ಭಾರತಕ್ಕೆ ಬರುತ್ತಿದೆ MG E230 ಎಲೆಕ್ಟ್ರಿಕ್ ಕಾರು 150 ಕಿ.ಮೀ ಮೈಲೇಜ್ ಸಾಮರ್ಥ್ಯದ ನೂತನ ಕಾರು 10 ಲಕ್ಷ ರೂ ಒಳಗಿರಲಿದೆ ನೂತನ  MG E230 ಕಾರು  

ನವದೆಹಲಿ(ಮಾ.12): ಭಾರತದಲ್ಲಿ ಎಂಜಿ ಮೋಟಾರ್ಸ್ ಈಗಾಗಲೇ MG ZS ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇತ್ತೀಚೆಗೆ ಅಪ್‌ಗ್ರೇಡೆಡ್ ZS ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಇದೀಗ ಎಂಜಿ ಮೋಟಾರ್ಸ್ ಭಾರತದಲ್ಲಿ ಜನಸಾಮಾನ್ಯರಿಗೆ ಎಲೆಕ್ಟ್ರಿಕ್ ಕಾರು ತಲುಪಿಸಲು ಕಡಿಮೆ ಬೆಲೆ ಹಾಗೂ ಸಣ್ಮ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ.

ಇದು ಸಣ್ಣ ಎಲೆಕ್ಟ್ರಿಕ್ ಕಾರು, 2 ಡೋರ್ ಹೊಂದಿರುವ ಈ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. 20kWh ಬ್ಯಾಟರಿ ಬಳಸಲಾಗಿದೆ. ಇಷ್ಟೇ ಅಲ್ಲ ನೂತನ ಕಾರಿನ ಬೆಲೆ 10 ಲಕ್ಷ ರೂಪಾಯಿ ಒಳಗಿರಲಿದೆ ಎಂದು ಎಂಜಿ ಮೋಟಾರ್ಸ್ ಹೇಳಿದೆ.

ಎಂಜಿ ಮೋಟಾರ್ಸ್ MG E230 ಎಲೆಕ್ಟ್ರಿಕ್ ಕಾರು ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಅತ್ಯಂತ ಯಶಸ್ವಿಯಾಗಿದೆ. ಇದೇ ಕಾರನ್ನು ಕೆಲ ಬದಲಾವಣೆಯೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಚೀನಾದಲ್ಲಿರುವ ಈ ಸಣ್ಣ ಕಾರು 2,917mm ಉದ್ದ, 1,493mm ಅಗಲ ಹಾಗೂ 1,621mm ಎತ್ತರ ಹೊಂದಿದೆ. ಇನ್ನು ವೀಲ್‌ಬೇಸ್ 1,940mm.

ಎಂಜಿ ಮೋಟಾರ್ ಇಂಡಿಯಾ 2022 ಝೆಡ್ ಎಸ್ ಇವಿ ಬಿಡುಗಡೆ: ದರ 21.99 ಲಕ್ಷ ರೂ.

ಈ ನೂತನ ಕಾರು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಎಂಜಿ ಹೇಳಿದೆ. ಈಗಾಗಲೇ ಭಾರತದಲ್ಲಿ ಟಾಟಾ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡಲು ಎಂಜಿ ಹೊಸ ಕಾರು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಇದರಂತೆ ಎರಡನೇ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಎಂಜಿ ಮೋಟಾರ್ಸ್ ತಯಾರಿ ಆರಂಬಿಸಿದೆ.

ಭಾರತದಲ್ಲಿ ಎಂಜಿ ಮೋಟಾರ್ಸ್ ಕಾರುಗಳು ಅತ್ಯಂತ ಜನಪ್ರಿಯವಾಗಿದೆ. ಅತ್ಯಾಧುನಿಕ ಫೀಚರ್ಸ್, ಕಾರ್ ಕನೆಕ್ಟೆಡ್್ ಫೀಚರ್ಸ್ ಸೇರಿದಂತೆ ತಂತ್ರಜ್ಞಗಳಿಂದ ತುಂಬಿಕೊಂಡಿದೆ. ಎಂಜಿ ಹೆಕ್ಟರ್, ಗೋಸ್ಟರ್ ಸೇರಿದಂತೆ ಎಂಜಿ ಇಂಧನ ಕಾರುಗಳು ಭಾರತದಲ್ಲಿ ಅತೀ ಜನಪ್ರಿಯವಾಗಿದೆ.

MG ZS Electric Charging ಎಂಜಿ ಎಲೆಕ್ಟ್ರಿಕ್ ಕಾರು ಮಾಲೀಕರಿಗೆ ಭರ್ಜರಿ ಆಫರ್, ಚಾರ್ಜಿಂಗ್ ಸಂಪೂರ್ಣ ಉಚಿತ!

ಎಂಜಿ ಗ್ಲೊಸ್ಟರ್‌ ಸ್ಯಾವಿ 7 ಸೀಟರ್‌ ಕಾರು
ಎಂಜಿ ಮೋಟಾರ್‌ ಇಂಡಿಯಾ 7 ಸೀಟುಗಳ ಗ್ಲೋಸ್ಟರ್‌ ಸ್ಯಾವಿ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹಿಂದೆ ಬಿಡುಗಡೆಯಾದ ಗ್ಲೋಸ್ಟರ್‌ 6 ಸೀಟ್‌ ಹೊಂದಿತ್ತು. ಒಳಭಾಗ ವಿಶಾಲವಾಗಿದ್ದು, ಆರಾಮವಾಗಿ ಪ್ರಯಾಣಿಸಲು ಅನುಕೂಲಕರ. ಇದು 2.0 ಟ್ವಿನ್‌ ಟರ್ಬೊ ಡೀಸೆಲ್‌ ಎಂಜಿನ್‌ ಇರುವ ಎಸ್‌ಯುವಿ. 200 ಪಿಎಸ್‌ ಪವರ್‌ ಮತ್ತು 480 ಎನ್‌ಎಂ ಟಾರ್ಕ್ ಹೊಂದಿದೆ. ಡ್ರೈವರ್‌ ಸೀಟ್‌ ಮಸಾಜರ್‌, 64 ಬಣ್ಣಗಳ ಆ್ಯಂಬಿಯೆಂಟ್‌ ಲೈಟಿಂಗ್‌, ಆಟೋಮ್ಯಾಟಿಕ್‌ ಎಸಿ ನಿಯಂತ್ರಣ ಇತ್ಯಾದಿ ಫೀಚರ್‌ಗಳಿವೆ.
ಬೆಲೆ: 37.28 ಲಕ್ಷ ರು.

ದೇಶದ ಮೊದಲ ಇಂಟರ್‌ನೆಟ್‌ ಕಾರ್‌ ಎಂಜಿ ಹೆಕ್ಟರ್‌ ಎಸ್‌ಯುವಿ
ಎಂಜಿ ಮೋಟಾರ್ಸ್‌ ಭಾರತಕ್ಕೆ ಕಾಲಿಟ್ಟಾಗಲೇ ಆಟೋಮೊಬೈಲ್‌ ಕ್ಷೇತ್ರಕ್ಕೆ ಹೊಸ ತಂತ್ರಜ್ಞಾನ ತರಲಿದೆ ಎಂಬ ಮಾತು ಕೇಳಿಬಂದಿತ್ತು. ಅದು ನಿಜವಾಗಿದೆ. ಎಂಜಿ ತನ್ನ ಮೊತ್ತಮೊದಲ ಕಾರು ಎಂಜಿ ಹೆಕ್ಟರ್‌ ಎಸ್‌ಯುವಿಯನ್ನು ದೇಶಕ್ಕೆ ಪರಿಚಯಿಸಿದೆ. ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ನಿಂದ ಕೆಲಸ ಮಾಡುವ ಹಲವಾರು ಫೀಚರ್‌ಗಳನ್ನು ಹೊಂದಿರುವ ಈ ಕಾರನ್ನು ದೇಶದ ಮೊದಲ ಇಂಟರ್‌ನೆಟ್‌ ಕಾರು ಎಂದೇ ಕರೆಯಲಾಗಿದೆ. ಎಂಜಿ ಮೋಟಾರ್‌ ಇಂಡಿಯಾದ ಆರು ಸೀಟಿನ ಎಸ್‌ಯುವಿ ಎಂಜಿ ಹೆಕ್ಟರ್‌ ಪ್ಲಸಸ್‌ ಮಾರುಕಟ್ಟೆಗೆ ಬಂದಿದೆ. ಎಂಜಿ ಹೆಕ್ಟರ್‌ ಹಾಗೂ ಎಂಜಿ ಝಡ್‌ಎಸ್‌ ಇವಿ ಬಳಿಕ ಇದು ಕಂಪೆನಿಯ ಮೂರನೇ ಕಾರು. ಅಗಲವಾದ ಪಾನೋರಮಿಕ್‌ ಸನ್‌ರೂಫ್‌ ಇದರ ವೈಶಿಷ್ಠ್ಯ. ಈಗಲೇ 50000ರು. ಕೊಟ್ಟು ಎಂಜಿ ಮೊಬೈಲ್‌ ಅಪ್ಲಿಕೇಷನ್‌ ಬಳಸಿ ಬುಕಿಂಗ್‌ ಮಾಡಿದರೆ ರಿಯಾಯಿತಿ ಸಿಗಲಿದೆ. ಮುಂದಿನ ದಿನಗಳಲ್ಲಿ ಈ ಕಾರ್‌ ದರ 50000 ರು. ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 1.2 ಲೀಟರ್‌ ಪೆಟ್ರೋಲ್‌ ಹಾಗೂ 2.0 ಲೀಟರ್‌ ಡಿಸೆಲ್‌ ಇಂಜಿನ್‌ನಲ್ಲಿ ಈ ಕಾರು ಲಭ್ಯವಿದೆ.

ಎಂಜಿ ಹಿನ್ನಲೆ
ಮೂಲತಃ ಇದು ಬ್ರಿಟಿಷ್‌ ಕಂಪನಿ. ಆದರೆ ಈಗ ಚೀನಾದ ಶಾಂಘೈ ಅಟೋಮೋಟಿವ್‌ ಇಂಡಸ್ಟ್ರಿ ಕಾರ್ಪೋರೇಷನ್‌(ಎಸ್‌ಎಐಸಿ) ಸಂಸ್ಥೆಯ ಒಡೆತನದಲ್ಲಿದೆ. ಚೀನಾದಲ್ಲಿ ಎಸ್‌ಎಐಸಿ ಅತ್ಯಂತ ದೊಡ್ಡ ಕಾರು ಕಂಪನಿ. ಎಷ್ಟುದೊಡ್ಡದು ಎಂದರೆ ಕಳೆದ ವರ್ಷ ಈ ಕಂಪನಿಯ 70 ಲಕ್ಷ ಕಾರುಗಳು ಮಾರಾಟವಾಗಿತ್ತು. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಕಾರುಗಳ ಮೇಲೆ ಚೀನಾದವರಿಗೆ ಭಾರಿ ಪ್ರೀತಿ. ಇಂಥಾ ಕಂಪನಿ ಇದೀಗ ಭಾರತಕ್ಕೆ ಬಂದಿದೆ.