Electric Car ಮಾರುತಿ ಸುಜುಕಿ ಮೊದಲ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮುಹೂರ್ತ ಫಿಕ್ಸ್, ಕೈಗೆಟುಕುವ ದರ!

  • ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮಾರುತಿ ತಯಾರಿ
  • ಇಂಧನ ಕಾರುಗಳಂತೆ ಕಡಿಮೆ ಬೆಲೆಯ ಇವಿ ಬಿಡುಗಡೆಗೆ ಸಿದ್ಧತೆ
  • ಎಲೆಕ್ಟ್ರಿಕ್ ಕಾರು ಕುರಿತು ಮಾಹಿತಿ ನೀಡಿದ ಮಾರುತಿ ನಿರ್ದೇಶಕ ಶಶಾಂಕ್
     
Maruti Suzuki plan to launch Electric Car to Indian market by 2025 says Shashank Srivastava ckm

ನವದೆಹಲಿ(ಮಾ.25); ದೇಶದಲ್ಲಿ ಟಾಟಾ ಮೋಟಾರ್ಸ್, ಎಂಜಿ ಮೋಟಾರ್ಸ್ , ಹ್ಯುಂಡೈ ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ನಡುವೆ ಮಾರುತಿ ಸುಜುಕಿ ಕೂಡ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುವ ಪ್ರಯತ್ನ ಮಾಡಿ ಹಿಂದೇಟು ಹಾಕಿತ್ತು. ಇದೀಗ ಮಾರುತಿ ಸುಜುಕಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ತಯಾರಿ ಮಾಡಿದೆ. 2025ರಲ್ಲಿ ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿದೆ ಎಂದು ಮಾರುತಿ ಸುಜುಕಿ ಹೇಳಿದೆ.

ಎಲೆಕ್ಟ್ರಿಕ್ ಕಾರು ಬಿಡುಗಡೆ ಕುರಿತು ಮಾರುತಿ ಸುಜುಕಿ ಮಾರ್ಕೆಟಿಂಗ್ ಹಾಗೂ ಸೇಲ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರಿವಾತ್ಸವ್ ಖಚಿತ ಪಡಿಸಿದ್ದಾರೆ. ಇಂಧನ ಕಾರುಗಳ ಪೈಕಿ ಅತೀ ಕಡಿಮೆ ದರದಲ್ಲಿ ಕಾರುಗಳನ್ನು ನೀಡುವ ಮಾರುತಿ ಇದೀಗ ಅದೇ ರೀತಿ ಎಲೆಕ್ಟ್ರಿಕ್ ಕಾರು ನೀಡಲು ತಯಾರಿ ನಡೆಸಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಮೂಲಭೂತ ಸೌಲಭ್ಯಗಳ ಕೊರತೆ ಅನುಭವಿಸುತ್ತಿದೆ. ಇದರ ನಡುವೆ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗುತ್ತಿದೆ. ಇದೀಗ ಮಾರುತಿ ಕೂಡ ಹೊಸ ಇವಿ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ.

 ಬಿಡುಗಡೆಯಾದ ಒಂದೇ ತಿಂಗಳಿಗೆ ದಾಖಲೆ ಬರೆದ ಮಾರುತಿ ಬಲೆನೋ!

2028 -2030ರ ವೇಳೆ ಭಾರತದಲ್ಲಿ 6 ಮಿಲಿಯನ್ ವಾಹನಗಳು ಮಾರಾಟವಾಗಲಿದೆ. ಇದರಲ್ಲಿ ಶೇಕಡಾ 10 ರಷ್ಟು ಎಲೆಕ್ಟ್ರಿಕ್ ವಾಹನಗಳಾಗಿರಲಿದೆ. ಹೀಗಾಗಿ ಮಾರುತಿ ಸುಜಕಿ ಸಮರ್ಥವಾಗಿರುವ ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಹೊಸ ವಾಹನ ಬಿಡುಗಡೆ ಮಾಡಲು ಸಜ್ಜಾಗಿದೆ. 2025ರ ವೇಳೆ ಭಾರತದಲ್ಲಿ ಮೂಲಭೂತ ಸೌಕರ್ಯಗಳು ಹೆಚ್ಚಾಗಲಿದೆ. ಎಲೆಕ್ಟ್ರಿಕ್ ವಾಹನ ಬಳಕೆಗೆ ಪೂರಕ ವಾತಾರವಣ ನಿರ್ಮಾವಣವಾಗಲಿದೆ. ಇದು ಮಾರುತಿ ಸುಜುಕಿಗೆ ನೆರವಾಗಲಿದೆ ಎಂದು ಶಶಾಂಕ್ ಶ್ರೀವಾತ್ಸವ್ ಹೇಳಿದ್ದಾರೆ.

ಸದ್ಯ ಪ್ರಮುಖ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ವ್ಯವಸ್ಥೆ ಇದೆ. ಸಂಪೂರ್ಣ ನಗರದಲ್ಲಿ ಇಲ್ಲ. ಇನ್ನು ಸಣ್ಣ ಪಟ್ಟಣ, ಹೈವೇ, ಹಳ್ಳಿಗಳಲ್ಲಿ ವಾಹನ ಚಾರ್ಜಿಂಗ್ ವ್ಯವಸ್ಥೆ ಇಲ್ಲ. ಚಾರ್ಜಿಂಗ್ ಸಮಯವೂ ಹೆಚ್ಚಾಗಿದೆ.  ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಕನಿಷ್ಠ 3 ರಿಂದ 5 ವರ್ಷಗಳು ಬೇಕು. ಮಾರುತಿ ಸುಜುಕಿ ಪಟ್ಟಣ, ನಗರ, ಹಳ್ಳಿ ಸೇರದಂತೆ ಗ್ರಾಮೀಣ ಭಾಗದಲ್ಲೂ ಗ್ರಾಹಕರನ್ನು ಹೊಂದಿದೆ. ಹೀಗಾಗಿ ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೂ ಮುನ್ನ ಮೂಲಭೂತ ಸೌಕರ್ಯವನ್ನು ಹೆಚ್ಚಿಸುವ ಅಗತ್ಯವಿದೆ. ಗ್ರಾಮೀಣ ಭಾಗದ ಜನರು ಎಲೆಕ್ಟ್ರಿಕ್ ವಾಹನವನ್ನು ಯಾವುದೇ ಆತಂಕವಿಲ್ಲದೆ ಬಳಸುವಂತಾಗಬೇಕು ಎಂದು ಶಶಾಂಕ್ ಶ್ರೀವಾತ್ಸವ್ ಹೇಳಿದ್ದಾರೆ.

ಭಾರತದಲ್ಲಿ ಇವಿ ವಾಹನ ತಯಾರಿಕೆಗೆ ಸುಜುಕಿ ₹104 ಶತಕೋಟಿ ಹೂಡಿಕೆ

ಸದ್ಯ ಭಾರತದಲ್ಲಿ ತಯಾರಾಗುವ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಶೇಕಡಾ 50 ರಿಂದ 55 ರಷ್ಟು ಮೌಲ್ಯ ಬ್ಯಾಟರಿಗೆ ತಗುಲುತ್ತಿದೆ. ಹೀಗಾಗಿ ಮಾರುತಿ ಸುಜುಕಿ ಭಾರತದಲ್ಲೇ ಬ್ಯಾಟರಿ ತಯಾರಿ ಘಟಕ ಆರಂಭಿಸಲು ಮುಂದಾಗಿದೆ. ಈ ಮೂಲಕ ಕೈಗೆಟುಕುವ ದರದಲ್ಲಿ, ಗರಿಷ್ಠ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಕಾರುಗಳನ್ನು ಮಾರುತಿ ಸುಜುಕಿ ಬಿಡುಗಡೆ ಮಾಡಲಿದೆ ಎಂದು ಶಶಾಂಕ್ ಹೇಳಿದ್ದಾರೆ.

ಮಾರುತಿ ಅಲ್ಟೋ ಕಾರಿಗೆ 20 ವರ್ಷ: 40 ಲಕ್ಷಕ್ಕೂ ಅಧಿಕ ಕಾರು ಮಾರಾಟ
ಭಾರತೀಯರ ನೆಚ್ಚಿನ ಕಾರುಗಳ ಪೈಕಿ ಒಂದಾಗಿರುವ ಮಾರುತಿ ಅಲ್ಟೋ ಕಾರು ಮಾರುಕಟ್ಟೆಗೆ ಬಿಡುಗಡೆಗೆ ಮಂಗಳವಾರ ಬರೋಬ್ಬರಿ 20 ವರ್ಷ ಸಂದಿದೆ. ಈವರೆಗೆ 40 ಲಕ್ಷಕ್ಕೂ ಅಧಿಕ ಕಾರುಗಳು ಮಾರಾಟ ಆಗಿವೆ ಎಂದು ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ. ಮಾರುತಿ ಸುಜುಕಿ 2000ರಲ್ಲಿ ಅಲ್ಟೋ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. 2008ರಲ್ಲಿ ಕಾರಿನ ಮಾರಾಟ 10 ಲಕ್ಷ ಗಡಿ ದಾಟಿತ್ತು. ಬಳಿಕ 2012ರಲ್ಲಿ 20 ಲಕ್ಷ, 2016ರಲ್ಲಿ 30 ಲಕ್ಷ ಗಡಿ ದಾಟಿತ್ತು. ಅಲ್ಲದೆ ಕಳೆದ 16 ವರ್ಷಗಳಿಂದ ಅಲ್ಟೋ ಕಾರು ಮಾರಾಟದಲ್ಲಿ ನಂ.1 ಸ್ಥಾನ ಅಲಂಕರಿಸಿದೆ.
 

Latest Videos
Follow Us:
Download App:
  • android
  • ios