ಮುಂಬೈ(ಜ.07): ಹೊಸ ವರ್ಷವನ್ನು ಅಬ್ಬರದಿಂದ ಪ್ರಾರಂಭಿಸಿದ ಟಾಟಾ ಮೋಟಾರ್ಸ್ ತನ್ನ ಸಾಂಪ್ರದಾಯಿಕ ಬ್ರಾಂಡ್ `ಸಫಾರಿ' ಯನ್ನು ತನ್ನ ಮುಂಬರುವ ಪ್ರಮುಖ SUV ಕಾರನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡುತ್ತಿದೆ. ನೂತನ ಸಫಾರಿ ಕಾರು ಗ್ರಾವಿಟಾಸ್ ಹೆಸರಿನಲ್ಲಿ ಬಿಡುಗಡೆ ಮಾಡುವುದಾಗಿ ಟಾಟಾ ಹೇಳಿದೆ. 

ಕಡಿಮೆ ಬಡ್ಡಿ- ಕಂತು, ಶೇ.85ರಷ್ಟು ಸಾಲ; ಟಾಟಾ ಮೋಟಾರ್ಸ್ ಕಾರು ಖರೀದಿ ಈಗ ಸುಲಭ

ಟಾಟಾ ಸಫಾರಿ ಭಾರತಕ್ಕೆ SUV ಜೀವನಶೈಲಿಯನ್ನು ಪರಿಚಯಿಸಿತು. ಈ ವಿಭಾಗವನ್ನು ಭಾರತದಲ್ಲಿ ಮನಮೋಹಕಗೊಳಿಸಿ ಇತರ ಪ್ರತಿಸ್ಪರ್ಧಿಗಳು ಅನುಸರಿಸುವಂತೆ ಮಾಡಿತು. ಎರಡು ದಶಕಗಳಿಂದ, ಸಫಾರಿ ಪ್ರತಿಷ್ಠೆ ಮತ್ತು ಕಾರ್ಯಕ್ಷಮತೆಯನ್ನು ಪ್ರತಿನಿಧಿಸಿದೆ, ಮತ್ತು ಅದರ ಹೊಸ ಅವತಾರದಲ್ಲಿ, ಸಫಾರಿ ಈ ಶ್ರೀಮಂತ ಕಲ್ಪನೆಯನ್ನು ಮತ್ತು ಅದರ ಬಲವಾದ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ.

ಹೊಸ ಬಣ್ಣ, ಹೊಸ ಎಂಜಿನ್, ಬರುತ್ತಿದೆ i20,ಪೋಲೊ ಪ್ರತಿಸ್ಪರ್ಧಿ ಟಾಟಾ ಅಲ್ಟ್ರೋಜ್!..

ನಮ್ಮ ಪ್ರಮುಖ ಎಸ್‍ಯುವಿ-ಸಫಾರಿಗಳನ್ನು ಮತ್ತೆ ಪರಿಚಯಿಸಲು ನಾವು ಹೆಮ್ಮೆಪಡುತ್ತೇವೆ ಮತ್ತು ಸಂತೋಷಿಸುತ್ತೇವೆ. ಬಲವಾದ ಅನುಸರಣೆಯನ್ನು ಹೊಂದಿರುವ ಅಪ್ರತಿಮ ಬ್ರಾಂಡ್ ಸಫಾರಿ, ಎರಡು ದಶಕಗಳಿಂದಲೂ ಭಾರತೀಯ ರಸ್ತೆಗಳಲ್ಲಿ ಹೆಚ್ಚು ಬೇಡಿಕೆಯ ಎಸ್‍ಯುವಿ ಆಗಿದೆ. ತನ್ನ ಹೊಸ ಅವತಾರದಲ್ಲಿ, ವಿಶೇಷ ಅನುಭವಗಳು ಮತ್ತು ಸಾಹಸಗಳನ್ನು ಬಯಸುವ ಸಾಮಾಜಿಕವಾಗಿ ಸಕ್ರಿಯ, ಮೋಜನ್ನು ಬಯಸುವ ಪ್ರೀತಿಯ ಗ್ರಾಹಕರಿಗೆ ಸಫಾರಿ ಖಂಡಿತವಾಗಿ ಮೆಚ್ಚಿಗೆಯಾಗುತ್ತದೆ. ಇದರ ವಿನ್ಯಾಸ, ಕಾರ್ಯಕ್ಷಮತೆ, ಬಹುಮುಖತೆ, ವೈಶಿಷ್ಟ್ಯಗಳು ಮತ್ತು ದೀರ್ಘಕಾಲೀನ ನಿರ್ಮಾಣ ಗುಣಮಟ್ಟ, ಎಸ್‍ಯುವಿ ಜೀವನಶೈಲಿಯನ್ನು ಮತೆತ್ ಜೀವಂತಗೊಳಿಸಿ ನಿರಂತರ ಆನಂದವನ್ನು ನೀಡುತ್ತದೆ. ಸಫಾರಿ ಪುನರ್ ಆರಂಭ ಮಾರುಕಟ್ಟೆಯನ್ನು ಮತ್ತೊಮ್ಮೆ ಚೈತನ್ಯಗೊಳಿಸುತ್ತದೆ ಮತ್ತು ಅದರ ಆರಾಧನಾ ಸ್ಥಾನಮಾನವನ್ನು ಹೆಚ್ಚಿಸುತ್ತದೆ ಎಂದು ನಾವು ನಂಬುತ್ತೇವೆ. ಟಾಟಾ ಮೋಟಾರ್ಸ್‍ನ ಪ್ಯಾಸೆಂಜರ್ ವೆಹಿಕಲ್ಸ್ ಬಿಸಿನೆಸ್ ಯುನಿಟ್ (ಪಿವಿಬಿಯು) ಅಧ್ಯಕ್ಷ ಶ್ರೀ ಶೈಲೇಶ್ ಚಂದ್ರ ಹೇಳಿದರು, "

ಅವರು ಆಕರ್ಷಕ ವಿನ್ಯಾಸ, ಸಾಟಿಯಿಲ್ಲದ ಬಹುಮುಖತೆ, ಭವ್ಯ ಮತ್ತು ಆರಾಮದಾಯಕ ಒಳಾಂಗಣಗಳು, ಆಧುನಿಕ, ಬಹುಮುಖಿ ಜೀವನಶೈಲಿಗಾಗಿ ಅತ್ಯುತ್ತಮ ಕಾರ್ಯಕ್ಷಮತೆ ನೀಡಬೇಕೆಂದು ಬಯಸುವ ಹೊಸ ಯುಗದ ಎಸ್‍ಯುವಿ ಗ್ರಾಹಕರನ್ನು ತೃಪ್ತಿಪಡಿಸುವ ಸಲುವಾಗಿ ಹೊಸ ಸಫಾರಿ ರೂಪುಗೊಂಡಿದೆ. 
 ಇದು ತನ್ನ ಪ್ರಬಲ ನಿಲುವು, ಸಾಟಿಯಿಲ್ಲದ ಕಾರ್ಯಕ್ಷಮತೆ, ಸುಗಮ ಚಾಲನೆ, ಐಷಾರಾಮಿ ಸೌಕರ್ಯ, ವಿಶಾಲವಾದ ಒಳಾಂಗಣ ಮತ್ತು ಹೊಸ ಯುಗದ ಸಂಪರ್ಕಿತ ತಂತ್ರಜ್ಞಾನದೊಂದಿಗೆ ದೈನಂದಿನ ಪ್ರಯಾಣ ಮತ್ತು ಕುಟುಂಬದೊಂದಿಗೆ  ವಿಹಾರಗಳಿಗೆ ಹೋಗಲು ಸಹ ಸೂಕ್ತವಾಗಿದ್ದು ಈ ಮೂಲಕ ಗ್ರಾಹಕರಿಗೆ `ತಮ್ಮ ಜೀವಂತಿಕೆಯನ್ನು ಮರುಪಡೆಯಲು' ಪ್ರೋತ್ಸಾಹಿಸುತ್ತದೆ.

ಟಾಟಾ ಮೋಟಾರ್ಸ್‍ನ ಸ್ವತಃ ವಿಶ್ವಾದ್ಯಂತ ಎಸ್‍ಯುವಿಗಳ ಅತ್ಯುನ್ನತ ಮಾನದಂಡವಾದ ಪ್ರಶಸ್ತಿ ವಿಜೇತ ಇಂಪ್ಯಾಕ್ಟ್ 2.0 ವಿನ್ಯಾಸ ಭಾಷೆಯನ್ನು ಲ್ಯಾಂಡ್ ರೋವರ್‍ನಿಂದ ಹೆಸರಾಂತ ಡಿ 8 ಪ್ಲಾಟ್‍ಫಾರ್ಮ್‍ನಿಂದ ಪಡೆದ ಸಂರಚನೆಯ ಔಒಇಉಂಖಅ ನ ಸಾಬೀತಾದ ಸಾಮಥ್ರ್ಯದೊಂದಿಗೆ ಸಂಯೋಜಿಸುವ ಮೂಲಕ ಸಫಾರಿ ಪ್ರತಿಷ್ಠೆ ಮತ್ತು ಮಹೋನ್ನತ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.  ಈ ಹೊಂದಾಣಿಕೆಯ ಸಂರಚನೆಯು ಆಲ್-ವೀಲ್ ಡ್ರೈವ್ ಮತ್ತು ಭವಿಷ್ಯದಲ್ಲಿ ವಿದ್ಯುದ್ದೀಕರಣದ ಸಾಧ್ಯತೆಗಳನ್ನು ಒಳಗೊಂಡಂತೆ ಮತ್ತಷ್ಟು ಡ್ರೈವ್‍ಟ್ರೈನ್ ವರ್ಧನೆಗಳನ್ನು ಅನುಮತಿಸುತ್ತದೆ.

ಈ ಜನವರಿಯಲ್ಲಿ ಶೋ ರೂಂಗಳಿಗೆ ಆಗಮಿಸುತ್ತಿದ್ದು, ಶೀಘ್ರದಲ್ಲೇ ಹೊಸ ಸಫಾರಿಗಾಗಿ ಬುಕಿಂಗ್ ಪ್ರಾರಂಭವಾಗಲಿದೆ.