ಮುಂಬೈ(ಜ.04) : ಟಾಟಾ ಮೋಟಾರ್ಸ್, ತಮ್ಮ ಗ್ರಾಹಕರಿಗೆ ತಮ್ಮ ನೆಚ್ಚಿನ ಟಾಟಾ ಕಾರು ಖರೀದಿಸಲು ಆಕರ್ಷಕ ಹಣಕಾಸು ಕೊಡುಗೆಗಳನ್ನು ಪರಿಚಯಿಸುತ್ತಿದೆ.  ಇದಕ್ಕಾಗಿ ಕರ್ನಾಟಕ ಬ್ಯಾಂಕ್‍ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.  ಇದರಿಂದ ದೇಶಾದ್ಯಂತ ಟಾಟಾ ವಾಹನ ಖರೀದಿ  ಸುಲಭ ಮತ್ತು ಸರಳವಾಗಿದೆ.

ಮಳೆಗಾಲದಲ್ಲಿ ಎಲೆಕ್ಟ್ರಿಕ್ ವಾಹನ ಅಪಾಯಕಾರಿಯಲ್ಲ: ಸತ್ಯ-ಮಿಥ್ಯಗಳ ಸಂಪೂರ್ಣ ಮಾಹಿತಿ!.

ಗ್ರಾಹಕರು ಟಾಟಾ ಮೋಟಾರ್ಸ್ ವಾಹನದ ಆನ್-ರೋಡ್ ಬೆಲೆಯಲ್ಲಿ 85% ವರೆಗಿನ ಸಾಲವನ್ನು ಬಾಹ್ಯ ಬೆಂಚ್‍ಮಾರ್ಕ್ ಸಾಲ ದರಕ್ಕೆ (ಇಬಿಎಲ್‍ಆರ್) ಲಿಂಕ್ ಮಾಡಿದ ಬಡ್ಡಿದರದೊಂದಿಗೆ ಪಡೆಯಬಹುದಾಗಿದ್ದು, ಇದನ್ನು ನಿಯತಕಾಲಿಕವಾಗಿ ಬ್ಯಾಂಕಿನ ವೆಬ್‍ಸೈಟ್‍ನಲ್ಲಿ ನವೀಕರಿಸಲಾಗುತ್ತದೆ. ಈ ಸಾಲಕ್ಕೆ ಗರಿಷ್ಠ 84 ತಿಂಗಳ ಅವಧಿಯನ್ನು ನಿಗದಿಪಡಿಸಲಾಗಿದೆ.

ಕಡಿಮೆ ಬಜೆಟ್‌ನಲ್ಲಿ ಕಾರು ಖರೀದಿಸುವ ಪ್ಲಾನ್ ನಿಮ್ಮದಾಗಿದ್ದರೆ, ಇಲ್ಲಿವೆ 5 ಲಕ್ಷ ರೂ ಒಳಗಿನ ಕಾರು!.

ನಮ್ಮ ಗ್ರಾಹಕರಿಗೆ ಆಕರ್ಷಕ ಹಣಕಾಸು ಯೋಜನೆಗಳನ್ನು ಪರಿಚಯಿಸಲು ನಾವು ಕರ್ನಾಟಕ ಬ್ಯಾಂಕ್‍ನೊಂದಿಗೆ ಸಹಭಾಗಿತ್ವವನ್ನು ಹೊಂದಲು ನಾವು ಉತ್ತೇಜಿತರಾಗಿದ್ದೇವೆ. ನಮ್ಮ ಗ್ರಾಹಕರಿಗೆ ಸಂಪೂರ್ಣ ಮಾಲೀಕತ್ವದ ಅನುಭವದ ಸಂತೋಷಕ್ಕೆ ಕೊಡುಗೆ ನೀಡುತ್ತಲೇ ಸುರಕ್ಷಿತ ವೈಯಕ್ತಿಕ ಚಲನಶೀಲತೆ ಪರಿಹಾರಗಳನ್ನು ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಹೆಚ್ಚು ದೊರಕುವಂತೆ ಮಾಡಲು ಇದು ನಮ್ಮ ನಿರಂತರ ಪ್ರಯತ್ನದೊಂದಿಗಿನ ಹೊಂದಾಣಿಕೆಯಾಗಿದೆ. ಈ ಕೊಡುಗೆಗಳು ಗ್ರಾಹಕರ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ ಮತ್ತು ಎಲ್ಲರಿಗೂ ಕಾರನ್ನು ಖರೀದಿಸುವ ಪ್ರಕ್ರಿಯೆಯನ್ನು ಹೆಚ್ಚು ಅನುಕೂಲಕರವಾಗಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಟಾಟಾ ಮೋಟಾರ್ಸ್‍ನ ಪ್ರಯಾಣಿಕರ ವಾಹನ ವ್ಯವಹಾರ ಘಟಕದ (ಪಿವಿಬಿಯು) ಮಾರಾಟ, ಮಾರುಕಟ್ಟೆ ಮತ್ತು ಗ್ರಾಹಕ ಸೇವೆಯ ಉಪಾಧ್ಯಕ್ಷ ರಾಜನ್ ಅಂಬಾ ಹೇಳಿದರು.

ಟಾಟಾ ಮೋಟಾರ್ಸ್‍ನಿಂದ ವಿಶ್ವ ದರ್ಜೆಯ ಉತ್ಪನ್ನಗಳನ್ನು ಸ್ವಂತವಾಗಿಸಿಕೊಳ್ಳುವ ಕನಸನ್ನು ಈಡೇರಿಸುವ ನಮ್ಮ ಗ್ರಾಹಕರ ಆಕಾಂಕ್ಷೆಗಳನ್ನು ಈಡೇರಿಸುವ ಪ್ರಯತ್ನದಲ್ಲಿ ಟಾಟಾ ಮೋಟಾರ್ಸ್‍ನೊಂದಿಗಿನ ಈ ಸಹಭಾಗಿತ್ವವು ಮತ್ತೊಂದು ಮೈಲಿಗಲ್ಲಾಗಲಿದೆ. ಕಂಪನಿಯು ತಯಾರಿಸಿದ ಕಾರುಗಳನ್ನು ಹೊಂದಲು ಹಣಕಾಸು ಒದಗಿಸುವುದಕ್ಕಾಗಿ ಟಾಟಾ ಮೋಟಾರ್ಸ್ ಈಗ ನಮ್ಮ ಬ್ಯಾಂಕ್‍ಗೆ ಆದ್ಯತೆಯ ಹಣಕಾಸು ಸೇವಕರ ಸ್ಥಾನಮಾನವನ್ನು ನೀಡುತ್ತದೆ. ಈ ಪ್ರಸ್ತಾಪವು ಗ್ರಾಹಕರಿಗೆ ಇನ್ನಷ್ಟು ಆಕರ್ಷಕವಾಗುವುದರಿಂದ ಕರ್ನಾಟಕ ಬ್ಯಾಂಕ್ ತನ್ನ ಪ್ರಸ್ತುತ ಮತ್ತು ಹೊಸ ಗ್ರಾಹಕರಿಗೆ ಅವರ ಹೆಚ್ಚಿನ ಸಂತೋಷಕ್ಕಾಗಿ ಪ್ರಮುಖವಾಗಿ ಕಲ್ಪಿಸಲಾಗಿರುವ ವೇಗದ ಸಂಸ್ಕರಣಾ ಸಾಮಥ್ರ್ಯಗಳೊಂದಿಗೆ ಸಕ್ರಿಯಗೊಳಿಸಲಾದ ತಮ್ಮಲ್ಲೇ ಅಭಿವೃದ್ಧಿಪಡಿಸಿದ ಎಂಡ್-ಟು-ಎಂಡ್ (ಸಂಪೂರ್ಣ)  ಡಿಜಿಟಲ್ ಪ್ಲಾಟ್‍ಫಾರ್ಮ್ ಮೂಲಕ ಕಾರು ಸಾಲಗಳನ್ನು ನೀಡುತ್ತಿದೆ. ವೈಯಕ್ತಿಕ ವಾಹನವನ್ನು ಹೊಂದಬೇಕೆಂಬ ನಮ್ಮ ಅನೇಕ ಗ್ರಾಹಕರ ಕನಸುಗಳು ಈಗ ಈ ಸೌಲಭ್ಯದೊಂದಿಗೆ ನನಸಾಗಲಿವೆ ಮತ್ತು ಈ ಸಹಭಾಗಿತ್ವವು ಅವರ ಮುಂದಿನ ಬೆಳವಣಿಗೆಯ ಪ್ರಯಾಣದಲ್ಲಿ ಎರಡೂ ಬ್ರಾಂಡ್‍ಗಳಿಗೆ ಲಾಭದಾಯಕ ವ್ಯವಸ್ಥೆಯಾಗಿ ಪರಿಣಮಿಸುತ್ತದೆ ಎಂದು ನನಗೆ ಖಾತರಿ ಇದೆ ಎಂದು ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀ ಮಹಾಬಲೇಶ್ವರ ಎಂ.ಎಸ್ ಹೇಳಿದರು.

ಇವುಗಳೊಂದಿಗೆ, ಸಾಲಕ್ಕೆ ಅರ್ಜಿ ಸಲ್ಲಿಸುವ ವ್ಯಕ್ತಿಗಳು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು ಆದಾಯ ತೆರಿಗೆಯನ್ನು ಕಟ್ಟುವವರಾಗಿರಬೇಕು. ಈ ಯೋಜನೆಯನ್ನು ಕೃಷಿಕರು ಮತ್ತು ಕೃಷಿ ಜಮೀನುಗಳ ಮಾಲೀಕರು ಮತ್ತು ಅನಿವಾಸಿ ಭಾರತೀಯ (ಎನ್‍ಆರ್‍ಐ) ಗ್ರಾಹಕರು ಸಹ ಪಡೆಯಬಹುದು. ಒಂದು ಕಂಪನಿ / ಸಂಸ್ಥೆ / ಮಂಡಳಿ / ಸಂಘ / ಸೊಸೈಟಿಯು ತನ್ನ ಹೆಸರಿನಲ್ಲಿ ಅಥವಾ ತನ್ನ ಕಾರ್ಯನಿರ್ವಾಹಕ / ವ್ಯವಸ್ಥಾಪಕ ನಿರ್ದೇಶಕ / ವ್ಯವಸ್ಥಾಪಕ ಪಾಲುದಾರ / ವ್ಯವಸ್ಥಾಪಕ ಟ್ರಸ್ಟೀ / ಅಧ್ಯಕ್ಷ / ಕಾರ್ಯದರ್ಶಿ ಗಳ ಹೆಸರಿನಲ್ಲಿ ಸಾಲವನ್ನು ಪಡೆಯುವುದು ಸಹ ಈ ಕಾರ್ಯಕ್ರಮದ ಅಡಿಯಲ್ಲಿ ಧನಸಹಾಯವನ್ನು ಪಡೆಯಲು ಅರ್ಹವಾಗಿದೆ.