Tesla in India ಕರ್ನಾಟಕದಲ್ಲಿ ಘಟಕ ಆರಂಭಿಸಲು ಮಸ್ಕ್‌ಗೆ ಅಹ್ವಾನ, ರಾಜ್ಯದ ಮನವಿಗೆ ಇತರ 5 ರಾಜ್ಯದಲ್ಲಿ ಸಂಚಲನ!
- ಭಾರತದಲ್ಲಿ ಟೆಸ್ಲಾ ಕಾರು ಘಟಕ ಆರಂಭಿಸಲು ರಾಜ್ಯಗಳಿಂದ ಭರ್ಜರಿ ಆಹ್ವಾನ
- ತೆಲಂಗಾಣ, ಮಹಾರಾಷ್ಟ್ರ ಬಳಿಕ ಇದೀಗ ಕರ್ನಾಟಕದ ಆಹ್ವಾನ
- 6 ರಾಜ್ಯಗಳ ಆಹ್ವಾನದಲ್ಲಿ ಸಂಚಲನ ಮೂಡಿಸಿದ ಕರ್ನಾಟಕ
ಬೆಂಗಳೂರು(ಜ.18): ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು(Electric Cars) ಉತ್ಪಾದನಾ ಕಂಪನಿ ಅಮೆರಿಕಾದ ಟೆಸ್ಲಾ(Tesla) ಭಾರತಕ್ಕೆ ಆಗಮಿಸುತ್ತಿದೆ ಅನ್ನೋ ವಿಚಾರ ಕಳೆದ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಹಲವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಕಳೆದೆರಡು ವರ್ಷಗಳಿಂದ ಸತತ ಪ್ರಯತ್ನಗಳು, ಮಾತುಕತೆಗಳು ನಡೆಯುತ್ತಿದೆ. ಆದರೆ ಟೆಸ್ಲಾ ಮಾತ್ರ ಭಾರತಕ್ಕೆ(Tesla in India) ಕಾಲಿಡುವ ದಿನ ದೂರವಾಗುತ್ತಲೇ ಇದೆ. ಇದರ ನಡುವೆ ಟೆಸ್ಲಾ ಸಂಸ್ಥಾಪಕ ಸಿಇಒ ಎಲಾನ್ ಮಸ್ಕ್(Elon Musk) ಟ್ವೀಟ್ ಭಾರತದಲ್ಲಿ ಭಾರಿ ಸದ್ದು ಮಾಡಿತ್ತು. ಹೀಗಾಗಿ ತೆಲಂಗಾಣ, ಮಹಾರಾಷ್ಟ್ರ ಸೇರಿ 5 ರಾಜ್ಯಗಳು ಟೆಸ್ಲಾ ಕಾರು ಘಟಕ ತಮ್ಮ ತಮ್ಮ ರಾಜ್ಯಗಳಲ್ಲಿ ಸ್ಥಾಪಿಸುವಂತೆ ಆಹ್ವಾನ ನೀಡಿತ್ತು. ಇದೀಗ ಕರ್ನಾಟಕದ ಸರದಿ. ಆಹ್ವಾನ ನೀಡುವಿಕೆಯಲ್ಲಿ ಲೇಟಾದರೂ ಕರ್ನಾಟಕ(Karnataka) ಲೇಟೆಸ್ಟ್ ಆಗಿ ಇನ್ವೈಟ್ ಮಾಡಿದೆ.
ತೆಲಂಗಾಣ, ಮಹಾರಾಷ್ಟ್ರ ತಮಿಳುನಾಡು, ಪಂಜಾಬ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಎಲಾನ್ ಮಸ್ಕ್‌ಗೆ ತಮ್ಮ ರಾಜ್ಯಗಳಲ್ಲಿ ಟೆಸ್ಲಾ ಕಾರು ಘಟಕ ಆರಂಭಿಸುವಂತೆ ಈಗಾಗಲೇ ಆಹ್ವಾನ ನೀಡಿದೆ. ಐದು ರಾಜ್ಯಗಳು ಆಹ್ವಾನ ನೀಡಿದ ಒಂದು ವಾರದ ಬಳಿಕ ಕರ್ನಾಟಕ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮಂತ್ರಿ ಮರುಗೇಶ್ ನಿರಾಣಿ(Murugesh Nirani), ಎಲಾನ್ ಮಸ್ಕ್‌ಗೆ ಅಹ್ವಾನ ನೀಡಿದ್ದಾರೆ. ಕರ್ನಾಟಕದ ಬೆಂಗಳೂರು(Bengaluru) ಸುತ್ತಮುತ್ತ 45ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನ ಸ್ಟಾರ್ಟ್ಅಪ್ ಹಾಗೂ ಎಲೆಕ್ಟ್ರಿಕ್ ವಾಹನ ಕ್ಲಸ್ಟರ್ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರು ಭಾರತದ ಎಲೆಕ್ಟ್ರಿಕ್ ವಾಹನಗಳ ಹಬ್(EV Hub in India) ಆಗಿ ಹೊರಹೊಮ್ಮಿದೆ. ಹೀಗಾಗಿ ಟೆಸ್ಲಾ ಘಟಕ ಆರಂಭಕ್ಕೆ ಸೂಕ್ತ ರಾಜ್ಯ ಎಂದು ನಿರಾಣಿ ತಮ್ಮ ಆಹ್ವಾನದಲ್ಲಿ ಹೇಳಿದ್ದಾರೆ.
Tesla in India: ಕಾರು ಘಟಕ ತೆರೆಯಲು ಎಲಾನ್‌ಗೆ ವಿವಿಧ ರಾಜ್ಯಗಳ ಆಫರ್: ಮಸ್ಕ್ ಟ್ವೀಟ್‌ಗೆ ಭರ್ಜರಿ ಪ್ರತಿಕ್ರಿಯೆ!
ಮುರುಗೇಶ್ ನಿರಾಣಿ ತಮ್ಮ ಆಹ್ವಾನದಲ್ಲಿ ಕರ್ನಾಟಕದಲ್ಲಿ ಯಾಕೆ ಟೆಸ್ಲಾ ಘಟಕ ಆರಂಭಿಸಬೇಕು? ಯಾಕೆ ಹೂಡಿಕೆ ಮಾಡಬೇಕು ಅನ್ನೋದನ್ನು ಹೇಳಿದ್ದಾರೆ. 400ಕ್ಕೂ ಹೆಚ್ಚಿನ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆ, 45ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಸ್ಟಾರ್ಟ್ಅಪ್ ಕಂಪನಿ ಬೆಂಗಳೂರಿನ ಸುತ್ತ ಮುತ್ತ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಇದೀಗ ಭಾರತದ ಎಲೆಕ್ಟ್ರಿಕ್ ವಾಹನ ಉತ್ಪಾದನೆಯ ಹಬ್ ಆಗಿ ಮಾರ್ಪಟ್ಟಿದೆ. ಹೀಗಾಗಿ ಕರ್ನಾಟಕ ಟೆಸ್ಲಾ ಘಟಕ ಆರಂಭಕ್ಕೆ ಸೂಕ್ತ ಸ್ಥಳ. ಟೆಸ್ಲಾದ ಎನರ್ಜಿ ಘಟಕ ಈಗಾಗಲೇ ಬೆಂಗಳೂರು ವಿಳಾಸದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಮುರುಗೇಶ್ ನಿರಾಣಿ ಟ್ವೀಟ್ ಮೂಲಕ ಹೇಳಿದ್ದಾರೆ.
2021ರಲ್ಲಿ ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರು ಆಟೋ ಕಂಪನಿ ಭಾರತದಲ್ಲಿ ಖಾಸಗಿ ಘಟಕ ನೋಂದಣಿ ಮಾಡಿಕೊಂಡಿದೆ. ಜನವರಿ 2021ರಲ್ಲಿ ಟೆಸ್ಲಾ ಇಂಡಿಯಾ ಮೋಟಾರ್ಸ್ ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್ RoC(ಕಂಪನಿ ರಿಜಿಸ್ಟ್ರಾರ್)ನ್ನು ಬೆಂಗಳೂರಿನಲ್ಲಿ ನೋಂದಾಯಿಸಿದೆ. ಟೆಸ್ಲಾ 1 ಲಕ್ಷ ರೂಪಾಯಿ ಪಾವತಿ ಬೆಂಗಳೂರಿನಲ್ಲಿ ಖಾಸಗಿ ಘಟಕ ನೋಂದಾಯಿಸಿದೆ. 2021ರ ಫೆಬ್ರವರಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ(BS Yediyurappa) ಮಹತ್ವದ ಘೋಷಣೆ ಮಾಡಿದ್ದರು. ಟೆಸ್ಲಾ ಬೆಂಗಳೂರಿನಲ್ಲಿ ಘಟಕ ಆರಂಭಿಸಲಿದೆ ಎಂದು ಯಡಿಯೂರಪ್ಪ ಘೋಷಣೆ ಮಾಡಿದ್ದರು. ಆದರೆ ನಂತರದ ದಿನಗಳಲ್ಲಿ ಟೆಸ್ಲಾ ಭಾರತದ ನೀತಿಗಳಿಂದ ಹಲವು ಸವಾಲು ಎದುರಿಸಿದರು.
Tesla in India: ಟೆಸ್ಲಾ ಜೊತೆ ಪಾಲುದಾರಿಕೆಗೆ ತೆಲಂಗಾಣ ಸಿದ್ಧ: ಎಲಾನ್ ಮಸ್ಕ್‌ಗೆ ಕೆಟಿಆರ್ ಆಹ್ವಾನ!
ಎಲಾನ್ ಮಸ್ಕ್ ಟೆಸ್ಲಾ ಘಟಕವನ್ನು ಆರಂಭಿಸಲು ಒಂದರ ಮೇಲೊಂದರಂತೆ ರಾಜ್ಯಗಳು ಮನವಿ ಮಾಡಲು ಕಾರಣವೂ ಇದೆ. ಇತ್ತೀಚೆಗೆ ಎಲಾನ್ ಮಸ್ಕ್ ಟ್ವೀಟ್ ಮೂಲಕ ಭಾರತದಲ್ಲಿ ಟೆಸ್ಲಾ ಘಟಕ ವಿಳಂಬ ಯಾಕೆ ಅನ್ನೋದರ ಮಾಹಿತಿ ಬಿಚ್ಚಿಟ್ಟಿದ್ದರು. ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆಗೆ ಸತತ ಪ್ರಯತ್ನಗಳು ನಡೆಯುತ್ತಿದೆ. ಆದರೆ ಸರ್ಕಾರದಿಂದ ಹಲವು ಸವಾಲು ಎದುರಿಸುತ್ತಿದ್ದೇವೆ ಎಂದು ಎಲಾನ್ ಮಸ್ಕ್ ಹೇಳಿದ್ದರು.
ಭಾರತದಲ್ಲಿ ಅತೀ ಹೆಚ್ಚು ತೆರಿಗೆ, ಆಮದು ಸುಂಕ ಟೆಸ್ಲಾ ಕಾರು ವಿತರಣೆ ಆರಂಭಿಸಲು ತೊಡಕಾಗುತ್ತಿದೆ ಎಂದು ಎಲಾನ್ ಮಸ್ಕ್ ಹೇಳಿದ್ದರು. ಭಾರತದಲ್ಲಿ ಟೆಸ್ಲಾ ಮೊದಲ ಹಂತದಲ್ಲಿ ಟೆಸ್ಲಾ ಮಾಡೆಲ್ 3 ಕಾರುಗಳನ್ನು ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. ಕಾರಣ ಮಾಡೆಲ್ 3 ಟೆಸ್ಲಾ ಕಂಪನಿಯ ಕಡಿಮೆ ಬೆಲೆಯ ಕಾರಾಗಿದೆ. ಅಮೆರಿಕದಲ್ಲಿ ಟೆಸ್ಲಾ ಮಾಡೆಲ್ 3 ಕಾರಿನ ಬೆಲೆ 30 ಲಕ್ಷ ರೂಪಾಯಿ. ಆದರೆ ಭಾರತಕ್ಕೆ ಈ ಕಾರನ್ನು ಆಮದು ಮಾಡಿಕೊಂಡರೆ ಶೇಕಡಾ 100ರಷ್ಟು ಆಮದು ತೆರಿಗೆಯನ್ನು ಟೆಸ್ಲಾ ಪಾವತಿಸಬೇಕು. ಹೀಗಾದಲ್ಲಿ ಭಾರತದಲ್ಲಿ ಮಾಡೆಲ್ 3 ಕಾರಿನ ಬೆಲೆ 60 ಲಕ್ಷ ರೂಪಾಯಿ ಆಗಲಿದೆ. ಇನ್ನು ಬಿಡಿ ಭಾಗಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಶೇಕಡಾ 60 ರಷ್ಟು ತೆರಿಗೆ ಪಾವತಿಸಬೇಕು. ಈ ರೀತಿ ಮಾಡಿದರೆ ಭಾರತದಲ್ಲಿ ಬಿಡಿ ಭಾಗಗಳ ಜೋಡಣೆ ಶುಲ್ಕ ಸೇರಿದಂತೆ ಸರಿಸುಮಾರು ಕಾರಿನ ಬೆಲೆ 60 ಲಕ್ಷ ರೂಪಾಯಿ ಆಗಲಿದೆ. ಹೀಗಾಗಿ ಮಸ್ಕ್ ಭಾರತದ ಆಮದು ಸುಂಕದ ಕುರಿತು ಅಸಮಾಧಾನ ತೋಡಿಕೊಂಡಿದ್ದರು.
ಭಾರತದಲ್ಲಿ ವಿಶ್ವದಲ್ಲೇ ಎಲ್ಲೂ ಇಲ್ಲದ ತೆರಿಗೆ ಇದೆ. ಹೀಗಾಗಿ ಕಾರು ಘಟಕ ಆರಂಭ ವಿಳಂಭವಾಗುತ್ತಿದೆ ಎಂದು ಎಲಾನ್ ಮಸ್ಕ್ ಹೇಳಿದ್ದರು. ಭಾರತದಲ್ಲಿ ಮೇಕ್ ಇನ್ ಇಂಡಿಯಾಗೆ ಹೆಚ್ಚಿನ ಒತ್ತು ನೀಡಲು ಕೇಂದ್ರ ಸರ್ಕಾರ ಆಮದು ಸುಂಕ ಹೆಚ್ಚಿಸಿದೆ. ಭಾರತದಲ್ಲೇ ಸಂಪೂರ್ಣವಾಗಿ ಕಾರು ಉತ್ಪಾದನೆ ಮಾಡುವುದಾದರೆ ಹಲವು ಸೌಲಭ್ಯಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ ವಿದೇಶದಿಂದ ಕಾರು ಹಾಗೂ ಬಿಡಿ ಭಾಗಗಳ ಆಮದಿಗೆ ಶೇಕಡಾ 60 ರಿಂದ 100 ರಷ್ಟು ಆಮದು ಸುಂಕ ಪಾವತಿಸಬೇಕು. ಇದು ಟೆಸ್ಲಾಗೆ ತೊಡಕಾಗುತ್ತಿದೆ.