ಏಕದಿನ ವಿಶ್ವಕಪ್‌ಗಾಗಿ ಮ್ಯಾಗ್ನೈಟ್ KURO ಸ್ಪೆಷಲ್ ಎಡಿಶನ್ ಕಾರು ಪರಚಯಿಸಿದ ನಿಸಾನ್!
ಏಕದಿನ ವಿಶ್ವಕಪ್ ಟೂರ್ನಿಗೆ ಕೆಲ ದಿನಗಳು ಮಾತ್ರ ಬಾಕಿ. ಇದರ ಬೆನ್ನಲ್ಲೇ ನಿಸಾನ್ ಭಾರತದಲ್ಲಿ ಮ್ಯಾಗ್ನೈಟ್ ಕುರೋ ಸ್ಪೆಷಲ್ ಎಡಿಶನ್ ಕಾರು ಪರಿಚಯಿಸಿದೆ. ಇಂದಿನಿಂದಲೇ ಬುಕಿಂಗ್ ಕೂಡ ಆರಂಭಗೊಂಡಿದೆ.
ಬೆಂಗಳೂರು(ಸೆ.14): ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಗೆ ಅಧಿಕೃತ ಪಾಲುದಾರ ಸಂಸ್ಥೆಯಾಗಿರುವ ನಿಸಾನ್ ಇದೀಗ ಸ್ಪೆಷಲ್ ಎಡಿಶನ್ ಕಾರು ಪರಿಚಯಿಸಲಾಗಿದೆ. ನಿಸಾನ್ ಕಂಪನಿಯ ಅತ್ಯಧಿಕ ಬೇಡಿಕೆಯ ಕಾರಾಗಿರುವ ಮ್ಯಾಗ್ನೈಟ್ ಸ್ಪೆಷಲ್ ಎಡಿಶನ್ ಕಾರು ಬಿಡುಗಡೆಯಾಗಿದೆ. ನಿಸಾನ್ ಮೋಟರ್ ಇಂಡಿಯಾ (NMIPL) ಇಂದಿನಿಂದ ಈ ವಿಶೇಷ ಆವೃತ್ತಿಯ ಕಾರಿನ ಬುಕಿಂಗ್ ಆರಂಭಿಸಿದೆ. ಜಪಾನಿ ಭಾಷೆಯಿಂದ ಹುಟ್ಟಿಕೊಂಡಿರುವ KURO ಎಂಬ ಈ ಹೆಸರು ವಿಶೇಷ ಆವೃತ್ತಿಯನ್ನು ಹೆಚ್ಚು ಆಕರ್ಷಕಗೊಳಿಸುತ್ತಿದೆ.
ನಿಸಾನ್ ಮ್ಯಾಗ್ನೈಟ್ KURO ವಿಶೇಷ ಆವೃತ್ತಿಯು ಈಗಾಗಲೇ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಆರಂಭಿಸಿದೆ. ಈ ಬಹುನಿರೀಕ್ಷಿತ ವಾಹನವನ್ನು ಅಕ್ಟೋಬರ್ 2023 ರಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದ್ದು, ಆ ಸಂದರ್ಭದಲ್ಲಿಯೇ ಇದರ ಬೆಲೆಯನ್ನೂ ಘೋಷಿಸಲಾಗುತ್ತದೆ. ಇಂದು ಮುಂಗಡ ಬುಕಿಂಗ್ ಆರಂಭವಾಗಿದ್ದು, ಮ್ಯಾಗ್ನೈಟ್ XV MT, ಮ್ಯಾಗ್ನೈಟ್ ಟರ್ಬೋ XV MT ಮತ್ತು ಮ್ಯಾಗ್ನೈಟ್ ಟರ್ಬೋ XV CVT ಸೇರಿದಂತೆ ಎಲ್ಲಾ ಉನ್ನತ ಮಟ್ಟದ ವಾಹನಗಳನ್ನು 11,000 ರೂಪಾಯಿ ಪಾವತಿಸಿ ಮುಂಗಡ ಬುಕಿಂಗ್ ಮಾಡಬಹುದಾಗಿದೆ.
ಹೊಚ್ಚ ಹೊಸ ನಿಸಾನ್ ಮ್ಯಾಗ್ನೈಟ್ GEZA ಕಾರು ಬಿಡುಗಡೆ, ಬುಕಿಂಗ್ ಕೇವಲ 11 ಸಾವಿರ ರೂ ಮಾತ್ರ!
ಈ ನಿಸಾನ್ ಮ್ಯಾಗ್ನೈಟ್ KURO ವಿಶೇಷ ಆವೃತ್ತಿಯು ಆಕರ್ಷಕವಾದ ಆಲ್-ಬ್ಲ್ಯಾಕ್ ಹೊರಾಂಗಣ ಮತ್ತು ಒಳಾಂಗಣವನ್ನು ಹೊಂದಿದ್ದು, ಗ್ರಾಹಕರ ಅಚ್ಚುಮೆಚ್ಚಿನ ವಾಹನವಾಗಲಿದೆ. ಪ್ರೀಮಿಯಂ ಲುಕ್ ಇರುವ ಇದು ಸ್ಟೈಲಿಶ್ ಆಗಿರಲಿದೆ. ಸೊಬಗಿನ ಸೌಂದರ್ಯವನ್ನು ಹಾಸುಹೊಕ್ಕಾಗಿಸಿದ್ದು, ಉತ್ಕೃಷ್ಟತೆಯನ್ನು ಹೊಂದಿದೆ. ಪ್ರಭಾವಶಾಲಿ ಮತ್ತು ಬೋಲ್ಡ್ ವಿನ್ಯಾಸವನ್ನು ಹೊಂದಿರುವ ಕಾರಿನ ಹೊರ ಭಾಗದಲ್ಲಿ ಬ್ಲ್ಯಾಕ್ ಗ್ರಿಲ್, ಸ್ಕಿಡ್ ಪ್ಲೇಟ್, ರೂಫ್ ರೇಲ್ಸ್, ಬ್ಲ್ಯಾಕ್ ಅಲಾಯ್ಸ್, ಬ್ಲ್ಯಾಕ್ ಫಿನಿಶರ್ ಅನ್ನು ಹೊಂದಿರುವ ಹೆಡ್ ಲ್ಯಾಂಪ್ ಗಳು ಹಾಗೂ ವಿಶಿಷ್ಟವಾದ ಬ್ಯಾಡ್ಜ್ ನೊಂದಿಗೆ ಕಲಾತ್ಮಕವಾಗಿ ಸೌಂದರ್ಯದ ಹೊಳಪಿನಿಂದ ಕೂಡಿದೆ.
ಇದಲ್ಲದೇ, ಮ್ಯಾಗ್ನೈಟ್ KURO ವಿಶೇಷ ಆವೃತ್ತಿಯು ಪ್ರೀಮಿಯಂ ಗ್ಲಾಸ್ ಬ್ಲ್ಯಾಕ್ ಇನ್ ಸ್ಟ್ರುಮೆಂಟ್ ಪ್ಯಾನೆಲ್, ಬ್ಲ್ಯಾಕ್ ಇಂಟೀರಿಯರ್ ಅಸೆಂಟ್ಸ್, ಬ್ಲ್ಯಾಕ್ ಡೋರ್ ಟ್ರಿಮ್ ಇನ್ಸರ್ಟ್ಸ್ ನೊಂದಿಗೆ ವಿಶಿಷ್ಟವಾದ ಇಂಟೀರಿಯರ್ ಅನ್ನು ಒಳಗೊಂಡಿದೆ. ಈ ವೈಶಿಷ್ಟ್ಯತೆಗಳು ಅತ್ಯದ್ಭುತವಾದ ವಿನ್ಯಾಸದ ಅಂಶಗಳನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದು, ಗ್ರಾಹಕರ ಮೆಚ್ಚುಗೆಯನ್ನೂ ಪಡೆಯಲಿವೆ. ಈ ವಿಶೇಷ ಆವೃತ್ತಿಯು 360 ಡಿಗ್ರಿ ಅರೌಂಡ್ ವ್ಯೂವ್ ಮಾನಿಟರ್ (AVM), ವಿಶಾಲವಾದ IRVM, ಥೀಮ್ಡ್ ಫ್ಲೋರ್ ಮ್ಯಾಟ್ ಗಳೊಂದಿಗೆ ಸೆಂಟರ್ ಕನ್ಸೋಲ್ ಆರ್ಮ್ ರೆಸ್ಟ್ ಮತ್ತು ಹೆಚ್ಚು ಅನುಕೂಲತೆ ಹಾಗೂ ಸ್ಟೈಲ್ ಗಾಗಿ ವೈರ್ ಲೆಸ್ ಚಾರ್ಜರ್ ಸೇರಿದಂತೆ ಮತ್ತಷ್ಟು ಮೇಲ್ದರ್ಜೆಯ ವಿಶೇಷತೆಗಳನ್ನು ಒಳಗೊಂಡಿದೆ.
ನಿಸಾನ್ ಮ್ಯಾಗ್ನೈಟ್ ಅತ್ಯುತ್ತಮವಾದ ಸುರಕ್ಷತಾ ಮಾನದಂಡಗಳನ್ನು ನೀಡುವ ಮೂಲಕ ಗ್ಲೋಬಲ್ NCAP ಯಿಂದ ಸೇಫ್ಟಿ ರೇಟಿಂಗ್ ಫಾರ್ ಅಡಲ್ಟ್ ಆಕ್ಯುಪೆಂಟ್ ಸೇಫ್ಟಿಯಲ್ಲಿ 4 ಸ್ಟಾರ್ ಗಳನ್ನು ಪಡೆದುಕೊಂಡಿದೆ. ಇತ್ತೀಚೆಗೆ ನಿಸಾನ್ ಅನ್ನು ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯತೆಗಳನ್ನು ಪರಿಚಯಿಸುವ ಮೂಲಕ ಮ್ಯಾಗ್ನೈಟ್ ಅನ್ನು ಮೇಲ್ದರ್ಜೆಗೇರಿಸಿದೆ. ಈ ಸುರಕ್ಷತಾ ವೈಶಿಷ್ಟ್ಯತೆಗಳು ಇಂತಿವೆ:
ಗ್ರೌಂಡ್ ಕ್ಲಿಯರೆನ್ಸು ತೃಪ್ತಿದಾಯಕ, ಇಂಜಿನ್ ತಾಕತ್ತು ಆನಂದದಾಯಕ, ನಿಸಾನ್ ಮ್ಯಾಗ್ನೈಟ್ ಟೆಸ್ಟ್ ಡ್ರೈವ್!
· ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP)
· ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ (TCS)
· ಹಿಲ್ ಸ್ಟಾರ್ಟ್ ಅಸಿಸ್ಟ್ (HAS)
· ಟೈರ್ ಪ್ರೆಸರ್ ಮಾನಿಟರಿಂಗ್ ಸಿಸ್ಟಂ (TPMS)
ಭಾರತದ B-SUV ವಿಭಾಗದಲ್ಲಿ ಮ್ಯಾಗ್ನೈಟ್ ಅತ್ಯುತ್ತಮವಾದ ಆಯ್ಕೆಯಾಗಿ ಪರಿಗಣಿಸಲ್ಪಟ್ಟಿದೆ. ಈ ವಾಹನವನ್ನು ಡಿಸೆಂಬರ್ 2020 ರಲ್ಲಿ ಬಿಡುಗಡೆ ಮಾಡಲಾಗಿದ್ದು, ಜಪಾನ್ ನ ವಿನ್ಯಾಸವನ್ನು ಬಳಸಿಕೊಂಡು ಭಾರತದಲ್ಲಿ ಉತ್ಪಾದನೆ ಮಾಡುವ ಮೂಲಕ ನಿಸಾನ್ ಮೋಟರ್ ಇಂಡಿಯಾದ `ಮೇಕ್-ಇನ್-ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ತತ್ತ್ವವನ್ನು ಅಳವಡಿಸಿಕೊಂಡಿದೆ.
ನಿಸಾನ್ ಇತ್ತೀಚೆಗೆ ನಿಸಾನ್ ಮ್ಯಾಗ್ನೈಟ್ GEZA ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಇದರ ಆರಂಭಿಕ ಬೆಲೆ 7,39,000 (ಎಕ್ಸ್ ಶೋರೂಂ, ದೆಹಲಿ) ರೂಪಾಯಿಗಳಾಗಿತ್ತು. ನಿಸಾನ್ ಮ್ಯಾಗ್ನೈಟ್ GEZA ವಿಶೇಷ ಆವೃತ್ತಿಯು ಸುಧಾರಿತ ಇನ್ಫೋಟೇನ್ಮೆಂಟ್ ಸಿಸ್ಟಂ, ಪವರ್ –ಪ್ಯಾಕ್ಡ್ ಪರ್ಫಾರ್ಮೆನ್ಸ್, ಸುಧಾರಿತ ವೈಶಿಷ್ಟ್ಯತೆಗಳು ಮತ್ತು ಸುರಕ್ಷತಾ ಅಂಶಗಳನ್ನು ಮೇಲ್ದರ್ಜೆಗೇರಿಸಿ ಭಾರತೀಯ ಗ್ರಾಹಕರ ಪ್ರಯಾಣವನ್ನು ಮತ್ತಷ್ಟು ಸುಖಕರವಾಗುವಂತೆ ಮಾಡಿತ್ತು.
ಬಿಗ್, ಬೋಲ್ಡ್ ಮತ್ತು ಬ್ಯೂಟಿಫುಲ್ ನಿಸಾನ್ ಮ್ಯಾಗ್ನೈಟ್ 15 ಜಾಗತಿಕ ಮಾರುಕಟ್ಟೆಗಳಿಗೆ ರಫ್ತಾಗುತ್ತಿದೆ. ಇತ್ತೀಚೆಗೆ ಸಿಯಾಚೆಲಿಸ್, ಬಾಂಗ್ಲಾದೇಶ, ಉಗಾಂಡ ಮತ್ತು ಬ್ರುನೈನಲ್ಲಿ ಬಿಡುಗಡೆ ಮಾಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಿಸಾನ್ ಇಂಡಿಯಾ ತನ್ನ ಪ್ರಾಥಮಿಕ ರಫ್ತು ಮಾರುಕಟ್ಟೆಯನ್ನು ಯೂರೋಪ್ ನಿಂದ ಮಧ್ಯ ಪ್ರಾಚ್ಯದ ದೇಶಗಳಾದ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಒಮಾನ್, ಕತಾರ್, ಬಹರೇನ್ ಮತ್ತು ಕುವೈತ್ ಗೆ ವಿಸ್ತರಣೆ ಮಾಡಿದೆ.