Asianet Suvarna News Asianet Suvarna News

ಕಾರು ಖರೀದಿಸಿ ಭಾರತೀಯ ಸಂಪ್ರದಾಯದಂತೆ ಪೂಜೆ, ಕೊರಿಯಾ ರಾಯಭಾರಿ ನಡೆಗೆ ಭಾರಿ ಮೆಚ್ಚುಗೆ!

ದಕ್ಷಿಣ ಕೊರಿಯಾದ ರಾಯಭಾರಿ ಹೊಚ್ಚ ಹೊಸ ಹ್ಯುಂಡೈ ಕಾರನ್ನು ಭಾರತೀಯ ಸಂಪ್ರದಾಯದ ಪ್ರಕಾರ ಪೂಜೆ ಮೂಲಕ ಸ್ವಾಗತಿಸಿದ್ದಾರೆ. ಈ ವಿಡಿಯೋವನ್ನು ಸೌತ್ ಕೊರಿಯಾ ರಾಯಭಾರಿ ಕಚೇರಿ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೌತ್ ಕೊರಿಯಾ ರಾಯಭಾರಿ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
 

south korean ambassador to india perform Pooja for his brand new hyundai car video viral ckm
Author
First Published Sep 27, 2023, 6:35 PM IST

ನವದೆಹಲಿ(ಸೆ.27) ಭಾರತದಲ್ಲಿ ಹೊಸ ಕಾರು ಅಥವಾ ವಾಹನ ಖರೀದಿಸಿದರೆ ಪೂಜೆ ಮಾಡುತ್ತಾರೆ. ವಾಹನಕ್ಕೆ ದೇವರ ಅನುಗ್ರಹ ಇರಲಿ ಎಂದು ಪೂಜೆ ಮಾಡಲಾಗುತ್ತದೆ. ಈ ಸಂಪ್ರದಾಯ ಹಿಂದೂ ಕುಟುಂಬದಲ್ಲಿ ಸಾಮಾನ್ಯ. ಇದೀಗ ಸೌತ್ ಕೊರಿಯಾ ರಾಯಭಾರಿ ಹೊಚ್ಚ ಹೊಸ ಹ್ಯುಂಡೈ ಜೆನಿಸಿಸ್ GV80 ಕಾರನ್ನು ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿ ಸ್ವಾಗತಿಸಿದ್ದಾರೆ. ಈ ವಿಡಿಯೋವನ್ನು  X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೌತ್ ಕೊರಿಯಾ ರಾಯಭಾರಿ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಭಾರತದಲ್ಲಿರುವ ದಕ್ಷಿಣ ಕೊರಿಯಾ ರಾಯಭಾರಿ ಚಾಂಗ್ ಜೆ ಬಾಕ್‌ಗೆ ಹೊಸ ಕಾರು ಬಂದಿದೆ. ರಾಯಭಾರಿಗಳ ಓಡಾಟಕ್ಕೆ ನೀಡಿರುವ ಅಧಿಕೃತ ಕಾರು ಇದಾಗಿದೆ.  ಹೊಸ ಕಾರು ಡೆಲಿವರಿ ದಿನದಂದು ಚಾಂಗ್ ಜೆ ಬಾಕ್‌ ಭಾರತೀಯ ಸಂಪ್ರದಾಯದಂತೆ ಪೂಜೆ ಮಾಡಿಸಿದ್ದಾರೆ. ಕಾರನ್ನು ರಾಯಭಾರ ಕಚೇರಿಗೆ ಡೆಲಿವರಿ ಪಡೆಯಲಾಗಿದೆ. ಇತ್ತ ಸೌತ್ ಕೊರಿಯಾ ರಾಯಭಾರ ಅಧಿಕಾರಿ ಚಾಂಗ್ ಜೆ ಬಾಕ್‌, ಪೂಜೆಗಾಗಿ ಅರ್ಚಕರನ್ನು ಕರೆಸಿದ್ದಾರೆ. ಬಳಿಕ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಲಾಗಿದೆ. ಕಾಯಿ ಒಡೆದು, ಆರತಿ ಬೆಳಗಲಾಗಿದೆ. ಬಳಿಕ ಕುಂಕುಮವಿಟ್ಟು ಹೊಸ ಕಾರಿಗೆ ಪೂಜೆ ಮಾಡಿಸಿದ್ದಾರೆ.

ಬಾಳೆ ಎಲೆ ಊಟ ಮಾಡಿ ಎಲೆ ಅಡಿಕೆ ತಿಂದ ಅಮೆರಿಕಾ ಅಂಬಾಸಿಡರ್‌: ದಕ್ಷಿಣ ಭಾರತದ ಊಟಕ್ಕೆ ಫುಲ್ ಫಿದಾ

ಈ ಕುರಿತು  X ಖಾತೆಯಲ್ಲಿ ಸಂತಸ ಹಂಚಿಕೊಂಡಿರುವ ಸೌತ್ ಕೊರಿಯಾ ರಾಯಭಾರ ಅಧಿಕಾರಿ, ಹೊಸ ಹ್ಯುಂಡೈ ಜೆನಿಸಿಸ್ GV80 ಕಾರು ನಮ್ಮ ರಾಯಭಾರ ಕುಟುಂಬ ಸೇರಿದೆ. ಇದು ಸೌತ್ ಕೊರಿಯಾ ರಾಯಭಾರ ಅಧಿಕಾರಿಗಳ ಅಧಿಕೃತ ಕಾರು. ಕಾರಿಗೆ ಪೂಜೆ ಮಾಡಲಾಗಿದೆ. ಹೊಸ ಪಯಣದಲ್ಲಿ ಹೊಸ ಸಾರಥಿ ನಮಗೆ ಸನ್ಮಂಗಳ ನೀಡಲಿ ಎಂದು  ಚಾಂಗ್ ಜೆ ಬಾಕ್‌ ಹೇಳಿದ್ದಾರೆ. 

 

 

ಸೌತ್ ಕೊರಿಯಾ ರಾಯಭಾರ ಅಧಿಕಾರಿಗಳ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಭಾರತೀಯ ಸಂಪ್ರದಾಯದಂತೆ ಪೂಜೆ ಮಾಡಿಸಿ ಜನರ ಮನಸ್ಸು ಗೆದ್ದಿದ್ದಾರೆ. ಭಾರತದ ಸನಾತನ ಧರ್ಮಕ್ಕೆ ಮಾರು ಹೋಗದವರು ಯಾರಿದ್ದಾರೆ? ವಿಜ್ಞಾನ, ಆರೋಗ್ಯ, ಖಗೋಳ ಸೇರಿದಂತೆ ವಿಶ್ವದ ಕುರಿತು ನಿಖರವಾಗಿ ಹೇಳಿರುವ ಸನಾನತನ ಧರ್ಮದ ಮಹತ್ವ  ವಿದೇಶಿಗರಿಗೆ ಚೆನ್ನಾಗಿ ಗೊತ್ತಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಆಹಹಾ ಖಾರ ಖಾರ.... ಭಾರತೀಯ ಸ್ಟ್ರೀಟ್ ಫುಡ್‌ಗೆ ಮನಸೋತ ಜಪಾನ್ ರಾಯಭಾರಿ

2021ರಲ್ಲಿ ಭಾರತದಲ್ಲಿ  ಹ್ಯುಂಡೈ ಜೆನಿಸಿಸ್ GV80 ಕಾರನ್ನು ಪರಿಚಯಿಸಲಾಗಿತ್ತು. ಆದರೆ ಕೊರೋನಾ ಕಾರಣದಿಂದ ಈ ಕಾರು ಭಾರತದಲ್ಲಿ ಬಿಡುಗಡೆಯಾಗಲಿಲ್ಲ. ಇದೀಗ ಈ ಕಾರನ್ನು ಸೌತ್ ಕೊರಿಯಾ ರಾಯಭಾರ ಕಚೇರಿ ಅಧಿಕಾರಿಗಳು ತಮ್ಮ ದೇಶ ಸೌತ್ ಕೊರಿಯಾದಿಂದಲೇ ಆಮದು ಮಾಡಿಕೊಂಡಿದ್ದರೆ. ಹ್ಯುಂಡೈ ಸೌತ್ ಕೊರಿಯಾ ಮೂಲಕ ಆಟೋಮೊಬೈಲ್ ಕಂಪನಿಯಾಗಿದೆ.

Follow Us:
Download App:
  • android
  • ios