Price Hike : ಪಾಕಲ್ಲಿ ಸಿಗೋ ಇಂಡಿಯನ್ ವಸ್ತು ಬೆಲೆ ಕೇಳಿದ್ರಾ?

ಭಾರತ –ಪಾಕಿಸ್ತಾನ ನೇರ ವ್ಯಾಪಾರ ಬಂದ್ ಆಗಿ ಅನೇಕ ವರ್ಷ ಕಳೆದಿದೆ. ಈಗ ದುಬೈನಿಂದ ಪಾಕ್ ಗೆ ಹೋಗುವ ಭಾರತೀಯ ವಸ್ತುಗಳಿಗೆ ಬೇಡಿಕೆ ಹೆಚ್ಚಿದ್ರೂ ಬೆಲೆ ಮಾತ್ರ ಗಗನಕ್ಕೇರಿದೆ.
 

Pakistan Economic Crisis Pakistani People Use Indian Product Also Get To Know Price roo

ಪಾಕಿಸ್ತಾನದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ.  ಪಾಕಿಸ್ತಾನದ ಜಿಡಿಪಿ ಅಂದಾಜು 376.493 ಅರಬ್ ಡಾಲರ್ ತಲುಪಿದೆ. ಇದ್ರಿಂದಾಗಿ  ಪಾಕಿಸ್ತಾನಿ ಜನರು ದಿನನಿತ್ಯದ ವಸ್ತುಗಳ ಖರೀದಿಗೂ ಸಾಕಷ್ಟು ಕಷ್ಟಪಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ಎಲ್ಲ ಸರಕುಗಳ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಹಾಲು, ನೀರು, ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಪಾಕಿಸ್ತಾನಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಭಾರತ (India) ತನ್ನ ಉತ್ಪನ್ನಗಳನ್ನು ಅನೇಕ ದೇಶಗಳಿಗೆ ಕಳುಹಿಸುತ್ತದೆ. ಭಾರತೀಯ ಉತ್ಪನ್ನಗಳು ಪಾಕಿಸ್ತಾನ (Pakistan) ದಲ್ಲಿಯೂ ಸಾಕಷ್ಟು ಮಾರಾಟ ಆಗುತ್ತಿದೆ. 2019 ರಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ವ್ಯವಹಾರ ಬಂದ್ ಆಗಿದೆ. ಆದ್ರೂ ನೀವು ಪಾಕಿಸ್ತಾನದಲ್ಲಿ ಭಾರತೀಯ ಉತ್ಪನ್ನ (Product) ಗಳನ್ನು ನೋಡ್ಬಹುದು. ಭಾರತ – ಪಾಕಿಸ್ತಾನದ ಮಧ್ಯೆ ಅದೇನೇ ದ್ವೇಷವಿರಲಿ ಪಾಕಿಸ್ತಾನದಲ್ಲಿ ಭಾರತೀಯ ಉತ್ಪನ್ನಕ್ಕೆ ಬೇಡಿಕೆ ಕಡಿಮೆಯಾಗಿಲ್ಲ. ಅನೇಕರು ಭಾರತೀಯ ಉತ್ಪನ್ನಗಳನ್ನು ಇಷ್ಟಪಡ್ತಾರೆ. ಇದೇ ಕಾರಣಕ್ಕೆ ಪಾಕಿಸ್ತಾನದಲ್ಲಿ ಕಂಡುಬರುವ ಪ್ರತಿಯೊಂದು ಭಾರತೀಯ ಉತ್ಪನ್ನವು ದುಬೈ ಮೂಲಕ ರವಾನೆಯಾಗುತ್ತಿದೆ. ದುಬೈ ಮೂಲಕ ಭಾರತದ ವಸ್ತುಗಳು ಪಾಕಿಸ್ತಾನಕ್ಕೆ ಹೋಗುವ ಕಾರಣ ಪಾಕಿಸ್ತಾನದಲ್ಲಿ ಭಾರತೀಯ ವಸ್ತುಗಳ ಬೆಲೆ ಮತ್ತುಷ್ಟು ಏರಿದೆ. 

ಕೆಲಸವಿಲ್ಲದ ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟ ಶೇಂಗಾ ಚಿಕ್ಕಿ

ಪಾಕಿಸ್ತಾನದಲ್ಲಿ ಭಾರತದ ವಸ್ತುಗಳ ಬೆಲೆ ಎಷ್ಟು ಗೊತ್ತಾ? :  ಶೋಯೆಬ್ ಮಲಿಕ್ ಎಂಬ ಪಾಕಿಸ್ತಾನಿ ಯೂಟ್ಯೂಬರ್ ಪಾಕಿಸ್ತಾನದ ಮಾರುಕಟ್ಟೆಯ ಸ್ಥಿತಿಗತಿಗಳನ್ನು ಪರಿಶೀಲಿಸಿದ್ದಾರೆ. ಪಾಕಿಸ್ತಾನಿಗಳ ಜೊತೆ ಶೋಯೆಬ್ ಮಲಿಕ್ ಮಾತುಕತೆ ನಡೆಸಿದ್ದಾರೆ. ಪಾಕಿಸ್ತಾನದ ಭಾರತೀಯ ಉತ್ಪನ್ನಗಳ ಬೆಲೆ ಕೇಳ್ತಿದ್ದಂತೆ ಜನರು ಬೆಚ್ಚಿಬಿದ್ದಿದ್ದಾರೆ. ಯಾಕೆಂದ್ರೆ ಪಾಕಿಸ್ತಾನದಲ್ಲಿ ಸಿಗುವ ಭಾರತೀಯ ವಸ್ತುಗಳ ಬೆಲೆ ಕೈಗೆಟಕುವಂತಿಲ್ಲ.

ಯೂಟ್ಯೂಬರ್ ಶೋಯೆಬ್ ಮಲಿಕ್ ಪ್ರಕಾರ, ಪಾಕಿಸ್ತಾನದಲ್ಲಿ ಲಭ್ಯವಿರುವ ಭಾರತೀಯ ಉತ್ಪನ್ನಗಳ ಬೆಲೆ, ಭಾರತೀಯ ಮಾರುಕಟ್ಟೆ ಬೆಲೆಗಿಂತ ಐದು ಪಟ್ಟು ಹೆಚ್ಚಿರುವುದು ಕಂಡು ಬಂದಿದೆ. ಆದ್ರೂ ಅನೇಕರು ಭಾರತೀಯ ಉತ್ಪನ್ನವನ್ನೇ ಕೊಂಡುಕೊಳ್ತಾರೆಂದು ಅಲ್ಲಿನ ವ್ಯಾಪಾರಸ್ಥರು ಹೇಳ್ತಾರೆ. ಭಾರತೀಯ ಉತ್ಪನ್ನಗಳು ಗುಣಮಟ್ಟದಿಂದ ಕೂಡಿರುತ್ವೆ. ಅಲ್ಲದೆ ಕಡಿಮೆ ಪ್ರಮಾಣದಲ್ಲಿ ರಫ್ತಾಗುತ್ತಿರುವ ಕಾರಣ ಅದ್ರ ಬೆಲೆ ಹೆಚ್ಚು ಎನ್ನುತ್ತಾರೆ ವ್ಯಾಪಾರಸ್ಥರು. ಪಾಕಿಸ್ತಾನದ ಕೆಲ ಅಂಗಡಿಯಲ್ಲಿ ಭಾರತೀಯ ವಸ್ತುಗಳೇ ಹೆಚ್ಚಾಗಿ ಇರೋದನ್ನು ವಿಡಿಯೋದಲ್ಲಿ ನೀವು ನೋಡ್ಬಹುದು. 

ಆನ್‌ಲೈನ್ ಮಾರ್ಕೆಟಿಂಗ್ ಮೂಲಕವೇ ಬದುಕು ಕಟ್ಟಿಕೊಂಡ ಯುವ ಕೃಷಿಕರು

ಬೆಲೆ ಕೇಳಿ ದಂಗಾಗ್ಬೇಡಿ : ಭಾರತದಲ್ಲಿ ಸಿಗುವ ವಸ್ತುಗಳೇ ನಾವು ದುಬಾರಿ ಎನ್ನುತ್ತೇವೆ. ಆದ್ರೆ ಪಾಕಿಸ್ತಾನದಲ್ಲಿ ಸಿಗುವು ಇವುಗಳ ಬೆಲೆ ಹುಬ್ಬೇರಿಸುವಂತೆ ಮಾಡುತ್ತದೆ. ಭಾರತದಲ್ಲಿ ಹೇರ್ ಆಯಿಲ್ ಬೆಲೆ 55 ರೂಪಾಯಿಗಳಾಗಿದ್ದರೆ, ಪಾಕಿಸ್ತಾನದಲ್ಲಿ ಹೇರ್ ಆಯಿಲ್ ಬೆಲೆ 300 ರೂಪಾಯಿಗಳಿಗಿಂತ ಹೆಚ್ಚು. ಇನ್ನು ಭಾರತದಲ್ಲಿ ಗೋಡಂಬಿ ಬೆಲೆ ಕೆ.ಜಿ.ಗೆ 700 ರೂಪಾಯಿ ಇದ್ದರೆ, ಪಾಕಿಸ್ತಾನದಲ್ಲಿ ಗೋಡಂಬಿ ಕೆಜಿಗೆ 2500 ರೂಪಾಯಿಗೆ ಮಾರಾಟವಾಗುತ್ತಿದೆ.

50 ಗ್ರಾಂ ಇಸಾಬ್ಗೋಲ್ ಪುಡಿ ಪಾಕಿಸ್ತಾನದಲ್ಲಿ 280 ರೂಪಾಯಿಗೆ ಸಿಗುತ್ತಿದೆ. ಅದನ್ನೇ ನೀವು ಭಾರತದಲ್ಲಿ ಖರೀದಿ ಮಾಡ್ತಿದ್ದರೆ ಅದಕ್ಕೆ  ಕೇವಲ 98 ರೂಪಾಯಿ ನೀಡಿದ್ರೆ ಸಾಕು. ಪ್ರತಿ ದಿನ ನಾವು ಹಲ್ಲುಜ್ಜಲು ಕೋಲ್ಗೆಟ್ ಪೇಸ್ಟ್ ಬಳಸ್ತೇವೆ. 100 ಗ್ರಾಂ ಕೋಲ್ಗೆಟ್ ಪೇಸ್ಟ್ ಗೆ ನಾವು ನೀಡೋದು 55 ರೂಪಾಯಿ. ಆದ್ರೆ ಕೊಲ್ಗೇಟ್ ಪೇಸ್ಟ್ ನಲ್ಲಿ ಹಲ್ಲುಜ್ಜಬೇಕೆಂದ್ರೆ ಪಾಕಿಸ್ತಾನಿಗಳು 100 ಗ್ರಾಂ ಪ್ಯಾಕ್ ಗೆ 200 ರೂಪಾಯಿ ನೀಡ್ಬೇಕು.  ಪಾಕಿಸ್ತಾನದಲ್ಲಿ ರೊಟ್ಟಿ ತಯಾರಿಸೋದು ಕೂಡ ದುಬಾರಿಯಾಗಿದೆ. ಯಾಕೆಂದ್ರೆ ಒಂದು ಕೆಜಿ ಗೋಧಿ ಹಿಟ್ಟನ್ನು ನೀವು ಖರೀದಿಸಲು ಸುಮಾರು 200 ರೂಪಾಯಿ ನೀಡ್ಬೇಕು. ಹಾಗೆ ಪಾಕಿಸ್ತಾನದ ಪೆಟ್ರೋಲ್ ಬೆಲೆ ಲೀಟರ್ ಗೆ 270 ರೂಪಾಯಿಯಾಗಿದೆ. 
 

Latest Videos
Follow Us:
Download App:
  • android
  • ios