ಭಾರತದಲ್ಲಿ ವೋಲ್ವೋ ಕಾರಿಗೆ ಹೆಚ್ಚಾದ ಬೇಡಿಕೆ, ಮೇಡ್ ಇನ್ ಇಂಡಿಯಾ 10,000ನೇ ಕಾರು ಬಿಡುಗಡೆ!
ಭಾರತದಲ್ಲಿ ವೋಲ್ವೋ ಕಾರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ವೋಲ್ವೋ ಮಾರಾಟ ಹಾಗೂ ಉತ್ಪಾದನೆಯ ವೇಗೆ ಹಚ್ಚಾಗಿದೆ. ಇದೀಗ 10,000ನೇ ಕಾರು ಬಿಡುಗಡೆ ಮಾಡುವ ಮೂಲಕ ವೋಲ್ವೋ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಬೆಂಗಳೂರು(ಜ.23) ವೋಲ್ವೋ ಕಾರ್ ಇಂಡಿಯಾ ಭಾರತದ ತನ್ನ ಬೆಂಗಳೂರು ಘಟಕದಲ್ಲಿ 10,000 ಕಾರು ಉತ್ಪಾದಿಸಿದ ಮೈಲಿಗಲ್ಲು ಸಾಧಿಸಿದೆ. 2017ರಲ್ಲಿ ಕಂಪನಿಯು ತನ್ನ ಅಸಂಬ್ಲಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ್ದು ತನ್ನ ಜನಪ್ರಿಯ XC90 ಇಲ್ಲಿಂದ ಅಸೆಂಬ್ಲಿಯಾಗಿ ಬಿಡುಗಡೆಯಾದ ಮೊದಲ ಕಾರು. ಇಲ್ಲಿಯವರೆಗೆ XC60ಯ 4000+ಕಾರುಗಳ ಉತ್ಪಾದನೆಯಾಗಿದೆ. ಕಂಪನಿಯ ಹತ್ತು ಸಾವಿರನೆಯ ಕಾರು ಮೊದಲ ಶುದ್ಧ ವಿದ್ಯುಚ್ಛಾಲಿತ ಕೊಡುಗೆ XC40 40ರೀಚಾರ್ಜ್” ಆಗಿದೆ.
ಬೆಂಗಳೂರಿನ ಹೊಸಕೋಟೆಯ ಉತ್ಪಾದನಾ ಘಟಕವು 2017ರಲ್ಲಿ ವೋಲ್ವೋ ಕಾರುಗಳ ಅಸೆಂಬ್ಲಿ ಪ್ರಾರಂಭಿಸಿತು. ಕಂಪನಿಯ ಇಂದು ಎಕ್ಸ್.ಸಿ.90, ಎಕ್ಸ್.ಸಿ.60, ಎಸ್90, ಎಕ್ಸ್.ಸಿ.40ರಿಚಾರ್ಜ್ ಮತ್ತು ಇತ್ತೀಚೆಗೆ ಬಿಡುಗಡೆ ಮಾಡಿದ ಸಿ40 ರಿಚಾರ್ಜ್ ಎಲ್ಲ ಮಾಡೆಲ್ ಗಳನ್ನೂ ಸ್ಥಳೀಯವಾಗಿ ಜೋಡಣೆ ಮಾಡುತ್ತದೆ. ಭಾರತದಲ್ಲಿ ವೋಲ್ವೋ ಕಾರುಗಳು ಸ್ವೀಡಿಷ್ ಲಕ್ಷುರಿ ಕಾರ್ ಕಂಪನಿ ವೋಲ್ವೋ ಭಾರತದಲ್ಲಿ 2007ರಲ್ಲಿ ಪ್ರಾರಂಭವಾಯಿತು ಮತ್ತು ಅಂದಿನಿಂದಲೂ ದೇಶದಲ್ಲಿ ಈ ಸ್ವೀಡಿಷ್ ಬ್ರಾಂಡ್ ಮಾರಾಟಕ್ಕೆ ಶ್ರಮಿಸುತ್ತಿದೆ. ವೋಲ್ವೋ ಕಾರುಗಳು ಪ್ರಸ್ತುತ ಅಹಮದಾಬಾದ್, ಚಂಡೀಗಢ, ಚೆನ್ನೈ, ಕೊಯಮತ್ತೂರು, ದೆಹಲಿ-ಎನ್.ಸಿ.ಆರ್.-ದಕ್ಷಿಣ ದೆಹಲಿ, ಪಶ್ಚಿಮ ದೆಹಲಿ, ಗುರ್ ಗಾಂವ್, ಹೈದರಾಬಾದ್, ಇಂದೋರ್, ರಾಯಪುರ, ಜೈಪುರ, ಕೊಚ್ಚಿ, ಕೋಯಿಕ್ಕೋಡ್, ಕೊಲ್ಕತಾ, ಲಖನೌ, ಲೂಧಿಯಾನ, ಪಶ್ಚಿಮ ಮುಂಬೈ, ದಕ್ಷಿಣ ಮುಂಬೈ, ಪುಣೆ, ರಾಯ್ ಪುರ, ಸೂರತ್, ವಿಶಾಖಪಟ್ಟಣ ಮತ್ತು ವಿಜಯವಾಡಗಳಲ್ಲಿ 25 ಡೀಲರ್ ಶಿಪ್ ಗಳ ಮೂಲಕ ಮಾರಾಟ ಮಾಡುತ್ತದೆ.
ಬೆಂಗಳೂರಿನಲ್ಲೇ ಉತ್ಪಾದನೆಯಾಗಿರುವ ವೋಲ್ವೋ ಸಿ40 ರೀಚಾರ್ಜ್ ಎಲೆಕ್ಟ್ರಿಕ್ ಕಾರು ಲಾಂಚ್!
“ಸುಮಾರು ಮೂರ ವರ್ಷಗಳ ಸಾಂಕ್ರಾಮಿಕದ ತೊಂದರೆ ಇದ್ದರೂ ಬಹಳ ಅಲ್ಪ ಕಾಲದಲ್ಲಿ ಕಂಪನಿಯು ಈ ಪ್ರಮುಖ ಮೈಲಿಗಲ್ಲು ತಲುಪಿರುವುದು ಹೆಮ್ಮೆಯ ವಿಷಯವಾಗಿದೆ. ಬೆಂಗಳೂರಿನಲ್ಲಿ ಸ್ಥಿರವಾಗಿ ಸಾಮರ್ಥ್ಯ ಹೆಚ್ಚಳವು ಭಾರತದ ಐಷಾರಾಮಿ ಮೊಬಿಲಿಟಿ ವಲಯಕ್ಕೆ ನಮ್ಮ ಬದ್ಧತೆಯನ್ನು ಪ್ರತಿಫಲಿಸುತ್ತದೆ. ನಮ್ಮ ಮೊದಲ ಶುದ್ಧ ವಿದ್ಯುಚ್ಛಾಲಿತ ಕೊಡುಗೆ ಎಕ್ಸ್.ಸಿ.40 ಹತ್ತು ಸಾವಿರನೆಯ ಕಾರು ಆಗಿರುವುದು ಗ್ರಾಹಕರ ವಿಶ್ವಾಸವನ್ನು ತೋರಿಸುತ್ತದೆ. ಈ ಮೈಲಿಗಲ್ಲನ್ನು ಸಾಧ್ಯವಾಗಿಸಿದ ವೋಲ್ವೋ ಕಾರ್ ಇಂಡಿಯಾದ ಇಡೀ ವ್ಯವಸ್ಥೆಗೆ ನಾನು ಆಭಾರಿಯಾಗಿದ್ದೇನೆ ಎಂದು ವೋಲ್ವೋ ಕಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಜ್ಯೋತಿ ಮಲ್ಹೋತ್ರಾ ಹೇಳಿದ್ದಾರೆ.
“ಹತ್ತು ಸಾವಿರನೆಯ ಕಾರನ್ನು ಬಿಡುಗಡೆ ಮಾಡುವುದು ನಮ್ಮ ಘಟಕಕ್ಕೆ ಪ್ರಮುಖ ಮೈಲಿಗಲ್ಲಾಗಿದೆ. 2017ರಿಂದಲೂ ನಾವು ಗ್ರಾಹಕರ ಬೇಡಿಕೆ ಪೂರೈಸಲು ನಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸುತ್ತಿದ್ದೇವೆ ಮತ್ತು ಸತತವಾಗಿ ಇವಿಗಳ ಯಶಸ್ವಿ ಜೋಡಣೆಗೆ ಸ್ಕಿಲ್ ಅಪ್ ಗ್ರಡೇಷನ್ ಕೈಗೊಂಡಿದ್ದೇವೆ. ನಮ್ಮ ಘಟಕವು ಭಾರತದ ಮೊದಲ ಸ್ಥಳೀಯವಾಗಿ ಜೋಡಿಸಲ್ಪಟ್ಟ ಇವಿ ನಮ್ಮ ಎಕ್ಸ್.ಸಿ.40 ರಿಚಾರ್ಜ್ ಬಿಡುಗಡೆ ಮಾಡುವ ಹೆಮ್ಮೆಯನ್ನೂ ಹೊಂದಿದೆ ಎಂದು ವೋಲ್ವೋ ಕಾರ್ ಇಂಡಿಯಾದ ನಿರ್ಮಾಣ ಮುಖ್ಯಸ್ಥ ಗಾವೊ ಫೆಂಗ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ತಯಾರಾದ ವೋಲ್ವೋ ಎಲೆಕ್ಟ್ರಿಕ್ SUV XC40 ಕಾರು ಡೆಲಿವರಿ ಆರಂಭ!