Maruti Ertiga 11 ಸಾವಿರ ರೂಗೆ ಬುಕ್ ಮಾಡಿ 2022ರ ಹೊಚ್ಚ ಹೊಸ ಮಾರುತಿ ಎರ್ಟಿಗಾ!

  • ಮಾರುತಿ XL6 ಬೆನ್ನಲ್ಲೇ ಇದೀಗ ಮಾರುತಿ ಎರ್ಟಿಗಾ ಬಿಡುಗಡೆಗೆ ತಯಾರಿ
  • ಹೊಚ್ಚ ಹೊಸ ಎರ್ಟಿಗಾ ಕಾರಿನ ಟೀಸರ್ ಬಿಡುಗಡೆ, ಬುಕಿಂಗ್ ಆರಂಭ
  • 11 ಸಾವಿರ ರೂಪಾಯಿಗೆ ಹೊಸ ಮಾರುತಿ ಎರ್ಟಿಗಾ ಕಾರು ಬುಕಿಂಗ್
Maruti Suzuki set to launch news 2022 ertiga bookings begin with rs 11000 ckm

ನವದೆಹಲಿ(ಏ.07):ಹೊಸ ವರ್ಷದಲ್ಲಿ ಈಗಾಗಲೇ ಮಾರುತಿ ಸುಜುಕಿ ಫೇಸ್‌ಲಿಫ್ಟ್, ಅಪ್‌ಗ್ರೇಡ್ ವರ್ಶನ್ ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇತ್ತೀಚೆಗೆ ಮಾರುತಿ ಬಲೆನೋ ಬಳಿಕ XL6 ಫೇಸ್‌ಲಿಫ್ಟ್ ಕಾರುಗಳನ್ನು ಬಿಡುಗಡೆ ಮಾಡಿತ್ತು. ಈ ಯಶಸ್ಸಿನ ಬೆನ್ನಲ್ಲೇ ಇದೀಗ ಮಾರುತಿ ಸುಜುಕಿ 2022ರ ಮಾರುತಿ ಎರ್ಟಿಗಾ ಕಾರು ಬಿಡುಗಡೆಯಾಗುತ್ತಿದೆ. ಇದೀಗ ಟೀಸರ್ ಬಿಡುಗಡೆಯಾಗಿದ್ದು, ಬುಕಿಂಗ್ ಆರಂಭಗೊಂಡಿದೆ.

2022ರ ಹೊಚ್ಚ ಹೊಸ ಮಾರುತಿ ಎರ್ಟಿಗಾ ಕಾರನ್ನು 11,000 ರೂಪಾಯಿ ನೀಡಿ ಬುಕ್ ಮಾಡಿಕೊಳ್ಳಬಹುದು. ಮಾರುತಿ ಸುಜುಕಿ ಅರೆನಾ ಶೋರೂಂ ಹಾಗೂ ಅಧೀಕೃತ ವೆಬ್‌ಸೈಟ್‌ಗಳಲ್ಲಿ ಕಾರು ಬುಕಿಂಗ್ ಮಾಡಬಹುದು. ವಿಶೇಷ ಅಂದರೆ ಇದು ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿ ಕಾರು. ಜೊತೆಗೆ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. 

ಭಾರತದಲ್ಲಿ ಬೆಲೆ ಏರಿಕೆ ಬಿಸಿ, ಮಾರುತಿ ಸುಜುಕಿ ಕಾರಿನ ದರ ಹೆಚ್ಚಳ!

1.5 ಲೀಟರರ್ K ಸೀರಿಸ್ ಡ್ಯುಯೆಲ್ ಜೆಟ್ VVT ಎಂಜಿನ್ ಹೊಂದಿದೆ. ಇದರ ಜೊತೆಗೆ  ವಿನ್ಯಾಸದಲ್ಲೂ ಕೆಲ ಬದಲಾವಣೆ ಮಾಡಲಾಗಿದೆ. ಈ ಮೂಲಕ ಹೊಸ ಕಾರಿನ  ಲುಕ್ ಮತ್ತಷ್ಟು ಹೆಚ್ಚಾಗಿದೆ. ಇನ್ನು 7 ಇಂಚಿನ ಸ್ಮಾರ್ಟ್ ಪ್ಲೇ ಪ್ರೋ ಟಚ್‌ಸ್ಕ್ರೀನ್ ಬಳಸಲಾಗಿದೆ . ಇದರಲ್ಲಿ ಟಾಪ್ ZXI ವೇರಿಯಂಟ್ ಕಾರಿನಲ್ಲಿ S CNG ಆಯ್ಕೆಯೂ ಲಭ್ಯವಿದೆ. 

ನೂತನ ಮಾರುತಿ ಎರ್ಟಿಗಾ ಕಾರು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈಗಾಗಲೇ ಡೀಲರ್‌‌ಗೆ ಹೊಚ್ಚ ಹೊಸ ಎರ್ಟಿಗಾ ಪೂರೈಕೆಯಾಗುತ್ತಿದೆ. ಹೀಗಾಗಿ ಬುಕಿಂಗ್ ಮಾಡಿ ಹೆಚ್ಚು ಕಾಯಬೇಕಾದ ಅವಶ್ಯಕತೆ ಇರುವುದಿಲ್ಲ. ಹೊಸ ಮಾರುತಿ ಎರ್ಟಿಗಾ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಹೆಚ್ಚುವರಿ ಫೀಚರ್ಸ್ ಹೊಂದಿದೆ.

Electric Car ಮಾರುತಿ ಸುಜುಕಿ ಮೊದಲ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮುಹೂರ್ತ ಫಿಕ್ಸ್, ಕೈಗೆಟುಕುವ ದರ!

ಕೊರೋನಾ,ಚಿಪ್ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಭಾರತೀಯ ಆಟೋಮೊಬೈಲ್ ತೀವ್ರ ಹಿನ್ನಡೆ ಅನುಭವಿಸಿತ್ತು. ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಹೀಗಾಗಿ ಬಹುತೇಕ ಆಟೋ ಕಂಪನಿಗಳು ಹೊಸ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. 

ಫೇಸ್‌ಬುಕ್‌ ಜೊತೆ ಪಾಲುದಾರಿಕೆ 
ಡಿಜಿಟಲ್‌ ವೇದಿಕೆಯಲ್ಲಿ ಮಾರುತಿ ಸುಜುಕಿಯ ವ್ಯವಹಾರ ಕೊರೋನಾ ಸಮಯದಲ್ಲಿ ಹೆಚ್ಚಿನ ಪ್ರಗತಿ ಕಂಡಿದೆ. ಒಟ್ಟಾರೆ ವ್ಯವಹಾರದಲ್ಲಿ ಶೇ.40ರಷ್ಟುವಿಚಾರಣೆಗಳು ಡಿಜಿಟಲ್‌ ಪ್ಲಾಟ್‌ಫಾಮ್‌ರ್‍ನಿಂದಲೇ ಬರುತ್ತಿದೆ. ಅದರಲ್ಲೂ ಫೇಸ್‌ಬುಕ್‌ ಜೊತೆಗಿನ ಸಹಭಾಗಿತ್ವ ಹೆಚ್ಚಿನ ಲಾಭ ತಂದಿದೆ ಎಂದು ಕಂಪನಿ ತಿಳಿಸಿದೆ. ಕಳೆದ ವರ್ಷ ಕಂಪನಿ ಫೇಸ್‌ಬುಕ್‌ ಜೊತೆ ಒಡಂಬಡಿಕೆ ಮಾಡಿಕೊಂಡು ನೆಕ್ಸಾ ಎಸ್‌ ಕ್ರಾಸ್‌ ಕಾರ್‌ಅನ್ನು ಫೇಸ್‌ಬುಕ್‌ ಮೂಲಕ ವಚ್ರ್ಯುವಲ್‌ ಆಗಿ ಬಿಡುಗಡೆ ಮಾಡಿತ್ತು. ಮಾರುತಿ ಸುಜುಕಿ ಕಂಪನಿ ಹೆಚ್ಚು ಡಿಜಿಟಲ್‌ ಕಡೆಗೆ ಗಮನ ಹರಿಸಿ ಗ್ರಾಹಕರು ವರ್ಚುವಲ್‌ ರೀತಿಯಲ್ಲಿ ಹೆಚ್ಚು ತಿಳಿದುಕೊಳ್ಳುವ ತಂತ್ರಜ್ಞಾನಗಳನ್ನು ರೂಪಿಸಿ ಯಶಸ್ಸು ಸಾಧಿಸಿದೆ.

ಕಳೆದ 2 ದಶಕಗಳಲ್ಲಿ ಗ್ರಾಹಕರ ಮನಸೂರೆಗೊಂಡ ಮಾರುತಿ ಆಲ್ಟೋ
ಭಾರತೀಯರ ನೆಚ್ಚಿನ ಕಾರುಗಳ ಪೈಕಿ ಒಂದಾಗಿರುವ ಮಾರುತಿ ಅಲ್ಟೋ ಕಾರು ಮಾರುಕಟ್ಟೆಗೆ ಬಿಡುಗಡೆಗೆ ಮಂಗಳವಾರ ಬರೋಬ್ಬರಿ 20 ವರ್ಷ ಸಂದಿದೆ. ಈವರೆಗೆ 40 ಲಕ್ಷಕ್ಕೂ ಅಧಿಕ ಕಾರುಗಳು ಮಾರಾಟ ಆಗಿವೆ ಎಂದು ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ. ಮಾರುತಿ ಸುಜುಕಿ 2000ರಲ್ಲಿ ಅಲ್ಟೋ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. 2008ರಲ್ಲಿ ಕಾರಿನ ಮಾರಾಟ 10 ಲಕ್ಷ ಗಡಿ ದಾಟಿತ್ತು. ಬಳಿಕ 2012ರಲ್ಲಿ 20 ಲಕ್ಷ, 2016ರಲ್ಲಿ 30 ಲಕ್ಷ ಗಡಿ ದಾಟಿತ್ತು. ಅಲ್ಲದೆ ಕಳೆದ 16 ವರ್ಷಗಳಿಂದ ಅಲ್ಟೋ ಕಾರು ಮಾರಾಟದಲ್ಲಿ ನಂ.1 ಸ್ಥಾನ ಅಲಂಕರಿಸಿದೆ. 2 ಎರಡು ದಶಕಗಳ ಅವಧಿಯಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಾರಿನ ವಿನ್ಯಾಸ ಸೇರಿದಂತೆ ಇನ್ನಿತರ ಬದಲಾವಣೆ ಮತ್ತು ಪರಿಷ್ಕರಣೆ ಮಾಡಲಾಗಿದೆ. ಭಾರತೀಯರ ಸಂಚಾರದ ವಿಧಾನವನ್ನು ಅಲ್ಟೋ ಬದಲಿಸಿದೆ ಎಂದು ಎಂಎಸ್‌ಐ ಹೇಳಿಕೆ ನೀಡಿದೆ.

Latest Videos
Follow Us:
Download App:
  • android
  • ios