ಹೊಚ್ಚ ಹೊಸ ಮಹೀಂದ್ರ ಥಾರ್ 2WD ಬಿಡುಗಡೆ, ಅತ್ಯಾಕರ್ಷಕ ಬೆಲೆಯಲ್ಲಿ ಲಭ್ಯ!
ಮಹೀಂದ್ರ ಥಾರ್ ಮೊದಲ ನೋಟಕ್ಕೆ ಆಕರ್ಷಿತಗೊಳ್ಳುವ ಕಾರು. ಇನ್ನು ಇದರ ಪರ್ಫಾಮೆನ್ಸ್, ಪ್ರಯಾಣ ಮತ್ತಷ್ಟು ಆನಂದದಾಯಕ. ಇದೀಗ ಥಾರ್ ಹೊಸ ವೇರಿಯೆಂಟ್ ಬಿಡುಗಡೆಯಾಗಿದೆ. 2 ವ್ಹೀಲ್ ಡ್ರೈವ್ ವೇರಿಯೆಂಟ್ ಲಾಂಚ್ ಆಗಿದ್ದು, ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ.
ನವದೆಹಲಿ(ಜ.09): ಭಾರತದಲ್ಲಿ ಹೊಚ್ಚ ಹೊಸ ಮಹೀಂದ್ರ ಥಾರ್ ವಾಹನ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಆಫ್ ರೋಡ್, ಹೈವೇ, ಸಿಟಿ ಯಾವುದೇ ರಸ್ತೆಗೂ ಥಾರ್ ಸೂಕ್ತ ಕಾರು. ಇನ್ನು ಡಿಸೈನ್, ಪರ್ಫಾಮೆನ್ಸ್ ಸೇರಿದಂತೆ ಎಲ್ಲವೂ ಸೂಪರ್. ಇದೀಗ ಮಹೀಂದ್ರ ಥಾರ್ ಹೊಸ ವೇರಿಯೆಂಟ್ ಬಿಡುಗಡೆಯಾಗಿದೆ. ಮಹೀಂದ್ರ 2 ವ್ಹೀಲ್ ಡ್ರೈವ್(2WD) ಕಾರು ಮಾರುಕಟ್ಟೆ ಪ್ರವೇಶಿಸಿದೆ. ನೂತನ ಕಾರಿನ ಬೆಲೆ 9.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಹೊಚ ವೇರಿಯೆಂಟ್ ಥಾರ್ ಕಾರು ರೇರ್ ವ್ಹೀಲ್ ಡ್ರೈವ್(RWD) ಆಯ್ಕೆಯನ್ನೂ ಹೊಂದಿದೆ. ನೂತನ ಥಾರ್ ಫೋರ್ ವ್ಹೀಲ್ ಡ್ರೈವ್ ಸಾಮರ್ಥ್ಯಕ್ಕೆ ಸರಿಸಮಾನಾಗಿದೆ.
ಮಹೀಂದ್ರ ಥಾರ್ 2WD ವೇರಿಯೆಂಟ್(Mahindra thar) ಕಾರಿನ ಆರಂಭಿಕ ಬೆಲೆ 9.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಟಾಪ್ ವೇರಿಯೆಂಟ್ ಬೆಲೆ 13.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಈ ಆಕರ್ಷಕ ಬೆಲೆ ಆರಂಭಿಕ 10,000 ಕಾರುಗಳಿಗೆ ಮಾತ್ರ ಅನ್ವಯವಾಗಲಿದೆ. ಬಳಿಕ ಈ ಕಾರಿನ ಬೆಲೆ ಹೆಚ್ಚಾಗಲಿದೆ.
ಮಂಗಳ ಗ್ರಹದಲ್ಲಿ ಥಾರ್ ಲ್ಯಾಂಡಿಂಗ್ ಯಾವಾಗ? ನೆಟ್ಟಿಗನ ಪ್ರಶ್ನೆಗೆ ಆನಂದ್ ಮಹೀಂದ್ರ ಪ್ರಾಸ ಉತ್ತರ!
ಮಹೀಂದ್ರ ಥಾರ್ 2WD ವೇರಿಯೆಂಟ್ ಬೆಲೆ ಪೆಟ್ರೋಲ್ ಹಾಗೂ ಡೀಸೆಲ್(Thar Petrol and Diesel ) ವೇರಿಯೆಂಟ್‌ನಲ್ಲಿ ಬಿಡುಗಡೆಯಾಗಿದೆ. ಮಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆಯಲ್ಲಿ ಲಭ್ಯವಿದೆ. ಮಹೀಂದ್ರ ಥಾರ್ RWD ವೇರಿಯೆಂಟ್ ಕಾರು D117 CRDe ಎಂಜಿನ್ ಹೊಂದಿದೆ. RWD ಡೀಸೆಲ್ ವೇರಿಯೆಂಟ್ ಥಾರ್ 117 bhp ಪವರ್ 300 Nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. RWD ಪೆಟ್ರೋಲ್ ಎಂಜಿನ್ ಥಾರ್ ಕಾರು 150 ಎಂಸ್ಟಾಲಿಯನ್ TGDi ಎಂಜಿನ್ ಹೊಂದಿದೆ. 150 bhp ಪವರ್ ಹಾಗೂ 320 Nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
2020ರಲ್ಲಿ ಮಹೀಂದ್ರ ಥಾರ್ ಹೊಸ ರೂಪದಲ್ಲಿ ವಾಹನ ಬಿಡುಗಡೆಯಾದ ಬಳಿಕ ಕೆಲ ಬದಲಾವಣೆಗಳನ್ನು ಕಂಡಿದೆ. ಇದೀಗ ಗ್ರಾಹಕರಿಗೆ ಹೊಸ ಆಯ್ಕೆಯನ್ನು ನೀಡುತ್ತಿದ್ದೇವೆ. 4WD ಥಾರ್ ಆಫ್ ರೋಡ್ ಸಾಮರ್ಥ್ಯಕ್ಕೆ ತಕ್ಕಂತೆ ಡಿಸೈನ್ ಮಾಡಲಾಗಿದೆ. ಇನ್ನು ಇತರರ ಉಯೋಗಕ್ಕಾಗಿ ಬಳಸುವ ಗ್ರಾಹಕರಿಗೆ RWD ಹಾಗೂ 2WD ಆಯ್ಕೆ ನೀಡಿದ್ದೇವೆ. ನೂತನ ಕಾರು ಗ್ರಾಹಕರ ಪ್ರಯಾಣ ಮತ್ತಷ್ಟು ಆರಾಮವಾಗಿಸಲಿದೆ ಎಂದು ಮಹೀಂದ್ರ ಆಟೋಮೊಬೈಲ್ ಅಧ್ಯಕ್ಷ ವಿಜಯ್ ನಾಕ್ರ ಹೇಳಿದ್ದಾರೆ.
ಮಹೀಂದ್ರಾ ಥಾರ್‌ನಲ್ಲಿ ಪ್ರಧಾನಿ ಮೋದಿ ರೋಡ್ ಶೋ: ಧನ್ಯವಾದ ಅರ್ಪಿಸಿದ ಆನಂದ್ ಮಹೀಂದ್ರ
ಮಹೀಂದ್ರ ಥಾರ್ 2WD ಎರಡು ಹೆಚ್ಚುವರಿ ಬಣ್ಣಗಳಲ್ಲಿ ಲಭ್ಯವಿದೆ. ಬ್ಲೇಜಿಂಗ್ ಬ್ರೋನ್ಜ್ ಹಾಗೂ ಎವರೆಸ್ಟ್ ವೈಟ್ ಬಣ್ಣದಲ್ಲಿ ಲಭ್ಯವಿದೆ.ಇನ್ನು 4 ವಿವಿಧ ಡಿಸೈನ್‌ನಲ್ಲಿ ಕಾರು ಲಭ್ಯವಿದೆ. RWD ವೇರಿಯೆಂಟ್ ಹಾರ್ಡ್ ಟಾಪ್‌ನಲ್ಲಿ ಲಭ್ಯವಿದೆ. ಇನ್ನು ಸುರಕ್ಷತೆಯಲ್ಲೂ ಮಹೀಂದ್ರ ಮೊದಲ ಸ್ಥಾನದಲ್ಲಿದೆ. ಎಬಿಎಸ್, ಏರ್‌ಬ್ಯಾಗ್ ಇಎಸ್‌ಪಿ, ಇಬಿಡಿ, ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಲಭ್ಯವಿದೆ. ಜೊತೆಗೆ NCAPನಿಂದ 4 ಸ್ಟಾರ್ ಕ್ರಾಶ್ ರೇಟಿಂಗ್ ಪಡೆದಿದೆ.