ಎಂಜಿ ಮೋಟಾರ್ ಇಂಡಿಯಾ 2022 ಝೆಡ್ ಎಸ್ ಇವಿ ಬಿಡುಗಡೆ: ದರ 21.99 ಲಕ್ಷ ರೂ.
ಎಂಜಿ ಮೋಟಾರ್ ಇಂಡಿಯಾ (MG ಮೋಟಾರ್ ಇಂಡಿಯಾ) 2022 ಝೆಡ್ ಎಸ್ ಎಲೆಕ್ಟ್ರಿಕ್ ವೆಹಿಕಲ್ (ZS EV) ಅನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ 21.99 ಲಕ್ಷ ರೂ.ಗಳಿಂದ (ಶೋರೂಂ ದರ) ಪ್ರಾರಂಭವಾಗುತ್ತವೆ
ಎಂಜಿ ಮೋಟಾರ್ ಇಂಡಿಯಾ 2022 ಝೆಡ್ ಎಸ್ ಇವಿ ಬಿಡುಗಡೆ: ದರ 21.99 ಲಕ್ಷ ರೂ.
ಎಂಜಿ ಮೋಟಾರ್ ಇಂಡಿಯಾ (MG ಮೋಟಾರ್ ಇಂಡಿಯಾ) 2022 ಝೆಡ್ ಎಸ್ ಎಲೆಕ್ಟ್ರಿಕ್ ವೆಹಿಕಲ್ (ZS EV) ಅನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ 21.99 ಲಕ್ಷ ರೂ.ಗಳಿಂದ (ಶೋರೂಂ ದರ) ಪ್ರಾರಂಭವಾಗುತ್ತವೆ. ಇದರ ಎಕ್ಸ್ಕ್ಲೂಸಿವ್ ವೇರಿಯಂಟ್ ಬೆಲೆ 25.88 ಲಕ್ಷ ರೂ.ಗಳವರೆಗೆ ಇರಲಿದೆ.
ಝೆಡ್ ಎಸ್ ಮೊದಲ ಬಾರಿಗೆ 2020 ರಲ್ಲಿ ಬಿಡುಗಡೆಯಾಗಿತ್ತು. ಇದು ದೇಶದಲ್ಲಿ ಎಂಜಿ ಮೋಟಾರ ಕಂಪನಿಯ ಮೊದಲ ಎಲೆಕ್ಟ್ರಿಕ್ ಎಸ್ಯುವಿ (SUV) ಆಗಿದೆ. ಈಗ ಕಾರು ಮಿಡ್-ಲೈಫ್ ಫೇಸ್ಲಿಫ್ಟ್ ಅನ್ನು ಕೂಡ ಪಡೆಯುತ್ತಿದೆ. ಕಾರಿನ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಇದು ಎರಡು ವೇರಿಯಂಟ್ಗಳಲ್ಲಿ ಬರಲಿದೆ- ಎಕ್ಸೈಟ್ ಮತ್ತು ಎಕ್ಸ್ಕ್ಲೂಸಿವ್. ಈ ವರ್ಷದ ಜುಲೈನಿಂದ ಎಕ್ಸೈಟ್ ವೇರಿಯಂಟ್ ಲಭ್ಯವಿರಲಿದೆ ಎಂದು ಕಂಪನಿ ಘೋಷಿಸಿದೆ. ಆದರೆ, ಎಕ್ಸ್ಕ್ಲೂಸಿವ್ ವೇರಿಯಂಟ್ ಈಗಲೇ ಲಭ್ಯವಿದೆ!
ಕಳೆದ ಬಾರಿ, ಭಾರತದಲ್ಲಿ ಬಿಡುಗಡೆಗೊಳಿಸಿದ್ದ ಝೆಡ್ ಎಎಸ್ ಇವಿ (ZS EV) ಬೆಲೆ 19.88 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತಿತ್ತು. ಇದು ಅದೇ ಸಮಯದಲ್ಲಿ ಬಿಡುಗಡೆಗೊಂಡ ಹ್ಯುಂಡೈ ಕೋನಾಗೆ ಸ್ಪರ್ಧೆ ನೀಡುತ್ತಿತ್ತು.
2022 ಝೆಡ್ ಎಎಸ್ ಇವಿಯ ಹೊರಭಾಗದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. ಇದು ಕಾನ್ಕೇವ್ ಲೇಔಟ್ ಬದಲಿಗೆ ಸುತ್ತುವರಿದ ಗ್ರಿಲ್ ಪಡೆಯುತ್ತದೆ. ಆದರೆ ಚಾರ್ಜಿಂಗ್ ಸಾಕೆಟ್ ಅನ್ನು ಹಿಂದಿನ ಕಾರಿನಲ್ಲಿದ್ದ ಎಂಜಿ ಲೋಗೋದ ಹಿಂಭಾಗದಿಂದ ಎಡಭಾಗಕ್ಕೆ ಸರಿಸಲಾಗಿದೆ. ಮುಂಭಾಗದ ಬಂಪರ್ ಅನ್ನು ಕೂಡ ಮರುವಿನ್ಯಾಸಗೊಳಿಸಲಾಗಿದೆ. 2022 MG ZS EV ಮರುವಿನ್ಯಾಸಗೊಳಿಸಲಾದ 17-ಇಂಚಿನ ಅಲಾಯ್ ಚಕ್ರಗಳನ್ನು ಹೊಂದಿರಲಿದೆ. ಹಿಂಭಾಗದಲ್ಲಿ ಹೊಸ ಟೈಲ್-ಲೈಟ್ ವಿನ್ಯಾಸ ಮತ್ತು ಹೊಸ ಬಂಪರ್ಗಳನ್ನು ನೋಡಬಹುದು. ಎಲ್ಇಡಿ ಡಿಆರ್ಎಲ್ಗಳೊಂದಿಗೆ ಲಂಡನ್-ಐ ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳು, ಎಲ್ಇಡಿ ಟೈಲ್ಲೈಟ್ಗಳು, ರೂಫ್ ರೈಲ್ಸ್, ರಿಯರ್ ಸ್ಪಾಯ್ಲರ್, ಸೈಡ್ ಇಂಡಿಕೇಟರ್ಗಳೊಂದಿಗೆ ಒಆರ್ವಿಎಂಗಳನ್ನು ಹಿಂದಿನ ಕಾರಿನ ಮಾದರಿಯಂತೆಯೇ ಮುಂದುವರಿಸಲಾಗಿದೆ.
MG ZS EV ಇಂಟೀರಿಯರ್ ನಲ್ಲಿ ನವೀಕರಿಸಿದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ MG ಆಸ್ಟರ್ ಮಾದರಿಯ ಇಂಟೀರಿಯರ್ ಇರಲಿದೆ. ಹಿಂಭಾಗದ ಸೀಟ್ಗಳಿಗೆ ಸೆಂಟರ್ ಆರ್ಮ್ರೆಸ್ಟ್, ಪ್ರತ್ಯೇಕ ಕಪ್-ಹೋಲ್ಡರ್ಗಳು, ಸೆಂಟರ್ ಹೆಡ್ರೆಸ್ಟ್ ಮತ್ತು ಹಿಂದಿನ ಎಸಿ ವೆಂಟ್ಗಳನ್ನು ಸಹ ಇದು ಒಳಗೊಂಡಿದೆ.
ಭಾರತದಲ್ಲಿ ವೋಕ್ಸ್‌ವ್ಯಾಗನ್ ವೈರ್ಟುಸ್
MG ZS EV ಪವರ್ಟ್ರೇನ್
2022 MG ZS EV 50.3 kWh ಬ್ಯಾಟರಿ ಪ್ಯಾಕ್, ಶಾಶ್ವತ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟರ್ ಹೊಂದಿದ್ದು, 174 ಬಿಎಚ್ಪಿ ಸಾಮರ್ಥ್ಯ ಹೊಂದಿದೆ. ಇದು ಒಂದೇ ಚಾರ್ಜ್ನಲ್ಲಿ 461 ಕಿಮೀ ಪ್ರಯಾಣದ ವ್ಯಾಪ್ತಿಯನ್ನು ನೀಡಬಲ್ಲದು ಎಂದು ಅಂದಾಜಿಸಲಾಗುತ್ತಿದೆ. ಹಿಂದಿನ ಆವೃತ್ತಿಯ ವ್ಯಾಪ್ತಿ 419 ಕಿಮೀ ಇತ್ತು. ಹಾಗೂ ಇದು ಕೇವಲ 8. ಸೆಕೆಂಡ್ಗಳಲ್ಲಿ 0-100 kmph ವೇಗ ಹೆಚ್ಚಿಸುವ ಸಾಮರ್ಥ್ಯ ಹೊಂದಿರಲಿದೆ.
2022 MG ZS EV ಹಳೆಯ 8-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಬದಲಿಗೆ ಹೊಸ 10.1-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಹೊಸ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಪನೋರಮಿಕ್ ಸನ್ರೂಫ್, ಚಾಲಿತ ಡ್ರೈವರ್ ಸೀಟ್, ವೈಪರ್ಗಳೊಂದಿಗೆ ಸ್ವಯಂಚಾಲಿತ ಹೆಡ್ಲ್ಯಾಂಪ್ಗಳು, ಸಂಪರ್ಕಿತ ಕಾರ್ ತಂತ್ರಜ್ಞಾನ, ಆರು ಏರ್ಬ್ಯಾಗ್ಗಳು, ಹಿಲ್ ಸ್ಟಾರ್ಟ್/ಡಿಸೆಂಟ್ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ನೊಂದಿಗೆ ಬರಲಿದೆ.
ಮಾರುತಿ ಸಿಎನ್‌ಜಿ ಕಾರು ಮಾರುಕಟ್ಟೆಗೆ