3ನೇ ತಲೆಮಾರಿನ ಸುಜುಕಿ ಹಯಬುಸಾ ಬೈಕ್ ಲಾಂಚ್, ಬೆಲೆ 16.40 ಲಕ್ಷ ರೂ.!
ಸುಜುಕಿ ಮೋಟರಸೈಕಲ್ ಇಂಡಿಯಾ ಕಂಪನಿಯ ಐಕಾನಿಕ್ ಪ್ರೀಮಿಯಂ ಸ್ಪೋರ್ಟ್ ಬೈಕ್ ಹಯಬುಸಾದ ನೆಕ್ಟ್ ಜೆನ್ ಆವೃತ್ತಿ ಮತ್ತೆ ರೋಡಿಗಿಳಿದಿದೆ. ಹೊಸ ವೇಷದಲ್ಲಿ ಸುಜುಕಿ ಹಯಬುಸಾ ಸ್ಪೋರ್ಟ್ಸ್ ಬೈಕ್ ಭಾರತೀಯ ಮಾರುಕಟ್ಟೆಗೆ ಬಿಡಗುಡೆಯಾಗಿದೆ. ಈ ಹಿಂದಿನ ಮಾಡೆಲ್‌ಗಿಂತಲೂ ಈ ಬೈಕ್ ಹೆಚ್ಚು ಸುಧಾರಣೆಗಳನ್ನು ಕಂಡಿದೆ ಮತ್ತು ಆಕರ್ಷಕವಾಗಿದೆ.
ಸುಜುಕಿ ಕಂಪನಿಯ ಜನಪ್ರಿಯ ಪ್ರೀಮಿಯಂ ಸ್ಪೋರ್ಟ್ಸ್ ಬೈಕ್ 3ನೇ ತಲೆಮಾರಿನ ಹಯಬುಸಾ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಹಯಬುಸಾ ಸ್ಪೋರ್ಟ್ಸ್ ಬೈಕ್ ಎಕ್ಸ್ ಶೋರೂಮ್ ಬೆಲೆ 16.40 ಲಕ್ಷ ರೂಪಾಯಿಯಾಗಿದೆ. ಇದಕ್ಕೂ ಮೊದಲು ಭಾರತದಲ್ಲಿ ಕಂಪನಿಯ ಎರಡನೇ ತಲೆಮಾರಿನ ಹಯಬುಸಾ ಸ್ಪೋರ್ಟ್ಸ್ ಬೈಕ್ ಮಾರಾಟ ಮಾಡುತ್ತಿತ್ತು. ಈ ಬೈಕ್ ಬೆಲೆ ಆಗ 13.75 ಲಕ್ಷ ರೂಪಾಯಿಯಾಗಿತ್ತು. ಆದರೆ, ಬಿಎಸ್6 ನಿಯಮಗಳ ಹಿನ್ನೆಲೆಯಲ್ಲಿ ಕಂಪನಿ ಈ ಬೈಕ್ ಮಾರಾಟ ಸ್ಥಗಿತಗೊಳಿಸಿತ್ತು. ಇದೀಗ ಅದರ ನಂತರದ ಮೂರನೇ ತಲೆಮಾರಿನೊಂದಿಗೆ ಹಯಬುಸಾ ಸ್ಪೋರ್ಟ್ಸ್ ಬೈಕ್ ಅನ್ನ ಕಂಪನಿ ಮತ್ತೆ ಭಾರತೀಯ ರೋಡಿಗಿಳಿಸಿದೆ. ಈ ಪ್ರೀಮಿಯಂ ಬೈಕ್ ಈ ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಸುಧಾರಣೆಗಳನ್ನು ಒಳಗೊಂಡಿದೆ.
ಒಮ್ಮೆ ಚಾರ್ಜ್ ಮಾಡಿದ್ರೆ 100 ಕಿ.ಮೀ.ವರೆಗೆ ಓಡುವ ಇ- ಸೈಕಲ್ ರೋಡ್‌ಲರ್ಕ್ ಬಿಡುಗಡೆ!
ಹಿಂದಿನ್ ಮಾಡೆಲ್‌ನಲ್ಲಿದ್ದ ಅನೇಕ ಫೀಚರ್‌ಗಳನ್ನು ಮೂರನೇ ತಲೆಮಾರಿನ ಹಯಬುಸಾದಲ್ಲೂ ಉಳಿಸಿಕೊಳ್ಳಲಾಗಿದೆ. ಈ ಬೈಕ್ ಕೂಡ ಟ್ವಿನ್ ಸ್ಪಾರ್ ಫ್ರೇಮ್‌ನಲ್ಲಿ ಬರುತ್ತದೆ. ಆದರೆ, ಬೈಕ್ ಇನ್ನಷ್ಟು ತೀಕ್ಷ್ಣವಾಗಿ ಕಾಣುವಂತೆ ಮಾಡಲು ವಿನ್ಯಾಸವನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಬೈಕ್‌ನ ಮುಂಭಾಗದಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ ಜೊತೆಗೆ ನೀವು ಆಂಗ್ರಿ ಲುಕ್ಕಿಂಗ್ ಎಲ್ಇಡಿ ಡಿಆರ್‌ಎಲ್‌ಗಳನ್ನು ಬದಿಯಲ್ಲಿ ಕಾಣಬಹುದು. ಹೆಡ್‌ಲ್ಯಾಂಪ್ ಮತ್ತು ಟರ್ನ್ ಇಂಡಿಕೇಟರ್‌ಗಳ ಮಧ್ಯೆ ಇರುವ ಸ್ಕೂಪ್ಸ್ ವ್ಯತ್ಯಾಸವನ್ನು ಗಮನಿಸಬಹುದು. ಇದು ಬೈಕ್‌ನ ಆಕ್ರಮಣಶೀಲತೆಯನ್ನು ಹೆಚ್ಚಿಸುತ್ತಿದೆ.
ಈ ಹೊಸ ಹಯಬುಸಾ ಸ್ಪೋರ್ಟ್ಸ್ ಬೈಕ್‌ನಲ್ಲಿ ಅಳವಡಿಸಲಾಗಿರುವ ಎಕ್ಸಾಸ್ಟ್ ಈ ಹಿಂದಿನ ಮಾಡೆಲ್‌ಗಿಂತಲೂ ತುಸು ಕಿರಿದಾಗಿದ್ದು, ಬೈಕ್‌ನ ಒಟ್ಟಾರೆ ತೂಕವನ್ನು ಕಡಿಮೆ ಮಾಡಲು ಇದು ನೆರವು ಒದಗಿಸಿದೆ. ಈ ಹಿಂದಿನ ಮಾಡೆಲ್‌ಗಿಂತಲೂ ಈ ಮೂರನೇ ತಲೆಮಾರಿನ ಹಯಬುಸಾ 2 ಕೆ ಜಿ ಕಡಿಮೆ ತೂಗುತ್ತದೆ. ವೀಲ್‌ಬೇಸ್ 1,480 ಮಿ.ಮೀ. ಇದ್ದು, ಆದರೆ ಹಳೆಯದಕ್ಕೆ ಹೋಲಿಸಿದರೆ ಬೈಕ್‌ನ ಹಿಂಬದಿಯು ವಿಭಾಗವು ಹೆಚ್ಚು ಉದ್ದವಾದ ವಿನ್ಯಾಸವನ್ನು ಹೊಂದಿದೆ.
ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಶೀಘ್ರ ಭಾರತ ನಂ.1: ಕೇಂದ್ರ ಸಚಿವ ಗಡ್ಕರಿ
ಇನ್ನು ಹೊಸ ತಲೆಮಾರಿನ ಹಯಬುಸಾದಲ್ಲಿ ಅಳವಡಿಸಲಾಗಿರುವ ಕಾನ್ಸೂಲ್ ಕೂಡ ಹೆಚ್ಚು ಆಕರ್ಷಕವಾಗಿದೆ. ಮಧ್ಯೆದಲ್ಲಿ ಅನ್ಲಾಗ್ ಟಿಎಫ್‌ಟಿ ಡಿಜಿಟಲ್ ಸ್ಕ್ರೀನ್ ಒಳಗೊಂಡಿದೆ. ಸಿಕ್ಸ್ ಆಕ್ಸಿಸ್ ಐಎಂಯು, ಮೂರು ರೈಡಿಂಗ್ ಮೋಡ್‌ಗಳು, ಲಾಂಚ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ಹಿಲ್ ಹೋಲ್ಡ್ ಅಸಿಸ್ಟ್, 10 ಲೇವಲ್ ಟ್ರಾಕ್ಸನ್ ಕಂಟ್ರೋಲ್ ಸಿಸ್ಟಮ್, 10 ಲೆವಲ್ ವ್ಹೀಲೀ ಕಂಟ್ರೋಲ್ ಸಿಸ್ಟಮ್, 3 ಲೆವಲ್ ಎಂಜಿನ್ ಬ್ರೆಕ್ ಕಂಟ್ರೋಲ್ ಸೇರಿದಂತೆ ಹಯಬಸಾ ಸಮಗ್ರ ಎಲೆಕ್ಟ್ರಾನಿಕ್ಸ್ ಪ್ಯಾಕೇಜ್ ಒಳಗೊಂಡಿದೆ.
ಸುಜುಕಿಯ ಕಂಪನಿ ಈ ಪ್ರೀಮಿಯಂ ಬೈಕ್‌ನ ಸವಾರರು ವೇಗ ಮಿತಿಯನ್ನು ಸಹ ಬಳಸಿಕೊಳ್ಳಬಹುದು, ಇದು ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಬೈಕ್‌ನ ಗರಿಷ್ಠ ವೇಗವನ್ನು ನಿಯಂತ್ರಿಸುತ್ತದೆ ಮತ್ತು ರಸ್ತೆಗಳಲ್ಲಿ ವೇಗ ಮಿತಿಗಳನ್ನು ಅನುಸರಿಸಲು ಅವಕಾಶ ನೀಡುತ್ತದೆ.
ಇನ್ನು ಎಂಜಿನ್ ಬಗ್ಗೆ ಹೇಳುವುದಾದರೆ, ಹಯಬುಸಾ ಬಿಎಸ್6 ನಿಯಮಗಳನ್ನು ಒಳಗೊಂಡಿರುವ 1,340 ಸಿಸಿ ನಾಲ್ಕು ಸಿಲಿಂಡರ್ ಎಂಜಿನ್ ಒಳಗೊಂಡಿದೆ. ಈ ಎಂಜಿನ್ ಲಿಕ್ವಿಡ್ ಕೂಲ್ಡ್, ಡಿಒಚ್‌ಸಿ ಎಂಜಿನ್ ಆಗಿದ್ದು, 190 ಎಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಹಿಂದಿನ ಮಾಡೆಲ್‌ಗೆ ಹೋಲಿಸಿದರೆ 7 ಎಚ್ ಪಿ ಕಡಿಮೆ ಶಕ್ತಿಯನ್ನು ಈ ಎಂಜಿನ್ ಉತ್ಪಾದಿಸುತ್ತದೆ.
ಟ್ರಾಕ್ಟರ್‌ಗಳ ಲಾಭ; ಸೊಲಿಸ್ ಹೈಬ್ರಿಡ್ 5015 ಟ್ರಾಕ್ಟರ್ ಬಿಡುಗಡೆ
ಈ ಎಂಜಿನ್ ಟಾರ್ಕ್ ಕೂಡ ಸ್ವಲ್ಪ ಕಡಿಮೆಯಾಗಿದೆ. ಈ ಹಿಂದಿನ ಮಾಡೆಲ್ ಎಂಜಿನ್ 155 ಎನ್ಎಂ ಟಾರ್ಕ್ ಉತ್ಪಾದಿಸುತ್ತಿದ್ದರೆ ಈ ಹೊಸ ಮಾಡೆಲ್ ಎಂಜಿನ್ 150 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ, ಈ ಹೊಸ ಬೈಕ್‌ನಲ್ಲಿ ಕಂಪನಿ ಯಾವುದೇ ರೀತಿಯ ಟರ್ಬೊ ಚಾರ್ಜಿಂಗ್ ಅಥವಾ ಸೂಪರ್‌ಚಾರ್ಜಿಂಗ್ ಫೀಚರ್ ಅನ್ನು ಅಳವಡಿಸಿಲ್ಲ. ಎಂಜಿನ್ ಪವರ್ ಕಡಿಮೆಯಾಗಿದ್ದರೂ ಬೈಕ್ ಈಗಲೂ ಪ್ರತಿ ಗಂಟೆಗೆ 300 ಕಿ ಮೀ ವೇಗವನ್ನು ಪಡೆಯಬಲ್ಲದು. ಅಷ್ಟು ಶಕ್ತಿಶಾಲಿಯಾದ ಎಂಜಿನ್ ಅನ್ನು ಈ ಹಯಬುಸಾ ಒಳಗೊಂಡಿದೆ. ಈ 3ನೇ ತಲೆಮಾರಿನ ಹಯಬುಸಾ ಸ್ಪೋರ್ಟ್ಸ್ ಪ್ರೀಮಿಯಂ ಬೈಕ್ ಭಾರತೀಯ ರಸ್ತೆಗಳಲ್ಲಿ ಘರ್ಜಿಸಲು ಮತ್ತೆ ಮುಂದಾಗಿದೆ.