ಲಾಭ ದಾಖಲಿಸಿದ ಮಹಿಂದ್ರಾ, 2026ರ ಹೊತ್ತಿಗೆ 23 ಹೊಸ ವಾಹನ
ದೇಶದ ಪ್ರಮುಖ ಕಂಪನಿಯಾಗಿರುವ ಮಹಿಂದ್ರ ಮತ್ತು ಮಹಿಂದ್ರಾ ಕಂಪನಿಯ ನಾಲ್ಕನೇ ತ್ರೈಮಾಸಿಕದ ವರದಿ ಬಿಡಗಡೆಯಾಗಿದ್ದು, ಕಂಪನಿ ನಷ್ಟದಿಂದ ಚೇತರಿಸಿಕೊಂಡು ನಿವ್ವಳ ಲಾಭದಲ್ಲಿ ಏರಿಕೆ ಕಂಡಿದೆ. ಇದೇ ವೇಳೆ ಮಹಿಂದ್ರಾ ಕಂಪನಿಯ 2026ರ ಹೊತ್ತಿಗೆ 23 ಹೊಸ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ.
ಆಟೋ, ತಂತ್ರಜ್ಞಾನ ಸೇರಿದಂತ ಅನೇಕ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಮಹಿಂದ್ರಾ ಮತ್ತು ಮಹಿಂದ್ರಾ ಕಂಪನಿಯ 2021ರ ಹಣಕಾಸಿನ ನಾಲ್ಕನೇ ತ್ರೈಮಾಸಿಕದ ವರದಿ ಬಹಿರಂಗವಾಗಿದೆ. ಕಂಪನಿಯ ಈ ನಾಲ್ಕನೇ ತ್ರೈಮಾಸಿಕದಲ್ಲಿ ಅತ್ಯುತ್ತಮ ಸಾಧನೆ ತೋರಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ 32,55 ಕೋಟಿ ರೂ.ನಷ್ಟ ತೋರಿಸಿದ್ದ ಕಂಪನಿ ಇದೀಗ ಚೇತರಿಸಿಕೊಂಡು 163 ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ. ಇದೇ ವೇಳೆ, ಕಂಪನಿಯು ಶ .48ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ವರ್ಷ 9006 ಕೋಟಿ ರೂ. ಬೆಳವಣಗೆ ದಾಖಲಿಸಿದ್ದು ಈಗ ಅದು 13,338 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಆಟೋ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಯನ್ನು ಕಂಡಿರುವ ಕಂಪನಿ 2026 ಹೊತ್ತಿಗೆ ಪ್ರಯಾಣಿಕ ಮತ್ತು ಕಮರ್ಷಿಯಲ್ ವಾಹನಗಳ ವಿಭಾಗದಲ್ಲಿ 23 ಹೊಸ ವಾಹನಗಳನ್ನು ಪರಿಚಯಿಸಲಿದೆ ಮತ್ತು ಇದಕ್ಕೆ ಹೆಚ್ಚುವರಿಯಾಗಿ 27 ಟ್ರಾಕ್ಟರ್ ಮಾಡೆಲ್‌ಗಳೂ ಇರಲಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಭಾರತದಲ್ಲಿ 2021 ಮರ್ಸಿಡಿಸ್ ಜಿಎಲ್ಎ ಎಸ್‌ಯುವಿ ಲಾಂಚ್, ಆರಂಭಿಕ ಬೆಲೆ?
ಮುಂಬೈ ಮೂಲದ ಮಹಿಂದ್ರಾ ಕಂಪನಿಯು ಈ ಹೊಸ ಮಾಡೆಲ್‌ಗಳ ಲಾಂಚ್ ಮತ್ತು ಈಗಾಗಲೇ ಚಾಲ್ತಿಯಲ್ಲಿರುವ ವಾಹನಗಳ ಅಪ್‌ಗ್ರೇಡ್‌ಗಾಗಿ ಲಾಂಚ್‌ಗಾಗಿ 12,000 ಕೋಟಿ ರೂ. ವ್ಯಯಿಸಲಿದೆ. ಹಾಗೆಯೇ 5000 ಕೋಟಿ ರೂಪಾಯಿಯನ್ನು ಕಂಪನಿಯ ಇತರೆಡೆ ಹೂಡಿಕೆ ಮಾಡಲಿದೆ.
ಒಂಭತ್ತು ಹೊಸ ಎಸ್‌ಯುವಿಗಳ ಪೈಕಿ ಆರು ಮತ್ತು ಹದಿನಾಲ್ಕು ಕಮರ್ಷಿಯಲ್ ವೆಹಿಕಲ್‌ಗಳ ಪೈಕಿ ಆರು ವಾಹನಗಳು ಬ್ಯಾಟರಿಚಾಲಿತವಾಗಿರಲಿವೆ. ಕಂಪನಿಯು ಎಲೆಕ್ಟ್ರಿಕ್ ವೆಹಿಕಲ್‌ಗಳ ಉತ್ಪಾದನೆಯ ಮೇಲೆ ಅಂದಾಜು 3,000 ಕೋಟಿ ರೂ. ಹೂಡಿಕೆ ಮಾಡುವ ಸಾಧ್ಯತೆ ಇದೆ. ಸುಮಾರು 6000 ಕೋಟಿ ರೂಪಾಯಿಯನ್ನು ಕಂಪನಿಯು ಇಂಧನ ಆಧರಿತ ವಾಹನಗಳ ಉತ್ಪಾದನೆಯ ಹೂಡಿಕೆ ಮಾಡಿದರೆ, 3,000 ಕೋಟಿ ರೂಪಾಯಿಯು ಟ್ರಾಕ್ಟರ್‌ಗಳ ಪಾಲಾಗಲಿದೆ.
ಈಗಾಗಲೇ ಕಂಪನಿ ಹೊಸ ಸ್ಕಾರ್ಪಿಯೊ, ಐದು ಬಾಗಿಲುಗಳ ಥಾರ್, ಹೊಸ ಬೊಲೆರೋ, ಎಲೆಕ್ಟ್ರಿಕ್ ಆಧರಿತ ಎಕ್ಸ್‌ಯುವಿ700, ಹೊಸ ಎಕ್ಸ್‌ಯುವಿ 300 ಮತ್ತು ಡಬ್ಲ್ಯೂ620 ಮತ್ತು ವಿ201 ಕೋಡ್‌ನೇಮ್ ಇರುವ ಹೊಸ ಎಸ್‌ಯುವಿಗಳು ಕಂಪನಿಯ ಲಿಸ್ಟ್‌ನಲ್ಲಿವೆ. ಇದೇ ವೇಳೆ, ಎರಡು ಎಲೆಕ್ಟ್ರಿಕ್ ಮಾಡೆಲ್ ವಾಹನಗಳು ಕೂಡ ಇವೆ. ಕಮರ್ಷಿಯಲ್ ವಾಹನಗಳ ವಿಭಾಗಕ್ಕೆಸಂಬಂಧಿಸಿದಂತೆ ಹೇಳುವುದಾದರೆ, ಸಣ್ಣ ಕಮರ್ಷಿಯಲ್ ವಾಹನಗಳನ್ನು ಬಿಡುಗಡೆ ಮಾಡಲಿದೆ ಮತ್ತು ಇವೆಲ್ಲವೂ ಬ್ಯಾಟರಿ ಚಾಲಿತವಾಗಿರಲಿವೆ. 2025ರ ಹೊತ್ತಿಗೆ 37 ಟ್ರಾಕ್ಟರ್ ಮಾಡೆಲ್‌ಗಳು ಬಿಡುಗಡೆ ಕಾಣಲಿವೆ.
ಭಾರತದ ಮಾರುಕಟ್ಟೆಗೆ ಬ್ರಿಟನ್‌ನ ಎಲೆಕ್ಟ್ರಿಕ್ ಬೈಕ್
ಬಾಡಿ, ಫ್ರೇಮ್ ಮತ್ತು ಮೊನೊಕೊಕ್ ಪ್ಲಾಟ್‌ಫಾರ್ಮ್‌ಗಳ ಆಧಾರದ ಮೇಲೆ ಒಂಬತ್ತು ಉತ್ಪನ್ನಗಳನ್ನು ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆ ಮಾದರಿಗಳ ಜೊತೆಗೆ ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್‌ನಲ್ಲಿ ಎರಡು ಉತ್ಪನ್ನಗಳನ್ನು ಹೊರತರುವ ಯೋಜನೆ ಹೊಂದಿದ್ದೇವೆ ಎಂದು ಮಹಿಂದ್ರಾ ಮತ್ತು ಮಹಿಂದ್ರಾ ಕಂಪನಿಯ ಆಟೋಮೇಟಿವ್ ಮತ್ತು ಫಾರ್ಮ್ ಇಕ್ವಿಪ್‌ಮೆಂಟ್‌ನ ಎಕ್ಸಿಕ್ಯೂಟಿವ್ ನಿರ್ದೇಶಕ ರಾಜೇಶ್ ಜೆಜುರಿಕರ್ ತಿಳಿಸಿದ್ದಾರೆ.
ದೇಶದ ಪ್ರಮುಖ ಉದ್ಯಮ ಸಂಸ್ಥೆಯಾಗಿರುವ ಮಹಿಂದ್ರಾ ಮತ್ತು ಮಹಿಂದ್ರಾ ಕಂಪನಿ ಅನೇಕ ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲೂ ಆಕ್ಸಿಜನ್ ಪೂರೈಕೆ ಸೇರಿದಂತೆ ಅನೇಕ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ.
ಕಂಪನಿಯು ಆಟೋ ವಲಯದಲ್ಲಿ ತನ್ನದೇ ಪ್ರಭುತ್ವ ಸಾಧಿಸಿದೆ. ಸುರಕ್ಷತೆ ಮತ್ತು ಅತ್ಯಾಧುನಿಕ ದೃಷ್ಟಿಯಿಂದ ಮಹಿಂದ್ರಾ ಕಂಪನಿಯ ವಾಹನಗಳು ಹೆಚ್ಚು ಗಮನ ಸೆಳೆಯುತ್ತವೆ. ಕಂಪನಿಯು ಈಗಾಗಲೇ ಬಿಡುಗಡೆ ಮಾಡಿರುವ ಎಕ್ಸ್‌ಯುವಿ, ಥಾರ್, ಬೊಲೆರೋ ಸೇರಿದಂತೆ ಅನೇಕ ಪ್ರಯಾಣಿಕ ವಾಹನಗಳು ಮತ್ತು ಕಮರ್ಷಿಯಲ್ ವಾಹನಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಯಶಸ್ಸು ಕಂಡಿವೆ.
ಇದು ಜಗತ್ತಿನ ಮೊದಲ ಹಾರುವ ಎಲೆಕ್ಟ್ರಿಕ್ ರೇಸಿಂಗ್ ಕಾರ್!
ಈಗ ಕಂಪನಿ ಮುಂದಿನ ಐದಾರು ವರ್ಷಗಳಲ್ಲಿ ಪ್ರಯಾಣಿಕ ಮತ್ತು ವಾಣಿಜ್ಯಾತ್ಮಕ ಬಳಕೆಯ ವಾಹನಗಳ ವಿಭಾಗದಲ್ಲಿ ಸಾಕಷ್ಟು ಹೂಡಿಕೆ ಮಾಡಲಿದ್ದು, ಹೊಸ ಹೊಸ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.