Asianet Suvarna News Asianet Suvarna News

ಅಂಪಿಯರ್ ಮ್ಯಾಗ್ನಸ್ ಇಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, ಬೆಲೆ ಎಷ್ಟು?

ಅಂಪಿಯರ್ ಎಲೆಕ್ಟ್ರಿಕ್ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದೆ. ಅಂಪಿಯರ್ ಮ್ಯಾಗ್ನಸ್ ಇಎಕ್ಸ್ (Ampere Magnus EX) ಸ್ಕೂಟರ್ ಬಹಳಷ್ಟು ವಿಶೇಷ ಫೀಚರ್‌ಗಳನ್ನು ಒಳಗೊಂಡಿದ್ದು, ಗ್ರಾಹಕರ ಫೀಡ್‌ಬ್ಯಾಕ್‌ನಂತೆ ವಿನ್ಯಾಸ ಮಾಡಲಾಗಿದೆ ಎಂದು ಕಂಪನಿಯು ಹೇಳಿಕೊಂಡಿದೆ.

Ampere Magnus EX electric Scooter launched
Author
Bengaluru, First Published Oct 15, 2021, 5:31 PM IST
  • Facebook
  • Twitter
  • Whatsapp

ಭಾರತೀಯ ದ್ವಿಚಕ್ರವಾಹನ ಬಳಕೆದಾರರು ನಿಧಾನವಾಗಿ ಸಾಂಪ್ರದಾಯಿಕ ದ್ವಿಚಕ್ರವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳತ್ತ ಬದಲಾಗುತ್ತಿದ್ದಾರೆ. ಇದರಿಂದಾಗಿಯೇ ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರವಾಹನ (Electric Scooter) ಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಬಹಳಷ್ಟು ಕಂಪನಿಗಳು ಮಾರುಕಟ್ಟೆಯಲ್ಲಿ ತಮ್ಮ ಸ್ಕೂಟರ್‌ಗಳೊಂದಿಗೆ ಲಗ್ಗೆ ಇಡುತ್ತಿವೆ.

ಈ ಸಾಲಿಗೆ ಅಂಪಿಯರ್ ಎಲೆಕ್ಟ್ರಿಕ್ (Ampere Electic) ಕಂಪನಿಯು ತನ್ನ ಜನಪ್ರಿಯ ಅಂಪಿಯರ್ ಮ್ಯಾಗ್ನಸ್ ಶ್ರೇಣಿಯಲ್ಲಿ ಹೊಸ ಅಂಪಿಯರ್ ಮ್ಯಾಗ್ನಸ್ ಇಎಕ್ಸ್ (Ampere Magnus EX) ಸ್ಕೂಟರ್  ಲಾಂಚ್ ಮಾಡಿದೆ. ಈ ಸೆಗ್ಮೆಂಟ್‌ನಲ್ಲೇ ಈ ಹೊಸ ಸ್ಕೂಟರ್ ಅತ್ಯುತ್ತಮ ಪ್ರದರ್ಶನ ಹಾಗೂ ಹೊಸ ಫೀಚರ್‌ಗಳನ್ನು ಒಳಗೊಂಡಿದೆ ಎಂಬುದು ಕಂಪನಿಯ ಅಭಿಪ್ರಾಯವಾಗಿದೆ. ಕಂಪರ್ಟ್ ಮತ್ತು ಹೊಸ ಪರಿಕಲ್ಪನೆಗಳ ಮೂಲಕ ಈ ಸ್ಕೂಟರ್ ಗಮನ ಸೆಳೆಯುತ್ತಿದೆ. ಈ ಸ್ಕೂಟರ್ ಬೆಲೆ  68,999 ರೂ.(ಎಕ್ಸ್ ಶೋರೂಂ ಬೆಲೆ) ಆಗಿದೆ.

ಹೊಚ್ಚ ಹೊಸ TVS ಜ್ಯುಪಿಟರ್ 125 ಸ್ಕೂಟರ್ ಬಿಡುಗಡೆ!

ಈಗಷ್ಟೇ ಬಿಡುಗಡೆಯಾಗಿರುವ ಈ ಅಂಪಿಯರ್ ಮ್ಯಾಗ್ನಸ್ ಇಎಕ್ಸ್ (Ampere Magnus EX) ಎಲೆಕ್ಟ್ರಿಕ್ ಸ್ಕೂಟರನ್ನು ಒಮ್ಮೆ ಚಾರ್ಚ್ ಮಾಡಿದರೆ, ಅಂದರೆ ಸಿಂಗಲ್ ಚಾರ್ಜ್‌ನಲ್ಲಿ 121 ಕಿ.ಮೀ.ವರೆಗೂ ಅದು ಓಡುತ್ತದೆ. ಈ ಬಗ್ಗೆ Automotive Research Association of India (ARAI) ಸರ್ಟಿಫೈ ಕೂಡ ಮಾಡಿದೆ. ಈ ಸೆಗ್ಮೆಂಟ್‌ನಲ್ಲಿ ಸ್ಕೂಟರ್ ತನ್ನ ವಿಶಿಷ್ಟ ಫೀಚರ್‌ಗಳಿಂದಲೇ ವಿಶಿಷ್ಟವಾಗಿದೆ.

ಈ ಅಂಪಿಯರ್ ಮ್ಯಾಗ್ನಸರ್ ಇಎಕ್ಸ್ (Ampere Magnus EX)  ವಿಶಿಷ್ಟವಾದ ಹಾಗೂ ಸ್ವಲ್ಪ ಓರೆಯಾಗಿರುವ ಕ್ರೆಡೆಲ್ ಹೊಂದಿದೆ. ಇದರಿಂದಾಗಿ ಸೀಟ್ ಕೆಳಗೆ ನಿಮಗೆ ಸಾಕಷ್ಟು ಸ್ಥಳಾವಕಾಶ ದೊರೆಯಲು ಸಾಧ್ಯವಾಗಲಿದೆ. ಹಾಗೆಯೇ, ಸ್ಕೂಟರ್‌ನಲ್ಲಿ ಅಳವಡಿಸಲಾಗಿರುವ ಬ್ಯಾಟರಿಯನ್ನು ಸಳವಾಗಿ ಹೊರ ತೆಗೆದು ಚಾರ್ಜ್ ಮಾಡಿ, ಮತ್ತೆ ಅದನ್ನು ಫಿಟ್ ಮಾಡಲು ಅನುವಾಗುವಂತೆ ರೂಪಿಸಲಾಗಿದೆ. 

ಕಂಪನಿಯು ಹೇಳಿಕೊಂಡಿರುವ ಗ್ರಾಹಕರಿಂದ ಫೀಡ್‌ಬ್ಯಾಕ್ ಪಡೆದುಕೊಂಡು ಈ ಸ್ಕೂಟರ್ ಅನ್ನು ಅಗತ್ಯಕ್ಕೆ ತಕ್ಕಂತೆ ವಿನ್ಯಾಸ ಮಾಡಲಾಗಿದೆ. ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಹೆಚ್ಚು ಸ್ಪೇಸ್ ಲಭ್ಯವಾಗುವಂತೆ ಮಾಡಲಾಗಿದೆ. ಆ ಕಾರಣಕ್ಕಾಗಿಯೇ ಹಗುರವಾದ ಹಾಗೂ ಪ್ರತ್ಯೇಕಿಸಲು ಸಾಧ್ಯವಾಗುವಂಥ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದ್ದು, 5 ಇದು ಮನೆ, ಕಚೇರಿ, ಕಾಫಿ ಶಾಪ್ ಅಥವಾ ವಾಲ್ ಚಾರ್ಜ್ ಪಾಯಿಂಟ್‌ನಲ್ಲಿ ಚಾರ್ಜ್ ಮಾಡಲು ಸಾಧ್ಯವಾಗಲಿದೆ.

ಹಬ್ಬದ ಸಂಬ್ರಮದಲ್ಲಿ ಕೈಗೆಟುಕವ ಬೆಲೆಯ ಹೀರೋ ಪ್ಲೆಷರ್+ XTec ಸ್ಕೂಟರ್ ಬಿಡುಗಡೆ!

Ampere Magnus EX ಸ್ಕೂಟರ್ ಅನ್ನು ನೀವು ನಗರದಲ್ಲಿ ಗಂಟೆಗೆ 53 ಕಿ.ಮೀ. ವೇಗದಲ್ಲಿ ಓಡಿಸಬಹುದು. 120 ವ್ಯಾಟ್ ಮೋಟಾರ್ ಶೂನ್ಯದಿಂ 40 ಕಿ.ಮೀ. ವೇಗ ಪಡೆಯಲು 10 ಸೆಕೆಂಡ್‌ಗಳು ಬೇಕಾಗುತ್ತದೆ. ಅಷ್ಟು ಕ್ವಿಕ್‌ ಆಗಿರುವ ಪ್ರದರ್ಶನವನ್ನು ಈ ಸ್ಕೂಟರ್ ಹೊಂದಿದೆ. ಕಂಪನಿಯು ಈ ಸ್ಕೂಟರ್‌ನಲ್ಲಿ ಸೂಪರ್ ಸೇವರ್ ಇಕೋ (Super Saver Eco Mode) ಮತ್ತು ಪವರ್ ಮೋಡ್‌ (Power Mode) ಗಳನ್ನು ಪರಿಚಯಿಸಿದೆ.

ಎಲ್ಇಡಿ (LED) ಹೆಡ್‌ಲೈಟ್‌ಗಳು ಸ್ಕೂಟರ್ ಅಂದ ಹೆಚಿಸಿವೆ. ಆರಾಮದಾಯಕವಾಗುವಂಥ ಲಾರ್ಜ್ ಲೆಗ್‌ರೂಂ ಇದೆ. ಕೀಲೆಸ್ ಎಟ್ರಿ, ವೆಹಿಕಲ್ ಫೈಂಡರ್, ಆಂಟಿ ಥೆಫ್ಟ್ ಅಲಾರಾಂ ಸೇರಿದಂತೆ ಇನ್ನಿತರ ಫೀಚರ್‌ಗಳಿವೆ. ಆಕರ್ಷವಾಗಿ ವಿನ್ಯಾಸವಾಗಿರುವ ಅಗಲವಾದ ಸೀಟ್ ಗಮನ ಸೆಳೆಯುತ್ತದೆ. ಕಂಪನಿಯು ಈ ಸ್ಕೂಟರ್ ಅನ್ನು  ಮೆಟಾಲಿಕ್ ರೆಡ್, ಗ್ರಾಫೈಟ್  ಬ್ಲ್ಯಾಕ್ ಮತ್ತು ಗ್ಯಾಲಕ್ಟಿಕ್ ಗ್ರೇ ಬಣ್ಣಗಳಲ್ಲಿ ಮಾರಾಟ ಮಾಡುತ್ತದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿವೆ. ಇದರಿಂದ ವಿಶೇಷವಾಗಿ ಎಲೆಕ್ಟ್ರಿಕ್ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ಸಾಕಷ್ಟು ಪೈಪೋಟಿ ಕಂಡು ಬರುತ್ತಿರುವುದನ್ನು ಗುರುತಿಸಬಹುದಾಗಿದೆ.

ಟಾಟಾ ಪಂಚ್ ಕಾರಿಗೆ ಗರಿಷ್ಠ ಸುರಕ್ಷತೆ ಕಿರೀಟ, ಗ್ಲೋಬಲ್ NCAPನಿಂದ 5 ಸ್ಟಾರ್ ರೇಟಿಂಗ್!

Follow Us:
Download App:
  • android
  • ios