ePay ಕಾರ್ ಲೋನ್ ಆರಂಭಿಸಿದ ಎಂಜಿ ಮೋಟಾರ್ಸ್ ದಾಖಲೆ ಅಪ್ಲೋಡ್ ಮಾಡಿ ಒಂದೇ ನಿಮಿಷದಲ್ಲಿ ಲೋನ್ ಸೌಲಭ್ಯ ಬ್ಯಾಂಕ್ ಜೊತೆ ಒಪ್ಪಂದ, ಗ್ರಾಹಕರಿಗೆ ಸುಲಭ ಸಾಲ ಸೌಲಭ್ಯ  

ನವದೆಹಲಿ(ಮಾ.25): ಎಂಜಿ ಮೋಟಾರ್ಸ್(MG Motors) ಭಾರತದಲ್ಲಿ ನಿಧಾನವಾಗಿ ಕಾರು ಮಾರುಕಟ್ಟೆ (Car Market)ಆಕ್ರಮಿಸಿಕೊಳ್ಳುತ್ತಿದೆ. ಹೆಕ್ಟರ್, ಹೆಕ್ಟರ್ ಪ್ಲಸ್, ಗ್ಲೋಸ್ಟರ್, ಎಂಜಿ ಆಸ್ಟರ್, ಎಂಜಿ ZS ಎಲೆಕ್ಟ್ರಿಕ್ ಕಾರಿನ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಎಂಜಿ ಹೊಸ ಸಂಚನ ಸೃಷ್ಟಿಸಿದೆ. ಇದೀಗ ಎಂಜಿ ಮೋಟಾರ್ಸ್ ಗ್ರಾಹಕರ ಕಾರು ಖರೀದಿ ಕನಸನ್ನು ಸುಲಭವಾಗಿ ಈಡೇರಿಸಲು ಇ ಪೇಯ್(MG ePay) ಡಿಜಿಟಲ್ ಸಾಲ ಸೌಲಭ್ಯ ಯೋಜನೆ ಆರಂಭಿಸಿದೆ.

MG ePay ಡಿಜಿಟಲ್ ಲೋನ್(Car Loan) ಸೌಲಭ್ಯ ಆರಂಭಿಸಲಾಗಿದೆ. ಗ್ರಾಹಕರು MG ePay ಮೂಲಕ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಕಾರು ಖರೀದಿಗೆ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು. ಇದರಿಂದ ಗ್ರಾಹಕರು ಕಾಯಬೇಕಿಲ್ಲ, ಅಗತ್ಯ ದಾಖಲೆಗಳನ್ನು ಪೂರೈಕೆ ಮಾಡಿದರೆ ಸಾಕು. ಕ್ಷಣಾರ್ಧದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಇದರಿಂದ ಕಾರು ಖರೀದಿ ಮತ್ತಷ್ಟು ಸುಲಭವಾಗಲಿದೆ ಎಂದು ಎಂಜಿ ಮೋಟಾರ್ಸ್ ಹೇಳಿದೆ.

ಭಾರತದಲ್ಲಿ ಕಡಿಮೆ ಬೆಲೆಯ, ಸಣ್ಣ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಎಂಜಿ ತಯಾರಿ!

ಗ್ರಾಹಕರಿಗೆ ಸುಲಭ ಸಾಲ ನೀಡಲು ಎಂಜಿ ಮೋಟಾರ್ಸ್ ಈಗಾಗಲೇ ಹೆಚ್‌ಡಿಎಫ್‌ಸಿ, ಕೋಟಕ್ ಮಹೀಂದ್ರ ಪ್ರೈಮ್, ಆಕ್ಸಿಸ್ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಆನ್‌ಲೈನ್ ಮೂಲಕ ಕಾರು ಖರೀದಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕೃತಗೊಳಿಸಲಾಗಿದೆ. MG ePay ಮೂಲಕ ಗ್ರಾಹಕರು ಮನೆಯಲ್ಲೇ ಕುಳಿತು ಕಾರು ಬುಕ್ ಮಾಡಿಕೊಳ್ಳಬಹುದು. ಲೋನ್ ಸೌಲಭ್ಯ ಪಡೆಯುವಾಗ ಯಾವುದೇ ಸಂದರ್ಭದಲ್ಲಿ ಎಂಜಿ ನೆರವು ಅವಶ್ಯಕತೆ ಇದ್ದರೆ ಸಿಗಲಿದೆ. 

ಎಂಜಿ ಮೋಟಾರ್ಸ್‌ ಭಾರತಕ್ಕೆ ಕಾಲಿಟ್ಟಾಗಲೇ ಆಟೋಮೊಬೈಲ್‌ ಕ್ಷೇತ್ರಕ್ಕೆ ಹೊಸ ತಂತ್ರಜ್ಞಾನ ತರಲಿದೆ ಎಂಬ ಮಾತು ಕೇಳಿಬಂದಿತ್ತು. ಅದು ನಿಜವಾಗಿದೆ. ಎಂಜಿ ತನ್ನ ಮೊತ್ತಮೊದಲ ಕಾರು ಎಂಜಿ ಹೆಕ್ಟರ್‌ ಎಸ್‌ಯುವಿಯನ್ನು ದೇಶಕ್ಕೆ ಪರಿಚಯಿಸಿದೆ. ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ನಿಂದ ಕೆಲಸ ಮಾಡುವ ಹಲವಾರು ಫೀಚರ್‌ಗಳನ್ನು ಹೊಂದಿರುವ ಈ ಕಾರನ್ನು ದೇಶದ ಮೊದಲ ಇಂಟರ್‌ನೆಟ್‌ ಕಾರು ಎಂದೇ ಕರೆಯಲಾಗಿದೆ.

ಎಂಜಿ ಮೋಟಾರ್ ಇಂಡಿಯಾ 2022 ಝೆಡ್ ಎಸ್ ಇವಿ ಬಿಡುಗಡೆ: ದರ 21.99 ಲಕ್ಷ ರೂ.

ಎಂಜಿ ಗ್ಲೋಸ್ಟರ್‌ 
ಎಂಜಿ ಮೋಟಾರ್ಸ್‌ ಇಂಡಿಯಾ ಇದೀಗ ಎಂಜಿ ಗ್ಲೋಸ್ಟರ್‌ ಎಂಬ ಎಸ್‌ಯುವಿ ತರುತ್ತಿದೆ. ಎಂಥಾ ವೇಗದ ಡ್ರೈವಿಂಗ್‌ನಲ್ಲಿದ್ದರೂ ಕಂಟ್ರೋಲ್‌ ಪಡೆಯೋದಕ್ಕೆ ಇದರಲ್ಲಿ ಇಂಟಲಿಜೆನ್ಸ್‌ ಆಲ್‌ ಟೆರ್ರೈನ್‌ ಸಿಸ್ಟಂ ಇದೆ. ಆಫ್‌ ರೋಡ್‌ ಆನ್‌ರೋಡ್‌ ಎಂಥಾ ರಸ್ತೆ ಇದ್ದರೂ ಗ್ಲೋಸ್ಟರ್‌ ಹೆದರಲ್ಲ ಅಂತಿದೆ ಎಂಜಿ. 2.0 ಡಿಸೆಲ್‌ ಟ್ವಿನ್‌ ಟರ್ಬೋ ಇಂಜಿನ್‌ ಇದೆ. 218 ಪಿಎಸ್‌ ಪವರ್‌ ಮತ್ತು 480 ಎನ್‌ಎಂ ಟಾರ್ಕ್ ಇದೆ. ಆರು ಸೀಟ್‌ ಹಾಗೂ ಏಳು ಸೀಟ್‌ನ ಮಾಡೆಲ್‌ಗಳಿವೆ. ಟ್ವಿನ್‌ ಟರ್ಬೋ ಡೀಸೆಲ್‌ ಎಂಜಿನ್‌ ಸೇರಿದಂತೆ ಎರಡು ಎಂಜಿನ್‌ ಹೊಂದಿದೆ.

ಎಂಜಿ ಹೆಕ್ಟರ್‌ ಪ್ಲಸ್‌
ಎಂಜಿ ಮೋಟಾರ್‌ ಇಂಡಿಯಾದ ಆರು ಸೀಟಿನ ಎಸ್‌ಯುವಿ ಎಂಜಿ ಹೆಕ್ಟರ್‌ ಪ್ಲಸಸ್‌ ಮಾರುಕಟ್ಟೆಗೆ ಬಂದಿದೆ. ಎಂಜಿ ಹೆಕ್ಟರ್‌ ಹಾಗೂ ಎಂಜಿ ಝಡ್‌ಎಸ್‌ ಇವಿ ಬಳಿಕ ಇದು ಕಂಪೆನಿಯ ಮೂರನೇ ಕಾರು. ಅಗಲವಾದ ಪಾನೋರಮಿಕ್‌ ಸನ್‌ರೂಫ್‌ ಇದರ ವೈಶಿಷ್ಠ್ಯ. ಈಗಲೇ 50000ರು. ಕೊಟ್ಟು ಎಂಜಿ ಮೊಬೈಲ್‌ ಅಪ್ಲಿಕೇಷನ್‌ ಬಳಸಿ ಬುಕಿಂಗ್‌ ಮಾಡಿದರೆ ರಿಯಾಯಿತಿ ಸಿಗಲಿದೆ. ಮುಂದಿನ ದಿನಗಳಲ್ಲಿ ಈ ಕಾರ್‌ ದರ 50000 ರು. ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 1.2 ಲೀಟರ್‌ ಪೆಟ್ರೋಲ್‌ ಹಾಗೂ 2.0 ಲೀಟರ್‌ ಡಿಸೆಲ್‌ ಇಂಜಿನ್‌ನಲ್ಲಿ ಈ ಕಾರು ಲಭ್ಯವಿದೆ.

ಭಾರತದಲ್ಲಿ ಕಾರುಗಳ ಜೊತೆ ತಂತ್ರಜ್ಞಾನದಲ್ಲಿ ಮೋಡಿ ಮಾಡಿರುವ ಎಂಜಿ ಮೋಟಾರ್ಸ್ ಇದೀಗಿ ಡಿಜಿಟಲ್ ಲೋನ್ ಮೂಲಕ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ.