ಬೆಂಗಳೂರಿನಲ್ಲಿ ತಯಾರಾದ ವೋಲ್ವೋ ಎಲೆಕ್ಟ್ರಿಕ್ SUV XC40 ಕಾರು ಡೆಲಿವರಿ ಆರಂಭ!

ಬೆಂಗಳೂರಿನಲ್ಲಿರುವ ವೋಲ್ವೋ ಘಟಕದಲ್ಲಿ ಭಾರತದ ಐಷಾರಾಮಿ ವೋಲ್ವೋ ಎಲೆಕ್ಟ್ರಿಕ್ ಕಾರು ಜೋಡಣೆ ಮಾಡುತ್ತಿದೆ. ಇದೀಗ ವೋಲ್ವೋ SUV - XC40 ಎಲೆಕ್ಟ್ರಿಕ್ ಕಾರು ಡೆಲಿವರಿ ಆರಂಭಗೊಂಡಿದೆ. 

Volvo XC40 Recharge Electric SUV - XC40 car delivers begins in India assembled in Bengaluru ckm

ಬೆಂಗಳೂರು(ನ.09): ವೋಲ್ವೋ ಕಾರ್ ಇಂಡಿಯಾ ತನ್ನ ಸಂಪೂರ್ಣ ಎಲೆಕ್ಟ್ರಿಕ್ ಚಾಲಿತ XC40 ರೀಚಾರ್ಜ್‌ ವಿತರಣೆಯನ್ನು ದೇಶದಲ್ಲಿ ಪ್ರಾರಂಭಿಸಿದೆ. ಮೊದಲ ಕಾರನ್ನು ಗುಜರಾತ್‌ನಲ್ಲಿ ವೋಲ್ವೋ ಕಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಜ್ಯೋತಿ ಮಲ್ಹೋತ್ರಾ ಅವರು  ಮಾರುತಿ ಕೊರಿಯರ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್‌ನ ಎಂಡಿ ಅಜಯ್ ಮೊಕರಿಯಾ ಅವರಿಗೆ ಬುಧವಾರ ವಿತರಿಸಿದರು. ವೋಲ್ವೋ XC40 ರೀಚಾರ್ಜ್ ಸ್ಥಳೀಯವಾಗಿ ಜೋಡಿಸಲಾದ ಭಾರತದ ಮೊದಲ ಐಷಾರಾಮಿ ಎಲೆಕ್ಟ್ರಿಕ್ SUV ಆಗಿದೆ. ಕಂಪನಿಯು ಕರ್ನಾಟಕದ ಬೆಂಗಳೂರಿನಲ್ಲಿರುವ ತನ್ನ ಘಟಕದಲ್ಲಿ ಕಾರುಗಳನ್ನು ಜೋಡಿಸುತ್ತಿದೆ.

ಭಾರತದಲ್ಲಿ ಮೊದಲ ಬಾರಿಗೆ ಜೋಡಿಸಲಾದ ಶುದ್ಧ ಎಲೆಕ್ಟ್ರಿಕ್ XC40 ರೀಚಾರ್ಜ್ ಐಷಾರಾಮಿ SUV ವಿತರಣೆಯು ವೋಲ್ವೋ ಸಂಸ್ಥೆಗೆ ಮಹತ್ವದ ಮೈಲಿಗಲ್ಲಾಗಿದೆ. ಈ ವಿತರಣೆಯು ಐತಿಹಾಸಿಕವಾಗಿದೆ. ಏಕೆಂದರೆ 2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಕಾರು ಕಂಪನಿಯಾಗುವ ನಮ್ಮ ಪ್ರಯಾಣದ ಆರಂಭವನ್ನು ಇದು ಗುರುತಿಸುತ್ತದೆ. ಅಲ್ಲದೆ, ನಮ್ಮ ಮಹತ್ವಾಕಾಂಕ್ಷೆಯ ಆನ್‌ಲೈನ್ ನೇರ ಮಾರಾಟದ ಮಾದರಿಯಲ್ಲಿ ವಿತರಿಸಲಾಗುವ ಮೊದಲ ಕಾರು ಇದೇ ಆಗಿದೆ. XC40 ರೀಚಾರ್ಜ್‌ಗೆ ಲಭಿಸಿದ ಪ್ರತಿಕ್ರಿಯೆ ಉತ್ತೇಜನಕಾರಿಯಾಗಿದೆ, ಆನ್‌ಲೈನ್‌ನಲ್ಲಿ ಆರಂಭಿಕ ಬುಕ್ಕಿಂಗ್‌ಗಳಲ್ಲಿ ಕೇವಲ 2 ಗಂಟೆಗಳಲ್ಲಿ 150 ಕಾರುಗಳಿಗೆ ಆರ್ಡರ್‌ಗಳನ್ನು ಸ್ವೀಕರಿಸಲಾಗಿದೆ. ಈಗಾಗಲೇ ನಾವು 150 ಮುಂಗಡ ಆರ್ಡರ್‌ಗಳನ್ನು ಹೊಂದಿದ್ದೇವೆ ಎಂದು ಘೋಷಿಸಲು ಮತ್ತು ಈ ಪೈಕಿ 100 ಕಾರುಗಳನ್ನು ಈ ವರ್ಷಾಂತ್ಯದೊಳಗೆ ಗ್ರಾಹಕರಿಗೆ ಒದಗಿಸಲಿದ್ದೇವೆ ಎಂದು ತಿಳಿಸಲು ನಾನು ಸಂತೋಷಪಡುತ್ತೇನೆ. ಮುಂದಿನ ವರ್ಷಾರಂಭದಲ್ಲಿ ಉಳಿದ ಗ್ರಾಹಕರು ತಮ್ಮ ಕಾರುಗಳನ್ನು ಪಡೆಯುತ್ತಾರೆ ಎಂದು ವೋಲ್ವೋ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಜ್ಯೋತಿ ಮಲ್ಹೋತ್ರಾ ಹೇಳಿದ್ದಾರೆ.

 

ವೋಲ್ವೋ ಕಾರ್ ಇಂಡಿಯಾದಿಂದ ಎಲೆಕ್ಟ್ರಿಕ್ XC40 Recharge ಬಿಡುಗಡೆ!

XC40 ರೀಚಾರ್ಜ್ ಅನ್ನು 55.90 ಲಕ್ಷ ರೂ.ಗಳ ಎಕ್ಸ್ ಶೋರೂಂ ಬೆಲೆಯಲ್ಲಿ ಆಕರ್ಷಕ ಪ್ಯಾಕೇಜ್‌ನೊಂದಿಗೆ ಈ ವರ್ಷ ಜುಲೈ 26ರಂದು ಪರಿಚಯಿಸಲಾಯಿತು. ಭಾರತದಲ್ಲಿ ಐಷಾರಾಮಿ ಕಾರು ಖರೀದಿದಾರರಿಂದ ವೋಲ್ವೋದ ಮೊದಲ ಎಲೆಕ್ಟ್ರಿಕ್ SUV ಅಗಾಧ ಪ್ರತಿಕ್ರಿಯೆಯನ್ನು ಗಳಿಸಿತು. ಜುಲೈ 27ರಂದು ಬುಕಿಂಗ್ ಪ್ರಾರಂಭಿಸಿದ ಕೆಲವೇ ಗಂಟೆಗಳಲ್ಲಿ 150 ಕಾರುಗಳ ಆನ್‌ಲೈನ್ ಬುಕಿಂಗ್ ಸ್ವೀಕರಿಸಿದ್ದು ಉಲ್ಲೇಖನೀಯ. XC40 ರೀಚಾರ್ಜ್ ಒಂದು ಚಾರ್ಜ್‌ನಲ್ಲಿ 418 ಕಿ.ಮೀ.ಗಿಂತ ಹೆಚ್ಚಿನ ಅಸಾಧಾರಣ ವ್ಯಾಪ್ತಿಯನ್ನು ಹೊಂದಿದೆ. ಈ ವೈಶಿಷ್ಟ್ಯವು ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸಿದೆ ಮತ್ತು EV ಶ್ರೇಣಿಯ ಬಗ್ಗೆ ಸಾಮಾನ್ಯವಾಗಿ ಇರುವ ತಪ್ಪುಗ್ರಹಿಕೆಗಳನ್ನು ನಿವಾರಿಸಿದೆ.

ಎಲ್ಲ XC40 ರೀಚಾರ್ಜ್ ಮಾಲೀಕರು ವಿಶೇಷ Tre Kronor ಕಾರ್ಯಕ್ರಮದ 2 ವರ್ಷಗಳ ಸದಸ್ಯತ್ವವನ್ನೂ ಪಡೆಯುತ್ತಾರೆ. Tre Kronor ಸದಸ್ಯತ್ವವು ವೋಲ್ವೋ XC40 ರೀಚಾರ್ಜ್ ಕಾರು ಮಾಲೀಕರಿಗೆ ಅವರ ಸೇವೆ ಮತ್ತು ಸೌಕರ್ಯವನ್ನು ಗಮನಿಸಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಪ್ರಯೋಜನಗಳು ಮತ್ತು ಸೇವೆಗಳನ್ನು ನೀಡುತ್ತದೆ.

ಎಲೆಕ್ಟ್ರಿಕ್ ಕಾರುಗಳಿಗಾಗಿ ಟೆಸ್ಲಾ ತಂತ್ರಜ್ಞಾನ ಅಳವಡಿಸಿಕೊಳ್ಳಲಿದೆ ವೋಲ್ವೋ!

2030ರ ವೇಳೆಗೆ, ಕಂಪನಿಯು ಪೂರ್ಣ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನೇ ನೀಡಲು ಬಯಸುತ್ತದೆ. ಅಲ್ಲದೆ, ಹೈಬ್ರಿಡ್‌ಗಳು ಸೇರಿದಂತೆ ಆಂತರಿಕ ದಹನಕಾರಿ ಎಂಜಿನ್‌ಗಳನ್ನು ಹೊಂದಿರುವ ಎಲ್ಲ ವಾಹನಗಳ ಉತ್ಪಾದನೆಯನ್ನು ಹಂತಹಂತವಾಗಿ ಸ್ಥಗಿತಗೊಳಿಸಲು ಬಯಸುತ್ತದೆ. ಕಂಪನಿಯ ಜಾಗತಿಕ ಹವಾಮಾನ ಯೋಜನೆಗೆ ಇದು ಪೂರಕವಾಗಿರುತ್ತದೆ. ಸುಸ್ಥಿರತೆಯ ಆಧಾರದ ಮೇಲೆ ಸ್ಪಷ್ಟವಾದ ಕ್ರಿಯೆಯ ಮೂಲಕ ಪ್ರತಿ ಕಾರಿಗೆ ಜೀವನ ಚಕ್ರದ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಸ್ವಿಡನ್‌ ಮೂಲಕ ಐಷಾರಾಮಿ ಕಾರು ಕಂಪನಿ ವೋಲ್ವೋ ಭಾರತದಲ್ಲಿ 2007ರಿಂದ ಕಾರ್ಯಾಚರಿಸುತ್ತಿದೆ. ವೋಲ್ವೋ ಕಾರುಗಳು ಪ್ರಸ್ತುತ ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ಕೊಯಮತ್ತೂರು, ದೆಹಲಿ, ಗುರುಗ್ರಾಮ, ಹೈದರಾಬಾದ್, ಇಂದೋರ್, ರಾಯಪುರ್, ಜೈಪುರ, ಕೊಚ್ಚಿ, ಕೋಝಿಕ್ಕೋಡ್, ಕೋಲ್ಕತ್ತಾ, ಲಕ್ನೋ, ಲುಧಿಯಾನ, ಮುಂಬೈ, ಪುಣೆ, ರಾಯಪುರ, ಸೂರತ್, ವಿಶಾಖಪಟ್ಟಣಂ ಮತ್ತು ವಿಜಯವಾಡದಲ್ಲಿ 25 ವಿತರಕರನ್ನು ಹೊಂದಿದೆ. 
 

Latest Videos
Follow Us:
Download App:
  • android
  • ios