ಪಾಕಿಸ್ತಾನದಲ್ಲಿ ಒಂದೊಂದು ರೂಪಾಯಿಗೂ ಸಂಕಷ್ಟ, ಕಾರು ಡೀಲರ್‌ಶಿಪ್ ಸ್ಥಗಿತಗೊಳಿಸಿದ ಕಿಯಾ ಮೋಟಾರ್ಸ್!
ಪಾಕಿಸ್ತಾನದಲ್ಲಿ ಒಂದೊಂದು ರೂಪಾಯಿಗೂ ಸಂಕಷ್ಟ ಎದುರಾಗಿದೆ. ಆಹಾರ ಖರೀದಿಸಲು ಬಡವರು, ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಹೀಗಾಗಿ ವಾಹನ ಮಾರಾಟ ನೆಲಕಚ್ಚಿದೆ. ಆರ್ಥಿಕ ಸಂಕಷ್ಟದ ಕಾರಣ ಕಿಯಾ ಮೋಟಾರ್ಸ್ ಪಾಕಿಸ್ತಾನದ ಡೀಲರ್‌ಶಿಪ್ ಸ್ಥಗಿತಗೊಳಿಸಿದೆ.
ಇಸ್ಲಾಬಾಬಾದ್(ಆ.10) ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ, ಆರ್ಥಿಕ ಸಂಕಷ್ಟ, ಭದ್ರತೆ ಸೇರಿದಂತೆ ಹಲವು ಸಮಸ್ಯೆಗಳು ತಾಂಡವಾಡುತ್ತಿದೆ. ಇದರ ಪರಿಣಾಮ ಒಂದೊಂದು ರೂಪಾಯಿಗೂ ಸಂಕಷ್ಟ ಎದುರಾಗಿದೆ. ಅಗತ್ಯ ವಸ್ತು ಬೆಲೆ ಗಗನಕ್ಕೇರಿದೆ. ಹಸಿವಿನಿಂದ ಜನ ಪರಾದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಜನ ಕಾರು ಖರೀದಿಸಲು ಮನಸ್ಸು ಮಾಡುತ್ತಾರಾ? ಖಂಡಿತ ಇಲ್ಲ, ಇದರ ಪರಿಣಾಮ ಪಾಕಿಸ್ತಾನ ಆಟೋಮೊಬೈಲ್ ಉದ್ಯಮ ನೆಲಕ್ಕಚಿದೆ. ವಾಹನಗಳು ಮಾರಾಟವಾಗುತ್ತಿಲ್ಲ. ಸುಜುಕಿ ಹಾಗೂ ಟೋಯೋಟಾ ಬಳಿಕ ಪಾಕಿಸ್ತಾನದಲ್ಲಿ ಇದೀಗ ಕಿಯೋ ಮೋಟಾರ್ಸ್ ಕೂಡ ತನ್ನ ನಾಲ್ಕು ಡೀಲರ್‌ಶಿಪ್ ಸ್ಥಗಿತಗೊಳಿಸಿದೆ.
ಪಾಕಿಸ್ತಾನದಲ್ಲಿನ ಆರ್ಥಿಕ ಸಂಕಷ್ಟ ಹಾಗೂ ರಾಜಕೀಯ ಅಸ್ಥಿರತೆ ಕಾರಣದಿಂದ ಹ್ಯಂಡೈ ಪಾಲುದಾರಿಕೆಯ ಕಿಯಾ ಮೋಟಾರ್ಸ್ ತನ್ನ ನಾಲ್ಕು ಡೀಲರ್‌ಶಿಪ್ ಸ್ಥಗಿತಗೊಳಿಸಿದೆ. ಪಾಕಿಸ್ತಾನದ ಪ್ರತಿ ಪ್ರಾಂತ್ಯದಲ್ಲೂ ಡೀಲರ್‌ಶಿಪ್ ಮೂಲಕ ವ್ಯವಹಾರ ನಡೆಸುತ್ತಿರುವ ಕಿಯಾ ಇದೀಗ ಆರ್ಥಿಕತೆ ಕಾರಣದಿಂದ ವ್ಯವಾಹರ ಸಾಧ್ಯವಿಲ್ಲ ಎಂದಿದೆ. ಹೀಗಾಗಿ ಮೊದಲ ಹಂತದಲ್ಲಿ ನಾಲ್ಕು ಡೀಲರ್‌ಶಿಪ್‌ಗೆ ಬೀಗ ಹಾಕಿದೆ.
ಉಗ್ರರ ಕೋಣೆಯಲ್ಲಿ ಇಮ್ರಾನ್ ಜೈಲುವಾಸ, ಹುಳ ಹುಪ್ಪಟೆಗಳಿರುವ ಕತ್ತಲ ಕೋಣೇಲಿ ಬಂಧಿ!
ಪಾಕಿಸ್ತಾನದಲ್ಲಿನ ಹಣದುಬ್ಬರದಿಂದ ಜನರು ಆಹಾರ ಹಾಗೂ ಅಗತ್ಯ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಕಾರು ಉತ್ಪಾದನೆ ಹಾಗೂ ಮಾರಾಟ ಕುಂಠಿತವಾಗಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರು ಕಿಯಾ ಸಿಬ್ಬಂದಿಗಳಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ಬಿಕ್ಕಟ್ಟಿನಿಂದ ಡೀಲರ್‌ಶಿಪ್ ಸ್ಥಗಿತಗೊಳಿಸುತ್ತಿದ್ದೇವೆ ಎಂದು ಕಿಯಾ ಹೇಳಿದೆ.
ಪಾಕಿಸ್ತಾನ ಸ್ಥಗಿತಗೊಳಿಸಿದ ನಾಲ್ಕು ಕಿಯಾ ಮೋಟಾರ್ಸ್ ಡೀಲರ್‌ಶಿಪ್ ವಿವರ
ಕಿಯಾ ಮೋಟಾರ್ಸ್, ಹನ್ನಾ ಲೇಕ್, ಖ್ವೆಟ್ಟಾ
ಕಿಯಾ ಮೋಟಾರ್ಸ್, ಚೆನಾಬ್, ಗುಜ್ರತ್
ಕಿಯಾ ಮೋಟಾರ್ಸ್, ಅವೆನ್ಯೂ, ದೇರಾ ಘಾಜಿ ಖಾನ್
ಕಿಯಾ ಮೋಟಾರ್ಸ್, ಗೇಟ್‌ವೇ , ಮರ್ಡಾನ್
ಕಿಯಾ ಮೋಟಾರ್ಸ್ ಡೀಲರ್‌ಶಿಪ್ ಸ್ಥಗಿತಗೊಳಿಸಿದರೆ, ಟೋಯೋಟಾ ಹಾಗೂ ಸುಜುಕಿ ಪಾಕಿಸ್ತಾನದಲ್ಲಿನ ಉತ್ಪಾದನಾ ಘಟಕವನ್ನೇ ಸ್ಥಗಿತಗೊಳಿಸಿದೆ. ಸದ್ಯ ಪಾಕಿಸ್ತಾನ ಪರಿಸ್ಥಿತಿ ಹದಗೆಟ್ಟಿದೆ. ಸಾಲದ ಸಂಖ್ಯೆ ಮೀತಿ ಮೀರಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಮತ್ತಷ್ಟು ಆಟೋಮೊಬೈಲ್ ಕಂಪನಿಗಳು ಸ್ಥಗಿತಗೊಳ್ಳುವ ಎಲ್ಲಾ ಲಕ್ಷಣಗಳಿವೆ.
Price Hike : ಪಾಕಲ್ಲಿ ಸಿಗೋ ಇಂಡಿಯನ್ ವಸ್ತು ಬೆಲೆ ಕೇಳಿದ್ರಾ?
ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನ ಟೀ, ಪಠ್ಯಪುಸ್ತಕಗಳ ಬಳಿಕ ಮೊಬೈಲ್ ಹಾಗೂ ಇಂಟರ್‌ನೆಟ್ ಸೇವೆಗೂ ಕತ್ತರಿ ಹಾಕಲು ಮುಂದಾಗಿದೆ.ಪಾಕಿಸ್ತಾನಕ್ಕೆ ಅಗತ್ಯ ಪ್ರಮಾಣದಲ್ಲಿ ದ್ರವೀಕೃತ ನೈಸರ್ಗಿಕ ಅನಿಲದ ಪೂರೈಕೆಯಿಲ್ಲದ ಕಾರಣದಿಂದಾಗಿ ಭಾರೀ ವಿದ್ಯುತ್ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಟೆಲಿಕಾಂ ಆಪರೇಟರ್‌ಗಳು ಮೊಬೈಲ್ ಹಾಗೂ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ವಿದ್ಯುತ್ ಬಿಕ್ಕಟ್ಟಿನ ಕಾರಣದಿಂದಾಗಿ ಜುಲೈ ತಿಂಗಳಿನಿಂದ ದೇಶದಲ್ಲಿ ಲೋಡ್ ಶೆಡ್ಡಿಂಗ್ ಪ್ರಮಾಣವನ್ನು ಹೆಚ್ಚಿಸುವುದಾಗಿ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಅಲ್ಲದೇ ವಿದ್ಯುತ್ ಉಳಿಕೆಗಾಗಿ ಸರ್ಕಾರಿ ಕಾರ್ಯಾಲಯಗಳ ಕೆಲಸದ ಅವಧಿಯಲ್ಲಿ ಕಡಿತ ಮಾಡಲಾಗಿದ್ದು, ಶಾಪಿಂಗ್ ಮಾಲ್, ಕಾರ್ಖಾನೆಗಳನ್ನು ಬೇಗ ಮುಚ್ಚುವಂತೆ ಸೂಚಿಸಲಾಗಿದೆ