Asianet Suvarna News Asianet Suvarna News

ಬೆಂಗಳೂರಿನಲ್ಲೇ ಉತ್ಪಾದನೆಯಾಗಿರುವ ವೋಲ್ವೋ ಸಿ40 ರೀಚಾರ್ಜ್ ಎಲೆಕ್ಟ್ರಿಕ್ ಕಾರು ಲಾಂಚ್!

ಬೆಂಗಳೂರಿನಲ್ಲೇ ಉತ್ಪಾದನೆಯಾಗಿರುವ ವೋಲ್ವೋ ಸಿ40 ರಿಚಾರ್ಜ್ ಎಲೆಕ್ಟ್ರಿಕ್ ಕಾರು ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 683 ಕಿಲೋಮೀಟರ್ ಮೈಲೇಜ್ ನೀಡಲಿದೆ. 

Volvo India showcase Born electric car c40 recharge in Bengaluru ckm
Author
First Published Sep 16, 2023, 8:14 PM IST

ಬೆಂಗಳೂರು(ಸೆ.16)  ವೋಲ್ವೋ ಇಂಡಿಯಾ ಇದೀಗ ತನ್ನ ಎರಡನೇ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಆಕರ್ಷಕ ವಿನ್ಯಾಸ, 683 ಕಿಲೋಮೀಟರ್ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಮತ್ತೊಂದು ವಿಶೇಷ ಅಂದರೆ ಈ ಕಾರು ಬೆಂಗಳೂರಿನ ಉತ್ಪಾದನಾ ಘಟಕದಲ್ಲಿ ನಿರ್ಮಾಣವಾಗಿದೆ.  ಸುರಕ್ಷತೆ ಮತ್ತು ಐಷಾರಾಮವು ವೋಲ್ವೋ ಕಾರಿನ ಪ್ರಮುಖ ಕೊಡುಗೆಗಳು ಸಿ40 ರೀಚಾರ್ಜ್ ಅವಿಭಾಜ್ಯ ಅಂಗವಾಗಿವೆ. ಈ ಅತ್ಯಂತ ನಿರೀಕ್ಷೆಯ ಸಿ40 ರೀಚಾರ್ಜ್ 61,25,000 ರೂಪಾಯಿ(ಎಕ್ಸ್ ಶೋ ರೂಂ) ಪ್ರಾರಂಭಿಕ ಬೆಲೆಗೆ ಲಭ್ಯವಿದೆ. ಸಿ40 ರೀಚಾರ್ಜ್ ಬುಕಿಂಗ್ ಗಳು ವಿಶೇಷವಾಗಿ ಆನ್ಲೈನ್ ನಲ್ಲಿ ಲಭ್ಯವಿವೆ. ಇದು ವೋಲ್ವೋ ಭಾರತದಲ್ಲಿ ಬಿಡುಗಡೆ ಮಾಡಿದ ಎರಡನೆಯ ಇವಿಯಾಗಿದೆ. ಬೆಂಗಳೂರಿನ ಹೊಸಕೋಟೆಯಲ್ಲಿನ ಕಂಪನಿಯ ಘಟಕದಲ್ಲಿ ಜೋಡಿಸಲಾಗುತ್ತದೆ ಮತ್ತು ಇದು 11 KWD ಚಾರ್ಜರ್ ನೊಂದಿಗೆ ಬಂದಿದೆ.

ಬೆಂಗಳೂರಿನಲ್ಲಿ ತಯಾರಾದ ವೋಲ್ವೋ ಎಲೆಕ್ಟ್ರಿಕ್ SUV XC40 ಕಾರು ಡೆಲಿವರಿ ಆರಂಭ!

ಸಿ40 ರೀಚಾರ್ಜ್ ಬಾರ್ನ್ ಎಲೆಕ್ಟ್ರಿಕ್ ಕುರಿತು:

  • ಶಕ್ತಿ: 408ಎಚ್.ಪಿ.
  • ಟಾರ್ಕ್: 660 ಎನ್‍ಎಂ
  • ಬ್ಯಾಟರಿ:78 ಕೆಡಬ್ಲ್ಯೂಎಚ್
  • ಬ್ಯಾಟರಿ : ಲಿಥಿಯಂ-ಅಯಾನ್
  • ಬ್ಯಾಟರಿ ತೂಕ: 500ಕೆಜಿಗಳು
  • ಆಕ್ಸಲರೇಷನ್: 0-100 ಕಿ.ಮೀ.ಗಳು-4.7 ಎಸ್
  • ಬ್ಯಾಟರಿ ವಾರೆಂಟಿ: 8 ವರ್ಷಗಳು/160,000 ಕಿ.ಮೀ. 
  • ಟಾಪ್ ಸ್ಪೀಡ್: ಪ್ರತಿ ಗಂಟೆ 180 ಕಿ.ಮೀ.
  • ಶಕ್ತಿ ವಿತರಣೆಯ ಅನುಪಾತ: 40/60
  • ವಿದ್ಯುಚ್ಛಕ್ತಿ(ಮುಂಭಾಗ/ಹಿಂಬದಿ)-163 ಎಚ್.ಪಿ./245 ಎಚ್.ಪಿ
  • ಡಬ್ಲ್ಯೂ.ಎಲ್.ಟಿ.ಪಿ. ರೇಂಜ್: 530 ಕಿ.ಮೀ.ಗಳು
  • ಐ.ಸಿ.ಎ‍ಲ್.ಟಿ.ರೇಂಜ್: 683 ಕಿ.ಮೀ.ಗಳು
  • ಫ್ರಂಟ್ ಸ್ಟೋರೇಜ್(ಫ್ರಂಕ್): 31 ಲೀಟರ್ ಗಳು
  • ಹಿಂಬದಿ ಸ್ಟೋರೇಜ್(ಬೂಟ್ ಸ್ಪೇಸ್): 413 ಲೀಟರ್ ಗಳು
  • ಗ್ರೌಂಡ್ ಕ್ಲಿಯರೆನ್ಸ್(ಕೆರ್ಬ್ ತೂಕ+1 ವ್ಯಕ್ತಿ): 171 ಎಂಎಂ
  • ಒನ್ ಪೆಡಲ್ ಡ್ರೈವ್ ಆಯ್ಕೆ
  • ಲೆದರ್-ಫ್ರೀ ಇಂಟೀರಿಯರ್ ಗಳು
  • ವಿಶಿಷ್ಟ ಬ್ಯಾಟರಿ ಸೇ‍ಫ್ಟಿ ಕೇಜ್
  • ಹೊಸ ಸಿಲ್ಹೌಟ್ ಏರೊ-ಡೈನಮಿಕಲಿ ಡಿಸೈನ್ಡ್ ಸ್ಲಿಮ್ಡ್ ರೂಫ್ ಲೈನ್
  • 5 ವರ್ಷ ಚಂದಾದಾರಿಕೆಯಲ್ಲಿ ಡಿಜಿಟಲ್ ಸರ್ವೀಸಸ್
  • ಗೂಗಲ್ ಬಿಲ್ಟ್-ಇನ್(ಗೂಗಲ್ ಅಸಿಸ್ಟೆಂಟ್, ಗೂಗಲ್ ಪ್ಲೇ, ಗೂಗಲ್ ಮ್ಯಾಪ್ಸ್)
  • ವೋಲ್ವೋ ಕಾರ್ಸ್ ಆಪ್
  • ಹರ್ಮನ್ ಕಾರ್ಡನ್ ಪ್ರೀಮಿಯಂ ಸೌಂಡ್ ಸಿಸ್ಟಂ
  • ವೋಲ್ವೋ ಆನ್ ಕಾಲ್

 

ಎಲೆಕ್ಟ್ರಿಕ್ ಕಾರುಗಳಿಗಾಗಿ ಟೆಸ್ಲಾ ತಂತ್ರಜ್ಞಾನ ಅಳವಡಿಸಿಕೊಳ್ಳಲಿದೆ ವೋಲ್ವೋ!

ಗ್ರಾಹಕರು ಸಿ40 ರೀಚಾರ್ಜ್ ಗೆ ಅತ್ಯಂತ ನಿರೀಕ್ಷೆಯಿಂದ ಕಾಯುತ್ತಿದ್ದಾರೆ ಮತ್ತು ಅವರಿಗೆ ಈ ಕಾರನ್ನು ಪರಿಚಯಿಸುವುದು ನಿಜಕ್ಕೂ ಸಂತೋಷವಾಗಿದೆ. ನಾವು ಪೂರೈಕೆ ಮಾಡುವ ನಿರೀಕ್ಷೆಯಲ್ಲಿದ್ದೇವೆ. ಸಿ40 ರೀಚಾರ್ಜ್ ಸ್ಮರಣೀಯ ಚಾಲನೆಯ ಅನುಭವ ನೀಡುವ ಅಸಂಖ್ಯ ವಿಶೇಷತೆಗಳನ್ನು ಹೊಂದಿದೆ. ಇವುಗಳು ನಮ್ಮ ಗ್ರಾಹಕರಿಗೆ ಪೂರಕವಾಗಲಿದ್ದು ಜಾಗತಿಕವಾಗಿ ವೋಲ್ವೋ ಹೊಂದಿರುವ ಸುರಕ್ಷತೆಯ ನಿಯಮಗಳನ್ನು ಹೊಂದಿವೆ ಎಂದು ಮಾರ್ಷಲ್ ಮೋಟಾರ್ಸ್ ಪ್ರೈ.ಲಿ.ಯ ವ್ಯವಸ್ಥಾಪಕ ನಿರ್ದೇಶಕ ರಿತೇಶ್ ರೆಡ್ಡಿ ಹೇಳಿದ್ದಾರೆ. 

Follow Us:
Download App:
  • android
  • ios