ಹೊಚ್ಚ ಹೊಸ ನಿಸಾನ್ ಮ್ಯಾಗ್ನೈಟ್ GEZA ಕಾರು ಬಿಡುಗಡೆ, ಬುಕಿಂಗ್ ಕೇವಲ 11 ಸಾವಿರ ರೂ ಮಾತ್ರ!
ನಿಸಾನ್ ಕಾರುಗಳಲ್ಲಿ ಅತ್ಯಂತ ಯಶಸ್ವಿ ಕಾರು ಮ್ಯಾಗ್ನೈಟ್ ಇದೀಗ ಹೊಸ ಎಡಿಶನ್ ಬಿಡುಗಡೆ ಮಾಡಿದೆ. ನಿಸಾನ್ GEZA ಸ್ಪೆಷಲ್ ಎಡಿಶನ್ ಕಾರನ್ನು 11,000 ರೂಪಾಯಿಗೆ ಬುಕ್ ಮಾಡಿಕೊಳ್ಳಬಹುದು. ಈ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.
ಬೆಂಗಳೂರು(ಮೇ.19): ನಿಸಾನ್ ಮೋಟರ್ಸ್ ಕಂಪನಿಯ ಯಶಸ್ವಿ ಕಾರು ನಿಸಾನ್ ಮ್ಯಾಗ್ನೈಟ್ ಇದೀಗ ಹೊಸ ರೂಪದಲ್ಲಿ ಬಿಡುಗಡೆಯಾಗಿದೆ. ಹೊಚ್ಚ ಹೊಸ ನಿಸಾನ್ ಮ್ಯಾಗ್ನೈಟ್ GEZA ಸ್ಪೆಷಲ್ ಎಡಿಶನ್ ಕಾರು ಬಿಡುಗಡೆ ಮಾಡಿದೆ. 11,000 ರೂಪಾಯಿ ನೀಡಿ ಹೊಚ್ಚ ಹೊಸ ಕಾರು ಬುಕ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. Magnite GEZA ಸ್ಪೆಷಲ್ ಎಡಿಶನ್ ಜಪಾನಿನ ಥಿಯೇಟರ್ ಮತ್ತು ಅದರ ಅತ್ಯುತ್ತಮವಾದ ಮ್ಯೂಸಿಕಲ್ ಥೀಮ್ಸ್ ನಿಂದ ಪ್ರೇರೇಪಿತವಾಗಿದೆ. ಈ ಪರಿಕಲ್ಪನೆಯ ಆಧಾರದಲ್ಲಿ Magnite GEZA ವಿಶೇಷ ಆವೃತ್ತಿಯ ಕಾರು ಆಧುನಿಕ ಇನ್ಫೋಟೈನ್ಮೆಂಟ್ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ನಿಸಾನ್ Magnite GEZA ವಿಶೇಷ ಆವೃತ್ತಿಯ ನೂತನ ಕಾರಿನ ಬುಕಿಂಗ್ ಆರಂಭವಾಗಿದ್ದು, ಇದರ ಬೆಲೆಯನ್ನು 26 ಮೇ 2023 ರಂದು ಪ್ರಕಟಿಸಲಾಗುತ್ತದೆ.
· 22.86 ಸೆಂ.ಮೀ ಅಳತೆಯ ಟಚ್ ಸ್ಕ್ರೀನ್
· ವೈರ್ ಲೆಸ್ ಕನೆಕ್ಟಿವಿಟಿಯೊಂದಿಗೆ ಆ್ಯಂಡ್ರಾಯ್ಡ್ ಕಾರ್ ಪ್ಲೇ
· ಪ್ರೀಮಿಯಂ ಜೆಬಿಎಲ್ ಸ್ಪೀಕರ್ ಗಳು
· ಟ್ರಾಜೆಕ್ಟರಿ ರಿಯರ್ ಕ್ಯಾಮೆರಾ
· ಆ್ಯಪ್-ಆಧಾರಿತ ಕಂಟ್ರೋಲ್ಸ್ ನೊಂದಿಗೆ ಆಂಬಿಯೆಂಟ್ ಲೈಟಿಂಗ್
· ಶಾರ್ಕ್ ಫಿನ್ ಆಂಟೆನಾ
· ಪ್ರೀಮಿಯಂ ಬ್ಯಾಗಿ ಕಲರ್ ಸೀಟ್ ಅಪ್ ಹೋಲ್ಸ್ ಟೆರಿ
ಗ್ರೌಂಡ್ ಕ್ಲಿಯರೆನ್ಸು ತೃಪ್ತಿದಾಯಕ, ಇಂಜಿನ್ ತಾಕತ್ತು ಆನಂದದಾಯಕ, ನಿಸಾನ್ ಮ್ಯಾಗ್ನೈಟ್ ಟೆಸ್ಟ್ ಡ್ರೈವ್!
ಬಿಗ್, ಬೋಲ್ಡ್, ಬ್ಯೂಟಿಫುಲ್ ನಿಸಾನ್ ಮ್ಯಾಗ್ನೈಟ್ ಒಂದು ಗೇಮ್ ಚೇಂಜರ್ ಆಗಿದ್ದು, ಇದರ ಸರಿಸಾಟಿಯಿಲ್ಲದ ಮೌಲ್ಯ, ಅತ್ಯಂತ ಹೆಚ್ಚು ಸುರಕ್ಷತಾ ರ್ಯಾಂಕಿಂಗ್ ಮತ್ತು ಕಡಿಮೆ ವೆಚ್ಚದ ನಿರ್ವಹಣೆಯಲ್ಲಿ ಇದನ್ನು ಮೀರಿಸುವುದು ಯಾವುದೂ ಇಲ್ಲ. Magnite GEZA ವಿಶೇಷ ಆವೃತ್ತಿಯು ಅತ್ಯುತ್ಕೃಷ್ಠವಾದ ದರ್ಜೆಯ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಈ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಅನುಭವವನ್ನು ನೀಡಲಿದೆ ಎಂದು ನಿಸಾನ್ ಮೋಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಹೇಳಿದ್ದಾರೆ.
ಬಿಡುಗಡೆ ಆದ ದಿನದಿಂದ ಇಲ್ಲಿವರೆಗೆ ಮ್ಯಾಗ್ನೈಟ್ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇತ್ತೀಚೆಗೆ ಐನೆಕ್ಸ್ಟ್ ಐಕಾನಿಕ್ ಅವಾರ್ಡ್ಸ್ ನಲ್ಲಿ `2023 ನೇ ಸಾಲಿನ ಐಕಾನಿಕ್ ಬ್ರ್ಯಾಂಡ್’ ಎಂಬ ಪ್ರಶಸ್ತಿಯನ್ನು ಪಡೆದಿದೆ. ಇದಲ್ಲದೇ, ಟಾಪ್ ಗೇರ್ ಸಂಸ್ಥೆಯು `2021 ನೇ ಸಾಲಿನ ಕಾಂಪ್ಯಾಕ್ಟ್ ಎಸ್ ಯುವಿ’ ಪ್ರಶಸ್ತಿ, ಮೋಟರ್ ಒಕ್ಟೇನ್ ನಿಂದ `ಗೇಮ್ ಚೇಂಜರ್’ ಪ್ರಶಸ್ತಿ, ಆಟೋಕಾರ್ ಇಂಡಿಯಾದಿಂದ `ವ್ಯಾಲ್ಯೂ ಫಾರ್ ಮನಿ ಸೇರಿದಂತೆ ಹಲವು ಪ್ರಶಸ್ತಿ ಪಡೆದುಕೊಂಡಿದೆ.
ಗ್ಲೋಬಲ್ ಎನ್ ಸಿಎಪಿ ನೀಡುವ ಅಡಲ್ಟ್ ಆಕ್ಯುಪೆಂಟ್ ಸೇಫ್ಟಿಯಲ್ಲಿ 4-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿರುವ ನಿಸಾನ್ ಮ್ಯಾಗ್ನೈಟ್ ಈ ಸೆಗ್ಮೆಂಟ್ ನಲ್ಲಿ ಅತ್ಯುತ್ತಮ ಸುರಕ್ಷತಾ ಗುಣಮಟ್ಟಗಳನ್ನು ಹೊಂದಿರುವ ವಾಹನ ಎನಿಸಿದೆ. ಇತ್ತೀಚೆಗೆ ನಿಸಾನ್ ತನ್ನ ಮ್ಯಾಗ್ನೈಟ್ ನ ಎಲ್ಲಾ ಶ್ರೇಣಿಯ ವಾಹನಗಳಲ್ಲಿ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯತೆಗಳನ್ನು ಪರಿಚಯಿಸಿದೆ. ಇದಲ್ಲದೇ, ಬಿಎಸ್6 ಹಂತ 2 ನ್ನು ಪರಿಚಯಿಸಿದ್ದು, ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಪ್ರಮುಖ ಸುರಕ್ಷತಾ ವೈಶಿಷ್ಟ್ಯತೆಗಳು ಇಂತಿವೆ:-
NCAP Crash Test ಕೈಗೆಟುಕುವ ದರದ ನಿಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟ!
· ಎಲೆಕ್ಟ್ರಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP)
· ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ (TCS)
· ಹಿಲ್ ಸ್ಟಾರ್ಟ್ ಅಸಿಸ್ಟ್ (HSA)
· ಟೈರ್ ಪ್ರೆಸರ್ ಮಾನಿಟರಿಂಗ್ ಸಿಸ್ಟಂ (TPMS)
B-SUV ವಿಭಾಗದಲ್ಲಿ ಭಾರತದ ಅತ್ಯಂತ ನೆಚ್ಚಿನ ಆಯ್ಕೆಯ ವಾಹನವಾಗಿ ಮ್ಯಾಗ್ನೈಟ್ ಹೊರಹೊಮ್ಮಿದೆ. ಈ ಮಾದರಿಯ ವಾಹನವನ್ನು ಡಿಸೆಂಬರ್ 2020 ರಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಇದನ್ನು ಜಪಾನ್ ನಲ್ಲಿ ವಿನ್ಯಾಸಗೊಳಿಸಿ ಭಾರತದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಈ ಮೂಲಕ ನಿಸಾನ್ ಮೋಟರ್ ಇಂಡಿಯಾದ ಉತ್ಪಾದನಾ ತತ್ತ್ವವಾದ `ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ಅನ್ನು ಅನುಸರಿಸಲಾಗುತ್ತಿದೆ.
ಚೆನ್ನೈನಲ್ಲಿರುವ ಸುಂಕ ಇಲಾಖೆಯ ಮುಖ್ಯ ಆಯುಕ್ತರ ಕಚೇರಿಯು ನಿಸಾನ್ ಮೋಟರ್ ಇಂಡಿಯಾ ಭಾರತದಿಂದ ರಫ್ತು ಪ್ರಮಾಣ ಹೆಚ್ಚಳದಲ್ಲಿ ಅಭೂತಪೂರ್ವ ಸಾಧನೆ ಮಾಡುತ್ತಿರುವ ಅತ್ಯುತ್ತಮ ಸಂಸ್ಥೆ ಎಂಬ ಪ್ರಶಂಸೆಯನ್ನು ನೀಡಿದೆ. ಬಿಗ್, ಬೋಲ್ಡ್ ಮತ್ತು ಬ್ಯೂಟಿಫುಲ್ ನಿಸಾನ್ ಮ್ಯಾಗ್ನೈಟ್ ಪ್ರಸ್ತುತ 15 ಜಾಗತಿ ಮಾರುಕಟ್ಟೆಗಳಲ್ಲಿ ಲಭ್ಯವಿದ್ದು, ಇತ್ತೀಚೆಗೆ ಸಿಯಾಚೆಲ್ಸ್, ಬಾಂಗ್ಲಾದೇಶ, ಉಗಾಂಡ ಮತ್ತು ಬ್ರುನೈನಲ್ಲೂ ತನ್ನ ಮಾರುಕಟ್ಟೆಯನ್ನು ವಿಸ್ತರಣೆ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ನಿಸಾನ್ ಮೋಟರ್ ಇಂಡಿಯಾ ತನ್ನ ಪ್ರಾಥಮಿಕ ರಫ್ತು ಮಾರುಕಟ್ಟೆಯನ್ನು ಯೂರೋಪ್ ನಿಂದ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಒಮಾನ್, ಕತಾರ್, ಬಹ್ರೇನ್ ಮತ್ತು ಕುವೈತ್ ನಂತಹ ದೇಶಗಳನ್ನೊಳಗೊಂಡ ಮಧ್ಯ ಪ್ರಾಚ್ಯಕ್ಕೂ ವಿಸ್ತರಣೆ ಮಾಡಿದೆ.