ನೀವು ಕಾರು ಖರೀದಿಗೆ ಪ್ಲಾನ್ ಮಾಡುತ್ತೀದ್ದೀರಾ? ಹಾಗಾದರೆ ಸ್ವಲ್ಪ ದಿನ ಕಾಯಲು ರೆಡಿ ಇದ್ದೀರಾ ಎಂದರೆ ನಾಲ್ಕು ಹೊಸ ಕಾರು ಕಂಪನಿಗಳು ಭಾರತದಲ್ಲಿ ಕಾರು ಬಿಡುಗಡೆ ಮಾಡುತ್ತಿದೆ. ವಿಶೇಷ ಅಂದರೆ ಕೈಗೆಟುಕುವ ಕಾರು ನಿಮ್ಮದಾಗಲಿದೆ.

ನವದೆಹಲಿ (ಜು.28) ಭಾರತದಲ್ಲಿ ಕಾರು ಮಾರುಕಟ್ಟೆಯ ಪೈಪೋಟಿ ತೀವ್ರಗೊಳ್ಳುತ್ತಿದೆ. ಒಂದೆಡೆ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಹ್ಯುಂಡೈ, ಮಹೀಂದ್ರ, ಕಿಯಾ ಸೇರಿದಂತೆ ಹಲವು ಕಂಪನಿಗಳು ಹೊಸ ಹೊಸ ಕಾರು ಬಿಡುಗಡೆ ಮಾಡುತ್ತಿದೆ. ಇದರ ನಡುವೆ ಹೊಸ ನಾಲ್ಕು ಕಾರು ಕಂಪನಿಗಳು ಶೀಘ್ರದಲ್ಲೇ ಕಾರು ಬಿಡುಗಡೆ ಮಾಡುತ್ತಿದೆ. ವಿಶೇಷವಾಗಿ ಕಡಿಮೆ ಬೆಲೆಯ ಸಣ್ಣ ಕಾರು ಖರೀದಿಸಲು ಬಯಸುವವರಿಗೆ ಉತ್ತಮ ಅವಕಾಶವಿದೆ. ಭಾರತದ ಪ್ರಮುಖ ಸ್ಟೀಲ್ ಕಂಪನಿ JSWದಿಂದ ಹಿಡಿದು ಚೀನಾದ ಲೀಪ್‌ಮೋಟಾರ್, ಕೊರಿಯಾದ ಜೆನೆನಿಸಿಸ್ ಸೇರಿದಂತೆ ಹಲವು ಬ್ರ್ಯಾಂಡ್ ಭಾರತಕ್ಕೆ ಎಂಟ್ರಿಕೊಡುತ್ತಿದೆ.

JSW ಮೋಟಾರ್ ಹೊಸ ಸಂಚಲನ

ಭಾರತದ ಸ್ಟೀಲ್ ಕಂಪನಿಯಾಗಿರುವ JSW( ಜಿಂದಾಲ್ ಸ್ಟೀಲ್ ಲಿಮಿಟೆಡ್) ಮೋಟಾರ್ ಉದ್ಯಮಕ್ಕೆ ಕಾಲಿಟ್ಟಿದೆ. ಎಂಜಿ ಮೋಟಾರ್ ಜೊತೆಗಿನ ಸಹಯೋಗದಲ್ಲಿ ಕಾರು ಬಿಡುದಡೆ ಮಾಡಲಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಬರೋಬ್ಬರಿ 15 ಕಾರುಗಳನ್ನು ಬಿಡುಗಡೆ ಮಾಡಲು JSW ಮುಂದಾಗಿದೆ. ದೊಡ್ಡ ಕಾರುಗಳು, ಎಸ್‌ಯುವಿ ಮಾದರಿ ಕಾರುಗಳನ್ನು JSW ಬಿಡುಗಡೆ ಮಾಡಲಿದೆ. ಶೀಘ್ರದಲ್ಲೇ ಮೊದಲ ಕಾರು ಭಾರತದ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ. ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿಯಾಗಿ JSW ಮೋಟಾರ್ ಜೇಇಕೋ ಜೆ5 ಕಾರು ಬಿಡುಗಡೆ ಮಾಡುತ್ತಿದೆ. 460 ಕಿಲೋಮೀಟರ್ ಮೈಲೇಜ್ ಹಾಗೂ ಪವರ್‌ಫುಲ್ ಎಲೆಕ್ಟ್ರಿಕ್ ಮೋಟಾರ್ ಹೊಂದಿರುವ ಈ ಕಾರು ಅತ್ಯಂತ ಆಕರ್ಷಕವಾಗಿದೆ. ಇನ್ನು ಮಹೀಂದ್ರ ಎಕ್ಸ್‌ಯುವಿ 7ಎಕ್ಸ್ಒ ಕಾರಿಗೆ ಪ್ರತಿಸ್ಪರ್ಧಿಯಾಗಿ JSW ಮೋಟಾರ್ ಟಿಗ್ಗೋ 8 ಕಾರು ಬಿಡುಗಡೆ ಮಾಡುತ್ತಿದೆ.

ಲೀಪ್‌ಮೋಟಾರ್ ಕ್ರಾಂತಿ

ಲೀಪ್‌ಮೋಟಾರ್ ಚೀನಾದ ಕಾರು ಕಂಪನಿ. ಇದು ಎಲೆಕ್ಟ್ರಿಕ್ ಕಾರು ಕಂಪನಿ. ವಿಶೇಷ ಅಂದರೆ ಎಂಜಿ ಕಾಮೆಟ್ ರೀತಿಯ ಸಣ್ಣ ಕಾರುಗಳನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಲಿದೆ. ಅತೀ ಕಡಿಮೆ ಬೆಲೆಯಲ್ಲಿ ಈ ಕಾರುಗಳು ಲಭ್ಯವಾಗಲಿದೆ. ಐಷಾರಾಮಿ ಕಾರುಗಳು, ಭರ್ಜರಿ ಮೈಲೇಜ್ ನೀಡುವ ಕಾರುಗಳು ಸೇರಿದಂತೆ ಹಲವು ಬಗೆಯ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿ ಬಿಡುಗಡೆಯಾಗಲಿದೆ.

ಹ್ಯುಂಡೈನ ಮತ್ತೊಂದು ಅಂಗಸಂಸ್ಥೆ ಭಾರತಕ್ಕೆ

ಹ್ಯುಂಡೈ ಮೋಟಾರು ಭಾರತದಲ್ಲಿ ಅತೀ ದೊಡ್ಡ ಕಾರು ನೆಟ್‌ವರ್ಕ್ ಹೊಂದಿದೆ. ಹ್ಯುಂಡೈ ಈಗಾಗಲೇ ತನ್ನ ಅಂಗ ಸಂಸ್ಥೆಯಾಗಿರುವ ಕಿಯಾ ಮೋಟಾರ್ಸ್ ಭಾರತಕ್ಕೆ ತಂದಿದೆ. ಇದೀಗ ಸೌತ್ ಕೊರಿಯಾದ ಪ್ರಸಿದ್ದ ಬ್ರ್ಯಾಂಡ್ ಜೆನೆಸಿಸ್ ಕೂಡ ಭಾರತ ಪ್ರವೇಸಿತುತ್ತಿದೆ. ಭಾರತದಲ್ಲಿ 2030ರ ವೇಳೆಗೆ ಒಟ್ಟು 30 ಕಾರುಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.ಮೊದಲ ಕಾರಾಗಿ ಐಷಾರಾಮಿ GV80 ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ. 2.5 ಲೀಟರ್, 3.5 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಕಾರು ಗರಿಷ್ಠ ಪವರ್ ಹಾಗೂ ಟಾರ್ಕ್ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲಿದೆ.

ಇನ್ನು ಚೀನಾದ ಚೆರಿ ಮೋಟಾರ್, ಅಮೆರಿಕದ ಸ್ಟಾರ್ಟ್ಅಪ್ ಕಂಪನಿ ಸ್ಲೇಟ್ ಆಟೋ ಭಾರತ ಪ್ರವೇಶಿಸಲಿದೆ. ಜೀಪ್, ಪಿಕ್ಅಪ್ ಸೇರಿದಂತೆ ಹಲವು ವಿಶೇಷ ವಿನ್ಯಾಸದ ಕಾರುಗಳನ್ನು ಸ್ಲೇಟ್ ಆಟೋ ಭಾರತದಲ್ಲಿ ಬಿಡುಗಡೆ ಮಾಡಲಿದೆ.