ಮಹೀಂದ್ರಾ ಥಾರ್‌ನಲ್ಲಿ ಪ್ರಧಾನಿ ಮೋದಿ ರೋಡ್ ಶೋ: ಧನ್ಯವಾದ ಅರ್ಪಿಸಿದ ಆನಂದ್ ಮಹೀಂದ್ರ
ಗುಜರಾತ್ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಮುನ್ನ ಪ್ರಧಾನಿ ನರೇಂದ್ರ ಮೋದಿ ತಮ್ಮ ರೋಡ್ಶೋಗಳಲ್ಲಿ ಮಹೀಂದ್ರ ಥಾರ್ ಓಪನ್ ಜೀಪ್ ಬಳಸಿರುವುದಕ್ಕೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಸಂತಸ
Auto Desk: ಮುಂಬರುವ ಗುಜರಾತ್ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಮುನ್ನ ಪ್ರಧಾನಿ ನರೇಂದ್ರ ಮೋದಿ ತಮ್ಮ ರೋಡ್ಶೋಗಳಲ್ಲಿ ಮಹೀಂದ್ರ ಥಾರ್ (Mahindra Thar) ಓಪನ್ ಜೀಪ್ ಬಳಸಿರುವುದಕ್ಕೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಸಂತಸ ವ್ಯಕ್ತಪಡಿಸಿದ್ದಾರೆ.ಪ್ರಧಾನಿ ಮೋದಿ ಅವರು ಅವರು ಇತ್ತೀಚೆಗೆ ತಮ್ಮ ತವರು ರಾಜ್ಯ ಗುಜರಾತ್ನಲ್ಲಿ ಮೂರು ರೋಡ್ಶೋಗಳನ್ನು (Road Show) ನಡೆಸಿದರು. ಇತ್ತೀಚೆಗೆ ಉತ್ತರಪ್ರದೇಶ, ಹರಿಯಾಣ, ಉತ್ತರಾಖಂಡ ಮತ್ತು ಗೋವಾದಲ್ಲಿ ಬಿಜೆಪಿಯ ಗೆಲುವಿನ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ವಿಜಯೋತ್ಸವ ಹಮ್ಮಿಕೊಂಡಿತ್ತು.
ಈ ರೋಡ್ಶೋ ಸಮಯದಲ್ಲಿ, ಪಿಎಂ ಮೋದಿ ಹೊಸ-ಜೆನ್ ಮಹೀಂದ್ರ ಥಾರ್ನ ಓಪನ್-ಟಾಪ್ ಮಾದರಿಯಲ್ಲಿ ಪ್ರಯಾಣಿಸಿದ್ದರು. ಇದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರಿಗೆ ಸಂತಸ ತಂದಿದೆ. ತಮ್ಮ ವಿಜಯೋತ್ಸವದ ಮೆರವಣಿಗೆಗಾಗಿ ಮೇಡ್-ಇನ್-ಇಂಡಿಯಾ ವಾಹನವನ್ನು ಬಳಸಿದ್ದಕ್ಕಾಗಿ ಪ್ರಧಾನ ಮಂತ್ರಿಗೆ ಸಾಮಾಜಿಕ ಮಾಧ್ಯಮದ ಪೋಸ್ಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: Mizoram traffic Rules ಕಟ್ಟು ನಿಟ್ಟಾಗಿ ಟ್ರಾಫಿಕ್ ರೂಲ್ಸ್ ಪಾಲಿಸ್ತಾರೆ ಮಿಜೋರಾಂ ಜನ, ದೇಶದ ಗಮಸೆಳೆಯಿತು ಮಹೀಂದ್ರ ಟ್ವೀಟ್!
ತಮ್ಮ ಟ್ವೀಟ್ನಲ್ಲಿ ಅವರು, "ಧನ್ಯವಾದಗಳು PM @narendramodi ಜೀ ವಿಜಯೋತ್ಸವದ ಮೆರವಣಿಗೆಗಾಗಿ ಭಾರತದಲ್ಲಿ ತಯಾರಿಸಿದ ವಾಹನ ಬಳಸಿದ್ದಕ್ಕಾಗಿ. ಇದಕ್ಕಿಂತ ಉತ್ತಮವಾದದ್ದೇನೂ ಇಲ್ಲ!" ಎಂದಿದ್ದಾರೆ.
ಮಹೀಂದ್ರ ಥಾರ್ ಸ್ಥಿರ ಹಾರ್ಡ್-ಟಾಪ್ ಆವೃತ್ತಿ ಮತ್ತು ಕನ್ವರ್ಟಿಬಲ್ ಸಾಫ್ಟ್-ಟಾಪ್ ಆವೃತ್ತಿಯಲ್ಲಿ ದೊರೆಯುತ್ತದೆ. ಪ್ರಧಾಣಿ ಮೋದಿ ಅವರ ರೋಡ್ಶೋಗೆ ಬಳಸಲಾದ ಮಾದರಿಯು ಕನ್ವರ್ಟಿಬಲ್ ಸಾಫ್ಟ್-ಟಾಪ್ ಆವೃತ್ತಿ ಎಂದು ತಿಳಿದುಬಂದಿದೆ. ಆದರೆ, ಈ ಮಾದರಿ ಸಾಹಸ-ಆಧಾರಿತ ಎಎಕ್ಸ್ ಟ್ರಿಮ್ ಅಥವಾ ಜೀವನಶೈಲಿ-ಆಧಾರಿತ ಎಕ್ಸ್ ವೇರಿಯಂಟ್ ಎಂಬುದು ಸ್ಪಷ್ಟವಾಗಿಲ್ಲ.
ಪ್ರಧಾನಿ ಮೋಧಿ ಮಹೀಂದ್ರ ಥಾರ್ನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು. ಇದು ವಿಶೇಷ ಸಂರಕ್ಷಣಾ ಗುಂಪಿನ (SPG ಯ) ಫ್ಲೀಟ್ನ ಕಾರಿನಂತೆ ತೋರುತ್ತಿಲ್ಲ, ಏಕೆಂದರೆ ಇದು ಎಂದಿನಂತೆ ಶಸ್ತ್ರಸಜ್ಜಿತವಾಗಿಲ್ಲ ಮತ್ತು ತೆರೆದ ಕಾರಿನಲ್ಲಿ ಪ್ರಧಾನಿ ಪ್ರಯಾಣಿಸುತ್ತಿದ್ದಾರೆ. ಸಾಮಾನ್ಯವಾಗಿ ಪ್ರಧಾನಿ ತಮ್ಮ ಎಲ್ಲಾ ರ್ಯಾಲಿಗಳಿಗೆ ಅವರಿಗೆ ಮೀಸಲಿರುವ ವಾಹನಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದರು. ಈ ಕಾರು ಬಹುಶಃ ಸಾಮಾನ್ಯ ನಾಗರಿಕ ಎಸ್ಯುವಿಯಾಗಿದ್ದು, ಇದನ್ನು ರೋಡ್ಶೋಗಾಗಿಯೇ ವಿಶೇಷವಾಗಿಯೇ ಮಾರ್ಪಡಿಸಿ, ಅಲಂಕರಿಸಲಾಗಿದೆ.
ಪ್ರಧಾನ ಮಂತ್ರಿಗಳು ಸಾಮಾನ್ಯವಾಗಿ ತಮ್ಮ ವಿವಿಐಪಿ ಸ್ಥಾನಮಾನಕ್ಕೆ ಅನುಗುಣವಾಗಿ, ಬಿಎಂಡಬ್ಲ್ಯು 7 (BMW 7)-ಸರಣಿಯ ಶಸ್ತ್ರಸಜ್ಜಿತ ಆವೃತ್ತಿಗಳು, ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ (Land Rover Range Rover Vogue) , ಟೊಯೋಟಾ ಲ್ಯಾಂಡ್ ಕ್ರೂಸರ್ (Toyota Land cruiser) ಸೇರಿದಂತೆ ಶಸ್ತ್ರಸಜ್ಜಿತ ವಾಹನಗಳಲ್ಲಿ ಪ್ರಯಾಣಿಸುತ್ತಾರೆ. ಇತ್ತೀಚೆಗೆ, ಅವರು Mercedes-Maybach S650 ಗಾರ್ಡ್ ಅನ್ನು ತಮ್ಮ ಫ್ಲೀಟ್ಗೆ ಸೇರಿಸಿದ್ದಾರೆ.ಇದು VR10 ಮಟ್ಟದ ಬ್ಯಾಲಿಸ್ಟಿಕ್ ಪ್ರೊಟೆಕ್ಷನ್ ರೇಟಿಂಗ್ ಅನ್ನು ನೀಡುತ್ತದೆ, ಇದು ಸಾಮಾನ್ಯ ಉತ್ಪಾದನಾ ಕಾರಿನಲ್ಲಿ ಲಭ್ಯವಿರುವ ಉನ್ನತ ಮಟ್ಟದ ರಕ್ಷಣೆಯಾಗಿದೆ.
ಇದನ್ನೂ ಓದಿ: ತವರಿನಲ್ಲಿ ಮೋದಿ : ಗಾಂಧಿನಗರದಲ್ಲಿ ಭರ್ಜರಿ ರೋಡ್ ಶೋ
ನೀವು ಪಡೆಯುವ ವೇರಿಯಂಟ್ಗಳನ್ನು ಅವಲಂಬಿಸಿ, ಮಹೀಂದ್ರ ಥಾರ್ ಎಲ್ಇಡಿ ಡಿಆರ್ಎಲ್ಗಳು (LED DRL ಗಳು), ಮಿಶ್ರಲೋಹದ ಚಕ್ರಗಳು, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ISOFIX ಮೌಂಟ್, ಆ್ಯಪಲ್ ಕಾರ್ ಪ್ಲೇ (Apple CarPlay) ಮತ್ತು ಆ್ಯಂಡ್ರಾಯ್ಡ್ ಆಟೋ (Android Auto) ಜೊತೆಗೆ ಟಚ್ಸ್ಕ್ರೀನ್ ಸೌಲಭ್ಯವನ್ನು ಒದಗಿಸುತ್ತದೆ.
ಥಾರ್ ಅನ್ನು 2.0-ಲೀಟರ್ mStallion ಪೆಟ್ರೋಲ್ ಮತ್ತು 2.2-ಲೀಟರ್ mHawk ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ. ಎರಡನ್ನೂ 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ನೊಂದಿಗೆ ಜೋಡಿಸಲಾಗಿದೆ, ಆದರೆ 4x4 ಎಲ್ಲಾ ಮಾದರಿಗಳಲ್ಲಿ ಪ್ರಮಾಣಿತವಾಗಿದೆ. SUV ಯ ಬೆಲೆಗಳು 12.79 ಲಕ್ಷ ರೂ.ಗಳಿಂದ 15.09 ಲಕ್ಷ ರೂ.ಗಳವರೆಗೆ ಇರುತ್ತದೆ