Asianet Suvarna News Asianet Suvarna News

ನಿಸಾನ್ ಮ್ಯಾಗ್ನೈಟ್ GEZA ಸ್ಪೆಷಲ್ ಎಡಿಶನ್ ಕಾರಿನ ಬೆಲೆ ಪ್ರಕಟ, 7.3 ಲಕ್ಷ ರೂ ಮಾತ್ರ!

ನಿಸಾನ್ ಇತ್ತೀಚೆಗೆ ಹೊಚ್ಚ ಹೊಸ ಮ್ಯಾಗ್ನೈಟ್ GEZA ಸ್ಪೆಷಲ್ ಎಡಿಶನ್ ಕಾರು ಬಿಡುಗಡೆ ಮಾಡಿದೆ. ಇದೀಗ ನೂತನ ಕಾರಿನ ಬೆಲೆ ಪ್ರಕಟಗೊಂಡಿದೆ. ಕೇವಲ 11,000 ರೂಪಾಯಿಗೆ ನೂತನ ಕಾರು ಬುಕಿಂಗ್ ಮಾಡಿಕೊಳ್ಳಬಹುದು. ಅತ್ಯಾಧುನಿಕ ತಂತ್ರಜ್ಞಾನ, ಹತ್ತು ಹಲವು ಫೀಚರ್ಸ್ ಹೊಂದಿರುವ ಕಾರಿನ ಬೆಲೆ, ವೇರಿಯೆಂಟ್ ಹಾಗೂ ಇತರ ಮಾಹಿತಿ ಇಲ್ಲಿದೆ.

Nissan magnite geza special edition launched with RS 7 39 lakh booking price RS 11000 ckm
Author
First Published May 27, 2023, 4:57 PM IST

ಬೆಂಗಳೂರು(ಮೇ.27): ನಿಸಾನ್ ಕಾರುಗಳ ಪೈಕಿ ಮ್ಯಾಗ್ನೈಟ್ ಸಬ್ ಕಾಂಪಾಕ್ಟ್ ಎಸ್‌ಯುವಿ ಕಾರು ಭಾರಿ ಸಂಚಲನ ಸೃಷ್ಟಿಸಿದೆ. ಕೈಗೆಟುವ ದರ, ಆಕರ್ಷಕ ವಿನ್ಯಾಸ, ತಂತ್ರಜ್ಞಾನ ಸೇರಿದಂತೆ ಹಲವು ಕಾರಣಗಳಿಂದ ಮ್ಯಾಗ್ನೈಟ್ ಕಾರು ಮಾರಾಟದಲ್ಲೂ ದಾಖಲೆ ಕಂಡಿದೆ. ಇತ್ತೀಚೆಗೆ ಮ್ಯಾಗ್ನೈಟ್ ಹೊಚ್ಚ ಹೊಸ GEZA ಸ್ಪೆಷಲ್ ಎಡಿಶನ್ ಕಾರು ಬಿಡುಗಡೆ ಮಾಡಿದೆ. ಇದೀಗ ಮ್ಯಾಗ್ನೈಟ್ GEZA ಕಾರಿನ ಬೆಲೆ ಪ್ರಕಟಗೊಂಡಿದೆ. ನೂತನ ಕಾರನ್ನು ಕೇವಲ 11,000 ರೂಪಾಯಿಗೆ ಬುಕಿಂಗ್ ಮಾಡಿಕೊಳ್ಳಬಹುದು. ನೂತನ ಕಾರಿನ ಬೆಲೆ 7.39 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದೆ.  

ಮ್ಯಾಗ್ನೈಟ್ GEZA ಸುಧಾರಿತ ಇನ್ಫೋಟೇನ್ಮೆಂಟ್ ಸಿಸ್ಟಂ, ಪವರ್ ಪ್ಯಾಕ್ಡ್ ಪರ್ಮಾರ್ಫೆನ್ಸ್, ಸುಧಾರಿತ ವೈಶಿಷ್ಟ್ಯತೆಗಳು ಮತ್ತು ಸುರಕ್ಷತಾ ಸೌಲಭ್ಯಗಳಿವೆ. ಈ ಮ್ಯಾಗ್ನೈಟ್ GEZA ವಿಶೇಷ ಆವೃತ್ತಿಯು ಜಪಾನ್ ನ ಥಿಯೇಟರ್ ಮತ್ತುಅತ್ಯುತ್ತಮವಾದ ಮ್ಯೂಸಿಕಲ್ ಥೀಮ್ಸ್ ಹೊಂದಿದೆ.

ಹೊಚ್ಚ ಹೊಸ ನಿಸಾನ್ ಮ್ಯಾಗ್ನೈಟ್ GEZA ಕಾರು ಬಿಡುಗಡೆ, ಬುಕಿಂಗ್ ಕೇವಲ 11 ಸಾವಿರ ರೂ ಮಾತ್ರ!

·   ಹೈರೆಸಲೂಶನ್ ನ 22.86 ಸೆಂ.ಮೀ(9 ಇಂಚು) ಟಚ್ ಸ್ಕ್ರೀನ್
·   ವೈರ್ ಲೆಸ್ ಕನೆಕ್ಟಿವಿಟಿಯೊಂದಿಗೆ ಆ್ಯಂಡ್ರಾಯ್ಡ್ ಕಾರ್ ಪ್ಲೇ
·   ಪ್ರೀಮಿಯಂ ಜೆಬಿಎಲ್ ಸ್ಪೀಕರ್ 
·   ಟ್ರಾಜೆಕ್ಟರಿ ರಿಯರ್ ಕ್ಯಾಮೆರಾ
·   ಆ್ಯಪ್-ಆಧಾರಿತ ಕಂಟ್ರೋಲ್ಸ್ ನೊಂದಿಗೆ ಆಂಬಿಯೆಂಟ್ ಲೈಟಿಂಗ್
·   ಪ್ರೀಮಿಯಂ ಬ್ಯಾಗಿ ಕಲರ್ ಸೀಟ್ ಅಪ್ ಹೋಲ್ಸ್ ಟೆರಿ(Optional)
·   ಶಾರ್ಕ್ ಫಿನ್ ಆಂಟೆನಾ

ನಿಸಾನ್ ಮ್ಯಾಗ್ನೈಟ್  GEZA ವಿಶೇಷ ಆವೃತ್ತಿಯು ಪ್ರೀಮಿಯಂ ಆಡಿಯೋ ಮತ್ತು ಇನ್ಫೋಟೇನ್ಮೆಂಟ್ ಅನುಭವದೊಂದಿಗೆ ಸರಿಸಾಟಿಯಿಲ್ಲದ ಮೌಲ್ಯವನ್ನು ನೀಡುತ್ತದೆ, ಅಲ್ಲದೇ, ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿದ್ದು, ಶಕ್ತಿಯುತವಾದ ಸುರಕ್ಷತೆ ಮತ್ತು ಕಾರ್ಯದಕ್ಷತೆಯ ವೈಶಿಷ್ಟ್ಯತೆಗಳನ್ನು ಹೊಂದಿದೆ ಎಂದು ನಿಸಾನ್ ಮೋಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಹೇಳಿದ್ದಾರೆ.

ಮ್ಯಾಗ್ನೈಟ್ GEZA ವಿಶೇಷ ಆವೃತ್ತಿಯನ್ನು ಎಲ್ಲಾ ನಿಸಾನ್ ಶೋರೂಂಗಳಲ್ಲಿ 11,000 ರೂಪಾಯಿ ಪಾವತಿಸಿ ಮುಂಗಡ ಬುಕಿಂಗ್ ಮಾಡಲು ಅವಕಾಶವಿದೆ. ಮೊನೊಟೋನ್ ಬಣ್ಣಗಳ ಶ್ರೇಣಿಯಲ್ಲಿ ಲಭ್ಯವಿದ್ದು, ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ವ್ಯಾಪಕವಾದ ಶ್ರೇಣಿಯ ಆಯ್ಕೆಯನ್ನು ನೀಡುತ್ತದೆ. ಮ್ಯಾಗ್ನೈಟ್ GEZA ವಿಶೇಷ ಆವೃತ್ತಿಯು ಹೆಚ್ಚು ಮಾರಾಟವಾಗುವ B-SUV ಯನ್ನು ಹೆಚ್ಚಿಸುತ್ತದೆ ಮತ್ತು ಗ್ರಾಹಕರಿಗೆ ಬಲವಾದ ಮೌಲ್ಯದ ಪ್ರತಿಪಾದನೆಯನ್ನು ನೀಡುತ್ತದೆ.

ಗ್ರೌಂಡ್ ಕ್ಲಿಯರೆನ್ಸು ತೃಪ್ತಿದಾಯಕ, ಇಂಜಿನ್ ತಾಕತ್ತು ಆನಂದದಾಯಕ, ನಿಸಾನ್ ಮ್ಯಾಗ್ನೈಟ್ ಟೆಸ್ಟ್ ಡ್ರೈವ್!

ನಿಸಾನ್ ಯಾವುದೇ ಅಡೆತಡೆ ಇಲ್ಲದಂತಹ ಪರಿಹಾರವನ್ನು ಒದಗಿಸುವ ಮೂಲಕ ಗ್ರಾಹಕರ ವಿಕಸನಗೊಳ್ಳುತ್ತಿರುವ ಅವಶ್ಯಕತೆಗಳನ್ನು ಪೂರೈಸುವ PHYGITAL ಡಿಸ್ಟ್ರಿಬ್ಯೂಷನ್ ವಿಧಾನದಲ್ಲಿ ಕಾರ್ಯನಿರ್ವಹಣೆ ಮಾಡುತ್ತದೆ. ಈ ವಿಧಾನವು ಸಂಯೋಜಿತ ಆಫ್-ಲೈನ್ ಪಾವತಿ ಆಯ್ಕೆಯೊಂದಿಗೆ ತಡೆರಹಿತವಾದ ಮತ್ತು ಅನುಕೂಲಕರವಾದ ಅನುಭವವನ್ನು ನೀಡಲಿದೆ.

ನಿಸಾನ್ ಮ್ಯಾಗ್ನೈಟ್ ಅತ್ಯುತ್ತಮ, ಅತ್ಯಂತ ಕಡಿಮೆ ನಿರ್ಹವಣಾ ವೆಚ್ಚದೊಂದಿಗೆ ಬಂದಿದೆ. ಪ್ರತಿ ಒಂದು ಕಿಲೋಮೀಟರ್ ಗೆ ಕೇವಲ 35 ಪೈಸೆ (50,000 ಕಿಲೋಮೀಟರ್ ಗೆ) ವೆಚ್ಚವಾಗಲಿದೆ. ಅದೇ ರೀತಿ 2 ವರ್ಷಗಳವರೆಗೆ ವಾರಂಟಿ (50,000 ಕಿಮೀ)ಇರುವುದರೊಂದಿಗೆ ಗ್ರಾಹಕರಿಗೆ ಯಾವುದೇ ಚಿಂತೆ ಇರುವುದಿಲ್ಲ ಮತ್ತು ಈ ವಾರಂಟಿಯನ್ನು ಸುಲಭ ದರದಲ್ಲಿ 5 ವರ್ಷಗಳವರೆಗೆ (ಅಥವಾ ಒಂದು ಲಕ್ಷ ಕಿಮೀ) ವಿಸ್ತರಣೆ ಮಾಡಿಕೊಳ್ಳಬಹುದು. ನಿಸಾನ್ ಸರ್ವೀಸ್ ಹಬ್ ಅಥವಾ ನಿಸಾನ್ ಕನೆಕ್ಟ್ ಮೂಲಕ ಆನ್ ಲೈನ್ ನಲ್ಲಿ ನಿಸಾನ್ ಸರ್ವೀಸ್ ಕಾಸ್ಟ್ ಕ್ಯಾಲ್ಕ್ಯುಲೇಟರ್ ನಲ್ಲಿ ಸರ್ವೀಸ್ ಅನ್ನು ಬುಕ್ ಮಾಡಬಹುದು ಮತ್ತು ವೆಚ್ಚವನ್ನು ಪರಿಶೀಲಿಸಬಹುದಾಗಿದೆ.

ಗ್ಲೋಬಲ್ ಎನ್ ಸಿಎಪಿ ನೀಡುವ ಅಡಲ್ಟ್ ಆಕ್ಯುಪೆಂಟ್ ಸೇಫ್ಟಿಯಲ್ಲಿ 4-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿರುವ ನಿಸಾನ್ ಮ್ಯಾಗ್ನೈಟ್ ಈ ಸೆಗ್ಮೆಂಟ್ ನಲ್ಲಿ ಅತ್ಯುತ್ತಮ ಸುರಕ್ಷತಾ ಗುಣಮಟ್ಟಗಳನ್ನು ಹೊಂದಿರುವ ವಾಹನ ಎನಿಸಿದೆ. ಇತ್ತೀಚೆಗೆ ನಿಸಾನ್ ತನ್ನ ಮ್ಯಾಗ್ನೈಟ್ ನ ಎಲ್ಲಾ ಶ್ರೇಣಿಯ ವಾಹನಗಳಲ್ಲಿ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯತೆಗಳನ್ನು ಪರಿಚಯಿಸಿದೆ. ಇದಲ್ಲದೇ, ಬಿಎಸ್6 ಹಂತ 2 ನ್ನು ಪರಿಚಯಿಸಿದ್ದು, ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಪ್ರಮುಖ ಸುರಕ್ಷತಾ ವೈಶಿಷ್ಟ್ಯತೆಗಳು ಇಂತಿವೆ:-

·        ಎಲೆಕ್ಟ್ರಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP)
·        ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ (TCS)
·        ಹಿಲ್ ಸ್ಟಾರ್ಟ್ ಅಸಿಸ್ಟ್ (HSA)
·        ಟೈರ್ ಪ್ರೆಸರ್ ಮಾನಿಟರಿಂಗ್ ಸಿಸ್ಟಂ (TPMS)

B-SUV ವಿಭಾಗದಲ್ಲಿ ಭಾರತದ ಅತ್ಯಂತ ನೆಚ್ಚಿನ ಆಯ್ಕೆಯ ವಾಹನವಾಗಿ ಮ್ಯಾಗ್ನೈಟ್ ಹೊರಹೊಮ್ಮಿದೆ. ಈ ಮಾದರಿಯ ವಾಹನವನ್ನು ಡಿಸೆಂಬರ್ 2020 ರಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಇದನ್ನು ಜಪಾನ್ ನಲ್ಲಿ ವಿನ್ಯಾಸಗೊಳಿಸಿ ಭಾರತದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಈ ಮೂಲಕ ನಿಸಾನ್ ಮೋಟರ್ ಇಂಡಿಯಾದ ಉತ್ಪಾದನಾ ತತ್ತ್ವವಾದ `ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ಅನ್ನು ಅನುಸರಿಸಲಾಗುತ್ತಿದೆ. ನಿಸಾನ್ ಮ್ಯಾಗ್ನೈಟ್ ಬಿಡುಗಡೆಯಾದ ದಿನದಿಂದ ಇಲ್ಲಿವರೆಗೆ ದೈನಿಕ್ ಜಾಗರಣ್ ಐನೆಕ್ಸ್ಟ್ ಐಕಾನಿಕ್ ಅವಾರ್ಡ್ ನಲ್ಲಿ `2023 ಐಕಾನಿಕ್ ಬ್ರ್ಯಾಂಡ್ ಆಫ್ ದಿ ಇಯರ್’, ಟಾಪ್ ಗೇರ್ ನಿಂದ `ಕಾಂಪ್ಯಾಕ್ಟ್ SUV ಆಫ್ ದಿ ಇಯರ್ 2021’ ಮೋಟರ್ ಒಕ್ಟೇನ್ ನಿಂದ `ಗೇಮ್ ಚೇಂಜರ್’ ಮತ್ತು ಆಟೋಕಾರ್ ಇಂಡಿಯಾದಿಂದ `ವ್ಯಾಲ್ಯೂ ಫಾರ್ ಮನಿ’ ಯಂತಹ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
 

Follow Us:
Download App:
  • android
  • ios