ್ರಾಕ್ಷನ್ ಮತ್ತು ಪ್ರಸಿದ್ಧಿಯನ್ನು ಪ್ರತಿಫಲಿಸುತ್ತದೆ. ಸುರಕ್ಷತೆಗಾಗಿ ದೀರ್ಘಾವಧಿ ಮಾರ್ಗಪಥದ ನಿರ್ಮಾಣ ಮಾಡುವ ಮೂಲಕ ನಾವು ಎಲ್ಲರಿಗಿಂತ ಮುಂದಿದ್ದೇವೆ ಮತ್ತು ತಜ್ಞ ಇಂಜಿನಿಯರ್‌ಗಳ ತಂಡ, ಹೂಡಿಕೆಗಳು, ವಿನೂತನ ಪರಿಕಲ್ಪನೆಗಳ ಅಳವಡಿಕೆ, ಸರಿಯಾದ ತಂತ್ರಜ್ಞಾನ ಭಾಗೀದಾರರ ಆಯ್ಕೆ, ಫ್ರೂಗಲ್ ಇಂಜಿನಿಯರಿಂಗ್ ಮೂಲಕ ಬೃಹತ್ ಮಾರುಕಟ್ಟೆಗಳಿಗೆ ಪರಿಹಾರ ಒದಗಣೆಗಳ ಮೂಲಕ ನಾವು ಇದನ್ನು ಕಂಡುಕೊಂಡಿದ್ದೇವೆ. ನಮ್ಮ ಜಿಎನ್‌ಸಿಎಪಿ ಸಾಧನೆಗಳು, ಸುರಕ್ಷತೆಯ ಅತ್ಯುನ್ನತ ಜಾಗತಿಕ ಮಾನದಂಡಗಳನ್ನು ಒದಗಿಸಬಲ್ಲ ಉತ್ಪನ್ನಗಳನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ದೃಢ ಬದ್ಧತೆಗೆ ಪುರಾವೆಯಾಗಿದೆ. ಆಟೋಮೋಟಿವ್ ಕ್ಷೇತ್ರದಲ್ಲಿ ನಾವು ಪರಿವರ್ತನೆಯ ಹೊಸ ಅಧ್ಯಾಯದೆಡೆಗೆ ತಿರುಗುತ್ತಿರುವಂತಹ ಸಂದರ್ಭದಲ್ಲಿ, ಟಾಟಾ ಮೋಟರ್ಸ್, ಪ್ಯಾಸೆಂಜರ್ ಕಾರ್ ಸುರಕ್ಷತೆಯಲ್ಲಿ ತನ್ನ ಮುಂದಾಳತ್ವವನ್ನು ಕಾಪಾಡಿಕೊಂಡು, ಇನ್ನೂ ಬಹಳಷ್ಟು ವರ್ಷಗಳ ಕಾಲ ಗ್ರಾಹಕರ ನೆಚ್ಚಿನ ಆಯ್ಕೆಯಾಗಿ ಉಳಿಯಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಟಾಟಾ ಮೋಟರ್ಸ್ ಅಧ್ಯಕ್ಷ  ರಾಜೇಂದ್ರ ಪೇಟ್ಕರ್ ಹೇಳಿದ್ದಾರೆ.

Follow Us:
Download App:
  • android
  • ios