Maruti Suzuki cars ಭಾರತದಲ್ಲಿ ಬೆಲೆ ಏರಿಕೆ ಬಿಸಿ, ಮಾರುತಿ ಸುಜುಕಿ ಕಾರಿನ ದರ ಹೆಚ್ಚಳ!

  • ಇಂಧನ ಬೆಲೆ ಏರಿಕೆ, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ
  • ಬೆಲೆ ಏರಿಕೆ ನಡುವೆ ಕಾರುಗಳ ಬೆಲೆ ಹೆಚ್ಚಳ
  • ಉತ್ಪಾದನಾ ವೆಚ್ಚ ಏರಿಕೆ, ಕಾರಿನ ಬೆಲೆ ಹೆಚ್ಚಳ
     
Maruti Suzuki to Increase Car Prices accross model from april 2022 2nd time in this year ckm

ನವದೆಹಲಿ(ಏ.06) ಭಾರತದಲ್ಲೀಗ ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ಅತೀಯಾಗಿ ಕಾಡುತ್ತಿದೆ. ಇಂಧನ ಬೆಲೆ ಏರಿಕೆ, ಗ್ಯಾಸ್ ಬೆಲೆ ಏರಿಕೆ, ವಿದ್ಯುತ್ ದರ ಏರಿಕೆ ಸೇರಿದಂತೆ ಅಗತ್ಯವಸ್ತುಗಳ ಬೆಲೆಯೂ ಏರಿಕೆ ಕಂಡಿದೆ. ಇದರ ಪರಿಣಾಮ ಕಾರುಗಳ ಉತ್ಪಾದನಾ ವೆಚ್ಚವೂ ಅಧಿಕವಾಗಿದೆ. ಇದೀಗ ಮಾರುತಿ ಸುಜುಕಿ ತನ್ನ ಕಾರುಗಳ ಬೆಲೆ ಏರಿಕೆ ಮಾಡಿದೆ.

ಕೈಗೆಟುಕುವ ದರಲ್ಲಿ ಕಾರು ನೀಡುತ್ತಿರುವ ಮಾರುತಿ ಸುಜುಕಿ ಇದೀಗ ಮತ್ತೊಮ್ಮೆ ಬೆಲೆ ಏರಿಕೆ ಮಾಡುತ್ತಿದೆ. ಕಾರಿನ ಉತ್ಪಾದನಾ ವೆಚ್ಚ ಹೆಚ್ಚಳವಾಗಿದೆ. ಹೀಗಾಗಿ ಅನಿವಾರ್ಯವಾಗಿ ಕಾರಿನ ಬೆಲೆ ಏರಿಸಬೇಕಾಗಿ ಎಂದು ಮಾರುತಿ ಸುಜುಕಿ ಹೇಳಿದೆ. ಕಾರುಗಳ ಮಾಡೆಲ್ ಮೇಲೆ ಬೆಲೆ ವ್ಯತ್ಯಾಸವಾಗಲಿದೆ. ಎಪ್ರಿಲ್ ತಿಂಗಳಲ್ಲೇ ಪರಿಷ್ಕೃತ ದರ ಜಾರಿಯಾಗಲಿದೆ. 

ಮಾರುತಿ ಸುಜುಕಿ ಮೊದಲ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮುಹೂರ್ತ ಫಿಕ್ಸ್, ಕೈಗೆಟುಕುವ ದರ!

ಏಪ್ರಿಲ್ ಎರಡನೇ ಅಥವಾ ಮೂರನೇ ವಾರದಲ್ಲಿ ಮಾರುತಿ ಕಾರುಗಳ ಬೆಲೆ ಹೆಚ್ಚಳವಾಗಲಿದೆ. ಇದು ಈ ವರ್ಷದಲ್ಲಿ ಮಾರುತಿ ಸುಜುಕಿ ಮಾಡುತ್ತಿರುವ ಎರಡನೇ ದರ ಏರಿಕೆಯಾಗಿದೆ. ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ ತಿಂಗಳಲ್ಲಿ ಮಾರುತಿ ಸುಜುಕಿ 1.7 ಶೇಕಡಾ ಬೆಲೆ ಏರಿಕೆ ಮಾಡಿತ್ತು. ಇದೀಗ ಏಪ್ರಿಲ್ ತಿಂಗಳಲ್ಲಿ ಮತ್ತೆ ಏರಿಕೆ ಮಾಡುತ್ತಿದೆ.

ಕಳೆದ ಕೆಲ ವರ್ಷಗಳಿಂದ ಭಾರತೀಯ ಆಟೋಮೊಬೈಲ್ ತೀವ್ರ ಸಂಕಷ್ಟ ಎದುರಿಸುತ್ತಿದೆ. ಲಾಕ್‌ಡೌನ್, ಚಿಪ್ ಕೊರತೆ, ಕಚ್ಚಾ ವಸ್ತುಗಳ ಆಮದು ಸಮಸ್ಯೆ ಸೇರಿದಂತೆ ಪ್ರತಿ ಹಂತದಲ್ಲೂ ಸಂಕಷ್ಟ ಎದುರಿಸುತ್ತಿದೆ. ಹೀಗಾಗಿ ಬುಕಿಂಗ್ ಮಾಡಿದ ಗ್ರಾಹಕರಿಗೆ ನಿಯಮಿತ ಅವಧಿಯೊಳಗೆ ಕಾರು ಡೆಲಿವರಿ ಮಾಡಲು ಆಟೋ ಕಂಪನಿಗಳು ಪರದಾಡುತ್ತಿದೆ. ಇದರ ನಡುವೆ ಗಗನಕ್ಕೇರಿದ ಪೆಟ್ರೋಲ್ ಡೀಸೆಲ್ ದರದಿಂದ ಕಾರು ಮಾರಾಟದಲ್ಲೂ ಕುಸಿತ ಕಂಡಿದೆ.

ಬಿಡುಗಡೆಯಾದ ಒಂದೇ ತಿಂಗಳಿಗೆ ದಾಖಲೆ ಬರೆದ ಮಾರುತಿ ಬಲೆನೋ!

ಜನವರಿಯಲ್ಲಿ ಏರಿಕೆಯಾಗಿದ್ದ ದರ
ದೇಶದ ಮುಂಚೂಣಿ ಕಾರು ತಯಾರಕ ಕಂಪನಿ ಮಾರುತಿ ಸುಝಕಿ ತನ್ನ ಕಾರುಗಳ ಬೆಲೆಯನ್ನು ಜನವರಿಯಲ್ಲಿ 2022 ಹೆಚ್ಚಳ ಮಾಡಿತ್ತು.  ಕಾರು ತಯಾರಿಕೆಗೆ ಬಳಸುವ ಸ್ಟೀಲ್‌, ಅಲ್ಯುಮಿನಿಯಂ, ಪ್ಲಾಸ್ಟಿಕ್‌ ವಸ್ತುಗಳ ಬೆಲೆ ಅಧಿಕವಾಗಿರುವುದರಿಂದ ಕಂಪನಿಗೆ ಹೊರೆಯಾಗುತ್ತಿದೆ. ಹಾಗಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ. ಹೆಚ್ಚಳ ಮಾಡೆಲ್‌ ಇಂದ ಮಾಡೆಲ್‌ಗೆ ವ್ಯತ್ಯಾಸವಾಗಿರುತ್ತದೆ ಎಂದು ಕಂಪನಿ ಹೇಳಿದೆ. ಮಾರುತಿ ಸುಜುಕಿ ಕಳೆದ ವರ್ಷದ ಜನವರಿಯಲ್ಲಿ ಶೇ.1.4ರಷ್ಟು, ಏಪ್ರಿಲ್‌ನಲ್ಲಿ ಶೇ.1.6ರಷ್ಟುಮತ್ತು ಸೆಪ್ಟೆಂಬರ್‌ನಲ್ಲಿ ಶೇ.1.9ರಷ್ಟುಬೆಲೆ ಏರಿಕೆ ಮಾಡಿತ್ತು. ಹಾಗಾಗಿ 2021ರಲ್ಲಿ ಶೇ.4.9ರಷ್ಟುಬೆಲೆ ಏರಿಕೆಯಾಗಿತ್ತು.

ಮಾಲಿನ್ಯ ತಡೆ ನೀತಿ ಕಠಿಣ
ಭಾರತ ಸರ್ಕಾರ ಯುರೋಪಿಯನ್‌ ಮಾದರಿಯಲ್ಲಿ ಜಾರಿಗೆ ತರಲು ಹೊರಟಿರುವ ಹೊಸ ಮಾಲಿನ್ಯ ನಿಯಂತ್ರಣ ಕಾನೂನು ಕೋವಿಡ್‌ನಿಂದ ಸಂಕಷ್ಟದಲ್ಲಿರುವ ಕಾರು ತಯಾರಿಕ ಉದ್ಯಮಕ್ಕೆ ಮತ್ತಷ್ಟುಪೆಟ್ಟು ನೀಡಲಿದೆ. ಮುಂದಿನ ದಿನಗಳಲ್ಲಿ ಕಾರುಗಳ ಬೆಲೆ ಏರಿಕೆಗೂ ಇದು ಕಾರಣವಾಗಬಹುದು ಎಂದು ಭಾರತದ ದೊಡ್ಡ ಕಾರು ತಯಾರಕ ಕಂಪೆನಿ ಮಾರುತಿ ಸುಜುಕಿ ಹೇಳಿದೆ. ‘ಮುಂದಿನ ದಿನಗಳಲ್ಲಿ ಕಾರುಗಳ ಬೇಡಿಕೆ ಕುಸಿಯಲಿದೆ. ಕೋವಿಡ್‌ ಕಾರಣದಿಂದ ಉದ್ಯಮ ಈಗಾಗಲೇ ನಷ್ಟದಲ್ಲಿದೆ. ಸರ್ಕಾರ ಹೊಸ ನಿಯಮಗಳನ್ನು ಹೇರಿದಾಗ ಅದನ್ನು ಅಳವಡಿಸಲು ಕಂಪೆನಿಗಳಿಗೆ ಮತ್ತಷ್ಟುಆರ್ಥಿಕ ಹೊರೆ ಬೀಳಲಿದೆ. ಕಾರು ತಯಾರಕರು ಬಿಡುಗಡೆಯಾಗುತ್ತಿರುವ ಇಂಗಾಲದ ಪ್ರಮಾಣವನ್ನು ಕಿಲೋ ಮೀಟರ್‌ಗೆ ಶೇ.13ರಷ್ಟುಕಡಿಮೆ ಮಾಡಲು ಸರ್ಕಾರ ಸೂಚಿಸಿದೆ. ಇದಕ್ಕಾಗಿ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇದು ಮತ್ತಷ್ಟುನಷ್ಟತಂದೊಡ್ಡಲಿದೆ’ ಎಂದು ಮಾರುತಿ ಸುಜುಕಿಯ ಅಧ್ಯಕ್ಷ ಆರ್‌.ಸಿ.ಭಾರ್ಗವ ಹೇಳಿದ್ದಾರೆ.

Latest Videos
Follow Us:
Download App:
  • android
  • ios